Swapna Shastra: ಸಾಮಾನ್ಯವಾಗಿ ರಾತ್ರಿ ಹೊತ್ತಿನಲ್ಲಿ ನಾವು ಗಾಢವಾದ ನಿದ್ರೆಯಲ್ಲಿದ್ದಾಗ (Sleep) ಏನೋ ಒಂದು ರೀತಿಯ ಕನಸುಗಳು (Dream) ನಮಗೆ ಬೀಳುತ್ತವೆ. ಹಾಗೆ ಬಿದ್ದ ಕನಸುಗಳು ಕೆಲವರಿಗೆ ಬೆಳಿಗ್ಗೆ ಹಾಸಿಗೆಯಿಂದ ಎದ್ದಾಗ ಅಲ್ಪ ಸ್ವಲ್ಪ ನೆನಪಿನಲ್ಲಿ ಉಳಿದರೆ, ಇನ್ನೂ ಕೆಲವರಿಗೆ ರಾತ್ರಿ ಹೊತ್ತಿನಲ್ಲಿ ಒಂದು ಕನಸು ಬಿದ್ದಿತ್ತು ಅಂತ ಅಷ್ಟೇ ನೆನಪಿರುತ್ತದೆ. ಆದರೆ ಆ ಕನಸಿನಲ್ಲಿ ಏನೆಲ್ಲಾ ಬಂದಿತ್ತು? ನಡೆದಿತ್ತು? ಅಂತ ಸ್ವಲ್ಪವೂ ನೆನಪಿರುವುದಿಲ್ಲ ಅಂತ ಹೇಳಬಹುದು. ಕೆಲವರು ಈ ಕನಸುಗಳನ್ನು (Dream Meaning) ನಿದ್ರೆಯಲ್ಲಿ ಬರುವ ಒಂದು ಕಲ್ಪನೆ ಅಥವಾ ಸುಪ್ತಮನಸ್ಸಿನಲ್ಲಿ ಅಡಗಿರುವಂತಹ ಭಾವನೆ ಅಂತೆಲ್ಲಾ ಹೇಳಿ ಅದನ್ನು ತಳ್ಳಿಹಾಕಿದರೆ, ಇನ್ನುಳಿದವರು ತಾವು ರಾತ್ರಿ ಹೊತ್ತು ಕಂಡ ಕನಸು ಏನು ಮತ್ತು ಅದರ ಅರ್ಥವೇನು ಅಂತ ತಿಳಿಯಲು ಬಯಸುತ್ತಾರೆ.
ಹಿಂದಿನ ರಾತ್ರಿ ಮಲಗಿದ್ದಾಗ ಕಂಡ ಕನಸು ಯಾವುದು ಅಂತ ಸರಿಯಾಗಿ ನೆನಪಿಸಿಕೊಳ್ಳುವ ಜನರಲ್ಲಿ ನೀವೂ ಒಬ್ಬರಾಗಿದ್ದೀರಾ? ಅದರ ಅರ್ಥವೇನೆಂದು ಯೋಚಿಸುತ್ತಾ ತುಂಬಾನೇ ತಲೆ ಕೆಡೆಸಿಕೊಂಡಿರುವಿರಾ? ಒಂದೊಂದು ಕನಸಿಗೆ ಒಂದೊಂದು ಅರ್ಥ ಇದೆ ಅಂತ ಕನಸಿನ ವ್ಯಾಖ್ಯಾನಕಾರರು ಹೇಳುತ್ತಾರೆ.
ಕೆಲವು ಕನಸುಗಳು ಸಾಮಾನ್ಯವಾಗಿರುತ್ತವೆ ಮತ್ತು ಪ್ರಪಂಚದಾದ್ಯಂತದ ಹೆಚ್ಚಿನ ಜನರು ನಿದ್ರೆಯಲ್ಲಿರುವಾಗ ಅವುಗಳನ್ನು ನೋಡುತ್ತಾರೆ.
ಇಂದು, ಈ ವೆಬ್-ಪೋಸ್ಟ್ ನಲ್ಲಿ ಮುರಿದ ಹಲ್ಲಿನ ಬಗ್ಗೆ ನೀವು ಕನಸು ಕಂಡಾಗ ಅದರ ಅರ್ಥ ಏನಾಗಿರುತ್ತದೆ ಅಂತ ತಿಳಿಯೋಣ. ಇದು ಸಹ ಸಾಮಾನ್ಯವಾಗಿ ಕಂಡು ಬರುವ ಕನಸುಗಳಲ್ಲಿ ಒಂದಾಗಿದೆ.
ಕನಸಿನಲ್ಲಿ ನಿಮ್ಮ ಹಲ್ಲು ಮುರಿದಿದ್ದರೆ, ಅದಕ್ಕೆ ಅರ್ಥ ಇದಿರಬಹುದು ನೋಡಿ
ಸರಿ, ಕಾಲ್ಪನಿಕವಾಗಿ ಹೇಳುವುದಾದರೆ, ನಿಮ್ಮ ಹಲ್ಲುಗಳಲ್ಲಿ ಒಂದು ಮುರಿದರೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ ಎಂದು ನೀವು ಎಂದಾದರೂ ಊಹಿಸಿದ್ದೀರಾ?
ಆಗ ನೀವು ಹಲ್ಲು ಮುರಿದಿದ್ದರಿಂದ ಬಾಯಿ ತೆಗೆದು ನಗಲು ಸಹ ನಿಮಗೆ ಮುಜುಗರವಾಗುತ್ತದೆ. ಮುರಿದ ಹಲ್ಲಿನ ಬಗ್ಗೆ ಕನಸು ಅಭದ್ರತೆ ಮತ್ತು ಮುಜುಗರವನ್ನು ಸೂಚಿಸುತ್ತದೆ.
ಉದಾಹರಣೆಗೆ, ನೀವು ಯಾವುದಾದರೂ ಒಂದು ಕಷ್ಟದ ಅಥವಾ ವಿಚಿತ್ರವಾದ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಳ್ಳುವ ಭಯದಲ್ಲಿದ್ದರೆ, ನಿಮ್ಮ ಹಲ್ಲು ಮುರಿದ ಹಾಗೆ ನಿಮಗೆ ಕನಸು ಬೀಳುತ್ತದೆ ಅಂತ ಕನಸಿನ ವ್ಯಾಖ್ಯಾನಕಾರರು ಹೇಳುತ್ತಾರೆ.
ಇದಲ್ಲದೆ, ನಿಮ್ಮ ದೌರ್ಬಲ್ಯ ಅಥವಾ ರಹಸ್ಯಗಳು ಬಹಿರಂಗಗೊಳ್ಳುತ್ತವೆ ಎಂದು ನೀವು ಹೆದರಿದರೆ, ನೀವು ಅಸುರಕ್ಷಿತ ಭಾವನೆ ಹೊಂದಬಹುದು. ನೀವು ಗೌರವವನ್ನು ಕಳೆದುಕೊಳ್ಳುವ ಭಯ ಹೊಂದಿದ್ದೀರಿ. ನಿಮ್ಮನ್ನು ಕಾಡುತ್ತಿರುವ ಯಾವುದಾದರೂ ವಿಷಯವಿದ್ದರೆ, ಆತ್ಮಾವಲೋಕನ ಮಾಡಿಕೊಳ್ಳಿ ಮತ್ತು ಭಯವನ್ನು ತೊಡೆದುಹಾಕಿ.
ಕಷ್ಟದ ಪರಿಸ್ಥಿತಿಯಲ್ಲಿ ಇರುವುದನ್ನು ಸೂಚಿಸುತ್ತೆ ಈ ಕನಸು
ಒಂದು ಒಗಟು ಬಿಡಿಸುವ ಆಟದಲ್ಲಿ ಒಂದು ತುಣುಕು ನಿಮಗೆ ಚೆನ್ನಾಗಿ ನೆನಪಿದ್ದು, ಅದರ ಇನ್ನೊಂದು ತುಣುಕನ್ನು ನೀವು ಮರೆತಿದ್ದೀರಿ ಅನ್ನೋ ಹಾಗೆ ನಿಮ್ಮ ಜೀವನದಲ್ಲಿ ಒಂದು ಕಷ್ಟಕರವಾದ ಪರಿಸ್ಥಿತಿಯಲ್ಲಿ ನೀವು ಇರಬಹುದು.
ಇದನ್ನೂ ಓದಿ: Zodiac Sign: ನಿಮ್ಮ ರಾಶಿಗನುಗುಣವಾಗಿ ಮನೆಯನ್ನ ವಿನ್ಯಾಸಗೊಳಿಸಿದ್ರೆ ಏನೆಲ್ಲಾ ಲಾಭಗಳಿವೆ ಗೊತ್ತಾ?
ಒಗಟಿನ ತುಣುಕುಗಳನ್ನು ಒಟ್ಟಿಗೆ ಸೇರಿಸಲು ನೀವು ಪ್ರಯತ್ನಿಸುತ್ತಿರಬಹುದು, ಆದರೆ ಒಂದು ಭಾಗದ ಒಗಟು ಎಂದರೆ ಸಮಸ್ಯೆಗೆ ಪರಿಹಾರ ದೊರಕದೆ ನೀವು ಗೊಂದಲಕ್ಕೊಳಗಾಗಿರಬಹುದು. ಅಂತಹ ಸನ್ನಿವೇಶದಲ್ಲಿ, ನಿಮಗೆ ಮಲಗಿದ್ದಾಗ ಮುರಿದ ಹಲ್ಲಿನ ಬಗ್ಗೆ ಕನಸು ಬೀಳಬಹುದು.
ಇಷ್ಟೇ ಅಲ್ಲದೆ, ನಿಮ್ಮ ಜೀವನದಲ್ಲಿ ಏನಾದರೂ ತೊಂದರೆ ಇದ್ದರೆ, ವಿಷಯಗಳನ್ನು ಕ್ರಮಬದ್ಧವಾಗಿ ತರುವ ಅಗತ್ಯವನ್ನು ನೀವು ಅನುಭವಿಸುತ್ತಿರಬಹುದು ಅಂತ ಈ ಕನಸು ಹೇಳುತ್ತದೆ.
ಒಟ್ಟಿನಲ್ಲಿ ಮುರಿದ ಹಲ್ಲಿನ ಬಗ್ಗೆ ಕನಸು ನೀವು ಯಾವುದೋ ಗಂಭೀರವಾದ ವಿಷಯಗಳನ್ನು ಸರಿಪಡಿಸಲು ಪ್ರಯತ್ನಿಸುತ್ತಿರುವ ಬಗ್ಗೆ ಒಂದು ಸ್ಪಷ್ಟವಾದ ಸೂಚಕವಾಗಿರಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ