Astrology: ವೃಷಭ ರಾಶಿಯವರು ಸದ್ಯಕ್ಕೆ ಕೆಲಸ ಬದಲಿಸಬೇಡಿ, ಎಲ್ಲಾ ರಾಶಿಗಳ ಇಂದಿನ ಭವಿಷ್ಯ ಇಲ್ಲಿದೆ

ಶ್ರೀ ಪ್ಲವನಾಮ ಸಂವತ್ಸರ ದಕ್ಷಿಣಾಯಣ - ಗ್ರೀಷ್ಮ ಋತು ಕರ್ಕಾಟಕ ಮಾಸದ 18 ನೇ ದಿನ. ತಿಥಿ: (ಆಷಾಢ ಕೃಷ್ಣ) ದಶಮಿ ಗಂ. 13-00 ನಕ್ಷತ್ರ: ರೋಹಿಣಿ ಗಂ. 25-44 ಯೋಗ: ಧ್ರುವ ಗಂ. 24-05, ಕರಣ: ವಿಷ್ಟಿ ಗಂ. 13-00, ಬವ ಗಂ. 26-12. ರಾಹುಕಾಲ : ಸಾಯಂಕಾಲ 03-00 ರಿಂದ 04-30ವರಗೆ. ಈ ದಿನದ ದ್ವಾದಶ ರಾಶಿ ದಿನ ಭವಿಷ್ಯ ಕುರಿತು ಕೆ.ಎಲ್ ವಿದ್ಯಾಶಂಕರ ಸೋಮಯಾಜಿ ತಿಳಿಸಿದ್ದಾರೆ. ಇವರ ಸಂಪರ್ಕಕ್ಕೆ : 9449186129

ಈ ದಿನದ 12 ರಾಶಿಗಳ ಭವಿಷ್ಯ ಹೀಗಿದೆ

ಈ ದಿನದ 12 ರಾಶಿಗಳ ಭವಿಷ್ಯ ಹೀಗಿದೆ

 • Share this:
  ಮೇಷ
  ಇಂದು ಮಕ್ಕಳಿಂದ ಅಚ್ಚರಿಯ ಸುದ್ದಿಯೊಂದನ್ನು ಕೇಳುವಿರಿ. ಉದ್ಯೋಗ ಬದಲಿಸುವ ವಿಚಾರದಲ್ಲಿ ಚೆನ್ನಾಗಿ ಯೋಚಿಸುವುದು ಉತ್ತಮ. ಅಂದುಕೊಂಡಿರುವ ಕೆಲಸಗಳು ಉತ್ತಮವಾಗಿ ನೆರವೇರಿವುದರಿಂದ ನೆಮ್ಮದಿ ಇರುವುದು. ಸಂದಿಗ್ಧ ಪರಿಸ್ಥಿತಿಗಳನ್ನು ಧೈರ್ಯದಿಂದ ಎದುರಿಸುವಿರಿ.

  ವೃಷಭ
  ರಾಜಕಾರಣಿಗಳಿಗೆ ಶುಭ ಸುದ್ದಿ ದೊರೆಯಲಿದೆ. ಆಗು-ಹೋಗುಗಳನ್ನು ಅರಿತು ವ್ಯವಹಾರದಲ್ಲಿ ಮುಂದುವರೆಯುವುದು ಉತ್ತಮ. ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲು ಕಾದು ನೋಡುವ ತಂತ್ರ ಅನುಸರಿಸುವುದು ಸೂಕ್ತ. ಸದ್ಯಕ್ಕೆ ವೃತ್ತಿಯ ಬದಲಾವಣೆಯ ಯೋಚನೆ ಸರಿಯಲ್ಲ.

  ಮಿಥುನ
  ಯಾವುದೇ ಹೊಸ ಉದ್ಯೋಗ ಒಪ್ಪಿಕೊಳ್ಳುವಾಗ ಅಥವಾ ಕರಾರಿಗೆ ಸಹಿ ಮಾಡುವಾಗ ಜಾಣತನದಿಂದ ಮತ್ತು ತಾಳ್ಮೆಯಿಂದ ಸಂಪೂರ್ಣವಾಗಿ ಓದಿ ತಿಳಿದು ಒಪ್ಪಿಕೊಳ್ಳಿ. ಹಿರಿಯರೊಂದಿಗೆ ವ್ಯಾಪಾರದ ವಿಚಾರದಲ್ಲಿ ಗಂಭೀರ ಚರ್ಚೆ ನಡೆಯಲಿದೆ. ವೃತ್ತಿ ಜೀವನದಲ್ಲಿ ಯಶಸ್ಸು ಕಾಣುವಿರಿ.

  ಕರ್ಕಾಟಕ
  ಅನಾವಶ್ಯಕವಾಗಿ ದೂರದ ಪ್ರಯಾಣದ ಸಾಧ್ಯತೆ ಇದೆ. ಮಂಜುನಾಥನ ದರ್ಶನ ಭಾಗ್ಯದಿಂದ ಕಾರ್ಯಾನುಕೂಲವಾಗಲಿದೆ. ಇಂದು ನಿಮ್ಮ ಆದಾಯ ವೆಚ್ಚಗಳನ್ನು ಸರಿದೂಗಿಸಿಕೊಳ್ಳುವಿರಿ. ನಿಮ್ಮ ಪ್ರತಿಭೆ ಮತ್ತು ಕೌಶಲ್ಯಗಳು ಬೆಳಕಿಗೆ ಬಂದು ಇತರರಿಗೆ ವಿಶೇಷ ವ್ಯಕ್ತಿ ಎನಿಸುವಿರಿ.

  ಸಿಂಹ
  ನೂತನ ಅಧಿಕಾರಿಗಳ ಆಗಮನದಿಂದಾಗಿ ಕಛೇರಿಯಲ್ಲಿ ಹೆಚ್ಚಿನ ಕೆಲಸಗಳು ತೋರಿಬರಲಿದೆ. ಲೆಕ್ಕ ಪತ್ರಗಳನ್ನು ಪರಿಶೀಲಿಸಿ ಸರಿಪಡಿಸಿಕೊಳ್ಳುವ ಕಾರ್ಯದ ಬಗ್ಗೆ ಯೋಚನೆ ಮಾಡಿ. ನ್ಯಾಯವಾದಿಗಳಿಗೆ ಸುಲಭದಲ್ಲಿ ಜಯ ಲಭಿಸಿ ಸಂತೋಷ.

  ಕನ್ಯಾ
  ಆಹಾರ ಪದಾರ್ಥದ ವ್ಯಾಪಾರ ಮಾಡುವವರಿಗೆ ಶ್ರಮಕ್ಕೆ ತಕ್ಕಷ್ಟು ಆದಾಯ ಲಭಿಸಲಿದೆ. ನಿಮ್ಮ ಯೋಜನೆಗಳು ಕಾರ್ಯಗತಗೊಳ್ಳಲು ಹೆಚ್ಚಿನ ಪ್ರಯತ್ನ ನಡೆಸಬೇಕಾಗುವುದು. ಮನುಷ್ಯ ಪ್ರಯತ್ನದ ಜೊತೆ ಮಹಾ ಗಣಪತಿಯ ಮೊರೆ ಹೋಗುವುದರಿಂದ ಕಾರ್ಯ ಸಿದ್ಧಿಯಾಗಲಿದೆ.

  ತುಲಾ
  ಈ ದಿನ ನಿಮ್ಮನ್ನು ಬಾಧಿಸುವ ಸಮಸ್ಯೆ ದೊಡ್ಡದಾದರೂ ಹೂ ಎತ್ತಿದಂತೆ ಬಗೆಹರಿಯಲಿದೆ. ವಿದ್ಯಾರ್ಥಿಗಳಿಗೆ ಮಿತ್ರವರ್ಗದವರ ಸಹವಾಸ ಅನುಕೂಲವಾಗಿ ಕಂಡುಬರುವುದು. ರಚನಾತ್ಮಕ ಕೆಲಸಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುವುದರಿಂದ ಸಂತಸ.

  ವೃಶ್ಚಿಕ
  ಇಂದು ನ್ಯಾಯಮೂರ್ತಿಗಳಿಗೆ, ಆಡಳಿತಾಧಿಕಾರಿಗಳಿಗೆ ಸತ್ಫಲಗಳು ಸಿಗಲಿವೆ. ಸತ್ಕಾರ್ಯಗಳಿಂದಾಗಿ ಮನೆಯಲ್ಲಿ ಸಡಗರವಿರುವುದು. ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಏರುಪೇರಾದರೂ ಕೂಡ ಆತಂಕಕ್ಕೆ ಕಾರಣವಾಗಬೇಕಿಲ್ಲ. ಆದಾಯ ಸ್ಥಿರವಾಗಿ ಇರುವುದು.

  ಧನು
  ಈ ದಿನದ ಪರಿಸ್ಥಿತಿಗಳು ಕೊಂಚ ಕಿರಿಕಿರಿ ಮೂಡಿಸಿದರೂ ಫಲಿತಾಂಶ ಸಕಾರಾತ್ಮಕವಾಗಿರುವುದು. ಆತುರ ಬೇಡ. ಕೆಲಸದ ಒತ್ತಡ ಹಾಗೂ ಜವಾಬ್ದಾರಿಗಳು ಹೆಚಲಿವೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಏಕಾಗ್ರತೆಯನ್ನು ಬೆಳೆಸಿಕೊಳ್ಳಿ. ದಿನಾಂತ್ಯದಲ್ಲಿ ಶಿರೋವೇದನೆ ಎದುರಾಗಬಹುದು.

  ಮಕರ
  ಈ ದಿನ ವ್ಯವಸ್ಥಿತವಾಗಿ ನಿಮ್ಮ ದಿನಚರಿ ರೂಪಿಸಿಕೊಂಡರೆ ಈಗಾಗಲೇ ಆರಂಭಿಸಿರುವ ಯೋಜನೆಗಳು ಪೂರ್ಣಗೊಳ್ಳಲಿದೆ. ಅವಿವಾಹಿತರಿಗೆ ಅವರ ಮನಸ್ಸಿಗೆ ಇಷ್ಟವಾಗುವ ರೀತಿಯ ಸಂಬಂಧಗಳು ಈ ದಿನ ಪ್ರಾಪ್ತಿಯಾಗುತ್ತದೆ.

  ಕುಂಭ
  ಹಣಕಾಸಿನ ವ್ಯಾಮೋಹ ತೊಂದರೆಗಳಿಗೆ ಕಾರಣವಾಗದಂತೆ ನೋಡಿಕೊಳ್ಳಿ. ಅಧಿಕಾರ, ಅನುಭವದಿಂದ ನಿಮ್ಮ ಆತ್ಮಾಭಿಮಾನ ವೃದ್ಧಿಯಾಗಲಿದೆ. ಕೆಲಸದಲ್ಲಿ ಬದಲಾವಣೆ ಕಾಣಲಿದ್ದೀರಿ ಹಾಗೂ ನಿಮ್ಮ ಜೀವನ ಶೈಲಿಯೂ ವಿಭಿನ್ನವಾಗಿ ಬದಲಾಗಲಿದೆ.

  ಮೀನ
  ಗುರಿಯನ್ನು ಮುಟ್ಟುವತ್ತ ನಿಮ್ಮ ಹಾದಿಯನ್ನು ಮತ್ತೊಮ್ಮೆ ಪರಿಶೀಲಿಸಿಕೊಂಡಲ್ಲಿ ನಿಮ್ಮ ಯೋಜನೆಗಳು ನೀವು ಆಲೋಚಿಸಿದಕ್ಕಿಂತಲೂ ಹೆಚ್ಚು ಪ್ರಾಯೋಗಿಕವಾಗಿ ನೆರವೇರುವುದು. ಉತ್ಸಾಹದಿಂದ ಕೆಲಸ ಆರಂಭಿಸಿದಲ್ಲಿ ಸಮಸ್ಯೆಗಳು ತಾನಾಗಿಯೇ ಪರಿಹಾರಗೊಳ್ಳಲಿವೆ.
  Published by:Soumya KN
  First published: