ಭಾರತದ (India) ವಿವಿಧ ರಾಜ್ಯಗಳಲ್ಲಿ ವಿವಿಧ ರೀತಿಯ ಸಂಪ್ರದಾಯಗಳಿದೆ (Rituals). ಒಂದೊಂದು ಮೂಲೆಯಲ್ಲಿಯೂ ಒಂದೊಂದು ರೀತಿಯ ಆರಾಧನೆ ಮಾಡಲಾಗುತ್ತದೆ. ಅದರಲ್ಲಿ ಒಂದು ದಶಮಾತಾ (Dasha Mata) ಆರಾಧನೆ. ಇದನ್ನು ರಾಜಸ್ಥಾನ ಸೇರಿದಂತೆ ವಿವಿಧೆಡೆಗಳಲ್ಲಿ ಆಚರಿಸಲಾಗುತ್ತದೆ. ದಶ ಮಾತಾ ವ್ರತವನ್ನು ಚೈತ್ರದ ದಶಮಿ ತಿಥಿಯಂದು ಅಥವಾ ಫಾಲ್ಗುಣ ಕೃಷ್ಣ ಪಕ್ಷದಲ್ಲಿ ಆಚರಿಸಲಾಗುತ್ತದೆ. ಈ ದಿನ, ವಿವಾಹಿತ ಮಹಿಳೆಯರು (Married Women) ದಿನವಿಡೀ ವ್ರತವನ್ನು ಆಚರಿಸುತ್ತಾರೆ, ದಶ ಮಾತಾ ಪೂಜೆಯನ್ನು ಮಾಡುತ್ತಾರೆ. ಹಾಗಾದ್ರೆ ಈ ಪೂಜೆಯ ಮಹತ್ವವೇನು ಹಾಗೂ ಮಾಡುವ ವಿಧಾನ ಹೇಗೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ದಶ ಮಾತಾ ಯಾರು?
ದಶಾ ಮಾತಾ ಎಂದರೆ ಸ್ತ್ರೀ ಶಕ್ತಿಯ ಒಂದು ರೂಪ. ಒಂಟೆಯ ಮೇಲೆ ಕುಳಿತ ದೇವಿಗೆ ನಾಲ್ಕು ಕೈಗಳಿದ್ದು, ಅವಳು ಮೇಲಿನ ಬಲ ಮತ್ತು ಎಡಗೈಯಲ್ಲಿ ಕ್ರಮವಾಗಿ ಕತ್ತಿ ಮತ್ತು ತ್ರಿಶೂಲವನ್ನು ಹಿಡಿದಿರುತ್ತಾಳೆ. ಮತ್ತು ಕೆಳಗಿನ ಬಲ ಮತ್ತು ಎಡ ಕೈಗಳಲ್ಲಿ, ಅವಳು ಕಮಲ ಮತ್ತು ರಕ್ಷಾಕವಚವನ್ನು ಹೊಂದಿರುತ್ತಾಳೆ.
ದಶ ಮಾತಾ ವ್ರತದ ಆಚರಣೆ ಹೇಗೆ?
ಮಹಿಳೆಯರು ಈ ದಿನ ಹತ್ತಿ ದಾರಕ್ಕೆ ಹತ್ತು ಗಂಟುಗಳನ್ನು ಹಾಕುತ್ತಾರೆ. ನಂತರ ಅರಳಿ ಮರಕ್ಕೆ ಹತ್ತು ಬಾರಿ ಪ್ರದಕ್ಷಿಣೆ ಹಾಕಿ ಅದರ ಕಾಂಡದ ಮೇಲೆ ಪವಿತ್ರ ಹತ್ತಿ ದಾರವನ್ನು ಸುತ್ತಿ, ರಾಣಿ ದಮಯಂತಿಯ ಕಥೆಯನ್ನು ಓದುತ್ತಾರೆ.
ಅಲ್ಲದೇ, ಈ ದಿನದಂದು ಉಪವಾಸವನ್ನು ಮಾಡಲಾಗುತ್ತದೆ. ಈ ದಿನ ವಿವಾಹಿತ ಮಹಿಳೆಯರು ತಮ್ಮ ಕುಟುಂಬದ ಸುಖ-ಸಮೃದ್ಧಿಗಾಗಿ ಪ್ರಾರ್ಥನೆ ಮಾಡುತ್ತಾರೆ. ಹಾಗೆಯೇ ಜಾತಕದಲ್ಲಿ ಗ್ರಹಗಳ ಸ್ಥಾನವನ್ನು ಸುಧಾರಿಸಲು ಹಾಗೂ ದೇವರ ಆಶೀರ್ವಾದ ಪಡೆಯಲು ಈ ವ್ರತ ಮಾಡಲಾಗುತ್ತದೆ.
ಇನ್ನು ಒಮ್ಮೆ ಉಪವಾಸವನ್ನು ಆರಂಭಿಸಿದರೆ ಈ ಉಪವಾಸವನ್ನು ಜೀವಮಾನವಿಡೀ ಮುಂದುವರಿಸಬೇಕು. ಇನ್ನು ಈ ಪೂಜೆ ಮಾಡುವಾಗ ಮನೆಯ ಮುಖ್ಯ ಬಾಗಿಲಿನಲ್ಲಿ ಹಳದಿ ಹಾಗೂ ಕುಂಕುಮವನ್ನು ಹಚ್ಚಬೇಕು. ಇದರಿಂದ ದುಷ್ಟ ಮತ್ತು ನಕಾರಾತ್ಮಕತೆಯಿಂದ ಮನೆಯನ್ನು ರಕ್ಷಿಸಬಹುದು ಎನ್ನುವ ನಂಬಿಕೆ ಇದೆ.
ಈ ದಿನ, ವ್ರತ ಮಾಡುವ ಮಹಿಳೆಯರು ಒಂದು ರೀತಿಯ ಧಾನ್ಯವನ್ನು ಮಾತ್ರ ಸೇವಿಸಬಹುದು. ಹೆಚ್ಚಿನ ಮಹಿಳೆಯರು ಗೋಧಿಯನ್ನು ಆರಿಸಿಕೊಳ್ಳುತ್ತಾರೆ, ಆದರೆ ಉಪ್ಪು ಸೇವನೆಯನ್ನು ನಿಷೇಧಿಸಲಾಗಿದೆ.
ಇದನ್ನೂ ಓದಿ: Ugadi Prediction 2023: ಮಿಶ್ರ ಫಲಗಳ ಹಬ್ಬ ಇವರಿಗೆ, ತುಲಾ ರಾಶಿಯ ಯುಗಾದಿ ಭವಿಷ್ಯ ಹೀಗಿದೆ
ಇದಲ್ಲದೇ, ಈ ದಿನ ಹಣವನ್ನು ಸಾಲವಾಗಿ ನೀಡುವುದು ಸಮಸ್ಯೆಗೆ ಕಾರಣವಾಗುತ್ತದೆ. ಅಲ್ಲದೇ, ಹೊಸ ವಸ್ತುಗಳನ್ನು ಖರೀದಿಸುವುದಿಲ್ಲ. ಬಿಹಾರ ಮತ್ತು ರಾಜಸ್ಥಾನಗಳಲ್ಲಿ, ಈ ಉಪವಾಸವನ್ನು ಆಚರಿಸಿದ ನಂತರ, ಮಹಿಳೆಯರು ತಮ್ಮ ಕುತ್ತಿಗೆಗೆ ಹತ್ತಿ ದಾರವನ್ನು ಧರಿಸುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ