• ಹೋಂ
  • »
  • ನ್ಯೂಸ್
  • »
  • ಭವಿಷ್ಯ
  • »
  • Medical Astrology: ಇನ್ಮುಂದೆ ವೈದ್ಯಕೀಯ ಜ್ಯೋತಿಷ್ಯ ಎನ್ನುವ ಹೊಸಾ ಪಠ್ಯಕ್ರಮ! ಆಯುರ್ವೇದ ಕೋರ್ಸ್​ನಲ್ಲಿ ಈ ಸಬ್ಜೆಕ್ಟ್ ಸೇರ್ಪಡೆಗೆ ಸಿದ್ಧತೆ

Medical Astrology: ಇನ್ಮುಂದೆ ವೈದ್ಯಕೀಯ ಜ್ಯೋತಿಷ್ಯ ಎನ್ನುವ ಹೊಸಾ ಪಠ್ಯಕ್ರಮ! ಆಯುರ್ವೇದ ಕೋರ್ಸ್​ನಲ್ಲಿ ಈ ಸಬ್ಜೆಕ್ಟ್ ಸೇರ್ಪಡೆಗೆ ಸಿದ್ಧತೆ

ಗೂಗಲ್ ಚಿತ್ರ

ಗೂಗಲ್ ಚಿತ್ರ

Medical Astrology: ಗ್ರಹಗಳಂತಹ ದೂರದ ವಸ್ತುಗಳು ಮಾನವ ಶರೀರಶಾಸ್ತ್ರ ಅಥವಾ ಮನೋವಿಜ್ಞಾನದ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ ಮತ್ತು ಗ್ರಹಗಳ ನಿಯೋಜನೆಯ ಜ್ಞಾನವು ವೈದ್ಯಕೀಯ ಮೌಲ್ಯವನ್ನು ಹೊಂದಿಲ್ಲ ಎಂದು ವಾದ ಮಾಡಿದೆ.

  • Share this:

ಬ್ರೇಕ್ಥ್ರೂ ಸೈನ್ಸ್ ಸೊಸೈಟಿ ( BSS ), ಭಾರತದಾದ್ಯಂತದ ವಿಜ್ಞಾನಿಗಳು ಮತ್ತು ಸಂಶೋಧಕರ ಒಂದು ತಂಡ, ನ್ಯಾಷನಲ್ ಕೌನ್ಸಿಲ್ ಫಾರ್ ಇಂಡಿಯನ್ ಸಿಸ್ಟಮ್ಸ್ ಆಫ್ ಮೆಡಿಸಿನ್ (NCISM) ಘೋಷಿಸಿದ ವೈದ್ಯಕೀಯ ಜ್ಯೋತಿಷ್ಯ ಕೋರ್ಸ್ (Medical Astrology) ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ಗ್ರಹಗಳಂತಹ ದೂರದ ವಸ್ತುಗಳು ಮಾನವ ಶರೀರಶಾಸ್ತ್ರ ಅಥವಾ ಮನೋವಿಜ್ಞಾನದ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ ಮತ್ತು ಗ್ರಹಗಳ ನಿಯೋಜನೆಯ ಜ್ಞಾನವು ವೈದ್ಯಕೀಯ ಮೌಲ್ಯವನ್ನು ಹೊಂದಿಲ್ಲ ಎಂದು ವಾದ ಮಾಡಿದೆ.


ಇದು ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಪರಿಣಾಮ ಬೀರಲಿದೆ


ಅಲ್ಲದೇ, ಪಠ್ಯಕ್ರಮದಲ್ಲಿ ಅಳವಡಿಸಲಾಗಿರುವ ಇಂತಹ ಅವೈಜ್ಞಾನಿಕ ನಂಬಿಕೆ ವ್ಯವಸ್ಥೆಯು ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೇ ಇದು ವೈದ್ಯಕೀಯ ಅಭ್ಯಾಸವನ್ನೇ ಹಾಳುಮಾಡುತ್ತದೆ ಎಂಬ ಅಭಿಪ್ರಾಯವನ್ನು ಬ್ರೇಕ್ಥ್ರೂ ಸೈನ್ಸ್ ಸೊಸೈಟಿ ವ್ಯಕ್ತಪಡಿಸಿದೆ.


ಭಾರತೀಯ ಶಿಕ್ಷಣ ವ್ಯವಸ್ಥೆಯು ತುಂಬಾ ಹದಗೆಟ್ಟಿದೆ, ಈಗ ಯಾವುದೂ ಅಸಾಧ್ಯವಲ್ಲ ಎಂಬಂತೆ ಕಾಣುತ್ತದೆ. ಅದಕ್ಕೆ ಇತ್ತೀಚಿನ ಉದಾಹರಣೆಯೆಂದರೆ ಎನ್ಸಿಐಎಸ್ಎಂ ಬ್ಯಾಚುಲರ್ ಆಫ್ ಆಯುರ್ವೇದಿಕ್ ಮೆಡಿಸಿನ್ ಮತ್ತು ಸರ್ಜರಿ ಕೋರ್ಸ್ ಅಡಿಯಲ್ಲಿ ವೈದ್ಯಕೀಯ ಜ್ಯೋತಿಷ್ಯದಲ್ಲಿ ಕೋರ್ಸ್ ಅನ್ನು ಸಹ ನೀಡುತ್ತರುವುದು ಕೂಡ ಒಂದು ಎಂದು ಬಿಎಸ್ಎಸ್ ಹೇಳಿಕೆಯಲ್ಲಿ ತಿಳಿಸಿದೆ.


ಇಷ್ಟೇ ಅಲ್ಲದೇ, ಈ ಕೋರ್ಸ್ಗೆ 1,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿರುವ ವರದಿಗಳನ್ನು ಬಿಎಸ್ಎಸ್ ಉಲ್ಲೇಖಿಸಿದ್ದು, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ ಉಪಕುಲಪತಿ ಡಾ ಸಂಜೀವ್ ಶರ್ಮಾ ಅವರು ಈ ಕೋರ್ಸ್ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. ಏಕೆಂದರೆ ಒಬ್ಬ ವ್ಯಕ್ತಿಯ ಪ್ರಕಾರ ಗ್ರಹಗಳು ಮತ್ತು ನಕ್ಷತ್ರಪುಂಜಗಳಲ್ಲಿನ ಬದಲಾವಣೆಗಳು ಹಾಗೂ ನಟಾಲ್ ಚಾರ್ಟ್ ಮಾನವರ ಆರೋಗ್ಯ ಮತ್ತು ಮನಸ್ಸಿನ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ಧಾರೆ.


ಇದನ್ನೂ ಓದಿ: ಮಹಾಲಕ್ಷ್ಮಿ ರಾಜಯೋಗದಿಂದ ಅದೃಷ್ಟವೋ ಅದೃಷ್ಟ, ಈ 3 ರಾಶಿಯವರಿಗೆ ದಿಢೀರ್ ಧನಲಾಭ


ಇನ್ನು ಭಾರತೀಯ ಜ್ಯೋತಿಷ್ಯ ವಿಜ್ಞಾನಗಳ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಸುನಿಲ್ ಕುಮಾರ್ ಶರ್ಮಾ, ಈ ಕ್ರಮವನ್ನು ಸ್ವಾಗತಿಸಿದ್ದು, ವಾತ-ಪಿತ್ತ ಮತ್ತು ಕೆಮ್ಮಿನ ಅಸಮತೋಲನದಿಂದ ಅನೇಕ ರೋಗಗಳು ಉಂಟಾಗುತ್ತವೆ, ಇದನ್ನು ಗ್ರಹಗಳ ಸ್ಥಾನವನ್ನು ಅಧ್ಯಯನ ಮಾಡುವ ಮೂಲಕ ಗುರುತಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.


ಆಧಾರವಿಲ್ಲದ ನಂಬಿಕೆ ಈ ಜ್ಯೋತಿಷ್ಯ


ಆದರೆ ಜ್ಯೋತಿಷ್ಯವು ಯಾವುದೇ ವೈಜ್ಞಾನಿಕ ಆಧಾರವಿಲ್ಲದ ನಂಬಿಕೆ ಆಗಿದೆ ಎಂದು ಬಿಎಸ್ಎಸ್ ಪ್ರತಿಪಾದಿಸಿದೆ. ಹಾಗೆಯೇ, ಆಯುರ್ವೇದದಲ್ಲಿ
ಕಂಡುಬರುವ ಯಾವುದೇ ವೈಜ್ಞಾನಿಕ ವಿಚಾರದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು BSS ಗಂಭೀರ ವೈಜ್ಞಾನಿಕ ಸಂಶೋಧನೆ ಮಾಡಲು ಸಲಹೆ ನೀಡಿದ್ದು, ಇದರ ಜೊತೆಗೆ ಜ್ಯೋತಿಷ್ಯದ ಸಂಪೂರ್ಣ ಅವೈಜ್ಞಾನಿಕ ನಂಬಿಕೆಯನ್ನು ಶೈಕ್ಷಣಿಕ ವ್ಯವಸ್ಥೆಯೊಂದಿಗೆ ಅದನ್ನು ಬೆರೆಸುವುದು ಆಯುರ್ವೇದಕ್ಕೆ ಹಾನಿ ಮಾಡುತ್ತದೆ ಎಂದು BSS ಪುನರುಚ್ಚರಿಸಿದೆ.


ಇದರ ಜೊತೆಗೆ ಈ ಬೆಳವಣಿಗೆ ಆಶ್ಚರ್ಯಕರವೇನಲ್ಲ, ಪ್ರಸ್ತುತ ಆಡಳಿತದಲ್ಲಿ ಭಾರತೀಯ ಶಿಕ್ಷಣ ಯಾವ ರೀತಿ ನಡೆಯುತ್ತಿದೆ ಹಾಗೂ ಅದರ ಹಾದಿಯನ್ನು ಗಮನಿಸಿದರೆ ಅನೇಕ ವಿದ್ಯಾರ್ಥಿಗಳು ಉದ್ಯೋಗ ಪಡೆಯಲು ಏಕೈಕ ಅವಕಾಶವೆಂದರೆ ಇಂತಹ ವಿಚಿತ್ರ ವಿಷಯಗಳನ್ನು ಕಲಿಯುವುದು ಎಂದು ತಿಳಿದಿದ್ದಾರೆ. ಭಾರತೀಯ ಶಿಕ್ಷಣದ ಈ ತಪ್ಪು ಹಾದಿಯು ಮುಂದಿನ ದಿನಗಳಲ್ಲಿ ನಮ್ಮ ರಾಷ್ಟ್ರವನ್ನು ಸರಿಪಡಿಸಲಾಗದಂತೆ ಹಾನಿಗೊಳಿಸುತ್ತದೆ ಎಂದು BSS ಎಚ್ಚರಿಕೆ ಸಹ ನೀಡಿದೆ.


ಇದನ್ನೂ ಓದಿ: ಈ ವಾಸ್ತು ಟಿಪ್ಸ್ ಫಾಲೋ ಮಾಡಿದ್ರೆ ಧನಲಕ್ಷ್ಮಿ ನಿಮ್ಮ ಮನೆಯಲ್ಲೇ ನೆಲೆಸೋದು ಗ್ಯಾರಂಟಿ


ಇನ್ನು BSS ಬಿಡುಗಡೆ ಮಾಡಿರುವ ಹೇಳಿಯಲ್ಲಿ ಭಾರತೀಯ ನಾಗರಿಕರು ಈ ಅಸಂಬದ್ಧ ವಿಚಾರಕ್ಕೆ ಬೆಲೆ ಕೊಡದೇ ನಮ್ಮ ದೇಶದಲ್ಲಿ ಶಿಕ್ಷಣ ಮತ್ತು ವೈಜ್ಞಾನಿಕ ಚಿಂತನೆಯನ್ನು ರಕ್ಷಿಸಲು ಮುಂದೆ ಬಂದು ಪ್ರತಿಭಟನೆಗಳನ್ನು ಮಾಡಬೇಕು ಎಂದು ಸಹ ಒತ್ತಾಯಿಸಿದೆ.

Published by:Sandhya M
First published: