ಹಳೆ ಕಾಲದಲ್ಲಿ ಊರಿಗೆ ಒಂದು ಕಾರ್ ಇದ್ರೆ ಅದೇ ದೊಡ್ಡ ವಿಷ್ಯ ಆಗಿತ್ತು. ಆದ್ರೆ ಈಗ ಮನೆಗೆ ಒಂದು ಕಾರ್ (Car) ಇದ್ದೆ ಇರುತ್ತದೆ. ಕಾರು ಕೊಳ್ಳುವಾಗ, ಕಾರನ್ನು ಮನೆಯಲ್ಲಿ ಪಾರ್ಕ್ (Park) ಮಾಡುವಾಗ, ಕಾರಿನ ಬಣ್ಣ (Colour) ಆರಿಸುವಾಗ ವಾಸ್ತುವನ್ನು (Vastu) ನಂಬುವವರು ಜ್ಯೋತಿಷಿಗಳ ವಾಸ್ತು ಅನುಸಾರ ಕೆಲವು ಸಲಹೆಗಳನ್ನು ಅನುಸರಿಸುತ್ತಾರೆ. ಉತ್ತಮ ವಾಸ್ತು ಧನಾತ್ಮಕ ಶಕ್ತಿಯನ್ನು ನೀಡುತ್ತದೆ. ನೀವು ಯಾವುದೇ ಭಯವಿಲ್ಲದೇ ಸುಖಕರವಾದ ಪ್ರಯಾಣವನ್ನು ಮಾಡಬಹುದು. ವಾಹನದ ವಾಸ್ತು ನಿರ್ಲಕ್ಷಿಸಿದರೆ ನಕಾರಾತ್ಮಕತೆ ಉಂಟಾಗುತ್ತದೆ.
ಕೆಲವೊಮ್ಮೆ ಸರಿಯಾದ ವಾಹನವು ವಾಸ್ತು ಇಲ್ಲದೇ ಹೋದರೆ, ಆ ವಾಹನಗಳು ಅಪಘಾತವಾಗುವ ಸಂಭವ ಕೂಡ ಹೆಚ್ಚು ಅಥವಾ ಅವಸರದ ಹೊತ್ತಿನಲ್ಲಿ ಕೈ ಕೊಡಬಹುದು. ಅಂಥಹ ಸನ್ನಿವೇಶ ಒದಗಬಾರದು ಎಂದಿದ್ದರೆ, ನಿಮಗಾಗಿ ವಾಹನ ಕೊಳ್ಳುವಾಗ ಈ ಕೆಳಗಿನ ವಾಸ್ತು ಸಲಹೆಗಳನ್ನು ಪಾಲಿಸಿ.
ಆಧುನಿಕ ಕಾಲದಲ್ಲಿ ಕಾರ್ ಮತ್ತು ಸ್ಕೂಟರ್‌ಗಳು ಟ್ರಾವೆಲಿಂಗ್‌ನಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ನಾವೆಲ್ಲರೂ ವಾಹನವನ್ನು ಖರೀದಿಸಿದ ತಕ್ಷಣ ಪೂಜೆ ಮಾಡಿಸುತ್ತೇವೆ. ಇದಲ್ಲದೇ, ವಾಸ್ತು ಶಾಸ್ತ್ರದ ಪ್ರಕಾರ ಪಾರ್ಕಿಂಗ್ ಸ್ಥಳವನ್ನು ಸಹ ನಿಗದಿಪಡಿಸುತ್ತೇವೆ. ಇದನ್ನೇ ಸಾಮಾನ್ಯ ಭಾಷೆಯಲ್ಲಿ ಕಾರ್ ಪಾರ್ಕಿಂಗ್ ವಾಸ್ತು ಎನ್ನಲಾಗುತ್ತದೆ.
ಕಾರ್ ಪಾರ್ಕಿಂಗ್ ವಾಸ್ತು ನಮ್ಮ ವಾಹನಗಳಿಗೆ ಭದ್ರತೆಯನ್ನು ಒದಗಿಸುವುದು ಮಾತ್ರವಲ್ಲದೆ ಅದನ್ನು ಡ್ರೈವ್ ಮಾಡೋವಾಗ ನಮಗೆ ಸುರಕ್ಷತೆಯನ್ನು ಸಹ ಒದಗಿಸುತ್ತದೆ. ಆದ್ದರಿಂದ, ಕಾರ್ ಪಾರ್ಕಿಂಗ್ ವಾಸ್ತು ಸಲಹೆಗಳು ವಾಸ್ತು ಕ್ಷೇತ್ರದಲ್ಲಿ ಬಹಳಷ್ಟು ಮಹತ್ವವನ್ನು ಪಡೆದಿದೆ. ಆದ್ದರಿಂದ ನಿಮಗಾಗಿ ಕೆಲವು ಕಾರ್ ಪಾರ್ಕಿಂಗ್ ವಾಸ್ತು ಸಲಹೆಗಳು ಇಲ್ಲಿವೆ.
ಇದನ್ನೂ ಓದಿ: Money Mantra: ಈ ರಾಶಿಯವರಿಗೆ ಎಲ್ಲವೂ ಮಂಗಳಕರ, ಸೋಲು ನಿಮ್ಮ ಹತ್ತಿರ ಕೂಡ ಸುಳಿಯಲ್ಲ!
ಕಾರ್ ಪಾರ್ಕಿಂಗ್‌ಗಾಗಿ ವಾಸ್ತು ಸಲಹೆಗಳು ಇಂತಿವೆ:
ಹೊಸ ವಾಹನವನ್ನು ಖರೀದಿಸಿದ ನಂತರ, ನಾವು ನಮ್ಮ ರಕ್ಷಣೆಗಾಗಿ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಬಳಸುತ್ತೇವೆ. ಅದರಲ್ಲಿ ಪ್ರಮುಖವಾಗಿ ಕಾರ್ ಪಾರ್ಕಿಂಗ್ ವಾಸ್ತು ಅಳವಡಿಸಿಕೊಳ್ಳುವುದರಿಂದ ನಾವು ವಾಹನ ಅಪಘಾತ, ಕಳ್ಳತನ ಇತ್ಯಾದಿಗಳಿಂದ ದೂರವಿರಬಹುದು.
ನೀವು ಕೂಡ ಈ ಕಾರ್ ಪಾರ್ಕಿಂಗ್ ವಾಸ್ತು ಸಲಹೆಗಳನ್ನು ಫಾಲೋ ಮಾಡಿ ನಿಮ್ಮ ನಿಮ್ಮ ಪ್ರಯಾಣವನ್ನು ಮತ್ತಷ್ಟು ಆನಂದಮಯಗೊಳಿಸಿಕೊಳ್ಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ