Yakshagana: ಕಟೀಲು ದುರ್ಗಾಪರಮೇಶ್ವರಿಗೆ ಯಕ್ಷಗಾನದ ಹರಕೆ; ಪ್ರಸಂಗದಲ್ಲಿ ದೇವಿಯೇ ಸನ್ನಿಹಿತಳಾಗುತ್ತಾಳಂತೆ

ಕಟೀಲು ಶ್ರೀದುರ್ಗೆಗೆ ಯಕ್ಷಗಾನವೆಂದರೆ ಬಲು ಪ್ರೀತಿ ಯಾಗಿದ್ದರಿಂದ ದೇವಳದ ಕವಾಟ ಬಂಧನದ ಬಳಿಕ ದೇವಿಯು ಯಕ್ಷಗಾನ ನೋಡಲೆಂದು ತೆರಳುತ್ತಾಳೆಂಬುದು ಭಕ್ತರ‌ ನಂಬಿಕೆಯಾಗಿದೆ. ಆದ್ದರಿಂದ ಎಲ್ಲರೂ ತಮ್ಮ ಮನೆಗೆ ಕಟೀಲು ಮಾತೆ ಆಗಮಿಸಬೇಕೆಂದು ಯಕ್ಷಗಾನ ಪ್ರದರ್ಶನ ಮಾಡುವ ಮೂಲಕ ದೇವಿಯ ಆರಾಧನೆ ಮಾಡುತ್ತಾರೆ

ಯಕ್ಷಗಾನ

ಯಕ್ಷಗಾನ

  • Share this:
ಕಟೀಲು ಶ್ರೀ ದುರ್ಗಾಪರಮೇಶ್ವರಿ (Kateel Durga Parameshwari) ಯಕ್ಷಗಾನ ಪ್ರಿಯೆ... ಕಟೀಲು ಶ್ರೀ ದುರ್ಗೆಗೆ ಹೇಳುವ ಅತಿ ದೊಡ್ಡ ಯಕ್ಷಗಾನ ಸೇವೆ. ಆದ್ದರಿಂದ ಭಕ್ತರು ತಮ್ಮ ಬಯಕೆ, ಇಷ್ಟಾರ್ಥ ಸಿದ್ಧಿಗೆ ತಾಯಿಗೆ ಯಕ್ಷಗಾನ ಸೇವೆಯನ್ನು ನೀಡುತ್ತೇವೆ ಎಂದು ಹರಕೆ ಹೊರುತ್ತಾರೆ. ಯಕ್ಷಗಾನ (Yakshagana) ನಡೆಯುವಲ್ಲಿ ಕಟೀಲು ಶ್ರೀ ದೇವಿಯೇ ಬರುತ್ತಾಳೆ ಎಂಬ ನಂಬಿಕೆ ಭಕ್ತರಲ್ಲಿದೆ. ನವೆಂಬರ್ 29ರಿಂದ ಆರಂಭವಾದ ಕಟೀಲು ಯಕ್ಷಗಾನ ಪ್ರದರ್ಶನ ಮೇ 25 ರವರೆಗೆ ಅಂದರೆ ಸರಿಸುಮಾರು 167ದಿನಳ ಕಾಲ ಪ್ರದರ್ಶನ ನಡೆದು  ವರ್ಷದ ತಿರುಗಾಟ ಮುಕ್ತಾಯವಾಗುತ್ತದೆ.

ಕಟೀಲು ದೀಪೋತ್ಸವ

ಕಾರ್ತಿಕ ಪಂಚಮಿಯಂದು ಕಟೀಲು ದೀಪೋತ್ಸವ ನಡೆಯುತ್ತದೆ. ಬಳಿಕ ದೇವರ ತಾರಾನುಕೂಲದ ದಿನದಂದು ದೇವಸ್ಥಾನದ ಯಕ್ಷಗಾನ ಮೇಳಗಳ ತಿರುಗಾಟವನ್ನು ನಡೆಸಲಾಗುತ್ತದೆ. ವೃಷಭ ಸಂಕ್ರಮಣದ ಬಳಿಕ 11 ನೇ ದಿನದಂದು (ಮೇ 25 ರ ಸುಮಾರಿಗೆ) ವರ್ಷದ ತಿರುಗಾಟ (ಜೈತ್ರಯಾತ್ರೆ) ಮುಕ್ತಾಯವಾಗುತ್ತದೆ. ದೇವಿ ಸಮ್ಮುಖದಲ್ಲಿ ಕುಣಿದ ಕಲಾವಿದರು ಯಕ್ಷಗಾನ ತಿರುಗಾಟ ಆರಂಭದ ದಿನವಾದ ನಿನ್ನೆ ಕಲಾವಿದರು ಶ್ರೀದೇವಿಯ ಸಮ್ಮುಖದಲ್ಲಿಯೇ ಗಜ್ಜೆಕಟ್ಟಿ ಕುಣಿದರು. ಬಳಿಕ ಕಲಾವಿದರು ದೇವಸ್ಥಾನದ ಪ್ರಾಂಗಣದಲ್ಲಿ ಹಾಕಲಾಗುವ ಆರೂ ರಂಗಸ್ಥಳಗಳಲ್ಲಿ ಪೂರ್ವರಂಗ ಕುಣಿತವನ್ನು ಪ್ರದರ್ಶಿಸಿ 'ಪಾಂಡವಾಶ್ವಮೇಧ' ಪ್ರಸಂಗವನ್ನು ಪ್ರದರ್ಶಿಸಿದರು. ಆರು ಮೇಳಗಳು ತಿರುಗಾಟವನ್ನು ಆರಂಭಿಸಿ, ಮುಂದಿನ ಆರು ತಿಂಗಳ ಕಾಲ ವಿವಿಧ ಕಡೆಗಳಲ್ಲಿ ಯಕ್ಷಗಾನ ಹರಕೆಯಾಟ ಸೇವೆ ನಡೆಯುತ್ತದೆ.ಈಗಾಗಲೇ ಹಟ್ಟಿಯಂಗಡಿ, ಮಂದಾರ್ತಿ, ಬಪ್ಪನಾಡು, ಪಾವಂಜೆ ಮೇಳಗಳು ತಿರುಗಾಟ ಆರಂಭಿಸಿದೆ. ಧರ್ಮಸ್ಥಳ ಮೇಳವು ಒಂದು ತಿಂಗಳ ಕಾಲ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿಯೇ ಪ್ರದರ್ಶನ ನೀಡಲಿದೆ. ಡಿಸೆಂಬರ್ 5ರ ಬಳಿಕ ತಿರುಗಾಟ ಆರಂಭಿಸಲಿದೆ‌.

ಅದೇ ರೀತಿ ತೆಂಕಿನ ಗಜಮೇಳವಾದ ಹನುಮಗಿರಿ, ತುಳು ಪ್ರಸಂಗಗಳನ್ನು ಪ್ರದರ್ಶಿಸುವ ಸುಂಕದಕಟ್ಟೆ, ಸಸಿಹಿತ್ಲು, ಮಂಗಳಾದೇವಿ, ದೇಂತಡ್ಕ ಮೇಳಗಳು ತಿರುಗಾಟಕ್ಕೆ ಸಜ್ಜಾಗುತ್ತಿವೆ. ಬಡಗಿನ ಟೆಂಟ್ ಮೇಳಗಳಾದ ಪೆರ್ಡೂರು, ಸಾಲಿಗ್ರಾಮ ಮೇಳಗಳು ಹೊಸ ಪ್ರಸಂಗಗಳೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದು, ಉಳಿದಂತೆ ಬಡಗಿನ ಕಮಲಶಿಲೆ, ಗೋಳಿಗರಡಿ, ಸೌಕೂರು ಮುಂತಾದ ಮೇಳಗಳು ತಿರುಗಾಟಕ್ಕೆ ಅಣಿಯಾಗುತ್ತಿದೆ‌.

ಯಕ್ಷಗಾನ ಪ್ರಿಯೆ ದುರ್ಗೆ

ಕಟೀಲು ಶ್ರೀದುರ್ಗೆಗೆ ಯಕ್ಷಗಾನವೆಂದರೆ ಬಲು ಪ್ರೀತಿ ಯಾಗಿದ್ದರಿಂದ ದೇವಳದ ಕವಾಟ ಬಂಧನದ ಬಳಿಕ ದೇವಿಯು ಯಕ್ಷಗಾನ ನೋಡಲೆಂದು ತೆರಳುತ್ತಾಳೆಂಬುದು ಭಕ್ತರ‌ ನಂಬಿಕೆಯಾಗಿದೆ..ಆದ್ದರಿಂದ ಎಲ್ಲರೂ ತಮ್ಮ ಮನೆಗೆ ಕಟೀಲು ಮಾತೆ ಆಗಮಿಸಬೇಕೆಂದು ಯಕ್ಷಗಾನ ಪ್ರದರ್ಶನ ಮಾಡುವ ಮೂಲಕ ದೇವಿಯ ಆರಾಧನೆ ಮಾಡುತ್ತಾರೆ..ಕಟೀಲು ಯಕ್ಷಗಾನ ಮಂಡಳಿಯಲ್ಲಿ ಆರು ಮೇಳಗಳಿದ್ದರೂ 20 ವರ್ಷಕ್ಕೆ ಯಕ್ಷಗಾನ ಮುಂಗಡ ಬುಕ್ಕಿಂಗ್ ಆಗಿದೆ ಅನ್ನೋದು ಕರಾವಳಿಗರ ಯಕ್ಷಗಾನ ದ ಮೇಲಿನ ಶ್ರದ್ಧೆ,ಕಟೀಲು ದುರ್ಗೆಯ ಮೇಲಿನ ಭಕ್ತಿಗೆ ದ್ಯೋತಕವಾಗಿದೆ.

ಇದನ್ನು ಓದಿ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಷಷ್ಠಿ ಸಂಭ್ರಮಕ್ಕೆ ಬಂದರು ವಿಶೇಷ ಅತಿಥಿಗಳು; ಯಾರಿವರು?

ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯು ಒಟ್ಟು ಆರು ತಂಡಗಳನ್ನು ಹೊಂದಿದ್ದು, ಪ್ರಸ್ತುತ ನಾಲ್ಕು ನೂರಕ್ಕೂ ಅಧಿಕ ರಂಗಕರ್ಮಿಗಳು, ಕಲಾವಿದರು ಹಾಗೂ ಇತರ ನೌಕರರು ಸೇವೆ ಸಲ್ಲಿಸುತ್ತಿದ್ದಾರೆ. ಸುಮಾರು 150 ವರ್ಷಗಳ ಇತಿಹಾಸವಿರುವ ಕಟೀಲು ಮೇಳ 1975 ನೇ ಇಸವಿಯಲಿ ವ್ಯವಸ್ಥಿತ ಎರಡನೇ ಮೇಳವನ್ನು ಪ್ರಾರಂಭಿಸಿತು. 1982 ರಲ್ಲಿ ಮೂರನೇ ಮೇಳ, 1993 ರಲ್ಲಿ ನಾಲ್ಕನೇ ಮೇಳ, 2010 ರಲ್ಲಿ ಐದನೇ ಮೇಳ, 2013 ರಲ್ಲಿ ಆರನೇ ಮೇಳ ಪ್ರಾರಂಭಿಸಿತು.  ಕಟೀಲು ಮೇಳಕ್ಕೆ ದಿನವೊಂದಕ್ಕೆ 4-5 ಹರಕೆಯಾಟಗಳ ಬುಕ್ಕಿಂಗ್ ನಡೆಯುತ್ತದೆ.

ಇದನ್ನು ಓದಿ: ದೇವರು ಎಲ್ಲೆಡೆಯೂ ಇದ್ದಾನೆಯಾದರೂ ದೇವಸ್ಥಾನಕ್ಕೆ ಏಕೆ ಹೋಗಬೇಕು ಗೊತ್ತಾ?

ಯಕ್ಷಗಾನ ನಡೆಸುವ ಹರಕೆ

ಸುಖ-ಶಾಂತಿ ನೆಮ್ಮದಿಗಾಗಿ ಯಕ್ಷಗಾನ ಹರಕೆ ಹೇಳಿ ಪ್ರದರ್ಶನ ಮಾಡುವ ಭಕ್ತರು ಇದ್ದಾರೆ.. ಕೇವಲ ಹಿಂದೂಗಳು ಮಾತ್ರವಲ್ಲದೇ ಮುಸ್ಲಿಂ, ಕ್ರೈಸ್ತರೂ ಹರಕೆ ಆಟ ಆಡಿಸುತ್ತಾರೆ. ಕಟೀಲು ಮೇಳದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗದ ಪ್ರದರ್ಶನ ನಡೆಯುವಾಗ ಸಾಕ್ಷಾತ್ ದೇವಿಯೇ ರಂಗಸ್ಥಳದಲ್ಲಿ ಸನ್ನಿಹಿತಳಾಗುತ್ತಾಳೆಂಬ ನಂಬಿಕೆಯಿದೆ. ಪೌರಾಣಿಕತೆಯನ್ನು ಜಿಲ್ಲೆಯ ಮೂಲೆ ಮೂಲೆಗೆ ಪ್ರಚುರಪಡಿಸಿದ ಖ್ಯಾತಿ ಕಟೀಲು ಮೇಳಕ್ಕಿದೆ..ಕಟೀಲು ಮೇಳದ ಯಕ್ಷಗಾನ ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗದೇ ಜನರ ಧಾರ್ಮಿಕ ನಂಬಿಕೆಯಲ್ಲೂ ಹಾಸುಹೊಕ್ಕಾಗಿದೆ.

ಮೇಳದಲ್ಲಿ ಒಟ್ಟು 20ಕ್ಕೂ ಹೆಚ್ಚು ಚಿನ್ನದ, ಬೆಳ್ಳಿಯ ಕಿರೀಟಗಳು ಇವೆ. ಬೆಳ್ಳಿಯ ತೊಟ್ಟಿಲುಗಳಿವೆ..ಪ್ರತಿಮೇಳದಲ್ಲೂ ಬೆಳ್ಳಿಯ ಶಂಖ ಚಕ್ರ ಗದಾ ಬಾಣ ಬಿಲ್ಲುಗಳು ಇವೆ. ಇವೆಲ್ಲದಕ್ಕೂ ಪೂಜೆಯಾಗಿ ಯಕ್ಷಗಾನ ತಿರುಗಾಟ ಆರಂಭವಾಗಿದೆ.. ಈ ಎಲ್ಲಾ ಪರಿಕರ ಗಳು, ಯಕ್ಷಗಾನ ಮೇಳದ ದೇವರು ಮತ್ತೆ ದೇವಸ್ಥಾನ ಸೇರೋದು 167ದಿನಗಳ ನಂತರೇ ಅನ್ನೋದು ವಿಶೇಷವಾಗಿದೆ.
Published by:Seema R
First published: