ಪುರಾಣ ಪ್ರಸಿದ್ದ ಮೇಲುಕೋಟೆ ವೈರಮುಡಿ ಉತ್ಸವಕ್ಕೆ (Melukote Vairamudi Utsava) ಆರಂಭವಾಗಿದೆ. ಕೊರೋನಾ (Covid) ಕಾರಣದಿಂದ ಎರಡು ವರ್ಷ ಸರಳವಾಗಿದ್ದ ಆಚರಣೆ, ಈ ಬಾರಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಹಿಗಾಗಿ ಮೇಲುಕೋಟೆಯಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿದೆ. ಇಂದು ರಾತ್ರಿ ವಜ್ರ ಖಚಿತ ಕಿರೀಟ ಹೊತ್ತ ಚೆಲುವ ನಾರಾಯಣ ಉತ್ಸವ ನಡೆಯಲಿದೆ.
ಸಾಕ್ಷಾತ್ ಭಗವಂತನೆ ಧರೆಗಿಳಿದು ಭಕ್ತರಿಗೆ ದರ್ಶನ.
ಮಂಡ್ಯ ಜಿಲ್ಲೆಯ ಶ್ರೀ ಕ್ಷೇತ್ರ ಮೇಲುಕೋಟೆಯಲ್ಲಿ ಇಂದು ಅದ್ದೂರಿ ವೈರಮುಡಿ ಬ್ರಹ್ಮೋತ್ಸವ ಜರುಗಲಿದೆ. ರಾತ್ರಿ 8 ಗಂಟೆಯೊತ್ತಿಗೆ ಶ್ರೀದೇವಿ, ಭೂದೇವಿಯರ ಜೊತೆಗೆ ರತ್ನ ಖಚಿತ ವೈರಮುಡಿ ಕಿರೀಟ ಧರಿಸಿದ ಗರುಢಾರೂಢನಾದ ಚಲುವನಾರಾಯಣಸ್ವಾಮಿ ಭಕ್ತರಿಗೆ ದರ್ಶನ ನೀಡಲಿದ್ದಾನೆ. ಸಾಕ್ಷಾತ್ ಭಗವಂತನೆ ಧರೆಗಿಳಿದು ವೈರಮುಡಿ ಕಿರೀಟ ಧರಿಸಿ ಭಕ್ತರಿಗೆ ದಶರ್ನ ನೀಡುತ್ತಾನೆ ಎಂಬ ಪ್ರತೀತಿ ಇದೆ. ಹಿಗಾಗಿ ಚಲುವನಾರಾಯಣಸ್ವಾಮಿಯನ್ನ ಕಣ್ತುಂಬಿಕೊಳ್ಳಲು ರಾಜ್ಯವಲ್ಲದೆ ಹೊರ ರಾಜ್ಯದಿಂದಲ್ಲೂ ಇಲ್ಲಿಗೆ ಭಕ್ತರು ಆಗಮಿಸಿ ದೇವರ ದರ್ಶನ ಪಡೆಯಲಿದ್ದಾರೆ.
ಜಿಲ್ಲಾ ಖಜಾನೆಯಿಂದ ಹೊರಡಲಿರುವ ರತ್ನ ಖಚಿತ ಆಭರಣಗಳು..
ಪ್ರತಿ ವರ್ಷದಂತೆ ಬಾರಿ ಕೂಡ ಮಂಡ್ಯ ಜಿಲ್ಲಾ ಖಜಾನೆಯಿಂದ ಬೆಳಗ್ಗೆ ವೈರಮುಡಿ, ರಾಜಮುಡಿ, ಸೇರಿದಂತೆ ತಿರುವಾಭರಣಗಳು ಮೇಲುಕೋಟೆಗೆ ರವಾನೆಯಾಗಲಿವೆ. ದೇವಸ್ಥಾನದ ಸ್ಥಾನಿಕರು ಹಾಗೂ ಅಧಿಕಾರಿಗಳ ಭದ್ರತೆಯಲ್ಲಿ ಆಭರಣಗಳು ಜಿಲ್ಲಾ ಖಜಾನೆಯಿಂದ ಹೊರಡಲಿವೆ. ನಗರದ ಶ್ರೀ ಲಕ್ಷ್ಮಿ ಜನಾರ್ಧನ ಸ್ವಾಮಿ ದೇವಸ್ಥಾನದಲ್ಲಿ ಮೊದಲ ಪೂಜೆ ಸಲ್ಲಿಸಿ ನಂತರ ಪಾಂಡವಪುರ ಮಾರ್ಗವಾಗಿ ಆಭರಣಗಳನ್ನ ತೆಗೆದುಕೊಂಡು ಹೋಗಲಾಗತ್ತೆ. ಈ ಮಧ್ಯೆ ಮಾರ್ಗದಲ್ಲಿ ಸಿಗುವ ನೂರಾರು ಹಳ್ಳಿಗಳಲ್ಲಿನ ಜನರಿಗೆ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡಲಾಗತ್ತೆ. ಹೀಗೆ ಬೆಳಗ್ಗೆ ಹೊರಟ ಆಭರಣಗಳು ಸಂಜೆಯೊತ್ತಿಗೆ ಮೇಲುಕೋಟೆ ತಲುಪಲಿದ್ದು, ಪಾರ್ವಾಟೆ ಮಂಟಪದಲ್ಲಿ ವಿಶೇಷ ಪೂಜೆ ಸಲ್ಲಿಕೆಯಾಗಲಿದೆ. ನಂತರ ಚಿನ್ನದ ಪಲ್ಲಕಿ ಮೂಲಕ ಮೇಲುಕೋಟೆಯ ಪ್ರಮುಖ ಬೀದಿಗಳಲ್ಲಿ ಉತ್ಸವ ನಡೆದು ಸುಮಾರು 7 ಗಂಟೆಯೊತ್ತಿಗೆ ಆಭರಣಗಳು ಚಲುವನಾರಾಯಣಸ್ವಾಮಿ ಸನ್ನಿಧಿ ತಲುಪಲಿದೆ.
ಇದನ್ನು ಓದಿ: ಬುಧವಾರದಿಂದ 12-14 ವರ್ಷದ ಮಕ್ಕಳಿಕೆ Covid Vaccine; ಕೇಂದ್ರ ಆರೋಗ್ಯ ಇಲಾಖೆ
ಸ್ಥಾನಿಕರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಅಭರಣಗಳ ಪಾರ್ಕಾವಣೆ.
ಇನ್ನು ದೇವಸ್ಥಾನ ತಲುಪಿದ ಆಭರಣಗಳನ್ನ ಅಧಿಕಾರಿಗಳು, ಅರ್ಚಕರು ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಪಾರ್ಕಾಣೆ ಮಾಡಲಾಗತ್ತೆ. ಬಳಿಕ ಶಂಖ, ಚಕ್ರ, ಗಧಾ, ಗಂಡುಭೇರುಂಡ ಸೇರಿದಂತೆ ರತ್ನ ಖಚಿತ ಆಭರಣಗಳನ್ನ ಚಲುವನಾರಾಯಣಸ್ವಾಮಿಗೆ ಅಲಂಕರಿಸಲಾಗತ್ತದೆ. ಬಳಿಕ ಯೋಗಶಾಲೆಯಲ್ಲಿ ಹೋಮ ನಡೆಸಿ ಗರುಡ ದೇವರ ಉತ್ಸವ ನಡೆಯುತ್ತಿದ್ದಂತೆ ಮಹಾ ಮಂಗಳಾರತಿಯೊಂದಿಗೆ ವೈರಮುಡಿ ಉತ್ಸವಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ.
ಇದನ್ನು ಓದಿ: ಮಂತ್ರಿ ಮಾಲ್ನಲ್ಲಿ 'The Kashmir Files' ಸಿನಿಮಾ ವೀಕ್ಷಣೆಗೆ ವ್ಯವಸ್ಥೆ; ಆಡಳಿತ, ವಿಪಕ್ಷ ನಾಯಕರಿಗೆ Speaker ಆಹ್ವಾನ
ಇನ್ನು ಮೇಲುಕೋಟೆ ದಕ್ಷಿಣ ಬದರೀಕಾಶ್ರಮ ಎಂದೇ ಪ್ರಸಿದ್ದಿಯನ್ನ ಪಡೆದಿರೋದ್ರಿಂದ ಈ ಉತ್ಸವಕ್ಕೆ ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಪ್ರದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ. ಹೀಗಾಗಿ ಮಂಡ್ಯ ಜಿಲ್ಲಾಡಳಿತ ಕೂಡ ಭಕ್ತರ ಅನೂಕಲಕ್ಕೆ ಸಕಲ ಸಿದ್ದತೆ ಮಾಡಿಕೋಂಡಿದೆ.
ಬೆಂಗಳೂರಿನಿಂದ ವಿಶೇಷ ವೋಲ್ವೋ ಬಸ್ ಸೇವೆ..
ಇನ್ನು ಹೊರ ರಾಜ್ಯದ ಭಕ್ತರಯ ಆಗಮಿಸುವ ಹಿನ್ನೆಲೆ ಅವರಿಗೆ ಅನೂಕೂಲ ಆಗಲೆಂದು ರಾಜ್ಯ ಸರ್ಕಾರ ವಿಶೇಷ ಬಸ್ ಸೌಲಭ್ಯ ಕಲ್ಪಿಸಿದೆ. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ವೋಲ್ವೊ ಬಸ್ ವ್ಯವಸ್ಥೆ ಕಲ್ಪಿಸಿದೆ. ಇನ್ನು ಕರೊನಾ ಕಡಿಮೆಯಾಗಿದ್ರಿಂದ ಈ ಬಾರಿ ಅದ್ದೂರಿ ವೈರಮುಡಿ ಉತ್ಸವ ನಡೆಯುತ್ತಿದ್ದು, ಸದ್ಯ ಮೇಲುಕೋಟೆಯಲ್ಲಿ ವಿದ್ಯುತ್ ದೀಪದ ಅಲಂಕಾರ ಸೇರಿದಂತೆ ಊರ ಬೀದಿಗಳಲ್ಲಿ ಹಬ್ಭದ ವಾತಾವರಣ ಕಳಗಟ್ಟಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ