Astrology: ಈ ರಾಶಿಯವರದ್ದು ಡೈವೋರ್ಸ್​ ಆಗೋದು ಹೆಚ್ಚಾಂತೆ - ನಿಮ್ಮವರ ರಾಶಿನೂ ಇದಿಯಾ ನೋಡಿ

Relationship: ಹೌದು, ನಿಮ್ಮ ದಾಂಪತ್ಯ ಜೀವನದ ಯಶಸ್ಸು ಅಥವಾ ಸೋಲಿನ ಬಗ್ಗೆ ನಿಮ್ಮ ರಾಶಿ ಚಿಹ್ನೆಗಳಿಂದ ಬಹಳಷ್ಟು ವಿಷಯಗಳನ್ನು ತಿಳಿದುಕೊಳ್ಳಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ವೈವಾಹಿಕ ಸಂಬಂಧದಲ್ಲಿ (Married Life) ಪರಸ್ಪರ ಹೊಂದಾಣಿಕೆ ಮತ್ತು ಸಹಕಾರ ಬಹಳ ಮುಖ್ಯ. ದಾಂಪತ್ಯ ಜೀವನದ ಒತ್ತಡವನ್ನು ಎಲ್ಲರಿಂದಲೂ ನಿರ್ವಹಿಸಲು ಸಾಧ್ಯವಿಲ್ಲ. ಸಂಗಾತಿಗಳು (Partners) ತಮ್ಮ ಮದುವೆಯ ಸಂಬಂಧವನ್ನು ಮುರಿಯಲು ಅನೇಕ ಕಾರಣಗಳು ಇರುತ್ತವೆ. ಅದು, ದಾಂಪತ್ಯ ದ್ರೋಹದಿಂದ ಹಿಡಿದು ಹಣಕಾಸಿನ ಕುರಿತ ಸಣ್ಣ ವಾದ ವಿವಾದದವರೆಗೆ ಯಾವ ಕಾರಣ ಕೂಡ ಆಗಿರಬಹುದು. ಯಾವ ಮದುವೆಯು (Wedding) ಕೂಡ ಕೊನೆವರೆಗೆ ಉಳಿಯುತ್ತದೆ ಎಂದು ನಾವು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಮದುವೆ ಸಂಬಂಧಗಳು ಕೊನೆಯಾಗುವುದಕ್ಕೆ ನಾನಾ ಕಾರಣಗಳು ಇವೆ ಎಂಬುವುದು ನಿಜ, ಆದರೆ ಕೆಲವೊಮ್ಮೆ ನಿಮ್ಮ ರಾಶಿಯಲ್ಲಿನ (Zodiac Sign) ಅಂಶಗಳು ಕೂಡ ಅದಕ್ಕೆ ಕಾರಣವಾಗುವುದುಂಟು. ಹೌದು, ನಿಮ್ಮ ದಾಂಪತ್ಯ ಜೀವನದ ಯಶಸ್ಸು ಅಥವಾ ಸೋಲಿನ ಬಗ್ಗೆ ನಿಮ್ಮ ರಾಶಿ ಚಿಹ್ನೆಗಳಿಂದ ಬಹಳಷ್ಟು ವಿಷಯಗಳನ್ನು ತಿಳಿದುಕೊಳ್ಳಬಹುದು. ಕೆಲವು ರಾಶಿಯವರ ಜೀವನದಲ್ಲಿ ಏಕೈಕ ಸಂಗಾತಿಯೊಂದಿಗೆ ಜೀವನಪೂರ್ತಿ ಬದುಕುವ ಅದೃಷ್ಟ ಬರೆದಿರುವುದಿಲ್ಲ. ತಮ್ಮ ದಾಂಪತ್ಯ ಜೀವನವನ್ನು ಕೊನೆಗಾಣಿಸಿ, ವಿಚ್ಚೇದನ ಕಡೆ ಮುಖ ಮಾಡುವ ಸಾಧ್ಯತೆಗಳನ್ನು ಹೊಂದಿರುವ ಆರು ರಾಶಿಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಸಿಂಹ
ಈ ರಾಶಿಯವರು ಮದುವೆಯ ಸಂಬಂಧದಲ್ಲಿ ನಿಷ್ಠರಾಗಿರುತ್ತಾರೆ. ಆದರೆ, ತಮ್ಮ ಸಂಗಾತಿಯಿಂದಲೂ ಅಷ್ಟೇ ಪ್ರಮಾಣದ ನಿಷ್ಠೆಯನ್ನು ನಿರೀಕ್ಷಿಸುತ್ತಾರೆ. ಜಗತ್ತಿನಲ್ಲಿ ಅವರೇ ನಿಮಗೆ ಮುಖ್ಯ ಎಂಬುವುದು ಸಿಂಹ ರಾಶಿಯವರ ಮನದಲ್ಲಿ ಇದ್ದಷ್ಟು ದಿನ, ಎಲ್ಲವೂ ಚೆನ್ನಾಗಿರುತ್ತದೆ. ಈ ರಾಶಿಯವರಿಗೆ ಮದುವೆಯಲ್ಲಿ ಮೋಸ ಅಥವಾ ದ್ರೋಹ ಉಂಟಾದರೆ, ಅದು ವಿಚ್ಚೇದನದ ಮಟ್ಟ ತಲುಪುವ ಸಾಧ್ಯತೆ ಇರುತ್ತದೆ. ಈ ವಿಷಯದಲ್ಲಿ ಅವರು ಯಾರ ಮಾತನ್ನೂ ಕೇಳುವುದಿಲ್ಲ.

ಮೇಷ ರಾಶಿ
ಪ್ರೀತಿ ಮತ್ತು ಪ್ರಣಯದ ಪ್ರದರ್ಶನ ಈ ರಾಶಿಯವರಿಗೆ ಬಹಳ ಇಷ್ಟ. ಅವರು ತಮ್ಮ ಸಂಗಾತಿಯಿಂದ ಆಳವಾದ ಭಾವನಾತ್ಮಕ ಮತ್ತು ದೈಹಿಕ ಸಂಪರ್ಕವನ್ನು ಬಯಸುತ್ತಾರೆ. ಆದರೆ ಒಂದು ವೇಳೆ ಅವರ ಅಹಂ ಪೆಟ್ಟು ಬಿದ್ದರೆ, ಅವರು ಕೋಪದ ದಾರಿ ಹಿಡಿಯುವ ಸಾಧ್ಯತೆ ಇರುತ್ತದೆ. ತಾನು ಸಂಗಾತಿಗಾಗಿ ಮಾಡುವ ಪ್ರಣಯಾತ್ಮಕ ಕೆಲಸಗಳು ಸಂಗಾತಿಗೆ ಮೆಚ್ಚುಗೆ ಆಗುತ್ತಿಲ್ಲ ಎಂಬ ಭಾವನೆ ಅವರ ಮನದಲ್ಲಿ ಮೂಡಿದರೆ, ಅವರು ಬೇರೆಯವರ ಕಡೆ ವಾಲುವ ಸಾಧ್ಯತೆ ಇರುತ್ತದೆ. ಅಂತಿಮವಾಗಿ, ತಮ್ಮ ಸಂಗಾತಿಯಿಂದ ತಮಗೆ ಬೇಕಾದದ್ದು ಸಿಗಲಿಲ್ಲ ಎಂದಾದಲ್ಲಿ, ಅವರು ವಿಚ್ಚೇದನದ ದಾರಿ ಹಿಡಿಯಲು ಹಿಂಜರಿಯುವುದಿಲ್ಲ.

ಮಿಥುನ ರಾಶಿ
ಈ ರಾಶಿಯವರು ಎಲ್ಲರೊಂದಿಗೆ ಬೇಗ ಬೆರೆಯುತ್ತಾರೆ ಮತ್ತು ಸ್ನೇಹ ಬೆಳೆಸುತ್ತಾರೆ. ಅದೇ ರೀತಿ, ತಮ್ಮ ಜೀವನ ಸಂಗಾತಿ, ಆತ್ಮೀಯ ಸ್ನೇಹಿತೆ/ ಸ್ನೇಹಿತ ಅಥವಾ ಪ್ರೇಮಿಯಂತೆ ಇರಬೇಕೆಂದು ಅವರು ಬಯಸುತ್ತಾರೆ. ಸಂಗಾತಿಯ ಜೊತೆ ಸಂಪರ್ಕ ಅಥವಾ ಸಂವಹನ ಮರೆಯಾಗಿದೆ ಎಂಬ ಭಾವನೆ ಮೂಡಿದರೆ ಮಾತ್ರ ಅವರು ವಿಚ್ಚೇದನದ ಕಡೆ ಮುಖ ಮಾಡುತ್ತಾರೆ. ಹಿಂದಿನ ಸಂಗಾತಿಯೊಂದಿಗಿನ ಸಂಬಂಧ ಸರಿಹೋಗದಿದ್ದರೆ, ಹೊಸ ಸಂಗಾತಿಯನ್ನು ಹುಡುಕಿಕೊಳ್ಳುವುದು ಕೂಡ ಅವರಿಗೆ ಕಷ್ಟದ ಕೆಲಸವಲ್ಲ.

ಇದನ್ನೂ ಓದಿ: ಯುಗಾದಿ ದಿನವೇ Chaitra Navratri: ಈ ಬಾರಿ ಕುದುರೆ ಏರಿ ಬರುತ್ತಾಳೆ ದೇವಿ

ಮೀನ ರಾಶಿ
ರಾಶಿಗಳಲ್ಲಿ, ಅತ್ಯಂತ ರೊಮ್ಯಾಂಟಿಕ್ ರಾಶಿ ಇದು. ಸಂವಹನ ಯಶಸ್ವಿ ಸಂಬಂಧಕ್ಕೆ ಬಹಳ ಮುಖ್ಯ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳುತ್ತಾರೆ. ಸಂಗಾತಿಯು ಅವರನ್ನು ಭಾವನಾತ್ಮಕವಾಗಿ ಅರ್ಥ ಮಾಡಿಕೊಂಡಾಗ, ಅವರು ಅತ್ಯಂತ ನಿಷ್ಠಾವಂತ ಸಂಗಾತಿಗಳಾಗಬಲ್ಲರು. ತಮ್ಮ ಸಂಗಾತಿ ಬೇಷರತ್ತಾದ ಪ್ರೀತಿ ಮತ್ತು ಬೆಂಬಲವನ್ನು ನೀಡುತ್ತಿಲ್ಲ ಎಂದು ಈ ರಾಶಿಯವರಿಗೆ ಅನಿಸಿದರೆ, ಬೇಸರ ಮಾಡಿಕೊಂಡು ಅವರು ಸಂಗಾತಿಯಿಂದ ದೂರವಾಗುವ ಆಲೋಚನೆ ಮಾಡಬಲ್ಲರು.

ಧನು ರಾಶಿ
ಜೀವನ ಒಂದು ದೊಡ್ಡ ಸಾಹಸಮಯ ಪಯಣ ಮತ್ತು ಧನು ರಾಶಿಯವರು ಆ ದಾರಿಯುದ್ದಕ್ಕೂ ಸಾಗುತ್ತಾರೆ. ಅವರ ನಿರಂತರ ಅಲೆಮಾರಿತನದ ವ್ಯಕ್ತಿತ್ವದಿಂದ, ಒಂದೆಡೆ ನೆಲೆಗೊಳ್ಳಲು ಕಷ್ಟವಾಗಬಹುದು. ಮದುವೆಯಲ್ಲಿ, ತಮ್ಮ ಸ್ವಾತಂತ್ರ್ಯ ಇನ್ನೂ ಹಾಗೆ ಉಳಿದಿದೆ ಎಂಬುವುದು ಆ ರಾಶಿಯವರಿಗೆ ಅನಿಸಬೇಕಿರುವುದು ಬಹಳ ಮುಖ್ಯ. ಅವರು ತನ್ನ ಸಂಗಾತಿಯನ್ನು ತುಂಬಾ ಪ್ರೀತಿಸುತ್ತಾರಾದರೂ, ತಮ್ಮನ್ನು ಮೆಚ್ಚದ ಅಥವಾ ತಮಗೆ ಅಡ್ಡಿ ಪಡಿಸುವ ಸಂಗಾತಿಯಿಂದ ವಿಚ್ಚೇದನ ಪಡೆಯಲು ಕೂಡ ಹೆದರುವುದಿಲ್ಲ.

ಇದನ್ನೂ ಓದಿ: ಸಕ್ಸಸ್ ಸಿಗಲು ಕುಡಿಯುವ ನೀರನ್ನು ದಾನ ಮಾಡಿ; ಸಂಖ್ಯಾಶಾಸ್ತ್ರ ಸಲಹೆ ತಿಳಿಯಿರಿ

ಕುಂಭ ರಾಶಿ
ಇದು ಬಂಡಾಯದ ಗುಣವುಳ್ಳ ರಾಶಿ. ಇವರು ಬಂಧಿತ ಭಾವನೆಯನ್ನು ಎಲ್ಲದಕ್ಕಿಂತ ಹೆಚ್ಚಾಗಿ ದ್ವೇಷಿಸುತ್ತಾರೆ. ಯಾವುದೇ ಬಂಧನವಿಲ್ಲದ ಸಂಬಂಧಕ್ಕೆ ಅವರು ಆದ್ಯತೆ ನೀಡುತ್ತಾರೆ. ಸಾಂಪ್ರದಾಯಿಕ ವಿವಾಹ ಮತ್ತು ಏಕಪತ್ನಿತ್ವ ಅವರಿಗೆ ಹೆಚ್ಚು ಹೊಂದುವುದಿಲ್ಲ. ಅವರು ಸಾಧ್ಯವಾದಷ್ಟು ಅತ್ಯಂತ ಕಡಿಮೆ ಭಾವನಾತ್ಮಕ ಸಂಬಂಧಗಳ ಜೊತೆ ಬದುಕಲು ಬಯಸುತ್ತಾರೆ. ಮದುವೆಯ ಸಂಬಂಧ ಉಸಿರುಗಟ್ಟಿಸುತ್ತಿದೆ ಎಂದು ಅವರಿಗೆ ಅನಿಸಿದರೆ, ವಿಚ್ಚೇದನ ಪಡೆಯಲು ಹಿಂಜರಿಯುವುದಿಲ್ಲ.
Published by:Sandhya M
First published: