• Home
  • »
  • News
  • »
  • astrology
  • »
  • Vastu Tips: ಈ ವಸ್ತುಗಳನ್ನು ನಿಮ್ಮ ಮನೆಯಲ್ಲಿ ಅಪ್ಪಿತಪ್ಪಿಯೂ ಇಡ್ಬೇಡಿ! ಆರ್ಥಿಕ ಸಮಸ್ಯೆ ಎದುರಾಗಬಹುದು ಗ್ಯಾರೆಂಟಿ

Vastu Tips: ಈ ವಸ್ತುಗಳನ್ನು ನಿಮ್ಮ ಮನೆಯಲ್ಲಿ ಅಪ್ಪಿತಪ್ಪಿಯೂ ಇಡ್ಬೇಡಿ! ಆರ್ಥಿಕ ಸಮಸ್ಯೆ ಎದುರಾಗಬಹುದು ಗ್ಯಾರೆಂಟಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಈ ಸ್ಟೋರ್ ರೂಂ ಗಳಲ್ಲಿ ನೀವು ಸಂಗ್ರಹಿಸಿಡುವ ವಸ್ತುಗಳು ನಿಮ್ಮನ್ನು ಭೂತಕಾಲದಲ್ಲಿರಿಸುತ್ತದೆ, ಎಂದರೆ ನೀವು ಭೂತಕಾಲದಲ್ಲಿ ನಡೆದ ಘಟನೆಗಳ ಬಗ್ಗೆ ಯೋಚನೆಯಲ್ಲಿರುತ್ತಿರಿ ಮತ್ತು ಆ ಘಟನೆಗಳನ್ನು ಈ ವಸ್ತುಗಳು ನೆನಪಿಸುತ್ತವೆ ಮತ್ತು ನಿಮ್ಮ ಮನೆಯಲ್ಲಿ ಸಾಮರಸ್ಯದ ಕೊರತೆಗೂ ಸಹ ಇದು ಕಾರಣವಾಗುತ್ತದೆ. ಇಷ್ಟೇ ಅಲ್ಲದೆ ನಿಮಗೆ ಆಯಾಸ, ಅತಿಯಾದ ಗೊಂದಲ, ಕೋಪ ಮತ್ತು ಖಿನ್ನತೆಗೆ ಒಳಗಾಗುವಂತೆ ಸಹ ಇವು ಮಾಡುತ್ತದೆ. ಬನ್ನಿ ಹಾಗಾದರೆ ಯಾವ ಯಾವ ವಸ್ತುಗಳನ್ನು ನೀವು ನಿಮ್ಮ ಸ್ಟೋರ್ ರೂಂ ನಲ್ಲಿ ಇಡಲೇಬಾರದು ಅಂತ ನೋಡಿಕೊಳ್ಳಿರಿ.

ಮುಂದೆ ಓದಿ ...
  • Share this:

ಕೆಲವರು ಮನೆಯನ್ನು ಕಟ್ಟಿಸುವಾಗಲೇ ಮನೆಯಲ್ಲಿ (Home) ಯಾವ ಕೋಣೆಯು ಯಾವ ದಿಕ್ಕಿನಲ್ಲಿ ಇರಬೇಕು, ಕೋಣೆಯ (Room) ಬಾಗಿಲು ಮತ್ತು ಕಿಟಕಿಗಳು ಯಾವ ದಿಕ್ಕಿನಲ್ಲಿ ಇರಬೇಕು ಅಂತೆಲ್ಲಾ ವಾಸ್ತು ಶಾಸ್ತ್ರವನ್ನು (Vastu Tips) ನೋಡಿಕೊಂಡು ಕಟ್ಟಿಸುವುದನ್ನು ನಾವು ನೋಡಿರುತ್ತೇವೆ. ಹಾಗೆಯೇ ಯಾವ ದಿಕ್ಕಿನಲ್ಲಿ ಯಾವ ವಸ್ತುಗಳನ್ನು ಇರಿಸಿದರೆ ಸಕರಾತ್ಮಕವಾದ ಭಾವನೆ ಮೂಡುತ್ತದೆ ಮತ್ತು ಯಾವ ಕೋಣೆಯಲ್ಲಿ ಯಾವ ವಸ್ತುಗಳನ್ನು (Things) ಇರಿಸಬಾರದು ಅಂತ ಸಹ ತಿಳಿದು ಕೊಳ್ಳುವ ಜನರನ್ನು ಸಹ ನಾವು ನೋಡಿರುತ್ತೇವೆ. ವಾಸ್ತು ಶಾಸ್ತ್ರವು ಮನೆಯಲ್ಲಿ ಸಕರಾತ್ಮಕವಾದ ಭಾವನೆಗಳನ್ನು ಮೂಡಿಸುತ್ತದೆ ಮತ್ತು ಮನೆಯಲ್ಲಿ ವಾಸಿಸುವ ಜನರ ಜೀವನದ ಮೇಲೆ ಅದರ ಪ್ರಭಾವ ಇರುತ್ತದೆ ಎಂದು ಎಷ್ಟೋ ಜನರು ನಂಬುತ್ತಾರೆ.


ಒಟ್ಟಿನಲ್ಲಿ ಈ ವಾಸ್ತು ಶಾಸ್ತ್ರ ಎನ್ನುವುದು ನಿಮ್ಮ ಜೀವನದಲ್ಲಿ ಆರೋಗ್ಯ, ಸಂತೋಷ, ಸಂಪತ್ತು ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ ಎಂದು ನೀವು ನಂಬುವವರು ಆಗಿದ್ದರೆ, ಇಲ್ಲಿ ನಾವು ಇನ್ನೊಂದಿಷ್ಟು ಸಲಹೆಗಳನ್ನು ನೀಡುತ್ತೇವೆ ಕೇಳಿ.


ವಾಸ್ತು ಪ್ರಕಾರ ಈ ಎರಡು ವಸ್ತುಗಳನ್ನು ಮನೆಯಲ್ಲಿ ಇಟ್ಟರೆ ಏನಾಗುತ್ತದೆ ?
ನಿಮ್ಮ ಮನೆಯಲ್ಲಿ ಕೆಟ್ಟು ನಿಂತಿರುವ ಸಾಮಾನುಗಳನ್ನು ಮತ್ತು ಉಳಿದಿರುವ ಹಳೆಯ ಸಾಮಾನುಗಳನ್ನು ಇರಿಸಲು ಸ್ಟೋರ್ ರೂಂ ಅಂತ ಮಾಡಿದ್ದರೆ, ಅಲ್ಲಿ ಎಲ್ಲಾ ರೀತಿಯ ಹಳೆಯ ಸಾಮಾನುಗಳನ್ನು ಹಾಕಿ ತುಂಬಿರುತ್ತೀರಿ. ಆದರೆ ಇನ್ಮುಂದೆ ಹೀಗೆ ಮಾಡಬೇಡಿ. ಏಕೆಂದರೆ ವಾಸ್ತು ಶಾಸ್ತ್ರದ ಪ್ರಕಾರವಾಗಿ ಈ ಎರಡು ರೀತಿಯ ಸಾಮಾನುಗಳು ನಿಮ್ಮ ಸ್ಟೋರ್ ರೂಂ ನಲ್ಲಿದ್ದರೆ, ನಿಮ್ಮ ಮನೆಯಲ್ಲಿ ಆರ್ಥಿಕ ನಷ್ಟವನ್ನು ನೀವು ಅನುಭವಿಸುತ್ತೀರಿ ಅಂತ ಹೇಳಲಾಗುತ್ತಿದೆ ನೋಡಿ.


ಇದನ್ನೂ ಓದಿ:  Brass: ದೇವರ ಪೂಜೆಗೆ ಹಿತ್ತಾಳೆ ಸಾಮಾಗ್ರಿಗಳೇ ಉತ್ತಮ; ಕಾರಣ ಇದು


ಹೌದು.. ವಾಸ್ತು ಶಾಸ್ತ್ರದಲ್ಲಿ ನಾವು ಕೆಲವು ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ಇಡದಿದ್ದರೆ, ಅದು ನಮ್ಮ ಜೀವನದ ಮತ್ತು ಮನೆಯ ಪರಿಸರದ ಮೇಲೆ ನಕಾರಾತ್ಮಕವಾದ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಈ ರೀತಿಯ ಅವ್ಯವಸ್ಥೆಯನ್ನು ನಕಾರಾತ್ಮಕವೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಇದು ಮನೆಯುದ್ದಕ್ಕೂ ಶಕ್ತಿಯ ನೈಸರ್ಗಿಕ ಹರಿವನ್ನು ನಿರ್ಬಂಧಿಸುತ್ತದೆ.


ಈ ಸ್ಟೋರ್ ರೂಂ ಗಳಲ್ಲಿ ನೀವು ಸಂಗ್ರಹಿಸಿಡುವ ವಸ್ತುಗಳು ನಿಮ್ಮನ್ನು ಭೂತಕಾಲದಲ್ಲಿರಿಸುತ್ತದೆ, ಎಂದರೆ ನೀವು ಭೂತಕಾಲದಲ್ಲಿ ನಡೆದ ಘಟನೆಗಳ ಬಗ್ಗೆ ಯೋಚನೆಯಲ್ಲಿರುತ್ತಿರಿ ಮತ್ತು ಆ ಘಟನೆಗಳನ್ನು ಈ ವಸ್ತುಗಳು ನೆನಪಿಸುತ್ತವೆ ಮತ್ತು ನಿಮ್ಮ ಮನೆಯಲ್ಲಿ ಸಾಮರಸ್ಯದ ಕೊರತೆಗೂ ಸಹ ಇದು ಕಾರಣವಾಗುತ್ತದೆ. ಇಷ್ಟೇ ಅಲ್ಲದೆ ನಿಮಗೆ ಆಯಾಸ, ಅತಿಯಾದ ಗೊಂದಲ, ಕೋಪ ಮತ್ತು ಖಿನ್ನತೆಗೆ ಒಳಗಾಗುವಂತೆ ಸಹ ಇವು ಮಾಡುತ್ತದೆ. ಬನ್ನಿ ಹಾಗಾದರೆ ಯಾವ ಯಾವ ವಸ್ತುಗಳನ್ನು ನೀವು ನಿಮ್ಮ ಸ್ಟೋರ್ ರೂಂ ನಲ್ಲಿ ಇಡಲೇಬಾರದು ಅಂತ ನೋಡಿಕೊಳ್ಳಿರಿ.


1. ತುಕ್ಕು ಹಿಡಿದ ವಸ್ತುಗಳು
ವಾಸ್ತು ಶಾಸ್ತ್ರದ ಪ್ರಕಾರ, ನೀವು ಮನೆಯಲ್ಲಿ ತುಕ್ಕು ಹಿಡಿದ ವಸ್ತುಗಳನ್ನು ತೆಗೆದುಕೊಂಡು ಹೋಗಿ ಸ್ಟೋರ್ ರೂಂ ನಲ್ಲಿ ಇಡುವುದನ್ನು ಮೊದಲು ಬಿಡಬೇಕು. ನಿಮ್ಮ ಪ್ರಗತಿಯ ಪಥವನ್ನು ನಿರ್ಬಂಧಿಸಬಹುದಾದ ಅಂತಹ ವಸ್ತುಗಳನ್ನು ನೀವು ಆಗಾಗ್ಗೆ ಸ್ಟೋರ್ ರೂಂ ನಲ್ಲಿ ವಿಲೇವಾರಿ ಮಾಡುತ್ತೀರಿ.


ಇದನ್ನೂ ಓದಿ:  Chanting Mantras: ಮನೆ-ಮನದಲ್ಲಿ ಸುಖ-ಶಾಂತಿ ನೆಲೆಸಲು ಈ ಮಂತ್ರಗಳನ್ನು ಜಪಿಸಿ


2. ಹಳೆಯ ಹಿತ್ತಾಳೆ ಪಾತ್ರೆಗಳು
ಪಿತ್ತಾಳೆ ಎಂದೂ ಸಹ ಕರೆಯಲ್ಪಡುವ ಹಿತ್ತಾಳೆ, ಚಿನ್ನದಂತಹ ಹೊಳಪನ್ನು ಹೊಂದಿರುವ ಲೋಹವನ್ನು ಸ್ಟೋರ್ ರೂಂ ನಲ್ಲಿ ಇಡಬಾರದು. ಹಿತ್ತಾಳೆ ಪಾತ್ರೆಗಳು ಭಾರತೀಯ ಮನೆಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಸಾಮಾನುಗಳು. ಆದರೆ ನೀವು ನಿಮ್ಮ ಹಳೆಯ ಹಿತ್ತಾಳೆ ಪಾತ್ರೆಗಳನ್ನು ಸ್ಟೋರ್ ರೂಂ ನಲ್ಲಿ ವಿಲೇವಾರಿ ಮಾಡಬಾರದು. ಏಕೆ ಅಂತ ನೀವು ನಮ್ಮನ್ನು ಕೇಳಬಹುದು. ವಾಸ್ತು ಶಾಸ್ತ್ರದ ಪ್ರಕಾರ, ಶನಿ ದೇವನು ಆ ಹಿತ್ತಾಳೆ ಪಾತ್ರೆಗಳಲ್ಲಿ ವಾಸಿಸುತ್ತಾನೆ ಮತ್ತು ಇದನ್ನು ಸ್ಟೋರ್ ರೂಂ ನಲ್ಲಿ ಇರಿಸಿದರೆ ನೀವು ಆರ್ಥಿಕ ಸಮಸ್ಯೆಗಳನ್ನು ಎದುರಿಸಬಹುದು ಎಂದು ಹೇಳಲಾಗುತ್ತದೆ.

Published by:Ashwini Prabhu
First published: