ಹಿಂದೂ ಧರ್ಮದಲ್ಲಿ ಅಮವಾಸ್ಯೆಗೆ ವಿಶೇಷ ಮಹತ್ವವಿದೆ. ಸೋಮವಾರ, ಮಂಗಳವಾರ ಅಥವಾ ಶನಿವಾರ ಈ ಅಮಾವಸ್ಯೆ (Amavasya) ಸಂಭವಿಸಿದರೆ, ಅದರ ಪ್ರಾಮುಖ್ಯತೆ ಹೆಚ್ಚಾಗುತ್ತದೆ. ಈ ಬಾರಿ ಮಾರ್ಗಶಿರ ಮಾಸದ ಅಮಾವಾಸ್ಯೆಯು ಶನಿವಾರದಂದು ಬಂದಿದೆ. ಇದನ್ನು ಶನಿ ಅಮಾವಾಸ್ಯೆ (Shani Amavasya) ಎನ್ನಲಾಗುತ್ತದೆ. ಇದೇ ದಿನ ಸೂರ್ಯಗ್ರಹಣ (Solar Eclipse) ಕೂಡ ಸಂಭವಿಸಲಿದೆ. ನ್ಯಾಯದ ದೇವರಾದ ಶನಿ ದೇವರ ಆರಾಧನೆಗೆ ಶನಿವಾರ ಮೀಸಲಾಗಿದ್ದು, ಶನಿ ದೋಷ ನಿವಾರಣೆಗೆ ಶನಿವಾರ ಹೆಚ್ಚು ಸೂಕ್ತವಾದ ದಿನ ಇದಾಗಿದೆ.
ಜಾತಕದಲ್ಲಿ ಶನಿ ದೋಷ ಕಾಡುತ್ತಿದೆ ಎಂದರೆ ಇದರ ನಿವಾರಣೆ ಮುಂದಾಗಬೇಕು. ಇಲ್ಲದಿದ್ದರೆ ಸಾಕಷ್ಟು ತೊಂದರೆ, ನಷ್ಟ, ಅಭಿವೃದ್ದಿ ಹಿನ್ನಡೆ ಅನುಭವಿಸಲಾಗುತ್ತದೆ. ಈ ದೋಷಕ್ಕೆ ಒಳಗಾದವರು ಈ ಶನಿ ಅಮಾವಾಸ್ಯೆಯ ದಿನದಂದು, ಸ್ನಾನದ ನಂತರ, ದಾನ ಮಾಡಿದ ನಂತರ, ಜಾತಕದಲ್ಲಿ ಚಾಲ್ತಿಯಲ್ಲಿರುವ ಶನಿ ದೋಷ ನಿವಾರಣೆಗೆ ಮುಂದಾಗಬೇಕು. ಈ ಮೂಲಕ ಶನಿದೇವನ ಅನುಗ್ರಹದಿಂದ ನೀವು ಶನಿ ನೋವಿನಿಂದ ಪರಿಹಾರವನ್ನು ಪಡೆಯಬಹುದು ಮತ್ತು ನಿಮ್ಮ ಇಷ್ಟಾರ್ಥಗಳನ್ನು ಈಡೇರುತ್ತವೆ.
ಗಣೇಶನ ಹೊರತಾಗಿಲ್ಲ ಈ ಶನಿದೋಷದಿಂದ
ಶನಿದೇವರ ವಕ್ರ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ದೇವತೆಗಳಿಗೂ ಸಾಧ್ಯವಾಗಿಲ್ಲ. ಇದೇ ಶನಿಯ ದೃಷ್ಟಿಯಿಂದ ಪರಾಗಲು ಗಣೇಶ ಸಗಣಿಯಲ್ಲಿ ಅವಿತುಕೊಂಡಿದ್ದನಂತೆ. ದೇವಾನುದೇವತೆಗಳನ್ನು ಕಾಡುವ ಈ ಶನಿಯ ದೃಷ್ಟಿಯಿಂದ ಪಾರಾಗಲು ಅದರ ನಿವಾರಣೆ ಕೈಗೊಳ್ಳುವುದು ಅಗತ್ಯವಾಗಿದೆ. ಶನೇಶ್ವರ ಅಮಾವಾಸ್ಯೆ ದಿನ ಶನಿ ದೋಷವನ್ನು ತೊಡೆದುಹಾಕಲು ಯಾವ ಕ್ರಮಗಳನ್ನು ಕೈಗೊಳ್ಳಬಹುದು ಕೆಲವು ಕ್ರಮಗಳು ಇಲ್ಲಿವೆ.
ಯಾವಾಗ ಶನಿ ಅಮಾವಾಸ್ಯೆ
ಹಿಂದೂ ಕ್ಯಾಲೆಂಡರ್ ಪ್ರಕಾರ, ಮಾರ್ಗಶಿರ ಕೃಷ್ಣನ ಅಮಾವಾಸ್ಯೆ ದಿನಾಂಕವು ಡಿಸೆಂಬರ್ 03 ರಂದು ಸಂಜೆ 04:55 ರಿಂದ ಪ್ರಾರಂಭವಾಗುತ್ತದೆ, ಇದು ಡಿಸೆಂಬರ್ 04 ರ ಶನಿವಾರದಂದು ಮಧ್ಯಾಹ್ನ 01.12 ರವರೆಗೆ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಶನೇಶ್ವರ ಅಮವಾಸ್ಯೆಯು ಡಿಸೆಂಬರ್ 04 ರಂದು ಮಾನ್ಯವಾಗಿರುತ್ತದೆ.
ಇದನ್ನು ಓದಿ: ಕಟೀಲು ದುರ್ಗಾಪರಮೇಶ್ವರಿಗೆ ಯಕ್ಷಗಾನದ ಹರಕೆ; ಪ್ರಸಂಗದಲ್ಲಿ ದೇವಿಯೇ ಸನ್ನಿಹಿತಳಾಗುತ್ತಾಳಂತೆ
ಶನಿ ದೋಷವನ್ನು ಹೋಗಲಾಡಿಸಲು ಪರಿಹಾರಗಳು
1. ಶನೇಶ್ವರಅಮವಾಸ್ಯೆಯ ಉಪವಾಸವನ್ನು ಮಾಡಬೇಕು. ಈ ದಿನ ಶನಿದೇವನನ್ನು ಶಾಸ್ತ್ರೋಕ್ತವಾಗಿ ಪೂಜಿಸಬೇಕು. ಸಾಸಿವೆ ಎಣ್ಣೆ ಮತ್ತು ಕಪ್ಪು ಎಳ್ಳುಗಳೊಂದಿಗೆ ಶನೇಶ್ವರ ಅಭಿಷೇಕ. ಶನಿ ದೇವಸ್ಥಾನಕ್ಕೆ ಹೋಗಿ ಅವರ ದರ್ಶನ ಪಡೆದು ಆಶೀರ್ವಾದ ಪಡೆಯಿರಿ. ನಂತರ ಶನಿ ದೋಷದಿಂದ ಮುಕ್ತಿ ಹೊಂದಲು ಆತನನ್ನು ಪೂಜಿಸಬೇಕು.
2. ಶನಿ ದೋಷವನ್ನು ಹೋಗಲಾಡಿಸಲು, ಶನೇಶ್ವರ ಅಮಾವಾಸ್ಯೆಯಂದು ಶನಿ ದೇವಸ್ಥಾನದಲ್ಲಿರುವ ಅರಳಿ ಮರಕ್ಕೆ ನೀರನ್ನು ಅರ್ಪಿಸಬೇಕು.
ಇದನ್ನು ಓದಿ: ದೇವರು ಎಲ್ಲೆಡೆಯೂ ಇದ್ದಾನೆಯಾದರೂ ದೇವಸ್ಥಾನಕ್ಕೆ ಏಕೆ ಹೋಗಬೇಕು ಗೊತ್ತಾ?
3. ಶನಿಶ್ವೇರ ಅಮಾವಸ್ಯೆಯಂದು ಸಾಸಿವೆ ಎಣ್ಣೆ ಆಹಾರವನ್ನು ನಾಯಿ ಅಥವಾ ಕಾಗೆಗೆ ಅರ್ಪಿಸಬೇಕು. ಇದರಿಂದ ಶನಿದೇವ ಸಂತುಷ್ಟನಾಗುತ್ತಾನೆ ಎಂಬ ಪ್ರತೀತಿ ಇದೆ.
4. ಧಾರ್ಮಿಕ ನಂಬಿಕೆಗಳ ಪ್ರಕಾರ, ಶನಿದೇವನು ಹನುಮಂತನ ಭಕ್ತರಿಗೆ ಎಂದಿಗೂ ತೊಂದರೆ ಕೊಡುವುದಿಲ್ಲ. ಈ ಹಿನ್ನಲೆ ಶನೇಶ್ವರ ಅಮವಾಸ್ಯೆಯಂದು ಹನುಮಂತನಿಗೆ ಮಲ್ಲಿಗೆ ಹೂವು, ದೀಪವನ್ನು ದಾನ ಮಾಡಬೇಕು
5. ಈ ದಿನ ಹನುಮಾನ ಚಾಲಿಸ ಮತ್ತು ಸುಂದರ ಕಾಂಡ ಪಠಿಸುವುದರಿಂದ ಶನಿ ದೇವನ ದೃಷ್ಟಿ ಬೀಳುವುದಿಲ್ಲ
6. ದಾನ ಧರ್ಮಗಳಿಂದ ದೇವರುಗಳು ಪ್ರಸನ್ನರಾಗುತ್ತಾರೆ ಎಂದು ಪುರಾಣಗಳು ತಿಳಿಸುತ್ತವೆ. ಈ ಹಿನ್ನಲೆ ಶನಿದೋಷದಿಂದ ತೊಂದರೆಗೆ ಒಳಗಾದವರು ಶನೇಶ್ವರ ಅಮಾವಾಸ್ಯೆಯಂದು ಪೂಜೆ ಬಳಿಕ ಬಡವರಿಗೆ ಸಾಸಿವೆ ಎಣ್ಣೆ, ಬಟ್ಟೆ, ಉದ್ದಿನ ಬೇಳೆ ಸೇರಿದಂತೆ ಅಗತ್ಯವಿರುವ ವಸ್ತುಗಳನ್ನು ದಾನ ಮಾಡಬೇಕು. ಇದರಿಂದ ದೇವರು ತೃಪ್ತಿ ಪಡುತ್ತಾನೆ ಎನ್ನಲಾಗಿದೆ.
7. ಶನಿ ದೋಷದಿಂದ ಮುಕ್ತಿ ಪಡೆಯಲು: ಮೂರು ನವಿಲು ಗರಿಗಳನ್ನು ಕಪ್ಪು ಹಗ್ಗದಿಂದ ಕಟ್ಟಿ ಅದರಲ್ಲಿ ಸ್ವಲ್ಪ ನೀರು ಹಾಕಿ ನೀರು ಸಿಂಪಡಿಸಿ ‘ಓಂ ಶನೀಶ್ವರಾಯ ನಮಃ’ ಎಂದು 21 ಬಾರಿ ಉಚ್ಛರಿಸಿ. ಹೀಗೆ ಮಾಡುವುದರಿಂದ ಶನಿಯ ದುಷ್ಪರಿಣಾಮ ದೂರವಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ