Astrology ರಾಹು-ಕೇತು ವಕ್ರದೃಷ್ಟಿ ಬಿದ್ದರೆ ಕಷ್ಟ ತಪ್ಪಿದ್ದಲ್ಲ; ಅದರ ಪರಿಹಾರಕ್ಕೆ ಹೀಗೆ ಮಾಡಿ

ಈ ರಾಹು-ಕೇತು ಸೂರ್ಯ ಚಂದ್ರರನ್ನು ಕೂಡ ಬೆಂಬಿಡದೇ ಕಾಡುತ್ತಾರೆ. ಇಂತಹ ರಾಹು ಕೇತು ವಕ್ರದೃಷ್ಟಿ ಜಾತಕದ ಮೇಲೆ ಬಿದ್ದರೆ, ಆತನಿಗೆ ಒಂದರ ಮೇಲೆ ಒಂದು ಸಂಕಷ್ಟ ತಪ್ಪಿದ್ದಲ್ಲ.

ರಾಹು

ರಾಹು

  • Share this:
    ಸಾಗರ ಮಂಥನದ (Sagar Manthan) ನಂತರ, ದೇವತೆಗಳು ಮತ್ತು ರಾಕ್ಷಸರ ನಡುವೆ ಅಮೃತವನ್ನು ಕುಡಿಯುವ ಬಗ್ಗೆ ವಿವಾದ ಉಂಟಾದಾಗ, ವಿಷ್ಣುವು ಮೋಹಿನಿ ರೂಪದಲ್ಲಿ ಬಂದು ಅಮೃತ ಕಲಶವನ್ನು ತನ್ನ ಕೈಯಲ್ಲಿ ತೆಗೆದುಕೊಂಡನು. ಅವರು ಪ್ರತಿಯಾಗಿ ಎಲ್ಲರಿಗೂ ಅಮೃತವನ್ನು ಕುಡಿಯಲು ಹೇಳಿದರು. ಮೋಹಿನಿಯನ್ನು ನೋಡಿ ಎಲ್ಲಾ ರಾಕ್ಷಸರೂ (Demons)  ಮೋಹಿನಿಯ ಮಾತಿಗೆ ವಿಧೇಯರಾಗಿ ಪ್ರತ್ಯೇಕವಾಗಿ ಕುಳಿತುಕೊಂಡರು. ಮೋಹಿನಿಯು ಮೊದಲು ದೇವತೆಗಳಿಗೆ ಅಮೃತವನ್ನು ಕುಡಿಯಲು ಪ್ರಾರಂಭಿಸಿದಳು. ಅಷ್ಟರಲ್ಲಿ ಸ್ವರ್ಭಾನು ಎಂಬ ರಾಕ್ಷಸನು ಮೋಹಿನಿಯ ನಡೆಯನ್ನು ಗ್ರಹಿಸಿ ದೇವತೆಗಳ ಮಧ್ಯದಲ್ಲಿ ಶಾಂತವಾಗಿ ಕುಳಿತನು.

    ಮೋಹಿನಿಯು ಅವನಿಗೆ ಅಮೃತಪಾನವನ್ನು ಕೊಟ್ಟಳು. ಆದರೆ ನಂತರ ದೇವತೆಗಳ ಸಾಲಿನಲ್ಲಿ ಕುಳಿತಿದ್ದ ಚಂದ್ರ ಮತ್ತು ಸೂರ್ಯ ಅವನನ್ನು ನೋಡಿ ವಿಷ್ಣುವಿಗೆ ಹೇಳಿದರು. ಕೋಪಗೊಂಡ ವಿಷ್ಣುವು ಸುದರ್ಶನ ಚಕ್ರದಿಂದ ರಾಕ್ಷಸನ ಗಂಟಲನ್ನು ಕತ್ತರಿಸಿದನು. ಆದರೆ ಆ ರಾಕ್ಷಸನು ಅಷ್ಟೊತ್ತಿಗಾಗಲೇ ಕೆಲವು ಗುಟುಕು ಅಮೃತವನ್ನು ಕುಡಿದಿದ್ದರಿಂದ ಕತ್ತು ಸೀಳಿದರೂ ಸಾಯಲಿಲ್ಲ. ಆ ರಾಕ್ಷಸನ ತಲೆ ಭಾಗವನ್ನು ರಾಹು ಎಂದೂ ಮುಂಡ ಭಾಗವನ್ನು ಕೇತು ಎಂದೂ ಕರೆಯಲಾಯಿತು.

    ಬೆಂಬಿಡದೇ ಕಾಡುವ ರಾಹು-ಕೇತು

    ಈ ರಾಹು-ಕೇತು ಸೂರ್ಯ ಚಂದ್ರರನ್ನು ಕೂಡ ಬೆಂಬಿಡದೇ ಕಾಡುತ್ತಾರೆ. ಇಂತಹ ರಾಹು ಕೇತು ವಕ್ರದೃಷ್ಟಿ ಮನುಷ್ಯದ ಜಾತಕದ ಮೇಲೆ ಬಿದ್ದರೆ, ಆತನಿಗೆ ಒಂದರ ಮೇಲೆ ಒಂದು ಸಂಕಷ್ಟ ತಪ್ಪಿದ್ದಲ್ಲ.

    ಇದನ್ನು ಓದಿ: ಅಂಗೈಯಲ್ಲಿನ ಈ ರೇಖೆಯಿಂದಲೇ ತಿಳಿಯುತ್ತೆ ನಿಮ್ಮ ಹಣಕಾಸಿನ ಸ್ಥಿತಿ

    ರಾಹು ಕಾತುವಿನ ದೃಷ್ಟಿಯಿಂದ ವ್ಯಕ್ತಿಯ ಆರ್ಥಿಕ ಮತ್ತು ಸಾಮಾಜಿಕ ಜೊತೆಗೆ ಮಾನಸಿಕವಾಗಿಯೂ ಸಂಕಷ್ಟಕ್ಕೆ ಒಳಗಾಗುತ್ತಾನೆ. ಇದೇ ಕಾರಣಕ್ಕೆ ಜಾತಕದಲ್ಲಿ ಈ ದೋಷ ಕಂಡು ಬಂದಾಕ್ಷಣ ಪರಿಹಾರ ಕ್ರಮ ನಡೆಸಬೇಕಯ ಎನ್ನಲಾಗುತ್ತದೆ. ಇದೇ ಕಾರಣಕ್ಕೆ ರಾಹು-ಕೇತು ಶಾಂತಿ ಮೊರೆ ಹೋಗುತ್ತಾರೆ. ಇಂತಹ ರಾಹು- ಕೇತುವಿನ ದೃಷ್ಟಿಯಿಂದ ಪಾರಾಗಲು ಈ ರೀತಿ ಮಾಡಿದರೆ ಶುಭವಾಗುತ್ತದೆ ಎನ್ನಲಾಗುತ್ತದೆ.

    ರಾಹುವಿನ ದೃಷ್ಟಿಯಿಂದ ಪಾರಾಗಲು ಹೀಗೆ ಮಾಡಿ.

    • ನಿಮ್ಮ ಜಾತಕದಲ್ಲಿ ರಾಹುವಿನ ವಕ್ರ ದೃಷ್ಟಿ ಬಿದ್ದಿದೆಯೆಂದರೆ ನಿಯಮಿತವಾಗಿ ನೀವು ಶಿವಲಿಂಗಕ್ಕೆ ಜಲಾಭಿಷೇಕ ಮಾಡಬೇಕು. ಆ ವೇಳೆ ಓಂ ನಮಃಶಿವಾಯ ಮಂತ್ರವನ್ನು ಜಪಿಸಬೇಕು. ದಿನಾ ಶಿವಲಿಂಗದ ಬಳಿ ಕುಳಿತು ಶಿವ ಚಾಲೀಸವನ್ನು ಪಠಿಸಬೇಕು. ಶಿವವನ್ನು ಜಪಿಸುವುದರಿಂದ ರಾಹುವಿನ ಪರಿಣಾಮ ಕಡಿಮೆಯಾಗಲಿದೆ.

    • ಜ್ಯೋತಿಷಿಗಳ ಸಲಹೆ ಪಡೆದು ಗೋಮೇಧಿಕ ಹರಳನ್ನು ಧಾರಣೆ ಮಾಡಬೇಕು. ಇದರಿಂದ ರಾಹುವಿನ ಪ್ರಭಾವ ಕ್ಷೀಣಿಸುತ್ತದೆ ಎನ್ನಲಾಗಿದೆ

    • ಉದ್ದಿನ ಬೇಳೆ, ಬೆಚ್ಚಗಿನ ಉಡುಪು, ಸಾಸಿವೆ, ಕಪ್ಪು ಬಣ್ಣದ ಗಾಢ ಹೂವುಗಳನ್ನು ತೆಗೆದುಕೊಂಡು ಶನಿವಾರಗಳಂದು ನಿಮ್ಮ ಶಕ್ತಿ ಸಾಮರ್ಥ್ಯಕ್ಕೆ ಅನುಸಾರ ದಾನ ಮಾಡಬೇಕು. ಜೊತೆಗೆ ದಿನಾ ಬೆಳಗ್ಗೆ ತುಳಸಿ ಎಲೆಗಳಲ್ಲಿ ನೆನೆಸಿರುವ ನೀರನ್ನು ಸೇವಿಸಬೇಕು.

    • ರಾಹು ಶಾಂತಿಗೊಳಿಸಲು ಓಂ ಭ್ರಾಂ ಭ್ರೀಂ ಭ್ರೌ ಸಂ ರಾಹವೇ ನಮಃ ಬೀಜ ಮಂತ್ರವನ್ನು ಜಪ ಮಾಲೆಯೊಂದಿಗೆ ಪ್ರತಿ ದಿನ ಜಪಿಸಬೇಕು. ಇದರಿಂದ ಬಹಳಷ್ಟು ಪರಿಹಾರ ಸಿಗಲಿದೆ.


    ಇದನ್ನು ಓದಿ: ಶಿವನಿಗೆ ಯಾಕೆ ರುದ್ರಾಭಿಷೇಕ ಮಾಡುವುದು; ಇದರ ಹಿಂದಿನ ರಹಸ್ಯ ಏನು?

    ಕೇತು ದೃಷ್ಟಿಯಿಂದ ಪಾರಾಗಲು ಹೀಗೆ ಮಾಡಿ:

    • ಕೇತುವಿನಿಂದ ಒದಗುವ ಅಶುಭ ಪ್ರಭಾವವನ್ನು ದೂರ ಮಾಡಲು ಕೇತುವಿನ ಬೀಜ ಮಂತ್ರ ಓಂ ಸ್ರಾಂ ಸ್ರೀಂ ಸ್ರೌ ಸಃ ಕೇತವೇ ನಮಃ ಮಂತ್ರವನ್ನು ಜಪಿಸಬೇಕು.

    • ಕೇತು ವಕ್ರ ದೆಸೆಯಿಂದ ಬಚಾವಾಗಲು ಏಳ್ಳು, ಬಾವುಟ, ಕಣ್ಣು ಕಪ್ಪು, ಬೆಚ್ಚಗಿನ ಬಟ್ಟೆ, ನವ ಧಾನ್ಯಗಳು, ಮೂಲಂಗಿ ಇವೇ ಮುಂತಾದುವನ್ನು ದಾನ ಮಾಡಿದರೆ ಶುಭಪ್ರದವಾಗುತ್ತದೆ. ಭಾನುವಾರದಂದು ನಿಮ್ಮ ಸಾಮರ್ಥ್ಯದಂತೆ ದಾನ ಮಾಡುವುದು ಕ್ಷೇಮಕರ.


    (ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್​ 18 ಕನ್ನಡ ಖಚಿತಪಡಿಸುವುದಿಲ್ಲ)
    Published by:Seema R
    First published: