• ಹೋಂ
  • »
  • ನ್ಯೂಸ್
  • »
  • ಭವಿಷ್ಯ
  • »
  • Relationship: ಗಂಡ-ಹೆಂಡ್ತಿ ಮಧ್ಯೆ ಪದೇ ಪದೇ ಜಗಳ ಆಗ್ತಿದೆಯಾ? ಸುಖಿ ಸಂಸಾರಕ್ಕಾಗಿ ಈ ಮಂತ್ರಗಳನ್ನು ಪಠಿಸಿ

Relationship: ಗಂಡ-ಹೆಂಡ್ತಿ ಮಧ್ಯೆ ಪದೇ ಪದೇ ಜಗಳ ಆಗ್ತಿದೆಯಾ? ಸುಖಿ ಸಂಸಾರಕ್ಕಾಗಿ ಈ ಮಂತ್ರಗಳನ್ನು ಪಠಿಸಿ

ದೀಪಾವಳಿ ರಾತ್ರಿ ಅಥವಾ ಸೂರ್ಯ ಅಥವಾ ಚಂದ್ರ ಗ್ರಹಣದ ಸಮಯದಲ್ಲಿ ಮಂತ್ರವನ್ನು ಮೊದಲು ಪಠಿಸಿ ಶಕ್ತಿಯುತಗೊಳಿಸಬೇಕು. ಇದು ವೈವಾಹಿಕ ಪ್ರೀತಿಯನ್ನು ಹೆಚ್ಚಿಸುತ್ತದೆ ಮತ್ತು ದಂಪತಿಗಳ ನಡುವಿನ ಬಿರುಕುಗಳನ್ನು ಕಡಿಮೆ ಮಾಡುತ್ತದೆ.

ದೀಪಾವಳಿ ರಾತ್ರಿ ಅಥವಾ ಸೂರ್ಯ ಅಥವಾ ಚಂದ್ರ ಗ್ರಹಣದ ಸಮಯದಲ್ಲಿ ಮಂತ್ರವನ್ನು ಮೊದಲು ಪಠಿಸಿ ಶಕ್ತಿಯುತಗೊಳಿಸಬೇಕು. ಇದು ವೈವಾಹಿಕ ಪ್ರೀತಿಯನ್ನು ಹೆಚ್ಚಿಸುತ್ತದೆ ಮತ್ತು ದಂಪತಿಗಳ ನಡುವಿನ ಬಿರುಕುಗಳನ್ನು ಕಡಿಮೆ ಮಾಡುತ್ತದೆ.

ದೀಪಾವಳಿ ರಾತ್ರಿ ಅಥವಾ ಸೂರ್ಯ ಅಥವಾ ಚಂದ್ರ ಗ್ರಹಣದ ಸಮಯದಲ್ಲಿ ಮಂತ್ರವನ್ನು ಮೊದಲು ಪಠಿಸಿ ಶಕ್ತಿಯುತಗೊಳಿಸಬೇಕು. ಇದು ವೈವಾಹಿಕ ಪ್ರೀತಿಯನ್ನು ಹೆಚ್ಚಿಸುತ್ತದೆ ಮತ್ತು ದಂಪತಿಗಳ ನಡುವಿನ ಬಿರುಕುಗಳನ್ನು ಕಡಿಮೆ ಮಾಡುತ್ತದೆ.

  • Trending Desk
  • 4-MIN READ
  • Last Updated :
  • Share this:

Astrology: ಜ್ಯೋತಿಷ್ಯವು ಆರೋಗ್ಯದಿಂದ (Health) ಹಿಡಿದು ಸುಖಿ ದಾಂಪತ್ಯ (Married Life) ಜೀವನದವರೆಗೆ ಎಲ್ಲದಕ್ಕೂ ಪರಿಹಾರಗಳನ್ನು ಒಳಗೊಂಡಿದೆ. ದಾಂಪತ್ಯ, ಪ್ರೀತಿ ಅನ್ನೋದು ಒಂದು ಪವಿತ್ರವಾದ ಬಂಧನ (Relationship) ಮತ್ತು ಸಂಬಂಧ. ಪ್ರೀತಿ ಅಂದಮೇಲೆ ಅಲ್ಲಿ ಜಗಳವೂ (Husband-Wife Quarrel) ಸಹಜ. ಹಾಗಂತ ಜಗಳವೇ ಜೀವನವಾದರೆ ಅಲ್ಲಿ ಯಾವ ನೆಮ್ಮದಿ, ಸುಖ-ಶಾಂತಿ ಇರುವುದಿಲ್ಲ. ಕೆಲವೊಮ್ಮೆ ಈ ಜಗಳಗಳು ಗ್ರಹದೋಷ (Graha Dosha), ರಾಹುವಿನ ಆಟದಿಂದಲೂ ಸಂಭವಿಸಬಹುದು. ಆದರೆ ತಾರಕಕ್ಕೆ ಹೋದ ಗಲಾಟೆಯಿಂದ ಸಂಬಂಧಗಳೇ ಕಳಚಿಕೊಂಡು ಹೋಗುವ ಪರಿಸ್ಥಿತಿ ಎದುರಾಗಬಹುದು. ಇಂತಹ ಸಂದಿಗ್ನ ಸ್ಥಿತಿಯನ್ನು ಎದುರಿಸಲು, ಜಗಳದಿಂದ ಸಂಬಂಧವನ್ನು ಉಳಿಸಿಕೊಳ್ಳಲು ದಂಪತಿಗಳು ಜ್ಯೋತಿಷ್ಯದ ಮೊರೆ ಹೋಗಬಹುದು.


ಈ ಜ್ಯೋತಿಷ್ಯ ಪರಿಹಾರಗಳು ಜಗಳವನ್ನು ದೂರ ಮಾಡಿ, ಸಂಬಂಧವನ್ನು ಗಟ್ಟಿಗೊಳಿಸಿ ಸುಖಿ ಸಂಸಾರಕ್ಕೆ ಸಹಕಾರಿಯಾಗುತ್ತದೆ.


ತ್ರಯಶರಿ ಮಹಾಮೃತ್ಯುಂಜಯ ಮಂತ್ರ


"ತ್ರಯಶರಿ ಮಹಾಮೃತ್ಯುಂಜಯ ಮಂತ್ರ" ಇದು ದಂಪತಿಗಳಿಗೆ ಉಪಯುಕ್ತ ಮಂತ್ರವಾಗಿದೆ. ಈ ಮಂತ್ರ ಪಠಣೆಯಿಂದಾಗಿ ಆಂತರಿಕ ಸಮಸ್ಯೆ ಪರಿಹಾರವಾಗುತ್ತದೆ. ಜೊತೆಗೆ ಜಗಳಗಳು ಕಡಿಮೆಯಾಗಿ ಸಂಬಂಧದಲ್ಲಿ ಸಮತೋಲನ ಸೃಷ್ಟಿಯಾಗುತ್ತದೆ.


*"ಓಂಹುಂಜುನ್ಸ್: ಓಂಜುನ್ಸ್, ಓಂನಮಃ:ಶಿವಾಯ"


ಈ ಮಂತ್ರವನ್ನು ಶುಕ್ಲ ಪಕ್ಷದ ಮೊದಲ ಸೋಮವಾರದಂದು ಪಠಣ ಮಾಡಬೇಕು. ಶಿವನಿಗೆ ಸಮರ್ಪಿತವಾದ ಈ ಮಂತ್ರ ನಿಮ್ಮ ಸಂಬಂಧವನ್ನು ಆರೋಗ್ಯಕರವಾಗಿಸುತ್ತದೆ. ಅದರಲ್ಲೂ ದೇವಸ್ಥಾನದಲ್ಲಿ ಈ ಮಂತ್ರ ಪಠಣವನ್ನು ಮಾಡಿದರೆ ಒಳ್ಳೆಯ ಫಲಿತಾಂಶ ದೊರಕಬಹುದು.


ನೀವು ಶಿವನ ದೇವಾಲಯಕ್ಕೆ ಹೋಗಲು ಸಾಧ್ಯವಾಗದಿದ್ದಲ್ಲಿ ನೀವು ಮನೆಯಲ್ಲಿಯೇ ಏಕಾಂಗಿಯಾಗಿ ಅಥವಾ ನಿಮ್ಮ ಸಂಗಾತಿ ಮತ್ತು ನೀವು ಇಬ್ಬರೂ ಸೇರಿ ಈ ಮಂತ್ರವನ್ನು ಪಠಿಸಬಹುದು.


 Chant these mantra to Improve Relationships stg mrq Chant these mantra to Improve Relationships stg mrq
ಸಾಂದರ್ಭಿಕ ಚಿತ್ರ


ಇದು ನಿಮ್ಮ ಜಗಳಮುಕ್ತ ಸಂಬಂಧಕ್ಕೆ ಮತ್ತಷ್ಟು ಪ್ರಯೋಜನ ನೀಡುತ್ತದೆ. ಮಂತ್ರವನ್ನು ಕನಿಷ್ಠ 21 ದಿನಗಳವರೆಗೆ ಮರೆಯದೇ ಪಠಿಸುವುದನ್ನು ಮುಂದುವರಿಸಬೇಕು.


"ಓಂ ಮಹಾಯಕ್ಷಿಣೀ ಪತಿ ಮೇಂ ವಶ್ಯಂ ಕುರು ಕುರು ಸ್ವಾಹಾ"


ಕೆಲವೊಮ್ಮೆ 7 ನೇ ಮನೆಯ ಅಧಿಪತಿ ಮತ್ತು ಗ್ರಹವು ದಾಂಪತ್ಯ ಜೀವನದಲ್ಲಿ ಇನ್ನಿಲ್ಲದ ಕೆಟ್ಟ ಗಳಿಗೆಯನ್ನು ಸೃಷ್ಟಿಸಬಹುದು.ಅಷ್ಟೇ ಅಲ್ಲ ಜಾತಕದ 7 ನೇ ಮನೆಯಲ್ಲಿರುವ ರಾಹು ನಿಮ್ಮ ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು.


7ನೇ ಅಧಿಪತಿಯು 6ನೇ, 12ನೇ ಅಥವಾ 8ನೇ ಮನೆಯಲ್ಲಿದ್ದರೆ ನಿಮ್ಮ ಸಂಸಾರಕ್ಕೆ ಮತ್ತಷ್ಟು ತೊಂದರೆ ಉಂಟು ಮಾಡಬಹುದು. ಹೀಗಾಗಿ ಇದರಿಂದ ಪಾರಾಗಲು ನೀವು ಮಂತ್ರದ ಮೊರೆ ಹೋಗಬಹುದು.


ಈ ರಾಹುವಿನಂತಹ ಸಮಸ್ಯೆಯನ್ನು ದೂರ ಮಾಡಲು "ಓಂ ಮಹಾಯಕ್ಷಿಣೀ ಪತಿ ಮೇಂ ವಶ್ಯಂ ಕುರು ಕುರು ಸ್ವಾಹಾ" ಈ ಮಂತ್ರವನ್ನು ಹೇಳಬೇಕು. ಅದರಲ್ಲೂ ಮುಖ್ಯವಾಗಿ ಹೆಂಡತಿ ಈ ಮಂತ್ರವನ್ನು ಉಚ್ಛರಿಸಬೆಕು.




ದೀಪಾವಳಿ ರಾತ್ರಿ ಅಥವಾ ಸೂರ್ಯ ಅಥವಾ ಚಂದ್ರ ಗ್ರಹಣದ ಸಮಯದಲ್ಲಿ ಮಂತ್ರವನ್ನು ಮೊದಲು ಪಠಿಸಿ ಶಕ್ತಿಯುತಗೊಳಿಸಬೇಕು. ಇದು ವೈವಾಹಿಕ ಪ್ರೀತಿಯನ್ನು ಹೆಚ್ಚಿಸುತ್ತದೆ ಮತ್ತು ದಂಪತಿಗಳ ನಡುವಿನ ಬಿರುಕುಗಳನ್ನು ಕಡಿಮೆ ಮಾಡುತ್ತದೆ.


* “ಓಂ ತ್ರ್ಯಂಬಕಂ ಯಜಾಮಹೇ ಸುಗಂಧಿ ಪತಿವೇದನಂ ಉರ್ವಾರುಕಮಿವ ಬಂಧನಾತ್ ದಿತೋ ಮುಕ್ಷಿಯಮಮುತ್:”


ದಂಪತಿಗಳಿಗೆ ಮತ್ತೊಂದು ಸಾಮಾನ್ಯ ಪರಿಹಾರವೆಂದರೆ ಗೌರಿ ಶಂಕರ ರುದ್ರಾಕ್ಷಿ ಮಾಲೆ ಧಾರಣೆ. ಇದು ದಂಪತಿಗಳ ನಡುವಿನ ಪ್ರೀತಿಯನ್ನು ಹೆಚ್ಚಿಸಿ ಇಬ್ಬರೂ ಅನ್ಯೂನ್ಯವಾಗಿರಲು ಸಹಾಯ ಮಾಡುತ್ತದೆ.


ಇನ್ನೂ “ಓಂ ತ್ರ್ಯಂಬಕಂ ಯಜಾಮಹೇ ಸುಗಂಧಿ ಪತಿವೇದನಂ ಉರ್ವಾರುಕಮಿವ ಬಂಧನಾತ್ ದಿತೋ ಮುಕ್ಷಿಯಮಮುತ್:” ಈ ಮಂತ್ರವು ದಂಪತಿಗಳ ನಡುವೆ ಸಾಮರಸ್ಯವನ್ನು ಹೆಚ್ಚಿಸಲು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ.


ಇದನ್ನೂ ಓದಿ:  Guru-Shukra Yuti: ಬರೋಬ್ಬರಿ 12 ವರ್ಷದ ನಂತರ ಗುರು-ಶುಕ್ರ ಸಂಯೋಗ, 3 ರಾಶಿಯವರಿಗೆ ಸುಖದ ಸುಪ್ಪತ್ತಿಗೆ


ಈ ಮಂತ್ರವನ್ನು 11 ದಿನಗಳ ಅವಧಿಯಲ್ಲಿ 5 ಅಥವಾ 11 ಸಂಪೂರ್ಣ ಸುತ್ತಿನ ರುದ್ರಾಕ್ಷಿ ಹಾರವನ್ನು ಹಿಡಿದು ಜಪಿಸಬೇಕು. ಪ್ರದೋಷ ಕಾಲದ ಮೊದಲ ಸೋಮವಾರದಂದು ಪಠಿಸಿದರೆ ಹೆಚ್ಚಿನ ಲಾಭ ದೊರೆಯುತ್ತದೆ. ಶನಿ ಪ್ರದೋಷದ ಸಮಯದಲ್ಲಿಯೂ ದಂಪತಿಗಳು ಇದೇ ಜಪವನ್ನು ಜಪಿಸಬಹುದು.


 Chant these mantra to Improve Relationships stg mrq
ಸಾಂದರ್ಭಿಕ ಚಿತ್ರ


ಇನ್ನು ರುದ್ರಾಕ್ಷಿ ಸರ ಹಿಡಿದು "ಶಿವ ಶಿವ ರಾಟೆ, ಸಂಕಟ ಕಟೆ" ಎಂಬ ಮಂತ್ರವನ್ನು ಮಾಲೆಯ 5 ಸುತ್ತುಗಳವರೆಗೆ ಮಂತ್ರವನ್ನು ಪ್ರತಿದಿನ ಜಪಿಸಬಹುದು.


(Disclaimer:ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

Published by:Mahmadrafik K
First published: