Diwali Lakshmi Puja: ದೀಪಾವಳಿಯ ಲಕ್ಷ್ಮಿ ಪೂಜೆಯಂದು ಈ ವಸ್ತುಗಳನ್ನು ಅಪ್ಪಿ ತಪ್ಪಿಯು ಮರೆಯ ಬೇಡಿ

ಈ ದಿನ ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ವರ್ಷವಿಡೀ ಮನೆಯಲ್ಲಿ ಸಂಪತ್ತು ಮತ್ತು ಸಂತೋಷದ ಹರಿವು ಇರುತ್ತದೆ ಎಂದು ನಂಬಲಾಗಿದೆ.

ಲಕ್ಷ್ಮಿ ವೃತ

ಲಕ್ಷ್ಮಿ ವೃತ

 • Share this:
  ಭಾರತವು ಹಬ್ಬಗಳ ಶ್ರೀಮಂತ ಸಂಸ್ಕೃತಿಯನ್ನು ಹೊಂದಿರುವ ದೇಶವಾಗಿದೆ. ಪ್ರತಿಯೊಂದು ಹಬ್ಬಕ್ಕೂ ಒಂದೊಂದು ಪುರಾಣವಿದೆ. ದೀಪಾವಳಿಗೆ (Diwali ಸಾಕಷ್ಟು ಕಥೆಗಳಿವೆ. ಪೂರ್ವಜರು ದೀಪಾವಳಿಯನ್ನು (deepavali) ಬೆಂಕಿಯ ಬೆಳಕು ಎಂದು ಕರೆಯುತ್ತಾರೆ. ಇದು ಕೆಟ್ಟದ್ದರ ನಾಶ ಮತ್ತು ಒಳ್ಳೆಯದ ಹುಟ್ಟು ಎನ್ನಲಾಗಿದೆ. ಬೆಳಕು (light) ವಿಜಯದ ಸಂಕೇತವಾಗಿದೆ. ಕತ್ತಲೆ(Darkness) ಎಂದರೆ ವೈಫಲ್ಯ ಎಂದು ಅರ್ಥ.

  ದೀಪಾವಳಿಯ (deepavali) ದಿನದಂದು ಪೂಜೆ ಪುನಸ್ಕಾರಕ್ಕೆ ವಿಶೇಷ ಮಹತ್ವವಿದೆ. ಈ ದಿನ, ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿ (Goddess lakshmi ಹಾಗೂ ಗಣೇಶನನ್ನು (Ganesha) ಪೂಜಿಸಲಾಗುತ್ತದೆ. ಈ ದಿನ ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ವರ್ಷವಿಡೀ ಮನೆಯಲ್ಲಿ ಸಂಪತ್ತು ಮತ್ತು ಸಂತೋಷದ ಹರಿವು ಇರುತ್ತದೆ ಎಂದು ನಂಬಲಾಗಿದೆ. ದೀಪಗಳು, ಮೇಣದಬತ್ತಿಗಳನ್ನು ಮನೆಯ ಒಳಗೆ ಹೊರಗು ಹಚ್ಚಿ ಅಂದಕಾರ ಹೋಗಲಾಡಿಸಲು ಪ್ರಾರ್ಥಿಸಲಾಗುವುದು. ಈ ದೀಪಾವಳಿ ಹಬ್ಬಕ್ಕಾಗಿ ಒಂದು ತಿಂಗಳ ಮೊದಲೇ ತಯಾರಿ ಶುರುವಾಗುತ್ತದೆ. ದೀಪಾವಳಿಯ ದಿನದಂದು ಲಕ್ಷ್ಮಿ ದೇವಿಯು ಮನೆಗೆ ಬರುತ್ತಾಳೆ. ಶುಚಿತ್ವ ಇದ್ದಲ್ಲಿ ಮಾತ್ರ ಲಕ್ಷ್ಮಿ ನೆಲೆಯೂರುತ್ತಾಳೆ ಎಂಬ ನಂಬಿಕೆ ಇರುವ ಹಿನ್ನಲೆ ಇದಕ್ಕಾಗಿ ಮನೆ, ಮನ ಸ್ವಚ್ಛಗೊಳಿಸುವ ಕಾರ್ಯ ಕೂಡ ನಡೆಯುತ್ತದೆ.

  ಪೂಜೆಗೆ ಇರಲಿ ಈ ರೀತಿ ತಯಾರಿ

  ದೀಪಾವಳಿಯ ಪೂಜೆಗೆ ಚಿನ್ನ ಮತ್ತು ಬೆಳ್ಳಿ ಆಭರಣಗಳು, ಪಾತ್ರೆಗಳು ಮತ್ತು ಮಣ್ಣಿನ ಲಕ್ಷ್ಮಿ-ಗಣೇಶನನ್ನು ಖರೀದಿಸುತ್ತಾರೆ. ದೀಪಾವಳಿ ಪೂಜೆಯು ಕೆಲವು ವಸ್ತುಗಳಿಲ್ಲದೆ ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಕೊನೆಯ ಕ್ಷಣದಲ್ಲಿ ಯಾವುದೇ ಆತುರವಾಗದಂತೆ, ಪೂಜೆ ಅಪೂರ್ಣವಾಗಿ ಉಳಿಯದಂತೆ ಪೂಜೆಯಲ್ಲಿ ಬಳಸುವ ವಸ್ತುಗಳನ್ನು ಮುಂಚಿತವಾಗಿ ಖರೀದಿಸುವುದು ಉತ್ತಮ.

  ಇದನ್ನು ಓದಿ: ನರಕ ಚತುರ್ದಶಿಯಂದು ಅಕಾಲಿಕ ಮೃತ್ಯು ನಿವಾರಣೆಗೆ ಯಮನ ಪೂಜಿಸಿ ದೀಪ ಬೆಳಗಿ

  ಈ ವಸ್ತುಗಳನ್ನು ಪೂಜೆಯಲ್ಲಿ ಅಪ್ಪಿ ತಪ್ಪಿಯೂ ಮರೆಯಬೇಡಿ
  ಹಿತ್ತಾಳೆ ದೀಪ, ಹತ್ತಿ ದೀಪ, ಅಕ್ಷತೆ, ತೆಂಗಿನಕಾಯಿ, ಎರಡು ಕಮಲದ ಹೂವುಗಳು, , ಅರಿಶಿನ, ಮೆಹಂದಿ, ಬಳೆ, ಕಾಜಲ್, ಹತ್ತಿ, ಕುಂಕುಮ, ಅಡಿಕೆ, ವೀಳ್ಯದೆಲೆಗಳು, ಹೂವುಗಳು, ಪಂಚ ಕಾಯಿಗಳು, ಗಂಗಾಜಲ, ಜೇನುತುಪ್ಪ , ಸಕ್ಕರೆ, ಶುದ್ಧ ತುಪ್ಪ, ಮೊಸರು, ಹಾಲು, ಹಣ್ಣು, ಕಬ್ಬು, ಕೊತ್ತಂಬರಿ, ಪೇಡಾ, ಏಲಕ್ಕಿ (ಚಿಕ್ಕ), ಲವಂಗ, ಸುಗಂಧ ಬಾಟಲ್, ಕರ್ಪೂರ, ಕೇಸರಿ, ಸಿಂಹಾಸನ, ಮಾವು ಮತ್ತು ಲಕ್ಷ್ಮಿ ವಿಗ್ರಹ, ಗಣೇಶನ ವಿಗ್ರಹ, ಸರಸ್ವತಿಯ ಚಿತ್ರ, ಬೆಳ್ಳಿಯ ನಾಣ್ಯ, ಲಕ್ಷ್ಮಿ-ಗಣೇಶನಿಗೆ ಅರ್ಪಿಸಲು ಕೆಂಪು ಅಥವಾ ಹಳದಿ ಬಟ್ಟೆ, ನೀರಿನ ಪಾತ್ರೆ, ಬಿಳಿ ಬಟ್ಟೆ, ಕೆಂಪು ಬಟ್ಟೆ, ಪಂಚ ರತ್ನ, ದೀಪ, ದೀಪಕ್ಕೆ ಎಣ್ಣೆ, ವೀಳ್ಯದೆಲೆ, ಪೆನ್ನು, ಪುಸ್ತಕ, ಮಡಕೆ, ಹೂವು (ಗುಲಾಬಿ ಮತ್ತು ಕೆಂಪು ಕಮಲ), ಅರಿಶಿನದ ಉಂಡೆ, ಹೂಕುಂಡ, ಅರ್ಘ್ಯ ಪಾತ್ರೆ, ಧೂಪದೀಪ, ಶ್ರೀಗಂಧ ಪ್ರಮುಖ ವಸ್ತುವಾಗಿದೆ.

  ಇದನ್ನು ಓದಿ: ಪೂಜೆ ಕೋಣೆಯ ಆಚರಣೆ ಕುರಿತ ಕೆಲವು ಸಲಹೆ ಇಲ್ಲಿವೆ

  ದೀಪಾವಳಿ ಮಹತ್ವ
  ಪುರಾಣಗಳ ಪ್ರಕಾರ, ಶ್ರೀರಾಮನು ತ್ರೇತಾಯುಗದಲ್ಲಿ ರಾವಣನನ್ನು ಕೊಂದ ನಂತರ ಅಯೋಧ್ಯೆಗೆ ಹಿಂದಿರುಗಿದಾಗ, ಅಲ್ಲಿನ ಜನರು ದೀಪವನ್ನು ಬೆಳಗಿಸಿ ಸ್ವಾಗತಿಸಿದರು. ಪ್ರತಿ ವರ್ಷ ಜನರು ಈ ಸ್ವಾಗತವನ್ನು ದೀಪಾವಳಿಯ ಹಬ್ಬವೆಂದು ಆಚರಿಸುತ್ತಾರೆ. ದೀಪಾವಳಿಯ ದಿನದಂದು ಗಣೇಶ ಮತ್ತು ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಈ ದಿನ ಮನೆಯ ಮುಂಭಾಗಿಲಿನಲ್ಲಿ ರಂಗೋಲಿ ಹಾಕುತ್ತಾರೆ. ಇದರೊಂದಿಗೆ ಇಡೀ ಮನೆಯನ್ನು ದೀಪಗಳಿಂದ ಅಲಂಕರಿಸುವ ಮೂಲಕ ಲಕ್ಷ್ಮಿಯ ಆಗಮನವನ್ನು ಸ್ವಾಗತಿಸಲಾಗುತ್ತದೆ

  (ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್​ 18 ಕನ್ನಡ ಖಚಿತಪಡಿಸುವುದಿಲ್ಲ)
  Published by:Seema R
  First published: