Diwali 2021: ಧನ್​ತೇರಸ್​ನಿಂದ ಪಾಡ್ಯಮಿವರೆಗೆ ಐದು ದಿನಗಳ ದೀಪಾವಳಿ ಹಬ್ಬದ ಆಚರಣೆ ಮಹತ್ವ

ಧನ್​ತೇರಸ್​​ ನರಕ ಚತುರ್ದಶಿ, ನಂತರ ದೀಪಾವಳಿ, ಗೋವರ್ಧನ ಪೂಜೆ ಮತ್ತು ಕೊನೆಯದಾಗಿ ಭಯ್​​ ದೂಜ್ ಹಬ್ಬವನ್ನು ಆಚರಿಸಲಾಗುತ್ತದೆ. ಐದು ದಿನಗಳ ಹಬ್ಬದ ಆಚರಣೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಹಿಂದೂ ಧರ್ಮದಲ್ಲಿ(Hindu Dharam)  ದೀಪಾವಳಿ ಹಬ್ಬವನ್ನು (Deepavali) ಅತ್ಯಂತ ಉತ್ಸಾಹದಿಂದ ಆಚರಿಸಲಾಗುತ್ತದೆ. ಕಾರ್ತಿಕ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯಂದು ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಶ್ರೀ ರಾಮನು ಕಾರ್ತಿಕ ಅಮಾವಾಸ್ಯೆಯ (kartik Amavasya) ದಿನ ಲಂಕಾವನ್ನು (lanka) ವಶಪಡಿಸಿಕೊಂಡು, 14 ವರ್ಷಗಳ ವನವಾಸದ ನಂತರ ಅಯೋಧ್ಯೆಗೆ ಹಿಂದಿರುಗಿದನು.ಅಯೋಧ್ಯೆಯ (Ayodhya) ಎಲ್ಲಾ ಜನರು ತಮ್ಮ ರಾಜನಾದ ಶ್ರೀರಾಮನನ್ನು ಸ್ವಾಗತಿಸಲು ಇಡೀ ನಗರದಲ್ಲಿ ದೀಪವನ್ನು ಬೆಳಗಿಸುವ ಮೂಲಕ ಈ ದಿನವನ್ನು ಆಚರಿಸಿದರು. ಈ ಕಾರಣದಿಂದ ಈ ಸಂಪ್ರದಾಯ ಅಂದಿನಿಂದ ನಡೆದುಕೊಂಡು ಬಂದಿದೆ. ದೀಪಾವಳಿಯ ದಿನದಂದು ಲಕ್ಷ್ಮೀ ಪೂಜೆಗೂ ವಿಶೇಷ ಮಹತ್ವವಿದೆ. ಈ ದಿನದಂದು ಲಕ್ಷ್ಮಿ, ಗಣಪತಿ ಮತ್ತು ಸರಸ್ವತಿ ದೇವಿಯನ್ನು ಪೂಜಿಸಲಾಗುತ್ತದೆ.

    ಧನ್ತೇರಸ್ ಅನ್ನು ದೀಪಾವಳಿಯ ಮೊದಲ ದಿನವೆಂದು ಪರಿಗಣಿಸಲಾಗುತ್ತದೆ. ಇದರ ನಂತರ, ನರಕ ಚತುರ್ದಶಿ, ನಂತರ ದೀಪಾವಳಿ, ಗೋವರ್ಧನ ಪೂಜೆ ಮತ್ತು ಕೊನೆಯದಾಗಿ ಭಯ್​​ ದೂಜ್ ಹಬ್ಬವನ್ನು ಆಚರಿಸಲಾಗುತ್ತದೆ. ಐದು ದಿನಗಳ ಹಬ್ಬದ ಆಚರಣೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

    ಧನ್​ತೇರಸ್​: (Dhanteras)
    ಪ್ರತಿ ವರ್ಷ ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ತಿಥಿಯಂದು ಧನ್​ತೇರಸ್​​ ಹಬ್ಬವನ್ನು ಆಚರಿಸಲಾಗುತ್ತದೆ. ಐದು ದಿನಗಳ ದೀರ್ಘ ದೀಪಾವಳಿಯ ಮೊದಲ ದಿನವೇ ಧನ್ ತ್ರಯೋದಶಿ ಮತ್ತು ಧನ್ವಂತರಿ ಜಯಂತಿ ಎಂದೂ ಕರೆಯಲ್ಪಡುವ ಧನ್​ತೇರಸ್​​. ಈ ದಿನ ಆಯುರ್ವೇದದ ಪಿತಾಮಹ ಧನ್ವಂತರಿಯು ಸಾಗರದ ಮಂಥನದಿಂದ ಅಮೃತ ಕಲಶದೊಂದಿಗೆ ಕಾಣಿಸಿಕೊಂಡನೆಂದು ನಂಬಲಾಗಿದೆ. ಈ ಕಾರಣಕ್ಕಾಗಿ, ಪ್ರತಿ ವರ್ಷ ಧನ್​ತೇರಸ್​ದಿನದಂದು ಪಾತ್ರೆಗಳನ್ನು ಖರೀದಿಸುವ ಸಂಪ್ರದಾಯವನ್ನು ಅನುಸರಿಸಲಾಗುತ್ತದೆ. ಧಂತೇರಸ್ ದಿನದಂದು ಯಾರು ಚಿನ್ನ, ಬೆಳ್ಳಿ, ಪಾತ್ರೆಗಳು, ಭೂಮಿ ಮತ್ತು ಆಸ್ತಿಯ ಶುಭ ಖರೀದಿಯನ್ನು ಮಾಡುತ್ತಾರೆ, ಹದಿಮೂರು ಪಟ್ಟು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.

    ನರಕ ಚತುರ್ದಶಿ: (Naraka Chaturdashi)
    ಕಾರ್ತಿಕ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿಯಂದು ನರಕ ಚತುರ್ದಶಿಯನ್ನು ಆಚರಿಸಲಾಗುತ್ತದೆ. ನರಕ ಚತುರ್ದಶಿಯನ್ನು ನರಕ್ ಚೌದಾಸ್, ರೂಪ್ ಚೌದಾಸ್ ಮತ್ತು ರೂಪ್ ಚತುರ್ದಶಿ ಮುಂತಾದ ಅನೇಕ ಹೆಸರುಗಳಿಂದ ಆಚರಿಸಲಾಗುತ್ತದೆ. ಇದನ್ನು ಚೋಟಿ ದೀಪಾವಳಿ ಎಂದೂ ಕರೆಯುತ್ತಾರೆ. ಏಕೆಂದರೆ ಇದನ್ನು ದೀಪಾವಳಿಯ ಮೊದಲು ಆಚರಿಸಲಾಗುತ್ತದೆ. ಈ ದಿನದಂದು ಸಾವಿನ ದೇವರು ಯಮರಾಜನನ್ನು ಪೂಜಿಸಲಾಗುತ್ತದೆ. ಮನೆಯ ಮೂಲೆಗಳಲ್ಲಿ ದೀಪವನ್ನು ಬೆಳಗಿಸುವುದರಿಂದ ಅಕಾಲಿಕ ಮರಣದಿಂದ ಮುಕ್ತಿ ಸಿಗುತ್ತದೆ.

    ಇದನ್ನು ಓದಿ: ದೇವಾಲಯಕ್ಕೆ ಬಂದ ಚಿನ್ನದ ಕಾಣಿಕೆಯನ್ನೇ ದೀಪಾವಳಿಯಂದು ಭಕ್ತರಿಗೆ ಪ್ರಸಾದವಾಗಿ ನೀಡುತ್ತಾರೆ ಈ ಮಹಾಲಕ್ಷ್ಮಿ ದೇಗುಲದಲ್ಲಿ

    ಲಕ್ಷ್ಮಿ ಪೂಜೆ ಅಥವಾ ಪ್ರದೋಶ ದಿನ (Diwali)
    ಹಿಂದೂ ಪಂಚಾಂಗದ ಪ್ರಕಾರ, ಕಾರ್ತಿಕ ಮಾಸದ ಅಮಾವಾಸ್ಯೆಯಂದು ಪ್ರದೋಷ ಕಾಲವಿರುವಾಗ ದೀಪಾವಳಿಯಂದು ಮಹಾಲಕ್ಷ್ಮಿಯನ್ನು ಪೂಜಿಸಲಾಗುವುದು. ದೀಪಾವಳಿಯಂದು ಮನೆಗಳನ್ನು ದೀಪಗಳಿಂದ ಅಲಂಕರಿಸಲಾಗುತ್ತದೆ. ದೀಪಾವಳಿಯ ಸಂಜೆಯ ಶುಭ ಸಮಯದಲ್ಲಿ ಲಕ್ಷ್ಮಿ , ಗಣೇಶ, ಸರಸ್ವತಿ ಮತ್ತು ಸಂಪತ್ತಿನ ದೇವರು ಕುಬೇರರನ್ನು ಪೂಜಿಸಲಾಗುತ್ತದೆ. ಲಕ್ಷ್ಮಿ ದೇವಿಯು ದೀಪಾವಳಿಯ ರಾತ್ರಿ ಭೂಮಿಗೆ ಬರುತ್ತಾಳೆ. ಪೂಜೆ ನೋಡಲು ಮನೆ ಮನೆಗೆ ಹೋಗುತ್ತಾಳೆ ಎಂದು ನಂಬಲಾಗಿದೆ. ದೀಪಾವಳಿಯಂದು ಜನರು ಸಂತೋಷ, ಸಮೃದ್ಧಿ ಮತ್ತು ಭೌತಿಕ ಸಂತೋಷಗಳಿಗಾಗಿ ಲಕ್ಷ್ಮಿ ದೇವಿಯ ವಿಶೇಷ ಪೂಜೆಯನ್ನು ಮಾಡುತ್ತಾರೆ.

    ಇದನ್ನು ಓದಿ: ನರಕ ಚತುರ್ದಶಿಯಂದು ಅಕಾಲಿಕ ಮೃತ್ಯು ನಿವಾರಣೆಗೆ ಯಮನ ಪೂಜಿಸಿ ದೀಪ ಬೆಳಗಿ

    ಬಲಿ ಪಾಡ್ಯಮಿ (Balipadyami)
    ಬಲಿ ಪಾಡ್ಯಮಿಯ ದಿನದಂದು ಗೋವರ್ಧನ ಪೂಜೆಯ ದಿನವಾಗಿ ಆಚರಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಗೋವರ್ಧನ ಹಬ್ಬವನ್ನು ಕಾರ್ತಿಕ ಮಾಸದ ಶುಕ್ಲ ಪಕ್ಷದ ಪ್ರತಿಪದ ದಿನದಂದು ಆಚರಿಸಲಾಗುತ್ತದೆ. ಇಂದು ಶ್ರೀಕೃಷ್ಣನೊಂದಿಗೆ ಗೋವರ್ಧನ ಪರ್ವತ ಮತ್ತು ಗೋವುಗಳನ್ನು ಪೂಜಿಸುವ ಸಂಪ್ರದಾಯ ರೂಢಿಯಲ್ಲಿದೆ.

    ಭಾಯ್​ ದೂಜ್ (Bhai Dooj)
    ಉತ್ತರ ಭಾರತದಲ್ಲಿ ಹೆಚ್ಚಾಗಿ ಆಚರಣೆ ಇರುವ ಈ ಭಾಯಿ ದೂಜ್ ಅನ್ನು ದೀಪಾವಳಿ ಹಬ್ಬದ ಕೊನೆಯ ದಿನ ಆಚರಿಸಲಾಗುವುದು. ಸಹೋದರತೆಯ ಸಂಕೇತವಾಗಿರುವ ಈ ಭಾಯಿ ದೂಜ್ ಅನ್ನು ಕಾರ್ತಿಕ ಮಾಸದ ಶುಕ್ಲ ಪಕ್ಷದ ಎರಡನೇ ದಿನದಂದು ಆಚರಿಸಲಾಗುತ್ತದೆ. ಈ ದಿನದಂದು ಸಹೋದರಿಯರು ತಮ್ಮ ಸಹೋದರರ ಹಣೆಯ ಮೇಲೆ ತಿಲಕವನ್ನು ಹಚ್ಚುತ್ತಾರೆ. ಅವರ ದೀರ್ಘಾಯುಷ್ಯ ಮತ್ತು ಸಂತೋಷ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸುತ್ತಾರೆ.
    Published by:Seema R
    First published: