ಸಾಮಾನ್ಯವಾಗಿ ಈಗೆಲ್ಲಾ ಜನರು ತಮ್ಮ ಮನೆಯನ್ನು ಕಟ್ಟಿಸುವಾಗ ಪೂರ್ತಿಯಾಗಿ ವಾಸ್ತು ಪ್ರಕಾರವೇ ಇರಬೇಕೆಂದು ವಾಸ್ತುಶಾಸ್ತ್ರಜ್ಞರ ಸಲಹೆಗಳನ್ನು (Tips) ತೆಗೆದುಕೊಂಡು ಕಟ್ಟಿಸುವುದನ್ನು ನಾವು ನೋಡಿರುತ್ತೇವೆ. ಹಾಗೆ ವಾಸ್ತು ಪ್ರಕಾರ ಮನೆಯನ್ನು ಕಟ್ಟಿಸಿದರೆ ಮನೆಯಲ್ಲಿ (Home) ಒಂದು ರೀತಿಯ ಧನಾತ್ಮಕ ಶಕ್ತಿಯು ಶಾಶ್ವತವಾಗಿ ನೆಲೆಸುತ್ತದೆ ಎಂಬುದು ಅವರ ಅಭಿಪ್ರಾಯವಾಗಿರುತ್ತದೆ. ಕೆಲವೊಂದು ಬಾರಿ ಅನೇಕರು ಹೇಳುವುದನ್ನು ಕೇಳಿ ಮನೆಯನ್ನು ಕಟ್ಟಿಸಿದಾಗ ವಾಸ್ತುಶಾಸ್ತ್ರದಲ್ಲಿ (Vastu) ಸ್ವಲ್ಪ ಚಿಕ್ಕಪುಟ್ಟ ದೋಷಗಳಾಗಿರುತ್ತವೆ. ಹೀಗಾದಾಗ ಮನೆಯಲ್ಲಿ ಮತ್ತೆ ಆ ಧನಾತ್ಮಕ ಶಕ್ತಿಯನ್ನು (Positive Energy) ನೆಲೆಸುವಂತೆ ಮಾಡಲು ಏನು ಮಾಡುವುದು ಅಂತ ಅನೇಕರು ತಲೆ ಕೆಡೆಸಿಕೊಂಡಿರುತ್ತಾರೆ ಅಂತ ಹೇಳಬಹುದು.
ವಾಸ್ತುಶಾಸ್ತ್ರವು ಒಂದು ಭಾರತೀಯ ವೈದಿಕ ವ್ಯವಸ್ಥೆಯಾಗಿದ್ದು, ಇದು ನಿರ್ಮಿತ ಪರಿಸರದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಕ್ರಮವನ್ನು ಖಚಿತಪಡಿಸುತ್ತದೆ. ವಾಸ್ತುಶಿಲ್ಪ ಮತ್ತು ವಿನ್ಯಾಸ ಕ್ಷೇತ್ರದಲ್ಲಿ ಈಗ ವಾಸ್ತುಶಾಸ್ತ್ರವನ್ನು ವಿಶ್ವದಾದ್ಯಂತ ಅನುಸರಿಸಲಾಗುತ್ತಿದೆ. ಸಂಸ್ಕೃತದಲ್ಲಿ ವಾಸ್ತು ಎಂಬ ಪದದ ಅರ್ಥ 'ವಾಸಸ್ಥಾನ' ಎಂದು. ಶಾಂತಿ, ಸಂತೋಷ, ಆರೋಗ್ಯ ಮತ್ತು ಸಂಪತ್ತನ್ನು ಹೊಂದಲು, ಅನೇಕರು ತಮ್ಮ ಮನೆಗಳನ್ನು ನಿರ್ಮಿಸುವಾಗ ವಾಸ್ತುವಿನ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ನಂಬುತ್ತಾರೆ.
ಇದು ಸಕಾರಾತ್ಮಕ ವಾಸ್ತು ರಚಿಸುವ ಮೂಲಕ ವಾಸಿಸುವ ಮನೆಯಲ್ಲಿ ರೋಗಗಳು, ಖಿನ್ನತೆ ಮತ್ತು ವಿಪತ್ತುಗಳನ್ನು ತಪ್ಪಿಸುವ ಮಾರ್ಗಗಳನ್ನು ಸಹ ಹೇಳುತ್ತದೆ. ಆದ್ದರಿಂದ, ನೀವು ನಕಾರಾತ್ಮಕ ಶಕ್ತಿಗಳನ್ನು ದೂರವಿಡಲು ಮತ್ತು ನಿಮ್ಮ ಮನೆಗೆ ಸಕಾರಾತ್ಮಕ ಶಕ್ತಿಗಳನ್ನು ಸ್ವಾಗತಿಸಲು ಬಯಸುವ ಮನೆಮಾಲೀಕರಾಗಿದ್ದರೆ ಇಲ್ಲಿದೆ ಮಾಹಿತಿ
ಇದನ್ನೂ ಓದಿ: Horoscope Today, 15 December 2022: ರಾಜಕೀಯ ಸಂಪರ್ಕ ಬೆಳೆಯುತ್ತದೆ, ಧನಲಾಭ ಆಗಲಿದೆ! ಇಲ್ಲಿದೆ ಓದಿ ದ್ವಾದಶ ರಾಶಿಗಳ ಫಲಾಫಲ
1. ನಿಮ್ಮ ಮನೆಯ ಹೊರಗಿನ ಸ್ಥಳವನ್ನು ಸ್ವಚ್ಛವಾಗಿರಿಸಿಕೊಳ್ಳಿ
ನಿಮ್ಮ ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ಹೊರ ಹಾಕಲು ನಿಮ್ಮ ಮನೆಗೆ ಸ್ವಚ್ಛವಾದ ದ್ವಾರವು ಬಹಳ ಮುಖ್ಯವಾಗುತ್ತದೆ. ಆದ್ದರಿಂದ, ನಿಮ್ಮ ಮನೆಯ ಪ್ರವೇಶ ದ್ವಾರವನ್ನು ನಿಯಮಿತವಾಗಿ ಸ್ವಚ್ಛಗೊಳಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
2. ಮನೆಯಲ್ಲಿ ವಿಂಡ್ ಚೈಮ್ ಗಳನ್ನು ಬಳಸಿ
ನಿಮ್ಮ ಮನೆಯಲ್ಲಿ ವಿಂಡ್ ಚೈಮ್ ಗಳ ಬಳಕೆಯು ನಕಾರಾತ್ಮಕ ಶಕ್ತಿಯನ್ನು ಆವರಣದಿಂದ ಹೊರಗಿಡುತ್ತದೆ. ಟಿಂಕಿಂಗ್ ಚೈಮ್ ಗಳ ಸಂಗೀತವು ನಕಾರಾತ್ಮಕ ಶಕ್ತಿಯನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ಧನಾತ್ಮಕ ಶಕ್ತಿಯ ಹರಿವನ್ನು ಉತ್ತೇಜಿಸುತ್ತದೆ.
3. ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತೆ ಸಮುದ್ರದ ಉಪ್ಪು
ಸಮುದ್ರದ ಉಪ್ಪು ಅನೇಕ ರೋಗಗಳನ್ನು ಗುಣಪಡಿಸುತ್ತದೆ ಎಂದು ತಿಳಿದು ಬಂದಿದೆ. ಎಲ್ಲಾ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳಲು ನಿಮ್ಮ ಮನೆಯ ಪ್ರತಿಯೊಂದು ಮೂಲೆಯಲ್ಲೂ ಸಮುದ್ರದ ಉಪ್ಪಿನ ಬಟ್ಟಲನ್ನು ಇರಿಸಿ. ಅಲ್ಲದೆ, ನೀವು ಸಮುದ್ರದ ಉಪ್ಪಿನ ಉಂಡೆಗಳನ್ನು ಸಹ ನಿಮ್ಮ ಮನೆಯ ಮೂಲೆಗಳಲ್ಲಿ ಇಡಬಹುದು.
4. ವಿಗ್ರಹಗಳು, ಫೋಟೋಗಳು ಮತ್ತು ಚಿಹ್ನೆಗಳನ್ನು ಬಳಸಿ
ನಿಮ್ಮ ಮನೆಯಲ್ಲಿ ಧಾರ್ಮಿಕ ವಿಗ್ರಹಗಳು, ಫೋಟೋಗಳು ಮತ್ತು ಚಿಹ್ನೆಗಳನ್ನು ಇಡುವುದು ನಕಾರಾತ್ಮಕತೆಯನ್ನು ನಿಮ್ಮ ಮನೆಯಿಂದ ದೂರವಿಡಲು ಸಹಾಯ ಮಾಡುತ್ತದೆ.
5. ನಕಾರಾತ್ಮಕ ಶಕ್ತಿಯನ್ನು ನಿಂಬೆಹಣ್ಣಿನಿಂದ ತೆಗೆದು ಹಾಕಿ
ನೀರಿನಲ್ಲಿ ಒಂದು ನಿಂಬೆ ಹಣ್ಣನ್ನು ಹಾಕಿ ಇಡುವುದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ಇದು ಓಡಿಸುತ್ತದೆ. ಇದು ಪರಿಣಾಮಕಾರಿಯಾಗಿರುವಂತೆ ಖಚಿತಪಡಿಸಿಕೊಳ್ಳಲು, ಪ್ರತಿ ಶನಿವಾರ ಆ ಲೋಟದಲ್ಲಿರುವ ನೀರನ್ನು ಬದಲಾಯಿಸಿರಿ.
6. ಉತ್ತಮ ವಾಸನೆ ಉತ್ತಮ ಭಾವನೆಯನ್ನು ತರುತ್ತದೆ
ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಕೆಲವು ಧೂಪದ್ರವ್ಯ ಕಡ್ಡಿಗಳು, ಮಣ್ಣಿನ ದೀಪಗಳು ಮತ್ತು ಮೇಣದ ಬತ್ತಿಗಳನ್ನು ಬೆಳಗಿಸಿ. ಮನೆಯಲ್ಲಿ ಸೇರಿರುವ ನಕಾರಾತ್ಮಕ ಶಕ್ತಿಯನ್ನು ಇವು ತೆಗೆದು ಹಾಕುತ್ತವೆ.
7. ಗೋಡೆಗೆ ಕನ್ನಡಿಯನ್ನು ನೇತುಹಾಕಿ
ಬಾಹ್ಯಾಭಿಮುಖವಾಗಿ ನಿಮ್ಮ ಮನೆಯ ಮುಂಭಾಗದ ಗೋಡೆಯ ಮೇಲೆ ಪೀನ ದರ್ಪಣವನ್ನು ಇರಿಸುವುದು ಸಹ ಋಣಾತ್ಮಕ ಶಕ್ತಿಯನ್ನು ಹೊಡೆದು ಓಡಿಸುವಲ್ಲಿ ತುಂಬಾನೇ ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ