• Home
  • »
  • News
  • »
  • astrology
  • »
  • Name Astrology: ಈ ಅಕ್ಷರದಿಂದ ಹೆಸರು ಆರಂಭವಾಗುವ ಮಕ್ಕಳು ಕೆಲಸದಲ್ಲಿ ಉನ್ನತ ಸ್ಥಾನ ಪಡೆಯುತ್ತಾರಂತೆ

Name Astrology: ಈ ಅಕ್ಷರದಿಂದ ಹೆಸರು ಆರಂಭವಾಗುವ ಮಕ್ಕಳು ಕೆಲಸದಲ್ಲಿ ಉನ್ನತ ಸ್ಥಾನ ಪಡೆಯುತ್ತಾರಂತೆ

ರಾಶಿ ಭವಿಷ್ಯ

ರಾಶಿ ಭವಿಷ್ಯ

ಮಗುವಿಗೆ ನಾಮಕರಣವನ್ನು ಮಾಡುವಾಗ ಹುಟ್ಟಿದ ನಕ್ಷತ್ರ, ತಿಥಿ, ಗೋತ್ರಗಳರನ್ನೆಲ್ಲಾ ನೋಡಲಾಗುತ್ತದೆ. ಅದೇ ರೀತಿಯಾಗಿ ಮಗುವಿಗೆ ಈ ಅಕ್ಷರದಿಂದ ಆರಂಭವಾಗುವ ಹೆಸರುಗಳನ್ನು ಕಂಡರೆ ಭವಿಷ್ಯದಲ್ಲಿ ಉನ್ನತ ಮಟ್ಟಕ್ಕೆ ಹೋಗುವುದಂತೂ ಖಂಡಿತ!

  • Trending Desk
  • 2-MIN READ
  • Last Updated :
  • Share this:

ಜ್ಯೋತಿಷ್ಯ (Astrology) ಶಾಸ್ತ್ರದ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯ ಹೆಸರಿನ (Name) ಪ್ರಭಾವವು ಅವನ ಜೀವನದ ಮೇಲೆ ಬೀರುತ್ತದೆ. ವ್ಯಕ್ತಿಯ ಹೆಸರು ಅವನ ಗುರುತು. ವ್ಯಕ್ತಿಯ ಜನ್ಮ ಚಿಹ್ನೆಯ ಆಧಾರದ ಮೇಲೆ ಹೆಸರಿಸಲಾಗುತ್ತದೆ. ಪ್ರತಿಯೊಂದು ಹೆಸರು ತನ್ನದೇ ಆದ ವಿಭಿನ್ನ ಅರ್ಥವನ್ನು ಹೊಂದಿರುತ್ತದೆ. ಆ ಹೆಸರಿನ ಅರ್ಥದ ಪರಿಣಾಮವು ವ್ಯಕ್ತಿಯ ಸ್ವಭಾವ, ಅದೃಷ್ಟದ ಮೇಲೆ ಕಂಡುಬರುತ್ತದೆ. ನಾಮ ಶಾಸ್ತ್ರದ ಪ್ರಕಾರ, ಜನ್ಮ ಚಿಹ್ನೆ (Birth Sign) ಯ ಆಧಾರದ ಮೇಲೆ ಇಡುವ ಹೆಸರುಗಳು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ವಿವಿಧ ರಾಶಿಚಕ್ರ ಚಿಹ್ನೆಗಳ ಜನರು ವಿಭಿನ್ನ ಸ್ವಭಾವವನ್ನು ಹೊಂದಿರುವಂತೆಯೇ, ವಿವಿಧ ಅಕ್ಷರಗಳಿಂದ ಪ್ರಾರಂಭವಾಗುವ ಹೆಸರುಗಳ ಜನರ ಸ್ವಭಾವವೂ ಸಹ ಸಾಮಾನ್ಯವಾಗಿ ವಿಭಿನ್ನವಾಗಿಯೇ ಇರುತ್ತದೆ. ವಾಸ್ತವವಾಗಿ, ಹೆಸರಿನ ಮೊದಲ ಅಕ್ಷರವು ಜ್ಯೋತಿಷ್ಯಕ್ಕೆ ಸಂಬಂಧಿಸಿದೆ. ಅದು ಜನರ ಗುಣ ಸ್ವಭಾವವನ್ನು ಸಹ ತಿಳಿಸುತ್ತದೆ.


ನಮ್ಮ ಹೆಸರಿನ ಮೊದಲ ಅಕ್ಷರ ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ


ಹೆಸರಿನ ಜ್ಯೋತಿಷ್ಯದ ಪ್ರಕಾರ, ವ್ಯಕ್ತಿಯ ಹೆಸರಿನ ಮೊದಲ ಅಕ್ಷರದಿಂದ ಅವರ ಸ್ವಭಾವವನ್ನು ತಿಳಿಯಬಹುದು. ವ್ಯಕ್ತಿಯ ಹೆಸರಿನ ಪ್ರಭಾವವು ಅವನ ಜೀವನದ ಮೇಲೆ ಕಂಡುಬರುತ್ತದೆ. ಅದಕ್ಕಾಗಿಯೇ ಮಕ್ಕಳಿಗೆ ನಾಮಕರಣ ಮಾಡುವಾಗ ಅವರ ಜನ್ಮ ದಿನಾಂಕ ಸಮಯದ ಪ್ರಕಾರ ಹೆಸರಿಡಲು ಸೂಚಿಸಲಾಗುತ್ತದೆ. ಹೆಸರೇ ವ್ಯಕ್ತಿಯ ವ್ಯಕ್ತಿತ್ವ ಮತ್ತು ಭವಿಷ್ಯವನ್ನು ನಿರ್ಧರಿಸುತ್ತದೆ.


ಅದೇ ರೀತಿ ಹೆಸರಿನ ಮೊದಲ ಅಕ್ಷರದಿಂದ ವ್ಯಕ್ತಿತ್ವ ಗೊತ್ತಾಗುವ ಹಾಗಿದ್ದರೆ.. ಎಂದು ಅನುಮಾನ ಪಡುವವರು ಸಹ ಇದ್ದಾರೆ. ಇರಲಿ ಬಿಡಿ, ಅವರವರ ಭಾವಕ್ಕೆ ಅವರವರ ಭಕುತಿಗೆ ಈ ವಿಚಾರವನ್ನು ಬಿಡೋಣ.


ಇದನ್ನೂ ಓದಿ: ಗೋವಿಂದ, ಮುಕುಂದ, ಮುರಾರಿ! ಶ್ರೀಕೃಷ್ಣನ ಈ 56 ಹೆಸರುಗಳನ್ನು ನಿಮ್ಮ ಮಕ್ಕಳಿಗೂ ಇಡಬಹುದು


ಆದರೆ, ಜ್ಯೋತಿಷ್ಯದ ಪ್ರಕಾರ ನಾವು ಈಗ ಇಲ್ಲಿ ಕೆಲವು ಅಕ್ಷರಗಳಿಂದ ಆರಂಭವಾಗುವ ಹೆಸರಿಟ್ಟರೆ, ಆ ಮಕ್ಕಳು ಓದುವುದರಲ್ಲಿ ಮತ್ತು ಶಿಕ್ಷಣದಲ್ಲಿ ಸದಾ ಮುಂದಿರುತ್ತಾರೆ. ನಾವು ಈ ಕೆಳಗೆ ಸೂಚಿಸುವ ಅಕ್ಷರಗಳಿಂದ ನಿಮ್ಮ ಮಗುವಿಗೆ ಹೆಸರಿಟ್ಟರೆ ಅಂತಹ ಮಕ್ಕಳು ಓದುವುದರಲ್ಲಿ ಮತ್ತು ಬರೆಯುವುದರಲ್ಲಿ ಹೆಚ್ಚು ಚುರುಕಾಗಿರುತ್ತಾರೆ. ಅವರು ಎಲ್ಲರ ಹೃದಯವನ್ನು ಗೆಲ್ಲಬಲ್ಲರು ಮತ್ತು ಎಲ್ಲ ಪರಿಸ್ಥಿತಿಯನ್ನು ಗೆಲ್ಲುವ ಸ್ವಭಾವ ಅವರದ್ದಾಗುತ್ತದೆ.


ಆ ಅಕ್ಷರಗಳು ಯಾವುವು? ಇಲ್ಲಿ ತಿಳಿಯಿರಿ.


K ಅಕ್ಷರದಿಂದ ಆರಂಭವಾಗುವ ಹೆಸರು ಉತ್ತಮ


K ಅಕ್ಷರದಿಂದ ಹೆಸರು ಪ್ರಾರಂಭವಾಗುವ ಮಕ್ಕಳು ತೀಕ್ಷ್ಣ ಮನಸ್ಸಿನವರು ಆಗಿರುತ್ತಾರೆ. ಅವರು ಓದುವುದು ಮತ್ತು ಬರೆಯುವುದರಲ್ಲಿ ಮುಂದಿರುತ್ತಾರೆ ಮತ್ತು ಅವರು ಶೀಘ್ರವಾಗಿ ಕಲಿಯುವವರೂ ಆಗಿರುತ್ತಾರೆ. ಅವರು ಉತ್ತಮ ಆರ್ಥಿಕ ಸ್ಥಿತಿಯನ್ನು ಹೊಂದುತ್ತಾರೆ ಮತ್ತು ಚಿಕ್ಕ ವಯಸ್ಸಿನಲ್ಲೇ ಏನನ್ನಾದರೂ ಸಾಧಿಸಲು ಉತ್ಸಾಹವುಳ್ಳವರಾಗಿರುತ್ತಾರೆ. ಅಂತಹ ಕೆಲಸ ಮಾಡುವ ಮಕ್ಕಳ ಕೆಲಸವು ಪೋಷಕರಿಗೆ ಖ್ಯಾತಿಯನ್ನು ತರುತ್ತದೆ ಮತ್ತು ಅವರು ತಮ್ಮ ವೃತ್ತಿಜೀವನದ ಬಗ್ಗೆ ಅತ್ಯಂತ ಗಂಭೀರವಾಗಿರುತ್ತಾರೆ.


L ಅಕ್ಷರದಿಂದ ಆರಂಭವಾಗುವ ಹೆಸರುಗಳು ಬೆಸ್ಟ್‌


ನೀವು ನಿಮ್ಮ ಮಕ್ಕಳಿಗೆ L ಅಕ್ಷರದಿಂದ ಆರಂಭವಾಗುವ ಅಕ್ಷರದಿಂದ ಹೆಸರಿಡಬಹುದು. ಈ ಮಕ್ಕಳು ತಮ್ಮ ಅಧ್ಯಯನದಲ್ಲಿ ನಿಜವಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ತಮ್ಮ ಬುದ್ಧಿವಂತಿಕೆ ಮತ್ತು ಕಠಿಣ ಪರಿಶ್ರಮದ ಆಧಾರದ ಮೇಲೆ ಅವರು ಸಾಕಷ್ಟು ಹೆಸರು ಮಾಡುತ್ತಾರೆ. ಸಾಮಾನ್ಯವಾಗಿ, ಅವರು ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಸಾಧನೆಯನ್ನು ಮಾಡುತ್ತಾರೆ. ಯಾವಾಗಲೂ ಹೊಸದನ್ನು ಕಲಿಯಲು ಇಚ್ಛಿಸುತ್ತಾರೆ. ಸಮಾಜದಲ್ಲಿ ತಮ್ಮದೇ ಆದ ಗುರುತನ್ನು ರೂಪಿಸಿಕೊಳ್ಳುವಲ್ಲಿಯೂ ಯಶಸ್ವಿಯಾಗುತ್ತಾರೆ.




P ಅಕ್ಷರದಿಂದ ಆರಂಭವಾಗುವ ಹೆಸರು ಒಳ್ಳೆಯದು


P ಅಕ್ಷರದಿಂದ ಹೆಸರು ಪ್ರಾರಂಭವಾಗುವ ಮಕ್ಕಳು ಜನರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗುತ್ತಾರೆ. ಅವರು ಯಶಸ್ಸನ್ನು ಸಾಧಿಸಲು ತುಂಬಾ ಶ್ರಮಿಸುತ್ತಾರೆ ಮತ್ತು ಅವರ ಮನಸ್ಸು ಅತ್ಯಂತ ವೇಗವಾಗಿ ಕೆಲಸ ಮಾಡುತ್ತದೆ. ಅವರು ಶೀಘ್ರ ಕಲಿಯುವವರು ಮತ್ತು ಎಲ್ಲೆಡೆ ಪ್ರಶಂಸೆಗೆ ಒಳಪಡುವ ಮಕ್ಕಳಾಗುತ್ತಾರೆ. ಈ ಮಕ್ಕಳು ತಮ್ಮ ಹೆತ್ತವರನ್ನು ಪ್ರೀತಿಸುತ್ತಾರೆ ಮತ್ತು ಅವರ ಸಂತೋಷ ಮತ್ತು ಯೋಗಕ್ಷೇಮಕ್ಕಾಗಿ ಏನಾದ್ರೂ ಕೆಲಸವನ್ನು ಮಾಡುತ್ತಾರೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು