Dharba Grass: ಹೋಮ-ಹವನಕ್ಕೆ ಮಾತ್ರವಲ್ಲ, ಆರೋಗ್ಯ ರಕ್ಷಣೆಗೂ ಧರ್ಬೆಹುಲ್ಲು ಸಹಕಾರಿ

Darbha grass Benefits: ರಾಮಾಯಣ ಮಹಾಭಾರತ ಕಾಲದಲ್ಲೂ, ಧರ್ಬೆಯ ಪ್ರಸ್ತಾಪ ಇರುವುದು ಪುರಾಣ ಗ್ರಂಥಗಳಲ್ಲಿ ಉಲ್ಲೇಖ ಇರುವುದನ್ನು ಕಾಣಬಹುದು. ಋಷಿಮುನಿಗಳು ಆಶ್ರಮ ನಿರ್ಮಿಸಲು ಧರ್ಬೆ ಹುಲ್ಲನ್ನು, ಜಪತಪ ಮಾಡಲು ದರ್ಭಾಸನಗಳನ್ನು ಉಪಯೋಗಿಸುತ್ತಿದ್ದರು.  

 ಧರ್ಬೇ

ಧರ್ಬೇ

 • Share this:
  ಸ್ವಯಂ ಶ್ರೀ ಕೃಷ್ಣ(Sri krishna) ಪರಮಾತ್ಮನಿಂದ ಭಗವದ್ಗೀತೆಯಲ್ಲಿ(Bhagavad-Gita) ಧರ್ಬೆಯನ್ನು(Dharba Grass) ಧ್ಯಾನಾಸನಗಳ ಭಾಗವಾಗಿದೆ ಎಂದು ಉಪದೇಶಿಸಲಾಗಿದೆ.ಧ್ಯಾನದ(Meditation) ಸಮಯದಲ್ಲಿ(Time) ನಮ್ಮ ಶರೀರದಿಂದ ಮುಖ್ಯವಾಗಿ ಕಾಲು ಹಾಗೂ ಕಾಲಿನ ಬೆರಳಿನಂದ ಹೊರಹೋಗುವ ಶಕ್ತಿಯನ್ನು ತಡೆಗಟ್ಟುವುದರಲ್ಲಿ ಇದು ಮುಖ್ಯ ಪಾತ್ರ ವಹಿಸುತ್ತದೆ.‍ಹೋಮ(Homa) ಹವನಾದಿಗಳಲ್ಲಿ ದರ್ಭೆಯನ್ನು ಹೋಮ ಕುಂಡದ ಸುತ್ತಲೂ 4 ಬದಿಯಲ್ಲೂ ಹಾಕಲಾಗುವುದು. ನವಗ್ರಹಗಳಲ್ಲಿ ಒಂದಾದ ಕೇತು ಗ್ರಹವನ್ನು ಪ್ರತಿನಿಧಿಸುವ ಧರ್ಬೆ ಹುಲ್ಲು ಹೋಮ, ಯಜ್ಞ, ಯಾಗಾದಿಗಳ ಆಚರಣೆಗೆ ಇರಲೇಬೇಕು. ಹೋಮ, ಯಜ್ಞ, ಯಾಗಾದಿಗಳನ್ನು ಮಾಡಲು ಸಿದ್ಧವಾಗುವಾಗ, ಯಜ್ಞ ದೀಕ್ಷೆ ಪಡೆಯಲು ಉಂಗುರದ ಬೆರಳಿಗೆ ದರ್ಭೆಯನ್ನು ಉಂಗುರದಂತೆ ಧರಿಸುತ್ತಾರೆ. ಇದಕ್ಕೆ ಪವಿತ್ರ ಎಂದು ಕರೆಯುತ್ತಾರೆ.

  ಧರ್ಬೆಯನ್ನು ಶುಭ-ಅಶುಭ ಕಾರ್ಯಗಳೆರಡಕ್ಕೂ ಪುರಾತನ ಕಾಲದಿಂದಲೂ ಹಿಂದೂ ಸಂಪ್ರಾಯದಲ್ಲಿ ಉಪಯೋಗಿಸುತ್ತಾ ಬಂದಿದ್ದಾರೆ. ಧರ್ಬೆಯನ್ನು ಶುಭ ಅಶುಭ ಕಾರ್ಯಗಳೆರಡಕ್ಕೂ ಪುರಾತನ ಕಾಲದಿಂದಲೂ ಹಿಂದೂ ಸಂಪ್ರಾಯದಲ್ಲಿ  ಉಪಯೋಗಿಸುತ್ತಾ ಬಂದಿದ್ದಾರೆ. ಇದನ್ನ ತುಂಬಾ ಪರಮಪವಿತ್ರವೆಂದು ಭಾವಿಸುತ್ತಾರೆ. ರಾಮಾಯಣ ಮಹಾಭಾರತ ಕಾಲದಲ್ಲೂ, ಧರ್ಬೆಯ ಪ್ರಸ್ತಾಪ ಇರುವುದು ಪುರಾಣ ಗ್ರಂಥಗಳಲ್ಲಿ ಉಲ್ಲೇಖ ಇರುವುದನ್ನು ಕಾಣಬಹುದು. ಋಷಿಮುನಿಗಳು ಆಶ್ರಮ ನಿರ್ಮಿಸಲು ಧರ್ಬೆಹುಲ್ಲನ್ನು, ಜಪತಪ ಮಾಡಲು ದರ್ಭಾಸನಗಳನ್ನು ಉಪಯೋಗಿಸುತ್ತಿದ್ದರು.

  ಇದನ್ನೂ ಓದಿ: ಈ ಗಣೇಶ ಮೂರ್ತಿಗಳನ್ನು ಮನೆಯಲ್ಲಿ ಪೂಜಿಸಬೇಡಿ; ಅದು ಅಶುಭ

  ದರ್ಭೆಯ ಸ್ಪರ್ಶ ಮಾತ್ರದಿಂದಲೇ ರೋಗ ನಿವಾರಣೆ

  ಧರ್ಬೆಯನ್ನು ಬೆರಳಿಗೆ ಧಾರಣೆಮಾಡುವುದರಿಂದ ಶರೀರದ ಎಲ್ಲಾ ಭಾಗಗಳಿಗೂ ಒಂದು ವಿಧವಾದ ಆಯಾಸ್ಕಾಂತ ಶಕ್ತಿಯು ಪಸರಿಸುವುದು. ಇದರಿಂದ ಮನೋವಿಕಲ್ಪಗಳು ದೂರವಾಗಿ ಜಿತೇಂದ್ರಯತ್ವ ಲಭಿಸುವುದು. ಮನಸ್ಸಿನ ಮೇಲೆ ಹತೋಟಿ ಸಾಧಿಸಿದ ನಂತರ ಲೋಕಕಲ್ಯಾಣಾರ್ಥ ಕಾರ್ಯಗಳಾದ, ಹೋಮ, ಯಜ್ಞ, ಯಾಗಾದಿಗಳನ್ನು ಮಾಡುವಾಗ ಇರಬೇಕಾದದ್ದು ಅತ್ಯಗತ್ಯವೆ. "ಪವಿತ್ರ" ಜ್ಞಾನವಾಹಿನಿ, ಮತ್ತು ಕ್ರಿಯವಾಹಿನಿ, ನರಗಳ ಮೂಲಕ ಮಹಾಮಸ್ತಿಷ್ಕ, ಹಾಗೂ ಅನು ಮಸ್ತಿಷ್ಕಗಳಿಗೆ ನೇರವಾದ ಸಂಪರ್ಕವನ್ನು ಉಂಟುಮಾಡುವುದರಿಂದ ಇಂತಹ ಅದ್ಭುತ ಪರಿಣಾಮ ಉಂಟಾಗುವುದು. ಅಲ್ಲದೆ ದರ್ಭೆಯ ಸ್ಪರ್ಶ ಮಾತ್ರದಿಂದಲೇ ಎಲ್ಲಾ ವಿದಧ ಚರ್ಮ ವ್ಯಾಧಿಗಳು ದೂರವಾಗುವುವು.

  ಇದನ್ನೂ ಓದಿ: ನಿಮ್ಮ ಮನೆಯಲ್ಲಿ ಪದೇಪದೇ ಈ ರೀತಿಯ ಘಟನೆಗಳು ನಡೆಯುತ್ತಿದ್ರೆ ಅದು ಅಶುಭ ಎಂದೇ ಅರ್ಥ

  ಅಷ್ಟೇ ಅಲ್ಲದೇ ಮೂತ್ರದಲ್ಲಿ ಉರಿ, ರಕ್ತ ದೋಷ, ರಕ್ತ ಪಿತ್ತ, ಕಫ ಮುಂತಾದ ರೋಗಗಳು ದೂರವಾಗುವುವು. ಶರೀರ ಶುದ್ಧಿಯನ್ನು ಸಹ ಉಂಟು ಮಾಡಲು ಶಕ್ತವಾಗಿದೆ. ಇನ್ನು ಸೈನೋಡಾನ್ ಡ್ಯಾಕ್ಟಿಲಾನ್ ಎಂದು ಕರೆಯಲ್ಪಡುವ ಈ ಸಣ್ಣ ಹುಲ್ಲನ್ನು ಆಯುರ್ವೇದ ಔಷಧ ವಿಧಾನಗಳಲ್ಲಿ ವಿಶೇಷವಾಗಿ ಬಳಸಲಾಗುವುದು. ಗರಿಕೆ ಹುಲ್ಲಿನಲ್ಲಿ ವಿಶೇಷವಾದ ಔಷಧೀಯ ಗುಣ ಇರುವುದರಿಂದ ಸಾಕಷ್ಟು ಅನಾರೋಗ್ಯಗಳಿಗೆ ಸುಲಭ ಔಷಧವನ್ನಾಗಿ ಬಳಸಬಹುದು. ಇದರಲ್ಲಿ ಇರುವ ಕ್ಯಾಲ್ಸಿಯಂ, ರಂಜಕ, ಫೈಬರ್, ಪೊಟ್ಯಾಸಿಯಮ್ ಮತ್ತು ಪ್ರೋಟೀನ್ ಸಮೃದ್ಧವಾಗಿರುತ್ತದೆ.

  ಆಹಾರ ಪಾದರ್ಥಗಳ ಮೇಲುಂಟಾಗುವ ದುಷ್ಪರಿಣಾಮ ರಕ್ಷಿಸುವ ದರ್ಬೆ

  ಸಾಮಾನ್ಯವಾಗಿ ಗ್ರಹಣದ ಸಮಯದಲ್ಲಿ, ನೀರು, ಆಹಾರ ವಸ್ತುಗಳನ್ನು ಭದ್ರ ಪಡಿಸಿರುವ, ಅಂಡೆ, ಕೊಳಗ, ಡಬ್ಬಿಗಳ ಮೇಲೆ ದರ್ಭೆಯನ್ನು ಇಡುವರು. ಗ್ರಹಣ ಸಂಭವಿಸುವ ಪ್ರದೇಶದ ಸುತ್ತಲೂ ಒಂದು ವಿಧವಾದ ವಿಷವರ್ತುಲವು ರೂಪಗೊಳ್ಳುತ್ತದೆ. ದರ್ಭೆ ಇಡುವಕಡೆ ಒಂದು ಮೀಟರ್ ಪ್ರದೇಶದಷ್ಟು ದೂರ ವಿಷವರ್ತುಲವನ್ನು ತಡೆದು, ನೀರು, ಆಹಾರ ಪಾದರ್ಥಗಳ ಮೇಲುಂಟಾಗುವ ದುಷ್ಪರಿಣಾಮವನ್ನು ಭೇದಿಸಿ ರಕ್ಷಿಸುವ ಶಕ್ತಿ ದರ್ಭೆಯಲ್ಲಿದೆ.

  ಸರ್ವ ರೋಗಕ್ಕೂ ಮದ್ದು ಧರ್ಬೆ

  ಧರ್ಬೆಯಕಷಾಯ ಸೇವನೆಯಿಂದ ದೇಹದಲ್ಲಿನ ಉಷ್ಣತೆ ಕಡಿಮೆಯಾಗಿ, ದೇಹ ತಂಪಾಗುತ್ತೆ, ಮೂತ್ರ ಸಮಸ್ಯೆಗಳಾದ, ಮೂತ್ರಬಂಧ, ಮೂತ್ರದಲ್ಲಿ ಉರಿ, ಮೂತ್ರದಲ್ಲಿ ರಕ್ತ ಬೀಳುವುದು  ದೂರವಾಗುತ್ತೆ. ಅತಿಸಾರ ಭೇದಿ ನಿವಾರಣೆಯಾಗುತ್ತೆ.ಬೇರನ್ನು ಜಜ್ಜಿ ಹಸುವಿನ ಹಾಲಲ್ಲಿ ಹಾಕಿ ಕುದಿಸಿ, ಕಲ್ಲು ಸಕ್ಕರೆ ಬೆರಸಿ ಕುಡಿಯುತ್ತಾ ಬಂದರೆ, ಬಾಣಂತಿಯರಲ್ಲಿ ಎದೆ ಹಾಲು ಹೆಚ್ಚೆಚ್ಚು  ಉತ್ಪತ್ತಿಯಾಗುತ್ತೆ. ಗರಿಯ ರಸ ಅಥವಾ ಕಷಾಯ ಸೇವಿಸುತ್ತಾ ಬಂದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹತೋಟಿಗೆ ಬರುತ್ತೆ. ಮೂಲವ್ಯಾಧಿ ವಾಸಿಯಾಗುತ್ತೆ. ದಿನವು ದರ್ಭಾಸನದಲ್ಲಿ ಕುಳಿತುಕೊಳ್ಳುವ ಅಭ್ಯಾಸ ಮಾಡಿಕೊಂಡರೆ ದೇಹವು ತಂಪಾಗುತ್ತೆ. ಮೆದಳು ಚುರುಕಾಗುತ್ತೆ. ಜ್ಞಾನಶಕ್ತಿ, ಜ್ಞಾಪಕಶಕ್ತಿ ಹೆಚ್ಚುತ್ತೆ. ಬೇರಿನ ಕಷಾಯ ನಿಯಮಿತವಾಗಿ ಸೇವಿಸುತ್ತಾ ಬಂದರೆ, ಸ್ತ್ರೀಯರಲ್ಲಿನ ಅತಿ ಋತುಸ್ರಾವ ಸಮಸ್ಯೆ ನಿವಾರಣೆಯಾಗುತ್ತೆ.ಎಳ್ಳೆಣ್ಣೆಯಲ್ಲಿ ಧರ್ಬೆಯನ್ನು ಹಾಕಿ ಚೆನ್ನಾಗಿ ಕುದಿಸಿ, ಚರ್ಮ ರೋಗಗಳಾದ, ಬಿಳಿಮಚ್ಚೆ(ತೊನ್ನು) ಕುಷ್ಠದ ಮೇಲೆ ಲೇಪಿಸುತ್ತಾರೆ. ದದ್ದು, ನವೆ, ಕಜ್ಜಿ, ಹುಳುಕಡ್ಡಿ ಸಹ ನಿವಾರಣೆಯಾಗುತ್ತೆ.ಚೇಳು, ವಿಷಜಂತುಗಳು ಕಚ್ಚಿದಾಗ, ಬೇರಿನ ರಸಕ್ಕೆ ಕಾಳುಮೆಣಸಿನ ಚೂರ್ಣ ಬೆರಸಿ ಕುಡಿಸಿದರೆ, ವಿಷ ನಿವಾರಣೆಯಾಗುತ್ತೆ.

  ಇದನ್ನೂ ಓದಿ: ಮನೆಯೊಳಗೆ ಬೆಳೆಸುವ ಈ ಗಿಡ ಈ ದಿಕ್ಕಿನಲ್ಲಿದ್ರೆ ಮಾತ್ರ ಒಳಿತು

  ದುಷ್ಟ ಶಕ್ತಿಗಳಿಂದಲೂ ರಕ್ಷಣೆ

  ನಾವು ಯಾವ ವೃತವಾಗಲಿ ಯಜ್ಞ ಯಾಗಾದಿಗಳಾಗಲಿ ಪೂಜಾದಿಗಳಾಗಲಿ ಇದನ್ನು ಆಚರಿಸುವಾಗ ಭಗವಂತನ ಶಕ್ತಿಯ ಜೊತೆಗೆ ದುಷ್ಟ ಶಕ್ತಿಯೂ ಇರುತ್ತವೆ. ಆಗ ನಮ್ಮ ಕೈಯಲ್ಲಿರುವ ಧರ್ಬೆಯ ದರ್ಶನ ಮಾತ್ರದಿಂದ ದುಷ್ಟ ಶಕ್ತಿಯು ಅಲ್ಲಿಂದ ಓಡಿ ಹೋಗುತ್ತವೆ. ಇದು ಇಂದ್ರನ ವಜ್ರಾಯುಧವಿದ್ದಂತೆ. ಆದ್ದರಿಂದ ಧರ್ಬೆಯನ್ನು ಬಳಸುತ್ತೇವೆ. ಈ ಧರ್ಬೆಯು ದೇವಲೋಕದಿಂದ ಯಜ್ಞ ಯಾಗಾದಿಗಳಿಗೆಂದೆ ಭೂ ಲೋಕಕ್ಕೆ ಭಗವಂತನು ಕಳಿಸಿರುತ್ತಾನೆ. ಇನ್ನು ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇದ್ದರೂ ಶಾಶ್ವತ ಪರಿಹಾರ ಮಾಡಿಕೊಡಲಾಗುತ್ತದೆ

  ಇದನ್ನೂ ಓದಿ: ಮನೆಯೊಳಗೆ ಬೆಳೆಸುವ ಈ ಗಿಡ ಈ ದಿಕ್ಕಿನಲ್ಲಿದ್ರೆ ಮಾತ್ರ ಒಳಿತು

  ಇನ್ನು ಮೇಲ್ನೋಟಕ್ಕೆ ದರ್ಬೆ ವ್ಯರ್ಥವಾಗಿ ಬೆಳೆಯುವ ಹುಲ್ಲು . ಆದರೆ ವಾತಾವರಣದಲ್ಲಿರುವ ದುಷ್ಟಶಕ್ತಿಯನ್ನು ನಿಯಂತ್ರಿಸುವ ಅಮೋಘ ಶಕ್ತಿ ದರ್ಬೆಗಿದೆ. ಅದಕ್ಕಾಗಿ ಯಜ್ಞ-ಯಾಗದಿಗಳಲ್ಲಿ ಧರ್ಬೆಯನ್ನು ಉಂಗುರವಾಗಿ ಧರಿಸುತ್ತಾರೆ ಹಾಗು ದುಷ್ಟ ಶಕ್ತಿ ನಿಯಂತ್ರಕವಾಗಿ ಯಜ್ಞಕುಂಡದ ಸುತ್ತಲೂ ಧರ್ಬೆಯನ್ನು ಇಡುತ್ತಾರೆ.
  Published by:ranjumbkgowda1 ranjumbkgowda1
  First published: