Drushti Dosha: ಕಣ್ಣು ದೃಷ್ಟಿ ಏನಕ್ಕೆ ತಗುಲುತ್ತದೆ; ದೃಷ್ಟಿ ದೋಷಕ್ಕೆ ಪರಿಹಾರ ಏನು?

ಕಣ್ಣು ದೃಷ್ಟಿಯಿಂದ ಆಗುವ ಹಾನಿ ತಪ್ಪಿಸಲು ಮತ್ತು ನಮ್ಮ ಶಕ್ತಿಯನ್ನು ಮರಳಿ ಪಡೆಯಲು, ನಮ್ಮ ಮೇಲೆ ಇತರೆ ಕೆಟ್ಟ ಪರಿಣಾಮಗಳು ಬೀಳದಂತೆ ನಡೆಯಲು ಹಲವಾರು ಕ್ರಮಗಳನ್ನು ನಮ್ಮ ಪೂರ್ವಜರು ಅನುಸರಿಸಿಕೊಂಡು ಬಂದಿದ್ದಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ದೃಷ್ಟಿ ದೋಷ ಕೆಡುಕನ್ನು ಮಾಡುತ್ತದೆ. ಮನುಷ್ಟರ ದೃಷ್ಟಿ ದೋಷಕ್ಕೆ ಕಲ್ಲು ಕೂಡ ಸಿಡಿಯುತ್ತದೆ. ಇದೇ ಕಾರಣಕ್ಕೆ ಮನೆಯಲ್ಲಿ ದೃಷ್ಟಿ (Drushti Dosha) ನಿವಾರಣೆ ಮಾಡಬೇಕು ಎಂಬ ಮಾತು  ಅಜ್ಜಿಯರ ಬಾಯಲ್ಲಿ ಸಾಮಾನ್ಯವಾಗಿ ಕೇಳಿರುತ್ತೇವೆ. ಕೆಲವರ ಕೆಟ್ಟ ಕಣ್ಣಿನಿಂದ (Bad Eye Effect) ಅನಾಹುತ ಆಗಬಹುದು. ಇದೇ ಕಾರಣಕ್ಕೆ ಮಕ್ಕಳು, ಸುಂದರ ವ್ಯಕ್ತಿಗಳು,  ಮನೆ, ವ್ಯಾಪಾರದಲ್ಲಿ ಹಾಕುವ ಕಣ್ಣು ಕೆಟ್ಟದು. ಅಂತಹ ಕ ಸಂದರ್ಭದಲ್ಲಿ ಸಂಜೆ ಸಮಯದಲ್ಲಿ ದೃಷ್ಟಿ ನಿವಾಳಿಸಲಾಗುತ್ತದೆ.

  ಚೆನ್ನಾಗಿ ಓಡುತ್ತಾ ಆಡುವ ಮಗು ಕೂಡ ಇದ್ದಕ್ಕಿದ್ದಂತೆ ಅಳಲು ಪ್ರಾರಂಭಿಸಿದಾಗ , ಹೊಸದಾಗಿ ಕಟ್ಟಿದ ಮನೆಯಲ್ಲಿ ಆರ್ಥಿಕ ಸಂಕಷ್ಟ, ಸುಂದರವಾಗಿದ್ದ ವ್ಯಕ್ತಿ- ವಸ್ತುವನ್ನು ದಿಟ್ಟಿಸಿ ನೋಡಿದಾಗ ಆರೋಗ್ಯ ಸಮಸ್ಯೆ ಅಥವಾ ಖಿನ್ನತೆ, ಬೇರೆ ಸಮಸ್ಯೆಗೆ ಒಳಗಾಗುತ್ತಾರೆ. ಅನ್ಯೋನ್ಯವಾಗಿದ್ದ ದಂಪತಿ ದೂರಾದಾಗ ಇವೆಲ್ಲವೂ ಕಣ್ಣಿನ ದೋಷದಿಂದ ಉಂಟಾಗುತ್ತದೆ ಎಂದು ನಂಬಲಾಗಿದೆ. ಇವುಗಳನ್ನು ತೆಗೆದುಹಾಕಲು ಕೆಲವು ಸರಳ ಹಂತಗಳು ಅಥವಾ ಪರಿಹಾರಗಳಿವೆ.

  ಕಣ್ಣು ದೃಷ್ಟಿಯಿಂದ ಆಗುವ ಹಾನಿ ತಪ್ಪಿಸಲು ಮತ್ತು ನಮ್ಮ ಶಕ್ತಿಯನ್ನು ಮರಳಿ ಪಡೆಯಲು, ನಮ್ಮ ಮೇಲೆ ಇತರೆ ಕೆಟ್ಟ ಪರಿಣಾಮಗಳು ಬೀಳದಂತೆ ನಡೆಯಲು ಹಲವಾರು ಕ್ರಮಗಳನ್ನು ನಮ್ಮ ಪೂರ್ವಜರು ಅನುಸರಿಸಿಕೊಂಡು ಬಂದಿದ್ದಾರೆ

  ಏನಕ್ಕೆ ದೃಷ್ಟಿ ತಗುಲುವುದು
  ಜಾತಕದಲ್ಲಿ ಸೂರ್ಯನು ಉಚ್ಛ ಸ್ಥಾನದಲ್ಲಿದ್ದಾನ ಯಾವುದೇ ದೃಷ್ಟಿ ತಗುಲುವುದಿಲ್ಲ. ಒಂದು ವೇಳೆ ಸೂರ್ಯನ ಮೇಲೆ ಶನಿ, ರಾಹು ಸೇರಿದಂತೆ ಅಶುಭ ಗ್ರಹಗಳ ದೃಷ್ಟಿ ಬಿದ್ದಾಗ ಈ ರೀತಿ ದೃಷ್ಟಿದೋಷ ಉಂಟಾಗುತ್ತದೆ. ಜಾತಕದ 2ನೇ ಭಾವ ಹಾಗೂ 2ನೇ ಅಧಿಪತಿಯ ಮೇಲೆ ಶನಿ, ರಾಹು, ಮಂಗಳ ಹಾಗೂ 6ನೇ ಭಾವ ಅಥವಾ 6ನೇ ಅಧಿಪತಿಯ ಸಂಬಂಧ ಇದ್ದರೆ ಇಂಥವರ ಯಾರಾದರೂ ಕಣ್ಣು ಹಾಕಿದರೆ, ಶಪಿಸಿದರೆ ಅದು ಅವರಿಗೆ ತಗುಲುತ್ತದೆ.

  ಇದನ್ನು ಓದಿ: ಸಾವನ್ನಪ್ಪಿದ ಅಪ್ಪ-ಅಮ್ಮ ಪದೇ ಪದೇ ಕನಸಿನಲ್ಲಿ ಬಂದರೆ ಏನು ಅರ್ಥ; ಏನು ಹೇಳತ್ತೆ ಸ್ವಪ್ನಾ ಶಾಸ್ತ್ರ!

  ದೃಷ್ಟಿ ನಿವಾಳಿಸುವುದು ಹೇಗೆ

  • ಕೆಲವರ ಕೆಟ್ಟ ಕಣ್ಣು ಬೀಳದಂತೆ ದೊಡ್ಡ ಕನ್ನಡಿಗಳನ್ನು ಮನೆಯ ಬಾಗಿಲ ಮುಂದೆ ನೇತು ಹಾಕುತ್ತಾರೆ.

  • ಮಕ್ಕಳು, ವ್ಯಕ್ತಿಗಳಿಗೆ ಹಿರಿಯರು ದೃಷ್ಟಿ ನಿವಾಳಿಸುತ್ತಾರೆ. ಸುಣ್ಣದ ನೀರಿಗೆ ಅರಿಶಿನ ಹಾಕಿ ಅದನ್ನ ನಿವಾಳಿಸಿ, ಮೂರು ದಾರಿಯ ಮಧ್ಯೆ ಸುರಿಯುತ್ತಾರೆ. ಈ ರೀತಿ ಸುಣ್ಣದ ನೀರಿಗೆ ಅರಿಶಿನ ಹಾಕಿದಾಗ ಅದು ಎಷ್ಟು ಕೆಂಪು ಬಣ್ಣಕ್ಕೆ ತಿರುಗುತ್ತದೆ ಎಂಬುದರ ಮೇಲೆ ಎಷ್ಟು ದೃಷ್ಟಿ ತಗುಲಿದೆ ಎಂದು ನಿರ್ಧಾರಿಸಲಾಗುವುದು. ಈ ಸುಣ್ಣವು ನಂಜುನಿರೋಧಕ ಮತ್ತು ಸೋಂಕುನಿವಾರಕವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ
   ಕೆಲವರು ಕಲ್ಲು ಉಪ್ಪನ್ನು ತೆಗೆದುಕೊಂಡು ಅದನ್ನು ಹರಿಯುವ ನೀರಿನಲ್ಲಿ 3 ಬಾರಿ ಹಾಕುತ್ತಾರೆ.


  ಇದನ್ನು ಓದಿ: ಹೊಸ ವರ್ಷಕ್ಕೆ ಈ ವಸ್ತುಗಳನ್ನು ಮನೆಗೆ ತನ್ನಿ, ಸಮೃದ್ದಿ ಹೆಚ್ಚತ್ತೆ

  • ಇದರ ಒಟ್ಟಿಗೆ ಸಾಸಿವೆ, ಉಪ್ಪು, ಮೂರು ಮೆಣಸಿನಕಾಯಿ ಎಲ್ಲವನ್ನೂ ಸೇರಿಸಿ ಪೂರ್ವಾಭಿಮುಖವಾಗಿ ಮೂರು ಬಾರಿ ಕುಳಿತು ದೃಷ್ಟಿ ನಿವಾಳಿಸುವ ವ್ಯಕ್ತಿಗೆ ಮೂರು ಸುತ್ತು ಸುತ್ತಿಸಿ ಅದನ್ನು ಬೆಂಕಿಗೆ ಹಾಕುತ್ತಾರೆ. ಇದನ್ನು ಮಂಗಳವಾರ ಅಥವಾ ಭಾನುವಾರದಂದು ಮಾತ್ರ ಮಾಡಬೇಕು.

  • ಮನೆಗೆ ದುಷ್ಟಶಕ್ತಿಗಳು ಪ್ರವೇಶವಾಗದಂತೆ, ದುಷ್ಟಬುದ್ಧಿಯ ಪ್ರಭಾವದಿಂದ ದೂರವಿರಲು ಮತ್ತು ದುಷ್ಟ ಕಣ್ಣುಗಳಿಂದ ದೂರವಿರಲು ನೀರು ಕುಂಬಳಕಾಯಿಯನ್ನು ನಮ್ಮ ಮನೆಯ ಹೊಸ್ತಿಲಲ್ಲಿ ನೇತು ಹಾಕಬಹುದು.

  • ಒಂದು ನಿಂಬೆ ಮತ್ತು 5 ಹಸಿರು ಮೆಣಸಿನಕಾಯಿಯನ್ನು ಹಗ್ಗದ ಮೇಲೆ ನೇತು ಹಾಕಬಹುದು. ಇದನ್ನು ಮಂಗಳವಾರದಂದು ಮಾಡಬಹುದು.

  • ಮನೆ ಕಟ್ಟಡಗಳಿಗೆ ಕೆಟ್ಟ ದೃಷ್ಟಿ ತಾಗದಿರಲೆಂದು ಒಣಗಿದ ಹುಲ್ಲಿನಿಂದ ತಯಾರು ಮಾಡಿದ ದೃಷ್ಟಿ ಗೊಂಬೆಯನ್ನು ಓಡಾಡುವರ ಕಣ್ಣಿಗೆ ಬೀಳುವಂತೆ ನಿಲ್ಲಿಸಿರಬೇಕು ಇಲ್ಲವೆ ಮನೆಯ ಮುಂದೆ ನೇತು ಹಾಕಿರಬೇಕು.

  Published by:Seema R
  First published: