Char Dham Yatra : ನಾಳೆಯಿಂದ ಆರಂಭವಾಗಲಿದೆ ಚಾರ್​​ಧಾಮ್​ ಯಾತ್ರೆ; ಇದಕ್ಕೂ ಮುನ್ನ ಈ ವಿಷಯದ ತಿಳಿಯುವುದು ಅವಶ್ಯ

ಚಾರ್ ಧಾಮ್ ಯಾತ್ರೆಯ ಸಮಯದಲ್ಲಿ ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಮತ್ತು ಬದರಿನಾಥ ದೇವರ ದರ್ಶನಕ್ಕೆ ಉತ್ತರಾಖಂಡ ಸರ್ಕಾರ ವ್ಯವಸ್ಥೆ ಮಾಡಲಿದೆ.

ಚಾರ್​ದಾಮ್​ ಯಾತ್ರಾ ಸ್ಥಳಗಳು

ಚಾರ್​ದಾಮ್​ ಯಾತ್ರಾ ಸ್ಥಳಗಳು

 • Share this:
  ಅನೇಕರ ಕನಸು ಜೀವನದಲ್ಲಿ ಒಮ್ಮೆ ಚಾರ್​ ದಾಮ್ (Char Dham Yatra )​ ಯಾತ್ರೆ ಮಾಡುವುದಾಗಿರುತ್ತದೆ. ಮೋಕ್ಷ ಸಾಧನೆಗಾಗಿ ಈ ಯಾತ್ರೆ ಕೈಗೊಳ್ಳುವುದು ಅವಶ್ಯ ಎಂದು ಅನೇಕರು ನಂಬಿದ್ದಾರೆ. ಅದರಲ್ಲಿ ಒಂದು ಚೋಟಾ ಚಾರ್​​ಧಾಮ್​ ಯಾತ್ರೆ ಕೂಡ ಒಂದು. ಈ ಚೋಟಾ ಚಾರ್​ಧಾಮ್​ನಲ್ಲಿ ಉತ್ತರಾ ಖಂಡಾದ (Uttara Khand) ಈ ಹಿಮಾಲಯದ ತಪ್ಪಲಿನಲ್ಲಿರುವ ಈ ದೇಗುಲಗಳಿಗೆ ವರ್ಷದಲ್ಲಿ ಎರಡು ಬಾರಿ ಮಾತ್ರ ಪ್ರಯಾಣ ಮಾಡಲಾಗುವುದು. ಅದಲರಲ್ಲಿ ಒಂದು ಮೇ ತಿಂಗಳ ಯಾತ್ರೆ ಆಗಿದೆ. ಈ ಬಾರಿ ಈ ಚೋಟಾ ಚಾರ್​ಧಾಮ್​ ಯಾತ್ರೆ ಮೇ 3 ರಿಂದ ಅಂದರೆ ನಾಳೆಯಿಂದ ಆರಂಭವಾಗಲಿದೆ.

  ದಿನಕ್ಕೆ ನಿಗದಿತ ಮಿತಿಯಲ್ಲಿ ಯಾತ್ರಾರ್ಥಿಗಳಿಗೆ ಅವಕಾಶ

  ಚಾರ್ ಧಾಮ್ ಯಾತ್ರೆಯ ಸಮಯದಲ್ಲಿ ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಮತ್ತು ಬದರಿನಾಥ ದೇವರ ದರ್ಶನಕ್ಕೆ ಉತ್ತರಾಖಂಡ ಸರ್ಕಾರ ವ್ಯವಸ್ಥೆ ಮಾಡಲಿದೆ. ಈ ಬಾರಿ ಈ ಚೋಟಾ ಚಾರ್​ಧಾಮ್​ಗಳಿಗೆ ದಿನಕ್ಕೆ ನಿಗದಿತ ಇತಿಯಲ್ಲಿ ಯಾತ್ರಾರ್ಥಿಗಳ ಪ್ರವಾಸ ನಡೆಸಲು ಅವಕಾಶ ಮಾಡಲಾಗಿದ್ದು, ಕೋವಿಡ್​ ಹಿನ್ನಲೆ ಈ ಮಿತಿ ಪಾಲನೆ ಕಡ್ಡಾಯವಾಗಿದೆ ಎಂದು ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್​ ಸಿಂಗ್​ ಧಾಮಿ ತಿಳಿಸಿದ್ದಾರೆ.

  ಅಕ್ಷಯ ತೃತೀಯದಂದು ಯಮುನೋತ್ರಿ ಧಾಮ ಯಾತ್ರೆ ಆರಂಭ ಆಗಲಿದೆ, ಇಲ್ಲಿನ ಆಹ್ಲಾದಕರ ವಾತಾವರಣ ಮತ್ತು ಸುಗಮ ಯಾತ್ರೆಗೆ ಭಕ್ತರಿಗೆ ಸ್ವಾಗತ ಕೋರುತ್ತೇವೆ ಎಂದು ತಿಳಿಸಿದ್ದಾರೆ.

  ಇದನ್ನು ಓದಿ:  ಶಿವಲಿಂಗದ ಮೇಲೆ ಸದಾ ನೀರು ಬೀಳುವುದು ಏಕೆ?

  ಕೋವಿಡ್ ಹಿನ್ನಲೆ ಮುನ್ನೆಚ್ಚರಿಕೆ

  ಬದರಿನಾಥಕ್ಕೆ 15,000, ಕೇದಾರನಾಥಕ್ಕೆ 12,000, ಗಂಗೋತ್ರಿಗೆ 7,000 ಮತ್ತು ಯಮುನೋತ್ರಿಗೆ 4,000 ಯಾತ್ರಾರ್ಥಿಗಳಿಗೆ ಮಾತ್ರ ಪ್ರವೇಶ ನೀಡಲಾಗಿದೆ. ಕೋವಿಡ್-ಪ್ರೇರಿತ ನಿರ್ಬಂಧಗಳು ಜಾರಿಯಲ್ಲಿರುವುದರಿಂದ ಈ ವರ್ಷ ದಾಖಲೆ ಸಂಖ್ಯೆಯ ಯಾತ್ರಾರ್ಥಿಗಳು ಬರುವ ಸಾಧ್ಯತೆಯಿದೆ ಎಂದು ಈ ನಿರ್ಬಂಧ ಜಾರಿಗೆ ತರಲಾಗಿದೆ.
  ಯಮುನೋತ್ರಿ ಧಾಮಕ್ಕೆ ಪ್ರತಿವರ್ಷ ಸಾವಿರಾರು ಭಕ್ತರು ಹರಿದು ಬರುತ್ತಾರೆ. ಚಾರ್ ಧಾಮ್ ಯಾತ್ರಾ ಯಾತ್ರೆಯ ಆರಂಭದ ಸ್ಥಳ ಇದಾಗಿದೆ. ಇದು ಯಮುನೋತ್ರಿಯಿಂದ ಗಂಗೋತ್ರಿಗೆ ಅಂತಿಮವಾಗಿ ಕೇದಾರನಾಥ ಮತ್ತು ಬದರಿನಾಥಕ್ಕೆ ಸಾಗುತ್ತದೆ.

  ಕೋವಿಡ್ ಪರೀಕ್ಷೆ ಕಡ್ಡಾಯ

  ಚಾರ್ ಧಾಮ್ ಯಾತ್ರೆಯನ್ನು ಸುಗಮವಾಗಿ ನಡೆಸುವಂತೆ ಅಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿ ಈ ಸಭೆಯಲ್ಲಿ ಸೂಚಿಸಿದ್ದಾರೆ. ರಾಜ್ಯದ ಗಡಿಗಳಿಂದ ಆಗಮಿಸುವ ಪ್ರಯಾಣಿಕರು ಮತ್ತು ಭಕ್ತರು COVID-19 ಪರೀಕ್ಷೆಗೆ ಒಳಗಾಗುವುದು ಮತ್ತು COVID-19 ಲಸಿಕೆ ಪ್ರಮಾಣಪತ್ರವನ್ನು ಪ್ರಸ್ತುತಪಡಿಸುವುದು ಈವರೆಗೆ ಕಡ್ಡಾಯವಲ್ಲ ಎಂದೂ ಅಧಿಕಾರಿ ತಿಳಿಸಿದ್ದಾರೆ.

  ಉತ್ತರಾಖಂಡದ ಚಾರ್‌ಧಾಮ್ ಯಾತ್ರೆಗಾಗಿ ಪ್ರವಾಸೋದ್ಯಮ ಇಲಾಖೆ ನಿರ್ವಹಿಸುವ ಪೋರ್ಟಲ್‌ನಲ್ಲಿ ಎಲ್ಲಾ ಪ್ರಯಾಣಿಕರು ಮತ್ತು ಭಕ್ತರು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ಇನ್ನು, ರಾಜ್ಯ ಸರ್ಕಾರ ಮತ್ತು ಆಡಳಿತ ಮಟ್ಟದಲ್ಲಿ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕು ಎಂದೂ ಅಧಿಕಾರಿ ಮಾಹಿತಿ ನೀಡಿದ್ದಾರೆ.

  ಇದನ್ನು ಓದಿ: "ಭಾರತದಲ್ಲಿ ಮುಸ್ಲಿಮರು ಅಪಾಯದಲ್ಲಿದ್ದಾರೆ"! ಹೀಗಂತ ಹೇಳಿದ್ದೇಕೆ ಖ್ಯಾತ ಮಾಡೆಲ್ ಪದ್ಮ ಲಕ್ಷ್ಮೀ?

  ಉತ್ತರಾಖಂಡ್‌ನ ಚಾರ್ ಧಾಮ್ ಯಾತ್ರೆಯು ಉತ್ತರಕಾಶಿ ಜಿಲ್ಲೆಯ ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯಗಳನ್ನು ತೆರೆಯುವುದರೊಂದಿಗೆ ಪ್ರಾರಂಭವಾಗುತ್ತದೆ. ರುದ್ರಪ್ರಯಾಗ ಜಿಲ್ಲೆಯ ಕೇದಾರನಾಥ ಮೇ 6 ರಂದು ಮತ್ತು ಚಮೋಲಿ ಜಿಲ್ಲೆಯ ಬದ್ರಿನಾಥ್ ಮೇ 8 ರಂದು ತೆರೆಯುತ್ತದೆ.

  ಚಾರ್​ಧಾಮ್​ ಯಾತ್ರೆ ಮಹತ್ವ
  ಈ ತೀರ್ಥಯಾತ್ರೆಯು ಧಾರ್ಮಿಕವಾಗಿ ಒಲವು ಹೊಂದಿದೆ. ಹಿಂದೂ ಧರ್ಮದಲ್ಲಿ, ಚಾರ್ಧಾಮ್ ಯಾತ್ರೆಯನ್ನು ಕೈಗೊಳ್ಳುವ ಮೂಲಕ ಪ್ರಸ್ತುತ ಜೀವನದಲ್ಲಿ ಮಾತ್ರವಲ್ಲದೆ ಹಿಂದಿನ ಜನ್ಮದ ಪಾಪಗಳ ಹೊರೆಯಿಂದ ಮುಕ್ತರಾಗುತ್ತಾರೆ ಎಂದು ನಂಬಲಾಗಿದೆ. ಈ ಪಾಪ ವಿಮೋಚನೆಯು ಒಬ್ಬನನ್ನು ಕರ್ಮ ಮತ್ತು ಜನ್ಮ ಮತ್ತು ಪುನರ್ಜನ್ಮದ ಚಕ್ರದಿಂದ ಮುಕ್ತಗೊಳಿಸುತ್ತದೆ, ಮೋಕ್ಷ ಅಥವಾ ಮೋಕ್ಷದ ಕಡೆಗೆ ಕರೆದೊಯ್ಯುತ್ತದೆ ಎಂದು ನಂಬಲಾಗಿದೆ.
  Published by:Seema R
  First published: