• Home
  • »
  • News
  • »
  • astrology
  • »
  • Dipavali Festival: ದೀಪಗಳ ಹಬ್ಬದ ಜೊತೆಯೇ ಬಂದ ಗ್ರಹಣ! ದೀಪಾವಳಿ ದಿನ ಪೂಜೆ, ವ್ರತಗಳನ್ನ ಮಾಡ್ಬಹುದಾ?

Dipavali Festival: ದೀಪಗಳ ಹಬ್ಬದ ಜೊತೆಯೇ ಬಂದ ಗ್ರಹಣ! ದೀಪಾವಳಿ ದಿನ ಪೂಜೆ, ವ್ರತಗಳನ್ನ ಮಾಡ್ಬಹುದಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Solar eclipse in Deepavali: ದೀಪಾವಳಿ ಹಬ್ಬ ಅಂದ್ರೆ ಯಾರಿಗ್ ತಾನೆ ಇಷ್ಟ ಇಲ್ಲ ಹೇಳಿ. ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಈ ಹಬ್ಬ ಅಂದರೆ ಅದೆನೋ ಸಂಭ್ರಮ ಸಡಗರ. ಈ ವರುಷದ ಹಬ್ಬಕ್ಕೆ ನೆಂಟರು ಬರುವ ಹಾಗೆ ಸೂರ್ಯಗ್ರಹಣ ಆಗಮಿಸುತ್ತಿದೆ. ಇದಕ್ಕೆ ಏನೆಲ್ಲಾ ಮಾಡಬೇಕು, ಏನೆಲ್ಲಾ ಮಾಡಬಾರದು ಎಂಬುದು ತಿಳಿಯೋಣ.

ಮುಂದೆ ಓದಿ ...
  • Share this:

ದೀಪಾವಳಿ (Dipavali) ಬಂತೆಂದರೆ ಎಲ್ಲೆಡೆ ಸಂಭ್ರಮ ಮತ್ತು ಸಡಗರ. ಈ ಹಬ್ಬ (Festival) ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ? ಕತ್ತಲನ್ನು ಕಳೆದು ಬೆಳಕನ್ನು ಸಾಂಕೇತಿಸುವ ಹಬ್ಬವೇ ದೀಪಾವಳಿ. 5 ದಿನಗಳ ಕಾಲ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ದೀಪವನ್ನು ಹಚ್ಚಿ ಪಠಾಕಿ ಸಿಡಿಸಿ ಗೌಜಿ , ಗಮ್ಮತ್ತನ್ನು ಮಾಡಲಾಗುತ್ತದೆ. ಈ ವರುಷದ ದೀಪಾವಳಿ ಇನ್ನೇನು ಕೆಲವೇ ದಿನಗಳಲ್ಲಿ ಬರಲಿದೆ. ಈಗಾಗಲೇ ಹಲವಾರು ಹಣತೆ, ಪಠಾಕಿಗಳ ಅಂಗಡಿಗಳು ಮಾರುಕಟ್ಟೆಯಲ್ಲಿ ಬಂದಾಗಿದೆ. ಆದರೆ ಹಬ್ಬ ಬಂದಂತೆ ಅದರ ಹಿಂದೆಯೇ ಸೂರ್ಯ ಗ್ರಹಣ ಕೂಡ ಬರುತ್ತಿದೆ. ಹಬ್ಬ ಹರಿದಿನಗಳಲ್ಲಿ ಗ್ರಹಣ (Eclipse) ಗೋಚರಿಸಿದರೆ ಶುಭವೋ, ಅಶುಭವೋ ಅಥವಾ ಈ ಹಬ್ಬವನ್ನು ಆಚರಿಸಬಹುದಾ ಹೀಗೆ ನಾನಾ ರೀತಿ ಪ್ರಶ್ನೆಗಳು ನಿಮ್ಮನ್ನು ಕಾಡಿರುತ್ತದೆ. ಇದಕ್ಕೆಲ್ಲಾ ಪರಿಹಾರಗಳನ್ನು(solutions) ಇಲ್ಲಿ ತಿಳಿಸಲಾಗಿದೆ.


ಹೌದು, ಈ ಬಾರಿ ಅಕ್ಟೋಬರ್​ನಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ಅಕ್ಟೋಬರ್​ 22,23,24,25 ಮತ್ತು 26 ದಿನಾಂಕದಲ್ಲಿ ಜರುಗಲಿದ್ದು, 27 ವರ್ಷಗಳ ನಂತರ ಗ್ರಹಣ ನಿಮಿತ್ತ ದೀಪಾವಳಿಯ ಮೂರನೇ ದಿನ ಗೋವರ್ಧನ ಪೂಜೆ ನಡೆಯಲಿದೆ.


ದೀಪಾವಳಿ ಯಾವ ದಿನ ಯಾವ ಪೂಜೆ?
ದೀಪಾವಳಿ 2022ನೇ ಸಾಲಿನಲ್ಲಿ 23ರಂದು ಧನತ್ರಯೋದಶಿ, 24 ನರಕ ಚತುರ್ದಶಿ, 25 ಅಮಾವಾಸ್ಯೆ ಲಕ್ಷ್ಮಿ ಪೂಜೆ ಹಾಗೂ 26ರಂದು ಬಲಿಪಾಡ್ಯಮಿ ದೀಪಾವಳಿ ಹೀಗೆ ನಾಲ್ಕು ದಿನಗಳ ಸಾಲು ಹಬ್ಬ ಇದೆ.


ಇದನ್ನೂ ಓದಿ: ದೀಪಾವಳಿಗೂ ಮೊದಲು ಮನೆಯಿಂದ ಈ ವಸ್ತುಗಳನ್ನು ತೆಗೆದು ಹಾಕಲು ಮರೆಯಬೇಡಿ


ಸೂರ್ಯಗ್ರಹಣದ ದಿನ ಹಬ್ಬ ಅಶುಭವೇ?
ಖಂಡಗ್ರಾಸ ಸೂರ್ಯಗ್ರಹಣವು 2022ನೇ ಸಾಲಿನಲ್ಲಿ ಕಾರ್ತಿಕ ಕೃಷ್ಣ ಪಕ್ಷದ ಅಮಾವಾಸ್ಯೆಯ ರಾತ್ರಿ ಅಕ್ಟೋಬರ್ 25ರಂದು ಮಂಗಳವಾರ ಸಂಭವಿಸುತ್ತಿದೆ. ಈ ದಿನ ನೆನಪಿಡಬೇಕಾದ ಅಂಶವೆಂದರೆ, ಯಾವುದೇ ಗ್ರಹಣ ಬಂದರೂ ಚಿಂತೆ ಪಡುವ ಅಗತ್ಯವಿಲ್ಲ. ಇದು ಸಿದ್ಧಿಗಳ ದೊಡ್ಡ ಹಬ್ಬವಾದ್ದರಿಂದ ಋಷಿಮುನಿಗಳು ಇದನ್ನು ಸಿದ್ಧಿಕಾಲ ಎಂದು ಹೆಸರಿಸಿದ್ದಾರೆ. ಗ್ರಹಣದ ಸಮಯದಲ್ಲಿ, ಭಗವಾನ್ ಶ್ರೀ ರಾಮನು ಗುರು ವಶಿಷ್ಠರಿಂದ ಮತ್ತು ಶ್ರೀ ಕೃಷ್ಣ ಗುರು ಸಂದೀಪನಿಂದ ದೀಕ್ಷೆ ಪಡೆದರು. ಸೂರ್ಯಾಸ್ತದ ನಂತರ ಸೂರ್ಯಗ್ರಹಣವು ಯಾವುದೇ ಪ್ರತಿಕೂಲ ಪರಿಣಾಮಗಳನ್ನು ಬೀರುವುದಿಲ್ಲ ಎಂದು ಹೇಳಲಾಗುತ್ತದೆ.


ಸೂರ್ಯ ಗ್ರಹಣದ ದಿನ ಲಕ್ಷ್ಮಿ ಪೂಜೆ/ವ್ರತ ಮಾಡಬಹುದೇ?
ಲಕ್ಷ್ಮಿ ಪೂಜೆ ಎಂಬುದು ಎಲ್ಲೆಡೆ ಅದ್ಧೂರಿಯಾಗಿ ಮಾಡಲ್ಪಡುವ ಹಬ್ಬ. ಅದರಲ್ಲಿಯೂ ವ್ಯಾಪಾರ, ಕಂಪೆನಿಗಳಲ್ಲಿ ಲಕ್ಷ್ಮಿ ಪೂಜೆಗಳನ್ನು ವಿಶೇಷವಾಗಿ ಮಾಡಲ್ಪಡುತ್ತದೆ. ಯಾಕೆಂದರೆ ಅಂದು ಧನಲಕ್ಷ್ಮಿ ವೃದ್ಧಿಸುವವಳು ಎಂಬ ನಂಬಿಕೆ ಇದೆ. ಹಾಗಾಗಿ ವಿಶೇಷವಾಗಿ ಪೂಜಿಸಲ್ಪಡುತ್ತದೆ.
ವೈದಿಕ ಜ್ಯೋತಿಷ್ಯದ ಪ್ರಕಾರ ಅಕ್ಟೋಬರ್‌ 24ರಂದು ನರಕ ಚತುರ್ದಶಿ ಇದ್ದು, ಇಂದೇ ಹಬ್ಬ ಅಚರಿಸುವುದು ಶುಭ, ಮಂಗಳವಾರ ಗ್ರಹಣ ಇರುವುದರಿಂದ ಲಕ್ಷ್ಮಿ ಪೂಜೆ, ವ್ರತ ಯಾವುದನ್ನು ಮಾಡಬಾರದು ಎನ್ನಲಾಗುತ್ತದೆ. ಅದರೆ ಈ ದಿನ ಅಶುಭ ಎಂದು ಅರ್ಥ ಅಲ್ಲ.


ಇಂದು ಸಂಜೆವರೆಗೂ ಗ್ರಹಣ ಇರುವುದರಿಂದ ಪೂಜೆ ಅಥವಾ ವ್ರತದ ಪ್ರಯೋಜನ ಸಿಗುವುದಿಲ್ಲ ಎನ್ನಲಾಗುತ್ತದೆ. ಕೇದಾರೇಶ್ವರ ನೋಮು ಅಥವಾ ದೀಪಾವಳಿ ನೋಮು ಮಾಡುವವರು ನಂತರದ ದಿನ ಬುಧವಾರ ಮಾಡುವುದು ಉತ್ತಮ ಎಂದು ವೈದಿಕ ಜ್ಯೋತಿಷ್ಯರು ಹೇಳುತ್ತಾರೆ. ಆದರೆ, ಗ್ರಹಣದ ಸಮಯದಲ್ಲಿ ದೇವರ ಸ್ಮರಣೆ, ವಿಷ್ಣು ಸಹಸ್ರನಾಮ, ಮಂತ್ರ ಪಠಣೆ ಮಾಡುವುದು ಧನಾತ್ಮಕ ಭಾವನೆ ತುಂಬುತ್ತದೆ ಎನ್ನಲಾಗುತ್ತದೆ.


ದೀಪಾವಳಿಯಂದು ಸೂರ್ಯ ಗ್ರಹಣ ವೈಜ್ಞಾನಿಕ ನಂಬಿಕೆ ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿಯಂತೆ ಸಾಮಾನ್ಯವಾಗಿ ಪ್ರತಿ ವರ್ಷ ದೀಪಾವಳಿ ಲಕ್ಷ್ಮಿ ಪೂಜೆಯು ಅಮವಾಸ್ಯೆಯ ಸಮಯದಲ್ಲಿ ಬರುತ್ತದೆ. ವೈಜ್ಞಾನಿಕವಾಗಿ ಹೇಳುವುದಾದರೆ, ಸೂರ್ಯ ಗ್ರಹಣವು ಅಮಾವಾಸ್ಯೆಯ ದಿನದಂದು ಮಾತ್ರ ಸಂಭವಿಸುತ್ತದೆ. ಆದ್ದರಿಂದ, ದೀಪಾವಳಿ ಪೂಜೆಯ ದಿನದಂದು ಸೂರ್ಯ ಗ್ರಹಣವು ಬರುವುದರಲ್ಲಿ ಆಶ್ಚರ್ಯವೇನಿಲ್ಲ. ಅದೂ ಅಲ್ಲದೆ ಆ ದಿನ ಸೂರ್ಯ ಗ್ರಹಣವು ಭೂಮಿಯ ಮೇಲ್ಮೈಯ ಒಂದು ಸಣ್ಣ ಭಾಗದಲ್ಲಿ ಮಾತ್ರ ಕಾಣುತ್ತದೆ ಎಂದು ತಜ್ಞರು ಹೇಳುತ್ತಾರೆ. ಕನ್ನಡಕದ ಮೂಲಕ ನಾವು ಕಾಣಬಹುದಾಗಿದೆ.


ಇದನ್ನೂ ಓದಿ: ಮನೆಯಲ್ಲಿ ಬಳಸುವ ಕರ್ಟನ್ ಬಣ್ಣದಿಂದ ಉಂಟಾಗುತ್ತೆ ವಾಸ್ತು ದೋಷ; ಎಲ್ಲಿ ಯಾವ ಪರದೆ ಬಳಸಬೇಕು?


ವೈದಿಕರ ಪ್ರಕಾರ ಯಾವಾಗ ಲಕ್ಷ್ಮಿ ಪೂಜೆ ಮಾಡ್ಬೋದು?
ಗ್ರಹಣ ಎನ್ನುವುದು ಭೌಗೋಳಿಕ ಕ್ರಿಯೆಯಾಗಿದ್ದು, ದೀಪಾವಳಿ ಲಕ್ಷ್ಮಿ ಪೂಜೆಯನ್ನು ಅಮವಾಸ್ಯೆಯ ದಿನವೇ ಮಾಡುವುದರಿಂದ ಈ ದಿನ ಸಂಜೆಯ ನಂತರ ಶುದ್ಧವಾಗಿ ಪೂಜೆ ಮಾಡಬಹುದು ಎಂದು ಕೆಲವು ವೈದಿಕರು ಹೇಳುತ್ತಾರೆ. ಸೂರ್ಯ ಗ್ರಹಣದ ದಿನ ಪ್ರದೋಷದ ಸಮಯದಲ್ಲಿ, ಸೂರ್ಯಾಸ್ತದ ನಂತರ ಲಕ್ಷ್ಮಿ ಪೂಜೆಯನ್ನು ಮಾಡಲು ಉತ್ತಮ ಸಮಯ. ಸೂರ್ಯ ದೇವರು ಸ್ಥಳದಲ್ಲಿಲ್ಲದ ಕಾರಣ, ಗ್ರಹಣ ಸಮಯದಲ್ಲಿ ಲಕ್ಷ್ಮಿ ಪೂಜೆಯನ್ನು ಮಾಡುವುದು ಸಹ ಕಾರ್ಯಸಾಧ್ಯವಲ್ಲ, ಅದ್ದರಿಂದ ಸಂಜೆಯ ನಂತರ ಮಾಡುವುದು ಉತ್ತಮ.


ಮುಸ್ಸಂಜೆಯ ನಂತರ ಲಕ್ಷ್ಮಿ ಪೂಜೆಯನ್ನು ನಡೆಸಲಾಗುತ್ತದೆ. ಆದ್ದರಿಂದ, ಗ್ರಹಣ ಪ್ರಾರಂಭವಾಗುವ ಮೊದಲು ಇದನ್ನು ಸಾಮಾನ್ಯವಾಗಿ ಮಾಡಬಹುದು, ಏಕೆಂದರೆ ಹೆಚ್ಚಿನ ಕಡೆಗಳಲ್ಲಿ ಸೂರ್ಯೋದಯದ ನಂತರ ಮರುದಿನ ಪ್ರದೋಷ ಮತ್ತು ಸೂರ್ಯ ಗ್ರಹಣದ ಆರಂಭದ ನಡುವೆ ಸುಮಾರು ಹನ್ನೆರಡು ಗಂಟೆಗಳ ವಿರಾಮ ಇರುತ್ತದೆ.


ಹೀಗಾಗಿ ಗ್ರಹಣದ ಸಮಯದಲ್ಲಿ ಯಾರಿಗೆಲ್ಲಾ ಧೋಷವಿದೆಯೋ ಅವರು ಗ್ರಹಣ ಕಳೆದ ನಂತರ ದಾನಗಳನ್ನು ಮಾಡಿ, ಸ್ನಾವನ್ನು ಮಾಡಿ ಹಬ್ಬಗಳನ್ನು ಮುಂದುವರೆಸಬಹುದಾಗಿದೆ ಎಂದು ಜೋತಿಷ್ಯರು ಹೇಳುತ್ತಾರೆ.

First published: