ಮಕ್ಕಳು ವಿದ್ಯಾರಂಭ ಮಾಡುವ ಮುನ್ನ ತಪ್ಪದೇ ಈ ಕಾರ್ಯ ಮಾಡಿ

ಮಕ್ಕಳ ಭವಿಷ್ಯ ಉಜ್ವಲ ವಾಗಿಸುವ ಈ ವಿದ್ಯಾರಂಭ ಸಂಸ್ಕಾರ ಕಾರ್ಯವನ್ನು ಮಕ್ಕಳ ಜನ್ಮ ಮೂಹರ್ತ ಹಾಗೂ ನಕ್ಷತ್ರಗಳ ಸ್ಥಾನಗಳ ಆಧಾರದ ಮೇಲೆ ನಿಗದಿಪಡಿಸಲಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಹಿಂದೂ ಧರ್ಮದಲ್ಲಿ ಯಾವುದೇ ಕಾರ್ಯ ಮಾಡುವ ಮುನ್ನ ಅದಕ್ಕೆ ಶಾಸ್ತ್ರೋಕ್ತವಾದ ಪೂಜೆ ಮೂಲಕ ಆರಂಭಿಸುವುದು ಪ್ರತೀತಿ. ಅದರಲ್ಲೂ ಮಗುವು ಕಲಿಕೆ ಆರಂಭಿಸಲು ಮುಂದಾದಾಗ ಅದಕ್ಕೆ ಸರಸ್ವತಿ (sarswati), ಗಣೇಶನ (Ganesha) ಪೂಜೆ ನಡೆಸಿ ವಿದ್ಯಾರಂಭ ಯಶಸ್ವಿಯಾಗಿ ಆಗುವಂತೆ ಬೇಡಿ ಕೊಳ್ಳುತ್ತೇವೆ. ಈ ಹಿಂದೆಲ್ಲಾ ಮಕ್ಕಳಿಗೆ ಐದು ವರ್ಷದ ಸಮಯದಲ್ಲಿ ಈ ಕಲಿಕೆ ಪ್ರಾರಂಭ ಮಾಡುತ್ತಿದ್ದರು. ಆದರೆ, ಈಗ ಮಕ್ಕಳಿಗೆ ಮೂರು ವರ್ಷದಿಂದಲೇ ಕೆಲವರು ಕಲಿಕೆ ಆರಂಭಿಸಲು ಶುರು ಮಾಡುತ್ತಾರೆ. ಬೇಬಿ ಸಿಟ್ಟಿಂಗ್​, ನರ್ಸರಿಗೆ ಕಳುಹಿಸುವ ಮುನ್ನ ನಡೆಸುವ ಈ ಕಾರ್ಯ ಹೆಚ್ಚು ಪ್ರಾಶಸ್ತ್ಯ.

  ಶಿಕ್ಷಣದ ಅಧಿದೇವತೆಯಾದ ಸರಸ್ವತಿ ದೇವಿಯು ಎಲ್ಲಾ ಅರವತ್ತನಾಲ್ಕು ದೇವಾಲಯಗಳ ಪ್ರಧಾನ ದೇವತೆಯಾಗಿದ್ದಾಳೆ. ಸರಸ್ವತಿ ಪೂಜೆಯನ್ನು ಆಚರಿಸುವ ಈ ಸಮಯದಲ್ಲಿ, ಮಕ್ಕಳು ಪೂಜೆ ಮಾಡುವಾಗ ತಮ್ಮ ಶೈಕ್ಷಣಿಕ ಜ್ಞಾನದ ನೋಟ್‌ಬುಕ್‌ಗಳನ್ನು ಇಡಬೇಕು.

  ಬಿಳಿ ವಸ್ತುಗಳನ್ನು ಅರ್ಪಿಸಿ

  ಮಗುವನ್ನು ಶಾಲೆಗೆ ಸೇರಿಸುವ ಮುನ್ನ ಮಗುವಿನೊಂದಿಗೆ ಸರಸ್ವತಿ ಪೂಜೆ ಮಾಡುವುದು ಉತ್ತಮ. ಸರಸ್ವತಿ ದೇವಿಗೆ ಬಿಳಿ ಬಣ್ಣವು ತುಂಬಾ ಸೂಕ್ತವಾಗಿದೆ. ಮನೆಯಲ್ಲಿ ಸರಸ್ವತಿ ಚಿತ್ರಕ್ಕೆ ಸಂಜೆ ಬಿಳಿ ಹೂವುಗಳನ್ನು ಸಮರ್ಪಿಸುವುದು ತುಂಬಾ ಒಳ್ಳೆಯದು.

  ಅದರಲ್ಲಿಯೂ  ಮಕ್ಕಳು ಶಾಲೆಗೆ ಹೊರಡಲು ಸಿದ್ಧವಾಗುತ್ತಿದ್ದಂತೆ ಈ ವಿದ್ಯಾರಂಭ ಗಳ ಕಾರ್ಯಕ್ಕೆ ಮುಂದಾಗುತ್ತೇವೆ ಮಗುವಿನ ಶಿಕ್ಷಣ ಮತ್ತು ಜ್ಞಾನವನ್ನು ಹೆಚ್ಚಿಸುವ ಈ ವಿದ್ಯಾರಂಭ ಕಾರ್ಯವನ್ನು ಶುಭ ಮೂಹರ್ತದಲ್ಲಿ ನಡೆಸಿದರೇ ಎಲ್ಲವೂ ಒಳಿತಾಗಲಿದೆ ಎಂಬ ನಂಬಿಕೆ. ಹಾಗಾದ್ರೆ  ಮಕ್ಕಳ ಈ ವಿದ್ಯಾರಂಭಕ್ಕೆ ಯಾವುದು ಶುಭ ಮುಹೂರ್ತ ಎಂಬುದಕ್ಕೆ ಇಲ್ಲಿದೆ ವಿವರ

  ಇದನ್ನು ಓದಿ: ಮೃತ ವ್ಯಕ್ತಿಗಳ ಈ ವಸ್ತುಗಳನ್ನು ನೆನಪಿಗಾಗಿ ಜೋಪಾನ ಮಾಡಬೇಡಿ

  ಮಕ್ಕಳ ಭವಿಷ್ಯ ಉಜ್ವಲ ವಾಗಿಸುವ ಈ ವಿದ್ಯಾರಂಭ ಸಂಸ್ಕಾರ ಕಾರ್ಯವನ್ನು ಮಕ್ಕಳ ಜನ್ಮ ಮೂಹರ್ತ ಹಾಗೂ ನಕ್ಷತ್ರಗಳ ಸ್ಥಾನಗಳ ಆಧಾರದ ಮೇಲೆ ನಿಗದಿಪಡಿಸಲಾಗುತ್ತದೆ. ಈ ಅನ್ವಯ ಕೆಲವು ವಿಶೇಷ ದಿನಾಂಗಗಳು, ಮುಹೂರ್ತಗಳು ಇಲ್ಲಿವೆ

  ನಕ್ಷತ್ರಗಳು: ಯಾವುದೇ ಕಾರ್ಯವನ್ನು ಯಾವ ನಕ್ಷತ್ರದಲ್ಲಿ ಆರಂಭಿಸುವುದು ಒಳಿತು ಎಂಬುದು ಮುಖ್ಯ. ಈ ಹಿನ್ನಲೆ ಅಶ್ವಿನಿ, ಮೃಗಶಿರಾ, ರೋಹಿಣಿ, ಆರಿದ್ರಾ, ಪುನರ್ವಾಸು, ಪುಶ್ಯ, ಪೂರ್ವಾ ಪುಲ್ಗುಣಿ, ಉತ್ತರ ಪಲ್ಗುಣಿ, ರೇವತಿ ಪೂರ್ವಾ ಆಷಾಢ, ಉತ್ತರಾ ಆಶಾಢಮ ಚಿತ್ರ, ಸ್ವಾವಾ, ಪ್ರವಾದಿ, ಉತ್ತರ ಭದ್ರಪದ ಮತ್ತು ಶತಾಭಿಷ ನಕ್ಷತ್ರಗಳು ಯಶಸ್ಸನ್ನು ತರುತ್ತದೆ ಎಂಬ ನಂಬಿಕೆ ಇದೆ.

  ಇದನ್ನು ಓದಿ: ತಪ್ಪಾದ ಜಾಗದಲ್ಲಿ ಈ ವಿಂಡ್​ ಚೈಮ್​ ಹಾಕಿದರೆ ಸಂಕಷ್ಟ ತಪ್ಪಿದ್ದಲ್ಲ

  ಯಾವ ದಿನ ಉತ್ತಮ: ಭಾನುವಾರ, ಸೋಮವಾರ , ಗುರುವಾರ ಮತ್ತು ಶುಕ್ರವಾರ

  ಯಾವ ತಿಥಿ: ವಿಶೇಷ ತಿಥಿ ಎಂದರೆ ಚೈತ್ರಾ-ವೈಶಾಖದ ಶುಕ್ಲ ತೃತೀಯ ತಿಥಿ, ಮಾಘಾ ಮಾಸದ ಶುಕ್ಲ ಪಕ್ಷ ಸಪ್ತಮಿ ತಿಥಿ ಮತ್ತು ಫಲ್ಗುಣ ತಿಂಗಳ ಶುಕ್ಲ ಪಕ್ಷ ತೃತೀಯ ತಿಥಿ

  ರಾಶಿ: ವೃಷಭ ರಾಶಿ, ಸಿಂಹ ರಾಶಿ, ಕನ್ಯಾ ರಾಶಿ, ಧನುರಾಶಿ ವಿದ್ಯಾರಂಭಕ್ಕೆ ಮುಹೂರ್ತಕ್ಕೆ ತೆಗೆದುಕೊಳ್ಳಲಾಗುತ್ತದೆ.
  Published by:Seema R
  First published: