Dead Person in Dream: ಸಾವನ್ನಪ್ಪಿದ ಅಪ್ಪ-ಅಮ್ಮ ಪದೇ ಪದೇ ಕನಸಿನಲ್ಲಿ ಬಂದರೆ ಏನು ಅರ್ಥ; ಏನು ಹೇಳತ್ತೆ ಸ್ವಪ್ನಾ ಶಾಸ್ತ್ರ!

ಸತ್ತ ವ್ಯಕ್ತಿಗಳು ಪದೇ ಪದೇ ಕನಸಿನಲ್ಲಿ ಕಂಡರೇ ಒಳಿತಾ ಅಥವಾ ಕೆಡುಕ ಎಂಬ ಪ್ರಶ್ನೆ ಅನೇಕರಲ್ಲಿ ಇರುತ್ತದೆ. ಈ ಕುರಿತು ಸ್ವಪ್ನಾ ಶಾಸ್ತ್ರದಲ್ಲಿ ಏನು ಹೇಳಲಾಗಿದೆ ಎಂಬ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನಿದ್ದೆಯಲ್ಲಿ ನಾವು ಕಾಣುವ ಪ್ರತಿಯೊಂದು ಕನಸಿಗೂ (Dream) ಒಂದೊಂದು ಅರ್ಥವಿದೆ. ಕನಸುಗಳು ನೆನಪುಗಳ ಕಾಲ್ಪನಿಕ ರೂಪಗಳು ಎಂದೂ ಕೆಲವರು ಹೇಳುತ್ತಾರೆ. ಸುಪ್ತ ಮನಸ್ಸಿನಲ್ಲಿರುವ ನೆನಪುಗಳೇ ಕನಸು ಎಂದೂ ಹೇಳುತ್ತಾರೆ. ನಾವು ಗಾಢ ನಿದ್ರೆಯಲ್ಲಿದ್ದಾಗ ಕನಸುಗಳು ಹೆಚ್ಚಾಗಿ ಬರುತ್ತವೆ. ಈ ಕನಸುಗಳು ಕೆಲವೊಂದು ಮನ್ಸೂಚನೆಯ ಸಂದೇಶ (Future Indication) ಎಂಬುದನ್ನು ಸ್ವಪ್ನಾ ಶಾಸ್ತ್ರದಲ್ಲಿ ವಿವರಿಸಲಾಗಿದೆ. ರಾತ್ರಿ ಕಂಡ ಕನಸುಗಳು ಹಲವು ಬಾರಿ ಕಾಡುವುದು ಸಾಮಾನ್ಯ. ಇಂತಹ ಕನಸುಗಳನ್ನು ಸ್ವಪ್ನಾ ಶಾಸ್ತ್ರದಲ್ಲಿ ವಿಶ್ಲೇಷಿಸಲಾಗಿದೆ.

    ಕೆಲವೊಮ್ಮೆ ಈ ಕನಸುಗಳು ನಮಗೆ ಅಶುಭದಾಯಕವೂ ಆಗುವ ಸಾಧ್ಯತೆ ಇರುತ್ತದೆ.
    ತಾವು ಅತಿಯಾಗಿ ಪ್ರೀತಿಸಿದ ವ್ಯಕ್ತಿಗಳು ನಮ್ಮಿಂದ ದೂರ ಆದಾಗ ಅವರ ನೆನೆಪುಗಳು ಮರೆಯುವುದ ಅಸಾಧ್ಯ. ದಿನಗಳೆದಂತೆ ಆ ನೋವಿ ಕಡಿಮೆಯಾದರೂ ಅವರ ನೆನಪುಗಳ ಮಾಸುವುದಿಲ್ಲ. ಇದೇ ಕಾರಣಕ್ಕೆ ಕೆಲವೊಮ್ಮೆ ನಾವು ಮರೆತಿದ್ದೇವೆ ಎಂಬ ವ್ಯಕ್ತಿಗಳು ಕೆಲವೊಮ್ಮೆ ಕನಸಿನಲ್ಲಿ ಬಂದು ಕಾಡುತ್ತಾರೆ. ಈ ರೀತಿ ಸತ್ತ ವ್ಯಕ್ತಿಗಳು ಪದೇ ಪದೇ ಕನಸಿನಲ್ಲಿ ಕಂಡರೇ ಒಳಿತಾ ಅಥವಾ ಕೆಡುಕ ಎಂಬ ಪ್ರಶ್ನೆ ಅನೇಕರಲ್ಲಿ ಇರುತ್ತದೆ. ಈ ಕುರಿತು ಸ್ವಪ್ನಾ ಶಾಸ್ತ್ರದಲ್ಲಿ ಏನು ಹೇಳಲಾಗಿದೆ ಎಂಬ ಮಾಹಿತಿ ಇಲ್ಲಿದೆ.

    ಸತ್ತವರು ಕನಸು ಕಂಡರೆ ಏನಾಗುತ್ತದೆ

    • ಸತ್ತವರು ಕನಸು ಕಂಡರೆ, ಒಳ್ಳೆಯ ಸುದ್ದಿ ಬರುತ್ತದೆ. ನೀವು ಹೆಚ್ಚು ಕಾಲ ಬದುಕುತ್ತೀರಿ. ಸತ್ತವರು ಕನಸಿನಲ್ಲಿ ಬಂದು ನಮ್ಮನ್ನು ಆಶೀರ್ವದಿಸಿದಂತೆ ಕನಸು ಕಾಣುವುದು ಎಂದರೆ ಎಲ್ಲಾ ರೀತಿಯ ಒಳ್ಳೆಯವುಗಳು ಸಂಭವಿಸುತ್ತವೆ.

    • ಸತ್ತವರು ಕನಸಿನಲ್ಲಿ ಬಂದು ಅಳುವಂತೆ ಕನಸು ಕಾಣುವುದು ಒಳ್ಳೆಯದಲ್ಲ. ಈ ರೀತಿ ಕನಸು ಬಿದ್ದರೆ ದೇವಸ್ಥಾನದಲ್ಲಿ ಪೂಜೆ ಮಾಡುವುದು ಒಳ್ಳೆಯದು.

    • ಸತ್ತವರೊಂದಿಗೆ ಮಾತನಾಡುವಂತೆ ಕನಸು ಕಂಡರೆ ಹೆಸರು ಮತ್ತು ಖ್ಯಾತಿಯನ್ನು ಪಡೆಯುತ್ತೀರಾ ಎಂದು ಅರ್ಥ.

    • ಸತ್ತವರು ನಿಮ್ಮ ಮನೆಯಲ್ಲಿ ಮಲಗಿದ ರೀತಿ ನೀವು ಕನಸು ಕಂಡರೆ ನೀವು ದೊಡ್ಡ ಆಪತ್ತಿನಿಂದ ತಪ್ಪಿಸಿಕೊಳ್ಳುತ್ತೀರಿ ಎಂದರ್ಥ.

    • ಶವಪೆಟ್ಟಿಗೆಯ ಕನಸು ಕಾಣುವುದು ಎಂದರೆ ನಮಗೆ ಹತ್ತಿರವಿರುವವರು ಸಾಯುತ್ತಾರೆ ಎಂಬ ಮುನ್ಸೂಚನೆ.


    ಇದನ್ನು ಓದಿ: ಜಾತಕದಲ್ಲಿನ ಈ ಐದು ದೋಷ ಭಾರೀ ಕೆಟ್ಟದು; ಏನಿದಕ್ಕೆ ಪರಿಹಾರ?

    • ಸತ್ತವರು ನಿಮ್ಮೊಂದಿಗೆ ಊಟ ಮಾಡುತ್ತಿದ್ದಾರೆ ಎಂಬ ಕನಸು ಕಂಡರೆ, ಅದೃಷ್ಟ ಮತ್ತು ಸಮೃದ್ಧಿ ನಿಮಗೆ ಒಲಿಯಲಿದೆ ಎಂದು ಅರ್ಥ.

    • ನೀವೇ ಸತ್ತಂತೆ ಕನಸು ಕಂಡರೆ ನಿಮ್ಮ ಜೀವನವೇ ಮುಗಿದು ಹೋಗಬಹುದು ಎಂಬ ಸೂಚನೆ ನೀಡುತ್ತದೆ.

    • ಮೃತ ತಂದೆ ಕನಸಿನಲ್ಲಿ  ಬಂದರೆ, ನೀವು ಪರಿಹರಿಸಲಾಗದ ಸಮಸ್ಯೆಯನ್ನು ನೀವು ಶೀಘ್ರದಲ್ಲೇ ಯಶಸ್ವಿಯಾಗಿ ಪೂರ್ಣಗೊಳಿಸುತ್ತೀರಿ ಎಂದರ್ಥ.

    • ಮೃತ ತಾಯಿ ಕನಸಿನಲ್ಲಿ  ಬಂದರೆ ನೀವು ಅಥವಾ ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಹೆಣ್ಣು ಮಗು ಹುಟ್ಟಲಿದೆ ಎಂದರ್ಥ.

    • ನಾವು ಕೇಳಿದ ವ್ಯಕ್ತಿ ಯಾರಾದರೂ ಸತ್ತಿದ್ದಾರೆ ಎಂಬ ಸಂದೇಶದ ಕನಸು ಕಂಡರೆ, ಇದರರ್ಥ ದುಃಖವು ದೂರವಾಗುತ್ತಿದೆ.

    • ಯಾರೇ ಸತ್ತವರ ಚಟಕ್ಕೆ ನೀವು ಹೆಗಲ ಕೊಟ್ಟ ರೀತಿ ಕನಸು ಕಂಡರೆ ಒಳ್ಳೆಯದಾಗಲಿದೆ.
      ಸತ್ತವರು ಕನಸಿನಲ್ಲಿ ಬಂದು ನಮ್ಮನ್ನು ಆಶೀರ್ವದಿಸಿದಂತೆ ಕನಸು ಕಾಣುವುದು ಎಂದರೆ ಎಲ್ಲಾ ರೀತಿಯ ಒಳ್ಳೆಯವುಗಳು ಸಂಭವಿಸುತ್ತವೆ.


    ಇದನ್ನು ಓದಿ: ತುಳಸಿ ಗಿಡ ಒಣಗಿದರೆ ಮನೆಗೆ ಅಶುಭ; ತಕ್ಷಣಕ್ಕೆ ಈ ರೀತಿ ಮಾಡಿ

    • ಸತ್ತವರೊಂದಿಗೆ ಮಾತನಾಡುವಂತೆ ಕನಸು ಕಂಡರೆ ಹೆಸರು ಮತ್ತು ಖ್ಯಾತಿಯು ನಿಮ್ಮನ್ನು ಹುಡುಕಿಕೊಂಡು ಬರಲಿದೆ ಎಂದು.

    • ಸತ್ತ ತಾಯಿ ಮತ್ತು ತಂದೆಯ ಕನಸು ಕಾಣುವುದು ಎಂದರೆ ಅವರು ಮುಂಬರುವ ಅಪಾಯದ ಬಗ್ಗೆ ಎಚ್ಚರಿಸಲು ಬಂದಿದ್ದಾರೆ ಎಂದರ್ಥ.

    • ಯಾರೇ ಸತ್ತಂತೆ ಕನಸು ಬಂದರೆ ಲಾಭ ಬರುತ್ತದೆ. ಜೀವನದಲ್ಲಿ ಸಂತೋಷವು ಸಂಭವಿಸುತ್ತದೆ ಎಂದರ್ಥ.

    • ಸತ್ತವರು ನಿಮ್ಮೊಂದಿಗೆ ಮಾತನಾಡುತ್ತಿರುವಂತೆ ನೀವು ಕನಸು ಕಂಡರೆ ಕಷ್ಟದ ಪರಿಸ್ಥಿತಿಯಲ್ಲಿ ನಿಮಗೆ ಸಹಾಯ ಮಾಡಲು ಕೆಲವರು ಬರುತ್ತಾರೆ ಎಂದರ್ಥ.


    (ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್​ 18 ಕನ್ನಡ ಖಚಿತಪಡಿಸುವುದಿಲ್ಲ)
    Published by:Seema R
    First published: