ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷ ದೀಪೋತ್ಸವಕ್ಕೆ ತೆರೆ

ಕೋಟ್ಯಾಂತರ ಭಕ್ತರ ಪಾಲಿಗೆ ಸಾಕ್ಷಾತ್ ಶಿವ ಸಾನಿಧ್ಯ, ಭೂಲೋಕದ ಕೈಲಾಸ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಹಬ್ಬದ ಸಂಭ್ರಮಕ್ಕೆ ಇಂದು ತೆರೆಬಿತ್ತು. ಕೋಟಿ ಕೋಟಿ ವಿದ್ಯುತ್ ದೀಪಾಲಂಕಾರಗಳಿಂದ ಕುಡುಮ ಕ್ಷೇತ್ರ ಕಂಗೊಳಿಸುತ್ತಿದ್ದು,ಮಂಜುನಾಥನ ಅಪರೂಪದ ದರ್ಶನಕ್ಕೆ ಲಕ್ಷಾಂತರ ಭಕ್ತ ಗಣ ಸಾಕ್ಷಿಯಾಗಿದರು

ಧರ್ಮಸ್ಥಳ

ಧರ್ಮಸ್ಥಳ

  • Share this:
ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ (Dharmastala Sri Manjunatha) ಸನ್ನಿಧಿಯಲ್ಲಿ ಲಕ್ಷ ದೀಪೋತ್ಸವದ (Deepotsava) ಸಂಭ್ರಮ ಮನೆ‌ಮಾಡಿದೆ. ಕೋಟಿ ಕೋಟಿ ದೀಪಗಳ ನಡುವೆ ಮಂಜುನಾಥನ ಸನ್ನಿಧಿ ಅಲಂಕೃತವಾಗಿದ್ದು ಇಂದು ವೈಭವದ ಬೆಳ್ಳಿ ರಥೋತ್ಸವದ ಮೂಲಕ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ತೆರೆ ಬೀಳಲಿದೆ. ಕೋಟ್ಯಾಂತರ ಭಕ್ತರ ಪಾಲಿಗೆ ಸಾಕ್ಷಾತ್ ಶಿವ ಸಾನಿಧ್ಯ, ಭೂ ಲೋಕದ ಕೈಲಾಸ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಹಬ್ಬದ ಸಂಭ್ರಮಕ್ಕೆ ಇಂದು ತೆರೆ ಬೀಳಲಿದೆ. ಕೋಟಿ ಕೋಟಿ ವಿದ್ಯುತ್ ದೀಪಾಲಂಕಾರಗಳಿಂದ ಕುಡುಮ ಕ್ಷೇತ್ರ ಕಂಗೊಳಿಸುತ್ತಿದ್ದು,ಮಂಜುನಾಥನ ಅಪರೂಪದ ದರ್ಶನಕ್ಕೆ ಲಕ್ಷಾಂತರ ಭಕ್ತ ಗಣ ಸಾಕ್ಷಿಯಾಗಿದ್ದಾರೆ.

5 ದಿನಗಳ ಲಕ್ಷದೀಪೋತ್ಸವಕ್ಕೆ ತೆರೆ

5 ದಿನಗಳ ಲಕ್ಷದೀಪೋತ್ಸವ ಸಂಭ್ರಮ ಇಂದು ಮಂಜುನಾಥೇಶ್ವರನ ಬೆಳ್ಳಿ ರಥೋತ್ಸವ ನಡೆಯುವ ಮೂಲಕ ತೆರೆಕಾಣಲಿದೆ. ನಿನ್ನೆ‌ ಸಂಜೆ‌ ಕ್ಷೇತ್ರದ ಅಮೃತವರ್ಷಿಣಿ ಸಭಾ ಭವನದಲ್ಲಿ ಸರ್ವಧರ್ಮ ಸಮ್ಮೇಳನ 89 ನೇ ಅಧಿವೇಶನ ನಡೆಯಿತು. ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ದೀಪ ಬೆಳಗಿಸಿ ಚಾಲನೆ ನೀಡಿದರು. ಧರ್ಮಸ್ಥಳ ಧರ್ಮಾಧಿಕಾರಿ‌ ಡಾ.ಡಿ.ವಿರೇಂದ್ರ ಹೆಗ್ಗಡೆ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು
ಇನ್ನೂ ಸರ್ವಧರ್ಮ ಸಮ್ಮೇಳನದ ಅಧ್ಯಕ್ಷತೆ ಯನ್ನು ಬೆಂಗಳೂರಿನ ಎಸ್.ವ್ಯಾಸ ಯೋಗ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಗಳಾದ ಫ್ರೊ.ರಾಮಚಂದ್ರ ಜಿ.ಭಟ್ಟ ವಹಿಸಿದ್ದರು.

ಸರ್ವ ಧರ್ಮ ಸಮ್ಮೇಳನ

ದೇಶದ ಪ್ರತಿಷ್ಠಿತ ವಿದ್ವಾಂಸರಲ್ಲಿ ಒರ್ವರೆಂದು ಗುರುತಿಸಿಕೊಂಡಿರುವ ಪ್ರೊ. ರಾಮಚಂದ್ರ ಭಟ್ ಯೋಗ,ಆಧ್ಯಾತ್ಮ,ವೇದ ವಿಜ್ಞಾನದ ಬಗ್ಗೆ ತಮ್ಮ ಜ್ಞಾನವನ್ನು ಸಮ್ಮೇಳನವನ್ನು ಹಂಚಿಕೊಂಡಿದ್ದಾರೆ‌‌. ಮತಾಂತರ ದಿಂದ ವ್ಯಕ್ತಿಗಳನ್ನು ಬದಲಿಸಲು ಸಾಧ್ಯವಿಲ್ಲ. ಎಲ್ಲಾ ಧರ್ಮಗಳು ಶ್ರೇಷ್ಠತೆಯನ್ನೇ ತಿಳಿಸುತ್ತದೆ. ಧರ್ಮವನ್ನು ಅರಿತುಕೊಂಡವನು ಧರ್ಮ ಬದಲಿಸಲು ಸಾಧ್ಯವಿಲ್ಲ ಅಂತಾ ಹೇಳಿದ್ದಾರೆ.

ಇದನ್ನು ಓದಿ: ದೇವಿ ಕಾತ್ಯಾಯಿನಿ ಕಾಶಿಯಲ್ಲಿ ಅನ್ನಪೂರ್ಣೆಯಾಗಿ ನೆಲೆಯೂರಿದ ಕಥೆ ಇದು

ಸಾಹಿತ್ಯ ಸಾಂಸ್ಕೃತಿಕತೆ ಮೆರಗು ಮೂಡಿಸಿದ ಉಪನ್ಯಾಸಗಳು

ಇನ್ನು ಸರ್ವ ಧರ್ಮ ಸಮ್ಮೇಳನದಲ್ಲಿ ಭಾರತೀಯ ಧರ್ಮಗಳು ಎಂಬ ವಿಚಾರವಾಗಿ ಕನ್ನಡ ಪ್ರಾಧ್ಯಾಪಕು ಮತ್ತು ಪರಸ್ಪರ ಸಾಹಿತ್ಯ ವೇದಿಕೆಯ ಅಧ್ಯಕ್ಷ ರಾದ ಡಾ‌. ಸರ್ಫ್ರಾಜ್ ಚಂದ್ರಗತ್ತಿಯವರು ಉಪನ್ಯಾಸ ನೀಡಿದ್ದಾರೆ. ಇನ್ನು ಜೈನಧರ್ಮದ ಮೌಲಿಕತೆ ಮತ್ತು ಮಹತ್ವದ ಕುರಿತು ಮೈಸೂರು ವಿಶ್ವವಿದ್ಯಾನಿಲಯದ ಜೈನ ಶಾಸ್ತ್ರ ಮತ್ತು ಪ್ರಾಕೃತ ಅಧ್ಯಯನ ವಿಭಾಗದ  ನಿವೃತ್ತ ಪ್ರಾಧ್ಯಾಪಕರಾದ ಡಾ. ಎಂ. ಎಸ್ ಪದ್ಮ ಉಪನ್ಯಾಸ ನೀಡಿದ್ದಾರೆ. ಇನ್ನು ಧರ್ಮ ಮತ್ತು ಸಾಮಾಜಿಕ ಸ್ವಾಸ್ಥ್ಯ ಎಂಬ ವಿಚಾರವಾಗಿ ಉಪನ್ಯಾಸಕರಾದ ವಂದನೀಯ ಫಾದರ್ ವೀರೇಶ್ ವಿ. ಮೊರಾಸ್ ಉಪನ್ಯಾಸ ನೀಡಿದರು.

ಇದನ್ನು ಓದಿ: Kukke Subramanyaದಲ್ಲಿ ಚಂಪಾ ಷೃಷ್ಠಿಯ ಸಂಭ್ರಮ; ಈ ಸಮಯದಲ್ಲಿ ಬೀದಿ ಮಡೆಸ್ನಾನಕ್ಕೆ ಇರುವ ಮಹತ್ವವೇನು?

ಲಕ್ಷಾಂತರ ದೀಪಗಳಿಂದ ಕಂಗೊಳಿಸಿದ ಶ್ರೀ ಕ್ಷೇತ್ರ

ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸದ ಹಿನ್ನಲೆಯಲ್ಲಿ  ಕ್ಷೇತ್ರವನ್ನು ಕೋಟಿ ಕೋಟಿ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿದೆ. ಎಲ್ಲಿ ನೋಡಿದ್ರೂ ಝಗಮಗಿಸುವ ಬೆಳಕಿನ ಚಿತ್ತಾರ ಭಕ್ತರ ಕಣ್ಣುಗಳಿಗೆ ಸ್ವರ್ಗದ ಅನುಭವವನ್ನು ನೀಡುತ್ತಿದೆ. ಲಕ್ಷದೀಪೋತ್ಸವದ ಕೊನೆಯ ದಿನದ ಅಂಗವಾಗಿ ಮಂಜುನಾಥನ ಸಾನಿಧ್ಯದಲ್ಲಿ ಇಂದು ವಿಶೇಷ ಪೂಜೆ ನಡೆಯಲಿದೆ. ಗರ್ಭಗುಡಿಯಲ್ಲಿ ಮಂಜುನಾಥ ದೇವರ ಬಲಿಪೂಜೆ ಬಳಿಕ ಬೆಳ್ಳಿಯ ರಥದಲ್ಲಿ ಮಂಜುನಾಥನ ಉತ್ಸವ ಮೂರ್ತಿಯನ್ನು ವಿರಾಜಮಾನಗೊಳಿಸಿ ರಥೋತ್ಸವ ನಡೆಸಲಾಗುತ್ತೆ.

ಒಟ್ಚಿನಲ್ಲಿ ದಕ್ಷಿಣ ಭಾರತದ ಪ್ರಸಿದ್ದ ತೀರ್ಥ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಅದ್ಧೂರಿಯಿಂದ ನಡೆಯುತ್ತಿದ್ದು ಎಂದಿನಂತೆ ಈ ಭಾರಿಯೂ ನಾಡಿನ ಕಲೆ, ಸಾಹಿತ್ಯ,ಸಂಸ್ಕೃತಿ ಮೇಳೈಸಿದೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಧರ್ಮಸ್ಥಳದಲ್ಲಿ  ಸ್ವರ್ಗವೇ ಧರೆಗಿಳಿದಿದ್ದು ಅಖಿಲಾಂಡ ಕೋಟಿಯ ಒಡೆಯನ ದರ್ಶನ ಪಡೆದು ಕೋಟ್ಯಾಂತರ ಜನ ಕೃತಾರ್ಥರಾಗುತ್ತಿದ್ದಾರೆ.
Published by:Seema R
First published: