ಮಾನವನ ಜೀವನದಲ್ಲಿ(Life) ವಾಸ್ತು ಶಾಸ್ತ್ರ (Vastu) ಪ್ರಮುಖ ಪಾತ್ರ ವಹಿಸುತ್ತದೆ. ಏಕೆಂದರೆ ನಾವು ಮಾಡುವ ಸಣ್ಣ ವಾಸ್ತು ತಪ್ಪು ಕೂಡ ನಮಗೆ ದೊಡ್ಡ ಪರಿಣಾಮಗಳನ್ನು (Effect) ಉಂಟುಮಾಡುತ್ತದೆ. ಆದ್ದರಿಂದ ಮನೆಯ ಒಳಿತಿಗಾಗಿ ನಾವು ಏನೇ ಮಾಡಿದರೂ ವಾಸ್ತು ಪ್ರಕಾರ ಮಾಡಿದರೆ ಒಳ್ಳೆಯ ಫಲ ಸಿಗುತ್ತದೆ. ಹೀಗಾಗಿ, ಮನೆಯಿಂದ ನೆಗೆಟಿವ್ ಎನರ್ಜಿ ತೆಗೆದು ಹಾಕಲು ವಾಸ್ತು ಪರಿಹಾರಗಳನ್ನು ಮಾಡಬೇಕು. ನಿಮ್ಮ ಮನೆಯ ವಾಸ್ತುದೋಷಕ್ಕೆ ತಾಮ್ರದ ಸೂರ್ಯನ (Copper Sun) ಪ್ಲೇಟ್ ಪರಿಹಾರ ನೀಡುತ್ತದೆ.
ಮನೆಯಲ್ಲಿ ತಾಮ್ರದ ಸೂರ್ಯನ ಪ್ಲೇಟ್ ಅನ್ನು ಸರಿಯಾದ ಸ್ಥಳದಲ್ಲಿ ಇರಿಸುವುದರಿಂದ, ಮನೆಯಿಂದ ಎಲ್ಲಾ ರೀತಿಯ ದುಷ್ಪರಿಣಾಮಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ. ಮನೆಯಲ್ಲಿ ತಾಮ್ರದ ಸೂರ್ಯನ ಫಲಕಗಳನ್ನು ಅಳವಡಿಸಿಕೊಳ್ಳುವುದರಿಂದ ಆಗುವ ಪ್ರಯೋಜನಗಳೇನು ಎಂಬುದು ಇಲ್ಲಿದೆ.
ಸೂರ್ಯನ ತಾಮ್ರದ ಫಲದ ಪ್ರಯೋಜನಗಳು
ತಾಮ್ರದಿಂದ ಮಾಡಿದ ಮನೆಯಲ್ಲಿ ಸೂರ್ಯನ ಫಲಕವನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ.
ವಾಸ್ತು ನಿಯಮಗಳ ಪ್ರಕಾರ ಮನೆಯಲ್ಲಿ ತಾಮ್ರದಿಂದ ಮಾಡಿದ ಸೂರ್ಯನ ಫಲಕ ಇಡುವುದರಿಂದ ಮನೆಯ ಸದಸ್ಯರಿಗೆ ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ ಹಾಗೂ ಕುಟುಂಬ ಸದಸ್ಯರ ನಡುವೆ ಸಂಬಂಧಗಳನ್ನು ಬಲವಾಗುತ್ತದೆ ಎನ್ನುವ ನಂಬಿಕೆ ಇದೆ.
ತಾಮ್ರದ ಸೂರ್ಯನ ಫಲಕ ಹೆಚ್ಚಿನ ಗುರುತ್ವಾಕರ್ಷಣೆಯನ್ನು ಹೊಂದಿದ್ದು ಸಂಪತ್ತು ಮತ್ತು ವ್ಯಕ್ತಿತ್ವವನ್ನು ಆಕರ್ಷಿಸುತ್ತದೆ ಎನ್ನಲಾಗುತ್ತದೆ.
ತಾಮ್ರದ ಕಾರಣದಿಂದ ವಿಭಿನ್ನವಾದ ಕೆಲಸ ಮಾಡುವವರಿಗೆ ಇದು ಲಾಭ ನೀಡುತ್ತದೆ. ಈ ಸೂರ್ಯನ ಫಲಕ ಸರಿಯಾದ ಸ್ಥಾನದಲ್ಲಿದ್ದರೆ, ಕುಟುಂಬದ ಸದಸ್ಯರ ನಡುವಿನ ಸಂಬಂಧವು ಸುಧಾರಿಸುತ್ತದೆ. ಹೆಸರು ಮತ್ತು ಖ್ಯಾತಿಯೂ ಹೆಚ್ಚಾಗುತ್ತದೆ.
ವ್ಯಾಪಾರಸ್ಥರು, ಸರ್ಕಾರಿ ಅಧಿಕಾರಿಗಳು ಅಥವಾ ಕಲೆಯ ಕ್ಷೇತ್ರಕ್ಕೆ ಸಂಬಂಧಿಸಿದವರು ತಮ್ಮ ಮನೆಯಲ್ಲಿ ತಾಮ್ರದ ಸೂರ್ಯನ ಫಲಕ ಇಟ್ಟುಕೊಂಡಿರಿ ಉತ್ತಮ ಫಲಿತಾಂಶ ಸಿಗುತ್ತದೆ.
ಇದನ್ನೂ ಓದಿ: ಈ 3 ರಾಶಿಗಳಿಗೆ ಮಹಾಪುರುಷ ರಾಜಯೋಗ, ನಿಮ್ಮಷ್ಟು ಲಕ್ಕಿ ಬೇರಾರೂ ಇಲ್ಲ ಬಿಡಿ
ತಾಮ್ರದ ಸೂರ್ಯನನ್ನು ಎಲ್ಲಿ ಇಡಬೇಕು
ಮನೆಯ ಪೂರ್ವ ದಿಕ್ಕಿನಲ್ಲಿ ಕಿಟಕಿ ಅಥವಾ ಇತರ ವಸ್ತುಗಳ ಮೇಲೆರ ಈ ಸೂರ್ಯ ಫಲಕವನ್ನು ಇಡಬೇಕು. ನಿಮ್ಮ ಮನೆಯಲ್ಲಿ ಕಿಟಕಿ ಇಲ್ಲದಿದ್ದರೆ ಪೂರ್ವ ದಿಕ್ಕಿನ ಗೋಡೆಯ ಮೇಲೆ ತಾಮ್ರದ ಸೂರ್ಯನನ್ನು ನೇತುಹಾಕಬಹುದು. ಇದರಿಂದ ಮನೆಯಲ್ಲಿನ ವಾಸ್ತುದೋಷಗಳು ದೂರವಾಗುತ್ತವೆ. ಇದು ಮನೆಗೆ ಸಮೃದ್ಧಿ ಮತ್ತು ಮನೆಯಲ್ಲಿ ವಾಸಿಸುವವರಿಗೆ ಆರೋಗ್ಯವನ್ನು ತರುತ್ತದೆ ಎನ್ನುವ ನಂಬಿಕೆ ಇದೆ.
ಮನೆಯ ಮುಖ್ಯ ಬಾಗಿಲು ಪೂರ್ವ ದಿಕ್ಕಿನಲ್ಲಿದ್ದರೆ, ಬಾಗಿಲಿನ ಹೊರಭಾಗದಲ್ಲಿ ತಾಮ್ರದ ಸೂರ್ಯನ ಫಲಕ ಇಟ್ಟರೆ ನಿಮ್ಮ ಮನೆಯ ಸಂಪತ್ತು ಹೆಚ್ಚಾಗುತ್ತದೆ. ಅಲ್ಲದೇ, ಯಾವಾಗಲೂ ಮನೆಯೊಳಗೆ ಪ್ರವೇಶಿಸುವಾಗ ತಾಮ್ರದ ಸೂರ್ಯನನ್ನು ನೋಡುವುದು ಒಳ್ಳೆಯದು.
ಹಾಗೆಯೇ, ಆಫೀಸ್ ಪೂರ್ವ ಗೋಡೆಯ ಮೇಲೆ ತಾಮ್ರದ ಸೂರ್ಯನ ಫಲಕ ನೇತುಹಾಕುವುದು ನಿಮ್ಮ ವೃತ್ತಿಜೀವನದಲ್ಲಿ ಪ್ರಗತಿಯನ್ನು ತರುತ್ತದೆ. ಇದರಿಂದ ನಿಮ್ಮ ಕೆಲಸ ಮತ್ತು ವ್ಯವಹಾರದಲ್ಲಿ ನೀವು ಯಶಸ್ವಿಯಾಗುತ್ತೀರಿ.
ಇದನ್ನೂ ಓದಿ: ಈ ರಾಶಿಯವರು ಬಾಯ್ಬಿಟ್ರೆ ಸುಳ್ಳೇ ಹೇಳೋದಂತೆ, ಇವ್ರನ್ನ ನಂಬಲೇ ಬೇಡಿ!
ನೀವು ಸೂರ್ಯನ ಕಿರಣಗಳ ಮುಂದೆ ನೇರವಾಗಿ ನಿಲ್ಲಲು ಸಾಧ್ಯವಾಗದಿದ್ದರೆ, ತಾಮ್ರದ ಈ ಫಲಕ ಸೌರಶಕ್ತಿಯ ಪ್ರಯೋಜನಗಳನ್ನು ಪಡೆಯುತ್ತದೆ ಎಂದು ಹೇಳಲಾಗುತ್ತದೆ. ನೀವು ಅದನ್ನು ಕಚೇರಿ ಅಥವಾ ಮನೆಯಲ್ಲಿ ಎಲ್ಲಿ ಬೇಕಾದರೂ ಇಟ್ಟುಕೊಳ್ಳಬಹುದು. ತಾಮ್ರದ ಸೂರ್ಯನಿಂದ ನೀವು ಪಡೆಯುವ ಶಕ್ತಿಯು ನಿಮ್ಮ ವೃತ್ತಿಜೀವನದಲ್ಲಿ ಪ್ರಗತಿಗೆ ಸಹಾಯ ಮಾಡುತ್ತದೆ ಮತ್ತು ನಿಮಗೆ ಸರಿಯಾದ ಮಾರ್ಗವನ್ನು ತೋರಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ