ಕೊಡಗಿನಲ್ಲಿ Temple Town ಯೋಜನೆಗೆ ತೀವ್ರ ವಿರೋಧ; ಕಾರಣ ಇದು...

ಭಾಗಮಂಡಲ ಸೇರಿದಂತೆ ಈ ಪಂಚಾಯಿತಿ ವ್ಯಾಪ್ತಿಯ ಹಲವು ಹಳ್ಳಿಗಳ ಜನರು ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ

ಭಾಗಮಂಡಲದ ಭಂಗಡೇಶ್ವರ 

ಭಾಗಮಂಡಲದ ಭಂಗಡೇಶ್ವರ 

 • Share this:
  ಕೊಡಗು (ಜ. 19) : ಈಗಾಗಲೇ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸುಪರ್ದಿಯಲ್ಲಿ ನಡೆಯುತ್ತಿರುವ ಕೊಡಗಿನ ಪ್ರಸಿದ್ಧ ಭಾಗಮಂಡಲದ (Bhagamandala ) ಭಂಗಡೇಶ್ವರ  ಮತ್ತು ತಲಕಾವೇರಿ ದೇವಾಲಯಗಳ ವ್ಯಾಪ್ತಿಯಲ್ಲಿ ದೇವಾಲಯ ನಗರಿ (Temple Town) ಯೋಜನೆ ಜಾರಿ ಮಾಡಿ ಎನ್ನುವುದು ವಿವಿಧ ಸಂಘಟನೆಗಳ ದಶಕಗಳ ಬೇಡಿಕೆ. ಹೀಗಾಗಿಯೇ ಜಿಲ್ಲಾಧಿಕಾರಿಯವರು ಈ ಯೋಜನೆ ಜಾರಿ ಮಾಡುವುದಕ್ಕೆ ಕಳೆದ ವಾರವಷ್ಟೇ ವಿವಿಧ ಸಂಘ ಸಂಸ್ಥೆಗಳ ಜೊತೆಗೆ ಒಂದು ಸುತ್ತಿನ ಸಭೆ ನಡೆಸಿದ್ದರು. ಆದರೆ ಭಾಗಮಂಡಲ ಸೇರಿದಂತೆ ಈ ಪಂಚಾಯಿತಿ ವ್ಯಾಪ್ತಿಯ ಹಲವು ಹಳ್ಳಿಗಳ ಜನರು ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಜೊತೆಗೆ ಅದು ಸಾಂಸ್ಕೃತಿಕ ವೈರುಧ್ಯಕ್ಕೂ ಕಾರಣವಾಗಿದೆ. ಹಾಗಾದರೆ ಟೆಂಪಲ್ ಟೌನ್ ಯೋಜನೆ ಜಾರಿಗೆ ವಿರೋಧ ವ್ಯಕ್ತವಾಗುತ್ತಿರುವುದೇಕೆ.

  ಈ ಕಾರರಣಕ್ಕೆ ವಿರೋಧ

  ಕೊಡಗಿನ ಐತಿಹಾಸಿಕ ದೇವಾಲಯವಾಗಿರುವ ಭಾಗಮಂಡಲದ ಭಗಂಡೇಶ್ವರ ಮತ್ತು ತಲಕಾವೇರಿ ವ್ಯಾಪ್ತಿಯಲ್ಲಿ ಇನ್ನಷ್ಟು ಅಭಿವೃದ್ಧಿಗೊಳಿಸುವುದು ಈ ಯೋಜನೆಯ ಉದ್ದೇಶ. ಜೊತೆಗೆ ಯೋಜನೆ ಭಾಗವಾಗಿ ಈ ಎರಡು ದೇವಾಲಯಗಳ ಸುತ್ತಮುತ್ತ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಮದ್ಯ ಮಾರಾಟ, ಮೀನು ಮಾಂಸ ಮಾರಾಟ ಅಥವಾ ಅಡುಗೆ ಮಾಡುವುದು ಜೊತೆಗೆ ಯಾವುದೇ ಹೋಂಸ್ಟೇ, ರೆಸಾರ್ಟ್ ಮುಂದಾವುಗಳನ್ನು ನಡೆಸುವುದು ನಿಷಿದ್ಧವಾಗುತ್ತವೆ. ಇದೇ ಅಂಶಗಳು ಸ್ಥಳೀಯರು ಟೆಂಪನ್ ಟೌನ್ ಯೋಜನೆಯನ್ನು ತೀವ್ರವಾಗಿ ವಿರೋಧಿಸುವುದಕ್ಕೆ ಕಾರಣವಾಗಿರುವುದು.  ಕಟ್ಟು ನಿಟ್ಟಿನ ನಿಯಮ ಪಾಲನೆ ಮಾಡಬೇಕು

  ಕೊಡಗಿನ ರಾಜರ ಕಾಲದಿಂದಲೂ ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಕಟ್ಟುನಿಟ್ಟಾಗಿ ನೀತಿ ನಿಯಮಗಳನ್ನು ಪಾಲನೆ ಮಾಡಿಕೊಂಡು ಬರಲಾಗುತ್ತಿದೆ. ಅದರಲ್ಲೂ ತಲಕಾವೇರಿ ಜಾತ್ರೆಗೆ 12 ದಿನಗಳಿರುವಾಗಲೇ ಕಟ್ಟುಬಿದ್ದಲ್ಲಿ ಅಲ್ಲಿಂದ ಜಾತ್ರೆ ಮುಗಿಯುವವರೆಗೆ ಯಾರು ಮೀನು ಮಾಂಸ ಯಾವುದನ್ನೂ ಮಾಡುವುದಿಲ್ಲ. ಆ ಕಟ್ಟುಪಾಡುಗಳನ್ನು ಈಗಲೂ ಸ್ಥಳೀಯರು ಚಾಚುತಪ್ಪದೆ ನಡೆಸಿಕೊಂಡು ಹೋಗುತ್ತಿದ್ದೇವೆ. ಆದರೂ ಈಗ ಯಾವುದೋ ಸಂಘಟನೆಗಳ ಮುಖಂಡರ ಮಾತು ಕೇಳಿ ದೇವಾಲಯ ನಗರಿ (ಟೆಂಪನ್ ಟೌನ್) ಯೋಜನೆ ಜಾರಿ ಮಾಡಿ ಸ್ಥಳೀಯರ ಬದುಕಿಗೆ ಕಷ್ಟ ತಂದೊಡ್ಡುವುದು ಸರಿಯಲ್ಲ ಎಂದು ಸ್ಥಳೀಯರಾದ ಭರತ್ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

  ಇದನ್ನು ಓದಿ: ದಾರಿಯಲ್ಲಿ ಅಚಾನಕ್​ ಆಗಿ ಹಣ ಸಿಕ್ಕಿದ್ರೆ ಏನು ಅರ್ಥ ಗೊತ್ತಾ?

  ಬದುಕಿನ ಹಕ್ಕಿಗೆ ಚ್ಯುತಿ

  ಈ ಕುರಿತು ಭಾಗಮಂಡಲದ ಗ್ರಾಮಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಭಾಗಮಂಡಲ ಮತ್ತು ಸುತ್ತಮುತ್ತ ವಿವಿಧ ಧರ್ಮಗಳ ಜನರು ಬದುಕುತ್ತಿದ್ದಾರೆ. ಈ ನಿಯಮಗಳ ಜಾರಿಗೆ ತಂದರೆ ಅವರ ಬದುಕಿನ ಹಕ್ಕುಗಳನ್ನು ಕಿತ್ತುಕೊಂಡಂತೆ ಆಗುತ್ತದೆ ಎನ್ನೋದು ಈ ಯೋಜನೆಯನ್ನು ಸ್ಥಳೀಯರು ವಿರೋಧಿಸುತ್ತಿರುವುದಕ್ಕೆ ಮುಖ್ಯ ಕಾರಣ. ಭಾಗಮಂಡಲ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಇರುವವರೆಲ್ಲಾ ಚಿಕ್ಕ ಭೂಮಿಯನ್ನು ಹೊಂದಿದ್ದು ಇತ್ತೀಚೆಗೆ ಚಿಕ್ಕಪುಟ್ಟ ವ್ಯಾಪಾರಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಯೋಜನೆ ಜಾರಿಯಾದಲ್ಲಿ ಅವೆಲ್ಲವೂ ಬಂದ್ ಆಗಿ ಸ್ಥಳೀಯರ ಬದುಕು ಮತ್ತಷ್ಟು ಕಷ್ಟಕರವಾಗುತ್ತದೆ ಎನ್ನೋದು ಸ್ಥಳೀಯರ ಅಳಲು.

  ಇದನ್ನು ಓದಿ: ಸೂರ್ಯೋದಯಕ್ಕೆ ಮುನ್ನ ಚಂದಿರನ ಬೆಳಕಿನಲ್ಲಿ ನಡೆದ ಗವಿಸಿದ್ದೇಶ್ವರ ಜಾತ್ರೆ

  ಧಾರ್ಮಿಕ ಆಚರಣೆಗೆ ಧಕ್ಕೆ

  ಇದೆಲ್ಲದಕ್ಕಿಂತ ಮುಖ್ಯವಾಗಿ ಭಗಂಡೇಶ್ವರ ದೇವಾಲಯದ ಸಮೀಪವೇ ಚಾಮುಂಡಿ ದೇವಾಲಯವಿದ್ದು, ತಲಕಾವೇರಿ ಜಾತ್ರೆ ಮುಗಿದ ಬಳಿಕ ಚಾಮುಂಡಿ ಕೋಲ ನಡೆಯುತ್ತದೆ. ಆಗ ಚಾಮುಂಡಿಗೆ ಕೋಳಿ ಬಲಿ ಕೊಡಲಾಗುತ್ತದೆ. ಇನ್ನು ನಿಡ್ಯಮಲೆ ಕುಟುಂಬಸ್ಥರು ಗುಳಿಗಪ್ಪನ ಕೋಲ ನಡೆಸುತ್ತಾರೆ. ಯಾರದೋ ಮಾತುಕೇಳಿ ಟೆಂಪಲ್ ಟೌನ್ ಜಾರಿ ಮಾಡಿದರೆ ಈ ಧಾರ್ಮಿಕ ಆಚರಣೆಗೆ ಅಡ್ಡಿಯಾಗುತ್ತದೆ. ಇದು ಧಾರ್ಮಿಕ ಸಂಘರ್ಷಕ್ಕೆ ಕಾರಣವಾಗುತ್ತದೆ. ಹೀಗಾಗಿ ಈ ಯೋಜನೆ ಬೇಡ ಎಂದು ಸ್ಥಳೀಯರು ಪಂಚಾಯಿತಿ ಗ್ರಾಮ ಸಭೆಯಲ್ಲಿ ಒಮ್ಮತದಿಂದ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನೋದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಅಭಿಪ್ರಾಯಿಸಿದ್ದಾರೆ. ಮತ್ತೊಂದು ಸುತ್ತಿನ ಮಾತುಕತೆ ನಡೆಸಿ ಯೋಜನೆ ರೂಪಿಸಬೇಕೆಂದಿದ್ದ ಜಿಲ್ಲಾಡಳಿತ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆಯೋ ಕಾದು ನೋಡಬೇಕಾಗಿದೆ.
  Published by:Seema R
  First published: