ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ (Kukke Subramanya) ಚಂಪಾ ಷಷ್ಠಿಯ (Champa Shasti) ಸಂಭ್ರಮದ ವಾತಾವರಣ ಮೂಡಿದೆ. ಚಂಪಾ ಷಷ್ಠಿಯ ಅಂಗವಾಗಿ ದೇಶದ ನಾನಾ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಇಲ್ಲಿಗೆ ಆಗಮಿಸಿ ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಸುಬ್ರಹ್ಮಣ್ಯ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂಬ ಉದ್ದೇಶದಿಂದ ಇಲ್ಲಿಗೆ ಬರುವ ಭಕ್ತರು ವಿವಿಧ ರೀತಿಯ ಸೇವೆಗಳನ್ನು ದೇವರಿಗೆ ಅರ್ಪಿಸುವುದು ಹಿಂದಿನಿಂದಲೂ ಬಂದ ವಾಡಿಕೆ. ಇದರಲ್ಲಿ ಅತ್ಯಂತ ಕಠಿಣವಾದುದು ಹಾಗೂ ಅತೀ ಫಲದಾಯಕವಾದ ಸೇವೆಯೇ ಬೀದಿ ಮಡೆಸ್ನಾನ .
ನಾಗದೋಷಕ್ಕೆ ಪರಿಹಾರ
ದಕ್ಷಿಣ ಭಾರತದ ಸುಪ್ರಸಿದ್ದ ನಾಗಕ್ಷೇತ್ರಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಪ್ರಥಮ ಸ್ಥಾನ . ದೇಶದ ಹಲವೆಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿ ಆಗಮಿಸಿ ತನ್ನ ಅಭೀಷ್ಠ ಸಿದ್ದಿಗಾಗಿ ಶ್ರೀದೇವರ ದರ್ಶನ ಪಡೆದು ಧನ್ಯರಾಗುತ್ತಾರೆ. ದೇಶದ ಹೆಸರಾಂತ ವ್ಯಕ್ತಿಗಳಾದ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ನಟ ಅಮಿತಾ ಬಚ್ಚನ್, ಬಹುತೇಕ ಎಲ್ಲಾ ಪ್ರಮುಖ ರಾಜಕಾರಣಿಗಳು ಸೇರಿದಂತೆ ಹಲವರು ಇಲ್ಲಿಗೆ ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ದೇವರ ಕೃಪೆಗೆ ಪಾತ್ರರಾಗುವ ಉದ್ದೇಶದಿಂದ ಉಳ್ಳವರು ,ಇಲ್ಲದವರು ಎಲ್ಲರೂ ಇಲ್ಲಿ ಅವರ ಅವರವರ ಭಾವ-ಭಕುತಿಗೆ ಅನುಗುಣವಾಗಿ ಸೇರಿದಂತೆ ಹಲವು ರೀತಿಯ ಸೇವೆಗಳನ್ನು ನೀಡುವ ಮೂಲಕ ಕೃತಾರ್ತರಾಗುತ್ತಾರೆ.
ಕಷ್ಟ ನಿವಾರಣೆಗೆ ಹರಕೆ
ಉಳ್ಳವರು ಬೆಳ್ಳಿ ಬಂಗಾರ ನೀಡಿದರೆ, ಇಲ್ಲದವರು ಬೀದಿ ಮಡೆಸ್ನಾನ ಎನ್ನುವ ಬಲು ಕಠಿಣ ಊರುಳು ಸೇವೆ ಮಾಡುವ ಮೂಲಕ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ನಡೆಯುವ ಚಂಪಾಷಷ್ಠಿ ಜಾತ್ರಾ ಸಂದರ್ಭದಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತಾಧಿಗಳು ಈ ಸೇವೆಯನ್ನು ಮಾಡುವ ಮೂಲಕ ದೇವರನ್ನು ಒಲಿಸಲು ಬೇಡಿಕೊಳ್ಳುತ್ತಾರೆ. ಶ್ರೀಕ್ಷೇತ್ರದಿಂದ 2. 5 ಕಿಲೋ ಮೀಟರ್ ದೂರದಲ್ಲಿರುವ ಕುಮಾರಧಾರ ನದಿಯಲ್ಲಿ ಸ್ನಾನಮಾಡಿ, ಬೀದಿಯಲ್ಲಿ ಉರುಳು ಸೇವೆ ಮಾಡುವುದು ಇದರ ವಿಶೇಷ .
ಇದನ್ನು ಓದಿ: ಕನ್ನಡಿ ಒಡೆದರೆ, ಹಾಲು ಚೆಲ್ಲಿದರೆ ಅಪಶಕುನವೇ? ಅದಕ್ಕೆ ಏನು ಪರಿಹಾರ?
ಸುಬ್ರಹ್ಮಣ್ಯ ಹಾಗೂ ವಿಷ್ಣುವಿನ ನಡುವಿನ ಸಂಬಂಧ
ದೇವಸ್ಥಾನವನ್ನು ತಲುಪುವರೆಗೂ ಗೋವಿಂದ ಘೋಷಣೆಯೊಂದಿಗೆ ಭಕ್ತರು ಮಾರ್ಗ ಮಧ್ಯೆ ಉರುಳುವ ಮೂಲಕ ಸಾಗುತ್ತಾರೆ ದೇವಸ್ಥಾನದ ಕಡೆಗೆ ಸಾಗುತ್ತಾರೆ. ಹೀಗೆ ಸಾಗುವಾಗ ದಾಸರ ಶಂಖ ನಾದವೂ ಮೊಳಗಿಸುವ ಮೂಲಕ ಸುಬ್ರಹ್ಮಣ್ಯ ಹಾಗೂ ವಿಷ್ಣುವಿನ ನಡುವಿನ ಸಂಬಂಧವನ್ನು ನೆನಪಿಸಲಾಗುತ್ತದೆ. ಹರಕೆ ರೂಪದಲ್ಲಿ ಭಕ್ತಾಧಿಗಳು ಈ ಸೇವೆಯನ್ನು ತಮ್ಮ ಇಚ್ಛಾನುಸಾರ ನೆರವೇರಿಸುತ್ತಿದ್ದು, ಕೆಲವರು ತಮ್ಮ ಇಚ್ಛೆ ಈಡೇರಿಸಲು ಸೇವೆ ಮಾಡಿದರೆ, ಇನ್ನು ಕೆಲವರು ತಮ್ಮ ಇಚ್ಛೆ ಈಡೇರಿದ ಕಾರಣಕ್ಕಾಗಿ ಈ ಸೇವೆಯನ್ನು ಮಾಡುತ್ತಾರೆ.
ಇದನ್ನು ಓದಿ: ಹೊಸ ವರ್ಷವನ್ನು ಚಾಣಕ್ಯ ನೀತಿಯಂತೆ ಆರಂಭಿಸಿ, ಎಲ್ಲವೂ ಶುಭವಾಗಲಿದೆ
ಚಂಪಾಷಷ್ಠಿಯಂದು ಮಡೆಸ್ನಾನ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ಬೀದಿ ಮಡೆಸ್ನಾನಕ್ಕೆ ಅಧಿಕೃತ ಸೇವೆ ರೂಪದಲ್ಲಿ ಗುರುತಿಸಿಕೊಂಡಿರದಿದ್ದರೂ, ಚಂಪಾಷಷ್ಠಿಯ ಮೂರು ದಿನಗಳು ಮಾತ್ರ ನಡೆಯುವ ಈ ಬೀದಿ ಮಡೆಸ್ನಾನಕ್ಕೆ ದೇವಸ್ಥಾನದ ವತಿಯಿಂದ ಭಕ್ತಾಧಿಗಳಿಗೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಬೀದಿ ಮಡೆಸ್ನಾನ ಆರಂಭಕ್ಕೆ ಮೊದಲು ರಥಬೀದಿಯನ್ನು ನೀರು ಸಿಂಪಡಿಸಿ ತೊಳೆಯುವ ವ್ಯವಸ್ಥೆಯನ್ನೂ ಇಲ್ಲಿ ಮಾಡುವ ಮೂಲಕ ಭಕ್ತಾಧಿಗಳಿಗೆ ಯಾವುದೇ ತೊಂದರೆಯಾಗದಂತೆಯೂ ನೋಡಿಕೊಳ್ಳಲಾಗುತ್ತದೆ. ಬೀದಿ ಮಡೆಸ್ನಾನ ಮಾಡಿದ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಅವಕಾಶವನ್ನೂ ನೀಡಲಾಗುತ್ತದೆ.
ಮೂರು ದಿನಗಳ ಕಾಲ ಈ ಉರುಳು ಸೇವೆಯೂ ದೇವರ ಸನ್ನಿಧಿಯಲ್ಲಿ ನಡೆಯುತ್ತದೆ. ಸಾಮಾನ್ಯವಾಗಿ ಉಳ್ಳವರು. ದೇವರಿಗೆ ಬೆಳ್ಳಿ ಬಂಗಾರ ಸೇವೆ ನೀಡಿದರೆ, ಇಲ್ಲದವರ ಈ ಕಠಿಣ ಸೇವೆಯ ಮೂಲಕ ದೇವರ ಕೃಪೆಗೆ ಪಾತ್ರರಾಗುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ