Travle Places: ನಿಮ್ಮ ರಾಶಿ ಪ್ರಕಾರ ಈ ಸ್ಥಳಗಳಿಗೆ ಟ್ರಿಪ್ ಹೋದ್ರೆ ಬೆಸ್ಟ್​ ಅಂತೆ

ಸ್ಥಳ

ಸ್ಥಳ

Dream Destination: ರಾಶಿಚಕ್ರಕ್ಕೆ ಅನುಗುಣವಾಗಿ ರಜಾದಿನಗಳನ್ನು ಕಳೆಯಲು ಯಾವುದು ಉತ್ತಮ ಸ್ಥಳ ಹಾಗೂ ಆ ಸ್ಥಳಗಳು ನಿಮ್ಮ ರಾಶಿಗಳಿಗೆ ಅನುಗುಣವಾಗಿ ಹೇಗೆ ವಿಶೇಷವಾಗಿವೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.

  • Share this:

ಈಗಂತೂ ಜನರು ತಮ್ಮ ರಾಶಿಗಳಿಗನುಗುಣವಾಗಿ (Zodiac Sign) ಯಾವ ಬಣ್ಣದ ಬಟ್ಟೆ (Clothes) ಧರಿಸಿದರೆ ಒಳ್ಳೆಯದು, ಯಾವ ದಿನಗಳು ಅವರ ರಾಶಿಗಳಿಗೆ ಸರಿ ಹೊಂದುತ್ತದೆ ಎಂಬುದನ್ನು ಗಮನಿಸಿಕೊಂಡು ತಮ್ಮ ಕೆಲಸಗಳನ್ನು ಮಾಡಿಕೊಳ್ಳುವುದು ಪರಿಪಾಠವಾಗಿಬಿಟ್ಟಿದೆ. ಇದೀಗ ರಾಶಿಚಕ್ರಕ್ಕೆ ಅನುಗುಣವಾಗಿ ರಜಾದಿನಗಳನ್ನು (Holiday) ಕಳೆಯಲು ಯಾವುದು ಉತ್ತಮ ಸ್ಥಳ (Place) ಹಾಗೂ ಆ ಸ್ಥಳಗಳು ನಿಮ್ಮ ರಾಶಿಗಳಿಗೆ ಅನುಗುಣವಾಗಿ ಹೇಗೆ ವಿಶೇಷವಾಗಿವೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.


ಸೆಲೆಬ್ರಿಟಿ ಜ್ಯೋತಿಷಿಯಾದ ಇನ್ಬಾಲ್ ಹೊನಿಗ್ಮನ್ ತಮ್ಮ ವಿಭಿನ್ನ ಜ್ಯೋತಿಷ್ಯ ಜ್ಞಾನದಿಂದ ಹಾಗೂ ಆಸ್ಟ್ರೋಕಾರ್ಟೊಗ್ರಫಿ (ಸ್ಥಳ ಜ್ಯೋತಿಷ್ಯ) ರೇಖೆಗಳ ಆಧಾರದ ಮೇಲೆ ಪ್ರತಿ ರಾಶಿಚಕ್ರ ಚಿಹ್ನೆಗೆ ಸೂಕ್ತವಾದ ರಜಾ ತಾಣ ಯಾವುದು ಎಂಬುದನ್ನು ತಿಳಿಸಿದ್ದಾರೆ. ಆಸ್ಟ್ರೋಕಾರ್ಟೊಗ್ರಫಿ ಎಂಬುದು ನಿರ್ದಿಷ್ಟ ಭೌಗೋಳಿಕ ಸ್ಥಳಗಳು ಹಾಗೂ ರಾಶಿಗೆ ಅನುಗುಣವಾಗಿ ಈ ಸ್ಥಳ ಹೇಗೆ ಪ್ರಭಾವಶಾಲಿಯಾಗಿದೆ ಎಂಬುದನ್ನು ತಿಳಿಯುವ ಶಾಸ್ತ್ರವಾಗಿದೆ. ಅಷ್ಟಲ್ಲದೆ ಜನರ ಜನ್ಮ ದಿನಾಂಕ ಮತ್ತು ಮಾಹಿತಿಯ ಆಧಾರದ ಮೇಲೆ ಯಾವ ಸ್ಥಳಗಳು ಅವರಿಗೆ ಹೆಚ್ಚು ಸೂಕ್ತವಾಗಿವೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬಹುದು.


ಆಸ್ಟ್ರೋಕಾರ್ಟೊಗ್ರಫಿ ರೇಖೆಗಳ ಪ್ರಕಾರ ನಿಮ್ಮ ರಾಶಿಚಕ್ರ ಚಿಹ್ನೆಯ ಕನಸಿನ ತಾಣಗಳು ಇವು:


ಮೇಷ ರಾಶಿ (ಮಾರ್ಚ್ 21-ಏಪ್ರಿಲ್ 19)


ಮೇಷ ರಾಶಿಯವರು ಅರಳು ಹುರಿದಂತೆ ಸದಾ ಚಟುವಟಿಕೆಯಿಂದಿರುವ ವ್ಯಕ್ತಿಗಳು ಅಂತ ಹೇಳಬಹುದು. ಇವರ ರಾಶಿಗೆ ಅನುಗುಣವಾದ ತಾಣ ಎಂದರೆ ಅದು ಅಮೆರಿಕಾದ ಅಲಾಸ್ಕಾ ಅಂತ ಹೇಳಬಹುದು. ಸುಂದರವಾದ ಭೂದೃಶ್ಯಗಳಿಂದ ಕೂಡಿರುವ ಅಲಾಸ್ಕಾ ಮೇಷ ರಾಶಿಯವರಿಗೆ ಇಷ್ಟವಾಗುವಂತಹ ಸ್ಥಳವಾಗಿದೆ ಹಾಗೂ ರಜಾದಿನಕ್ಕೆ ಹೇಳಿಮಾಡಿಸಿದ ತಾಣವೂ ಹೌದು.


ವೃಷಭ (ಏಪ್ರಿಲ್ 20-ಮೇ 20)


ಉತ್ತಮ ಆಹಾರ ಮತ್ತು ಒಳ್ಳೆ ಭೂದೃಶ್ಯಗಳು ವೃಷಭ ರಾಶಿಯವರಿಗೆ ನಿಜವಾದ ಸಂತೋಷವನ್ನು ನೀಡುತ್ತದೆ. ಆದ್ದರಿಂದ ಅವರಿಗೆ ಲಾಸ್ ಏಂಜಲೀಸ್ ಗಿಂತ ಒಳ್ಳೆಯ ಸ್ಥಳದ ಬೇರೊಂದಿಲ್ಲ . 30,000 ಕ್ಕೂ ಹೆಚ್ಚು ರೆಸ್ಟೋರೆಂಟ್ ಗಳು ಮತ್ತು ಅದ್ಭುತವಾದ ಕಡಲತೀರಗಳನ್ನು ಹೊಂದಿರುವ ಈ ಜಾಗ ವೃಷಭ ರಾಶಿಯವರಿಗೆ ಹೇಳಿ ಮಾಡಿಸಿದ ಜಾಗ ಅನ್ನಬಹುದು.
ಮಿಥುನ (ಮೇ 21-ಜೂನ್ 20):


ಪಾರ್ಟಿ ಎಂದರೆ ನಿದ್ದೆ, ಊಟ ಬಿಟ್ಟು ಬರುವ ಮಿಥುನ ರಾಶಿಯವರಿಗೆ ಎಂದಿಗೂ ನಿದ್ರಿಸದ ನಗರವೆಂದೇ ಕರೆಯಿಸಿಕೊಂಡಿರುವ ನ್ಯೂಯಾರ್ಕ್ ಅತ್ಯುತ್ತಮ ರಜಾದಿನ ತಾಣವಾಗಿದೆ. ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ ಗೆ ಭೇಟಿ ನೀಡುವುದರಿಂದ ಹಿಡಿದು ಅತಿರಂಜಿತ ಬ್ರಾಡ್ ವೇ ಪ್ರದರ್ಶನವನ್ನು ನೋಡುವವರೆಗೆ, ಮಿಥುನ ರಾಶಿಯವರಿಗೆ ನೋಡಲು ಇಲ್ಲಿ ತುಂಬಾ ಸ್ಥಳಗಳಿವೆ ಮತ್ತು ಈ ಸ್ಥಳಗಳಿಗೆ ಅವರು ಮಾರುಹೋಗದೇ ಇರಲಾರರು ಎನ್ನಬಹುದು.


ಕರ್ಕಾಟಕ ರಾಶಿ (ಜೂನ್ 21-ಜುಲೈ 22)


ಕರ್ಕಾಟಕ ರಾಶಿಯವರಿಗೆ ಐಲ್ಯಾಂಡ್ ಕನಸಿನ ತಾಣವಾಗಿದೆ. ಉತ್ತರದ ದೀಪಗಳ ಮಾಂತ್ರಿಕ ನೋಟಗಳು ಮತ್ತು ಭೂಶಾಖದ ಲಗೂನ್‌ಗಳ ನಡುವೆ ಪ್ರಕೃತಿಯೊಂದಿಗೆ ಕಾಲ ಕಳೆಯಲು ಕರ್ಕಾಟಕ ರಾಶಿಯವರಿಗೆ ಐಲ್ಯಾಂಡ್‌ ಉತ್ತಮ ಸ್ಥಳ.


ಸಿಂಹ ರಾಶಿ (ಜುಲೈ 23-ಆಗಸ್ಟ್ 22)


ಐಷಾರಾಮಿ ಜೀವನ ಬಯಸುವ ಸಿಂಹ ರಾಶಿಯವರಿಗೆ ಅತ್ಯುತ್ತಮ ವೈನ್ ಸಂಸ್ಕೃತಿಗೆ ಹೆಸರುವಾಸಿಯಾದ ಅಕ್ವಿಟೈನ್ ನ ಐತಿಹಾಸಿಕ ರಾಜಧಾನಿ ಬೋರ್ಡೆಕ್ಸ್ ಹೇಳಿ ಮಾಡಿಸಿದ ತಾಣ. ರಮಣೀಯವಾದ ಕಡಲತೀರಗಳು ಮತ್ತು ವಿಶೇಷ ದ್ರಾಕ್ಷಿತೋಟ ಪ್ರವಾಸಗಳ ನಡುವೆ, ಸಿಂಹ ರಾಶಿಯವರು ತಮ್ಮ ನಿಜವಾದ ವ್ಯಕ್ತಿತ್ವವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.


ಕನ್ಯಾರಾಶಿ (ಆಗಸ್ಟ್ 23-ಸೆಪ್ಟೆಂಬರ್ 22)


ಕನ್ಯಾರಾಶಿಯ ಜನರಿಗೆ ಸೂಕ್ತವಾದ ತಾಣವೆಂದರೆ ಅದು ರೋಮ್. ಇಲ್ಲಿ ಅವರು ರೋಮ್ ನಗರದ ಪ್ರಾಚೀನ ವಾಸ್ತುಶಿಲ್ಪವನ್ನು ತುಂಬಾನೇ ಆನಂದಿಸಬಹುದು ಮತ್ತು ಶಾಪಿಂಗ್‌ ಪ್ರಿಯರಾಗಿದ್ದರೆ ಮನಸ್ಸೋ ಇಚ್ಚೇ ಇಲ್ಲಿ ನೀವು ಶಾಪಿಂಗ್ ಮಾಡಬಹುದು. ಇದು ಶಾಪಿಂಗ್‌ಗೆ ಹೆಸರಾದ ಸ್ಥಳವಾಗಿದೆ.


ಇದನ್ನೂ ಓದಿ: 7 ತಿಂಗಳು ಈ ರಾಶಿಯವರದ್ದೇ ರಾಜ್ಯಭಾರ, ಶನಿಯಿಂದ ಫುಲ್ ಅದೃಷ್ಟ


ತುಲಾ (ಸೆಪ್ಟೆಂಬರ್ 23- ಅಕ್ಟೋಬರ್ 22)


ತುಲಾ ರಾಶಿಯವರಿಗೆ ದುಬೈ ಕನಸಿನ ತಾಣವಾಗಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿರುವ ಎತ್ತರದ ಕಟ್ಟಡಗಳನ್ನು ತುಂಬಾನೇ ಇಷ್ಟ ಪಡಬಹುದು. ಅಲ್ಲಿನ ಐಷಾರಾಮಿ ಹೋಟೆಲ್‌ಗಳಂತೂ ತುಲಾ ರಾಶಿಯವರಿಗೆ ಹೆಚ್ಚು ಇಷ್ಟವಾಗುವಂತದ್ದು.


ವೃಶ್ಚಿಕ ರಾಶಿ (ಅಕ್ಟೋಬರ್ 23-ನವೆಂಬರ್ 21)


ವೃಶ್ಚಿಕ ರಾಶಿಯವರಿಗೆ ಸುತ್ತಾಡಲು ಶ್ರೀಲಂಕಾ ದೇಶ ಬೆಸ್ಟ್ ಅಂತ ಹೇಳಬಹುದು. ಶ್ರೀಲಂಕಾದಲ್ಲಿರುವ ಗಂಗಾರಾಮಯ ದೇವಾಲಯದ ಶ್ರೀಮಂತ ಪರಂಪರೆಯನ್ನು ಅನ್ವೇಷಿಸುವ ಮತ್ತು ಅಲ್ಲಿನ ವನ್ಯಜೀವಿಗಳನ್ನು ನೋಡುವುದು ವೃಶ್ಚಿಕ ರಾಶಿಯವರಿಗೆ ನೆಮ್ಮದಿ ನೀಡಬಹುದು.


ಧನು ರಾಶಿ (ನವೆಂಬರ್ 22-ಡಿಸೆಂಬರ್ 21)


ಪ್ರಯಾಣವನ್ನು ತುಂಬಾ ಇಷ್ಟಪಡುವ ಧನು ರಾಶಿಯವರು ಟೋಕಿಯೊದ ವಿಶಿಷ್ಟ ಬೀದಿಗಳು ಮತ್ತು ಸಾಟಿಯಿಲ್ಲದ ಪಾಕಪದ್ಧತಿಯನ್ನು ಇಷ್ಟಪಡುತ್ತಾರೆ. ಟೋಕಿಯೊ ಗೋಪುರವನ್ನು ಏರುವುದು ಮತ್ತು ಮೌಂಟ್ ಫ್ಯೂಜಿಯನ್ನು ದೃಶ್ಯವೀಕ್ಷಣೆಯ ನಡುವೆ, ಧನು ರಾಶಿಯವರಿಗೆ ಇಲ್ಲಿ ನೋಡಲು ತುಂಬಾನೇ ಸ್ಥಳಗಳಿವೆ.


ಮಕರ ರಾಶಿ (ಡಿಸೆಂಬರ್ 22-ಜನವರಿ 19)


ಕಠಿಣ ಪರಿಶ್ರಮಿಗಳಾದ ಮಕರ ರಾಶಿಯ ಜನರು ವೈವಿಧ್ಯತೆ ಮತ್ತು ಸ್ನೇಹಪರತೆಯನ್ನು ಇಷ್ಟಪಡುತ್ತಾರೆ. ಇದಕ್ಕೆ ಉತ್ತಮ ಸ್ಥಳವೆಂದರೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ಅಂತ ಹೇಳಬಹುದು. ವಿಶ್ವದ ಅತ್ಯಂತ ಸ್ನೇಹಪರ ನಗರ ಎಂದು ಹೆಸರಿಸಲಾಗಿದೆ ಮತ್ತು ಇಲ್ಲಿನ ರಾಯಲ್ ಬೊಟಾನಿಕಲ್ ಗಾರ್ಡನ್ ನನ್ನು ಮಿಸ್ ಮಾಡುವಂತೆಯೇ ಇಲ್ಲ.


ಕುಂಭ ರಾಶಿ (ಜನವರಿ 20-ಫೆಬ್ರವರಿ 18)


ಜನವರಿ ಕುಂಭ ರಾಶಿಯವರ ತಿಂಗಳು - ಅನನ್ಯ ಮತ್ತು ಮುಕ್ತ ಚಿಂತನೆಯುಳ್ಳ ಇವರು ನ್ಯೂಜಿಲೆಂಡ್ ನಲ್ಲಿರುವ ಪ್ರಕೃತಿಯಲ್ಲಿ ನಿಜವಾಗಿಯೂ ಆನಂದಿಸಲು ಇಷ್ಟ ಪಡುತ್ತಾರೆ. ಸುವಾಸನೆಭರಿತ ತೆರೆದ ಸ್ಥಳಗಳು ಮತ್ತು ಸುಂದರವಾದ ದೃಶ್ಯಾವಳಿಗಳ ಸಮೃದ್ಧಿಯೊಂದಿಗೆ, ಕುಂಭ ರಾಶಿಯವರು ತುಂಬಾನೇ ಎಂಜಾಯ್ ಮಾಡುವ ಸ್ಥಳ ಇದು.


ಇದನ್ನೂ ಓದಿ: ಈ ವರ್ಷ ಬುಧ ರಾಜ, ಶುಕ್ರ ಮಂತ್ರಿ - ದೇಶದಲ್ಲಿ ಹೊಸ ಕ್ರಾಂತಿ


ಮೀನ ರಾಶಿ (ಫೆಬ್ರವರಿ 19-ಮಾರ್ಚ್ 20)

top videos


    ರೋಮ್ಯಾಂಟಿಕ್ ಮತ್ತು ನಾಚಿಕೆ ಸ್ವಭಾವದ ಮೀನ ರಾಶಿಯವರ ಆದರ್ಶ ಪ್ರಯಾಣ ತಾಣವೆಂದರೆ ಹವಾಯಿ, ಇದು ನೀರಿನಿಂದ ಮತ್ತು ಬೆಚ್ಚಗಿನ ಕಡಲತೀರಗಳಿಂದ ಆವೃತವಾಗಿದೆ. ಇಲ್ಲಿನ ರಾಷ್ಟ್ರೀಯ ಉದ್ಯಾನವನಗಳು ಮತ್ತು ಸ್ವಚ್ಛವಾದ ನೀರಿನಲ್ಲಿ ಸರ್ಫಿಂಗ್ ಮಾಡುವ ಸಾಹಸಮಯ ಕ್ರೀಡೆಯು ಮೀನ ರಾಶಿಯ ಜನರಿಗೆ ಇಷ್ಟವಾಗದೆ ಇರಲಾರದು.

    First published: