Badami Banashankari : ಕೋವಿಡ್ ಕರಿನೆರಳು: ಐತಿಹಾಸಿಕ ಬಾದಾಮಿ ಬನಶಂಕರಿ ಜಾತ್ರೆ ರದ್ದು

ಈ ವರ್ಷ ಜನವರಿ 09 ರಿಂದ 19ರ ವರೆಗೆ ಜಾತ್ರಾ ಮಹೋತ್ಸವ ನಡೆಸಲು ನಿರ್ಧರಿಸಲಾಗಿದ್ದು, ಸರಳವಾಗಿ ಪೂಜಾ-ಕೈಂಕಾರ್ಯ ನಡೆಯಲಿದೆ

ಬಾದಾಮಿ ಬನಶಂಕರಿ ಜಾತ್ರೆ

ಬಾದಾಮಿ ಬನಶಂಕರಿ ಜಾತ್ರೆ

 • News18
 • Last Updated :
 • Share this:
  ಬಾಗಲಕೋಟೆ (ಜ. 8):  ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ (Covid) ಸಂಖ್ಯೆ ಹೆಚ್ಚುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ಟಫ್ ರೂಲ್ಸ್ ಗಳನ್ನ ಜಾರಿಗೆ ತಂದಿದೆ. ಸದ್ಯ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಜಾರಿಯಲ್ಲಿದ್ದು, ನಾಡಿನ ಶಕ್ತಿ ಪೀಠಗಳಲ್ಲಿ ಒಂದಾದ ಐತಿಹಾಸಿಕ ಬಾದಾಮಿ ಬನಶಂಕರಿ ದೇವಿ (Badami Banashankari ) ಜಾತ್ರಾ ಮಹೋತ್ಸವಕ್ಕೆ ಕೊರೊನಾ ಕರಿನೆರಳು ಆವರಿಸಿದೆ. 

  ರಾಜ್ಯದಲ್ಲಿ ಈಗಾಗಲೇ ಸೋಂಕು ತಡೆಗೆ ಸರ್ಕಾರ ವಾರಂತ್ಯ ಕರ್ಪ್ಯೂ ಜಾರಿ ಮಾಡಿದ ಹಿನ್ನಲೆ ಈ ಬಾರಿ ಕೂಡ ಐತಿಹಾಸಿಕ ಬಾದಾಮಿಯ ಬನಶಂಕರಿ ದೇವಿ ಜಾತ್ರಾ ಮಹೋತ್ಸವ ರದ್ದು ಮಾಡಲಾಗಿದೆ. ಈ ಬಗ್ಗೆ ದೇವಸ್ಥಾನದ ಪ್ರಧಾನ ಅರ್ಚಕರಾಗಿರುವ  ಅರವಿಂದ್ ಪೂಜಾರಿ ಮಾಹಿತಿ ನೀಡಿದ್ದಾರೆ.  ಬಾಗಲಕೋಟೆ ಜಿಲ್ಲೆಯ ಬಾದಾಮಿ ಬನಶಂಕರಿ ದೇವಿ ದೇವಸ್ಥಾನದ ಜಾತ್ರಾ ಮಹೋತ್ಸವನ್ನ  ಪ್ರತಿ ವರ್ಷ ಅದ್ದೂರಿಯಾಗಿ ಮಾಡಲಾಗುತ್ತಿತ್ತು. ತಿಂಗಳು ಕಾಲ ನಡೆಯುತ್ತಿದ್ದ ಜಾತ್ರೆ ರಾಜ್ಯದಲ್ಲಿ ಹೆಸರು ವಾಸಿಯಾಗಿದೆ. ಆದರೆ, ಈ ಬಾರಿ ಸೋಂಕು ಮತ್ತೆ ಹೆಚ್ಚಿರುವ ಹಿನ್ನಲೆ ಈ ಜಾತ್ರೆ ರದ್ದು ಮಾಡುವುದು ಅನಿವಾರ್ಯವಾಗಲಿದೆ ಎಂದಿದ್ದಾರೆ.  ಹಗಲು ರಾತ್ರಿ ಒಂದು ತಿಂಗಳ ಪಯ೯ಂತರ ನಡೆಸಲಾಗುತ್ತಿತ್ತು.

  ಈ ಬಾರಿ ಕೂಡ ಜಾತ್ರೆ ರದ್ದು

  ಜಾತ್ರೆಗೆ ರಾಜ್ಯ ಹೊರರಾಜ್ಯದಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದರು. ಈ ವರ್ಷ ಜನವರಿ 09 ರಿಂದ 19ರ ವರೆಗೆ ಜಾತ್ರಾ ಮಹೋತ್ಸವ ನಡೆಸಲು ನಿರ್ಧರಿಸಲಾಗಿದೆ. ಆದರೆ, ರಾಜ್ಯದಲ್ಲಿ ಇದೀಗ ಕೊರೋನಾ ರೂಪಾಂತರಿ ಸೋಂಕು ಓಮೈಕ್ರಾನ್​ ಕೂಡ ಹೆಚ್ಚಾಗಿದೆ.  ಮದುವೆ ಸಮಾರಂಭ ಸೇರಿದಂತೆ ಎಲ್ಲ ಕಾರ್ಯಕ್ರಮಗಳು ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ಕೋವಿಡ್ ನಿಯಮಗಳ ಪ್ರಕಾರ ಬನಶಂಕರಿ ದೇವಿ ಜಾತ್ರೆಯನ್ನ ಸರಳವಾಗಿ ಆಚರಣೆ ಮಾಡಲು ನಿರ್ಧಾರ ಮಾಡಲಾಗಿದೆ. ಅದ್ದೂರಿಯಾಗಿ ನೆರವೇರುತ್ತಿದ್ದ ರಥೋತ್ಸವ ರದ್ದು ಪಡಿಸಿ ಭಕ್ತರಿಗೆ ನಿರ್ಬಂಧ ಹಾಕಲಾಗಿದೆ.  ಸದ್ಯ ಧಾರ್ಮಿಕ ವಿಧಾನ, ಪೂಜಾ ಕೈಂಕರ್ಯಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ದೇವಸ್ಥಾನದಲ್ಲಿ 50 ಜನರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಾಸ್ಕ್, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಡ್ಡಾಯಗೊಳಿಸಲಾಗಿದೆ.

  ಇದನ್ನು ಓದಿ: ಹಿತಶತ್ರುಗಳ ವಿಚಾರದಲ್ಲಿ ಈ ವಿಷಯ ಅಪ್ಪಿ-ತಪ್ಪಿ ಮರೆಯಬೇಡಿ

  ಲಕ್ಷಾಂತರ ಸಂಖ್ಯೆ ಭಕ್ತರು ಸೇರುತ್ತಿದ್ದ ರಾಜ್ಯದ ಅತೀ ದೊಡ್ಡ ಜಾತ್ರೆ..! 

  ಬಾದಾಮಿ ಬನಶಂಕರಿ ದೇವಿ ಜಾತ್ರೆ ಹೊಸ ವರ್ಷದ ಮೊದಲ ಜಾತ್ರೆಯಾಗಿದ್ದು, ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಸೇರುತ್ತಿದ್ದರು. ರಾಜ್ಯ ಮಾತ್ರವಲ್ಲದೆ ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಿದ್ದರು. ಒಂದು ತಿಂಗಳ ಕಾಲ ನಡೆಯುವ ಜಾತ್ರೆಯಲ್ಲಿ ಹಲವು ವಿಶೇಷತೆಗಳಿದ್ದು, ನಾಟಕ ಪ್ರದರ್ಶನ, ಜಾನುವಾರು ಜಾತ್ರೆ, ರೈತರ ಕೃಷಿ ಉಪಕರಣಗಳು ಮಾರಾಟ, ಮನೆ ಬಳಕೆ ವಸ್ತುಗಳ ಮಾರಾಟ ಸೇರಿದಂತೆ ಹಲವಾರು ವ್ಯಾಪಾರ ವಹಿವಾಟುಗಳು ಇಲ್ಲಿ ಭರ್ಜರಿಯಾಗಿ ನಡೆಯುತ್ತಿದ್ದವು. ಹಗಲು ರಾತ್ರಿ ಎನ್ನದೇ ದಿನದ 24 ಗಂಟೆಯೂ ಜನರಿಂದ ತುಂಬಿ ತುಳುಕುತ್ತಿತ್ತು. ವಿವಿಧ ಜಿಲ್ಲೆಗಳಿಂದ ರೈತ ಕುಟುಂಬಗಳು ಎತ್ತಿನಗಾಡಿ ಟ್ರ್ಯಾಕ್ಟರ್ ಗಳಲ್ಲಿ ಕುಟುಂಬ ಸಮೇತ ಜಾತ್ರೆಗೆ ಬಂದು ಸಂಭ್ರಮ ಪಡುತ್ತಿದ್ದರು. ಆದ್ರೆ ಈ ಬಾರಿ ಜಾತ್ರೆಗೆ ಕೊರೊನಾ ಕರಿ ನೆರಳು ಆವರಿಸಿ ಜನರಿಗೆ ನಿರಾಸೆ ಮೂಡಿಸಿದೆ.

  ಇದನ್ನು ಓದಿ: ಪೂಜೆ-ಪುನಸ್ಕಾರ ಬೇಡ, ಷಷ್ಠಿ ದಿನ ಈ ದಾನ ಮಾಡಿ ಸಾಕು; ಕಷ್ಟ ಪರಿಹಾರ

  ಈ ಬಾರಿ ಜಾತ್ರೆ ನಿಷೇಧದಿಂದ ಬರೋಬ್ಬರಿ 5ಕೋಟಿಗೂ ಹೆಚ್ಚು ನಷ್ಟವಾಗುತ್ತಿದೆ.  ಹದಿನೈದು ದಿನ ಮುಂಚಿತವಾಗಿ ದೇವಿ ದೇವಸ್ಥಾನ ಬಂದ್ ಮಾಡಿದ್ದು, ದೇಗುಲ ಸುತ್ತಲೂ ಇರುವ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ. ಇದ್ರಿಂದ ನಿತ್ಯ ದುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ವ್ಯಾಪಾರಸ್ಥರ ಹೊಟ್ಟೆ ಬರೆ ಬಿದ್ದಂತಾಗಿದೆ. ವ್ಯಾಪಾರ ಮೇಲೆ ಅವಲಂಬಿತವಾಗಿದ್ದ ಕುಟುಂಬಸ್ಥರು ಸಾಲಮಾಡಿ ಜೀವನ ನಡೆಸುತ್ತಿದ್ದಾರೆ. ಇನ್ನು ಜಾತ್ರೆಯಲ್ಲಿ ಕೊರೊನಾ ನಿಯಮಗಳು ಉಲ್ಲಂಘನೆ ಆಗದಂತೆ ತಾಲೂಕಾ ಆಡಳಿತ ಹಾಗೂ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಲಿದೆ.

  (ವರದಿ: ಮಂಜುನಾಥ್ ತಳವಾರ)
  Published by:Seema R
  First published: