Weekly Horoscope: ಸಿಂಹರಾಶಿಯವರಿಗೆ ಈ ವಾರ ಶುಭ ಸುದ್ಧಿಗಳು ಹೆಚ್ಚು, ನಿಮ್ಮ ರಾಶಿಯ ಈ ವಾರದ ಭವಿಷ್ಯ ಏನಿದೆ ನೋಡಿ?..

Astrology: ಈ ವಾರ ದ್ವಾದಶ ರಾಶಿಗಳಲ್ಲಿ ಏನೆಲ್ಲ ಬದಲಾವಣೆಯಾಗುತ್ತದೆ. ಯಾವ ರಾಶಿಗೆ ಶುಭ, ಯಾವಾ ರಾಶಿಗೆ ಅಶುಭ ಇಲ್ಲಿದೆ..

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮೇಷ ರಾಶಿ

ಕೆಲಸದಲ್ಲಿ ಏನನ್ನಾದರೂ ಸಾಧಿಸಿದಲ್ಲಿ ನಿಮಗೆ ಅಪಾರ ತೃಪ್ತಿಯ ಭಾವನೆ ಬರುತ್ತದೆ. ಉಳಿತಾಯ ಹೆಚ್ಚಾಗುವ ಸಾಧ್ಯತೆಯಿದೆ ಮತ್ತು ನಿಮ್ಮ ಆರ್ಥಿಕ ಸ್ಥಿತಿಗೆ ಅಭಿವೃದ್ಧಿಯಾಗುತ್ತದೆ. ಶೈಕ್ಷಣಿಕ  ವಿಚಾರವಾಗಿ ಕೆಲ ಅಡೆತಡೆಗಳು ಉಂಟಾಗುವ ಸಾಧ್ಯತೆ ಇದೆ. ಯಾವುದೇ ವಿಚಾರವನ್ನು ಹೆಚ್ಚು ಮುಂದೂಡಬೇಡಿ. ಹೊಸದಾಗಿ ಮದುವೆಯಾದವರು ವೈವಾಹಿಕ ಆನಂದ ಮತ್ತು ಸಂತೋಷ ಹೆಚ್ಚಾಗುತ್ತದೆ. ಅಕ್ಕ ಪಕ್ಕದ ವ್ಯಕ್ತಿಗಳಲ್ಲಿ ಬಾಂಧವ್ಯ ವೃದ್ಧಿಯಾಗಲಿದೆ.

ವೃಷಭ ರಾಶಿ

ಮದುವೆಯ ಸಲುವಾಗಿ ವಸ್ತ್ರಾಭರಣದ ಖರೀದಿ ಮಾಡುವಿರಿ. ಯೋಜನೆಯನ್ನು ಪೂರ್ಣಗೊಳಿಸಲು ಹೆಚ್ಚು ಶ್ರಮ ಹಾಕಬೇಕಾಗುತ್ತದೆ, ಆದರೆ ಅದು ಯಶಸ್ಸು ನೀಡುತ್ತದೆ.  ಹಣವನ್ನು ನೀಡುವಾಗ ಜಾಗರೂಕರಾಗಿರಿ, ಏಕೆಂದರೆ ವಾಪಾಸ್ ಬರುವ ಸಾಧ್ಯತೆ ಕಡಿಮೆ. ಶೈಕ್ಷಣಿಕ ಕ್ಷೇತ್ರದಲ್ಲಿ ಎದುರಿಸುತ್ತಿರುವ ತೊಂದರೆಗಳು  ಕಡಿಮೆಯಾಗುತ್ತದೆ. ಹೊಸ ಪ್ರಣಯವನ್ನು ಹುಡುಕುತ್ತಿರುವವರು ಸಮಾನ ಮನಸ್ಕ ವ್ಯಕ್ತಿಯನ್ನು ಭೇಟಿಯಾಗುವ ಸಾಧ್ಯತೆಯಿದೆ, ದೀರ್ಘಕಾಲದ ಆಸ್ತಿ ವಿವಾದಕ್ಕೆ ತೆರೆ ಬೀಳಲಿದೆ.

ಮಿಥುನ ರಾಶಿ

ಉದ್ಯಮಿಗಳಿಗೆ ಗಳಿಕೆಯ ಹೊಸ ಮಾರ್ಗಗಳನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ. ಶೈಕ್ಷಣಿಕ ವಿಷಯದಲ್ಲಿ, ನೀವು ಸ್ಪರ್ಧೆಯನ್ನು ಚೆನ್ನಾಗಿ ನಿಭಾಯಿಸಲು ಸಾಧ್ಯವಾಗುತ್ತದೆ. ಕುಟುಂಬ ಸದಸ್ಯರೊಂದಿಗಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಯಶಸ್ವಿಯಾಗುತ್ತೀರ. ಕಠಿಣ ವ್ಯಾಯಾಮವನ್ನು ಕೈಗೊಳ್ಳುವ ಮೊದಲು ತಜ್ಞರ ಸಹಾಯ ಪಡೆಯಿರಿ. ಆರೋಗ್ಯ ವಿಚಾರದಲ್ಲಿ ನಿಗಾವಿರಲಿ.

ಕಟಕ ರಾಶಿ

ವೃತ್ತಿ ವಿಚಾರದಲ್ಲಿ ಏಳುಬೀಳುಗಳನ್ನು ಕಾಣಬಹುದು, ಆದ್ದರಿಂದ ಎಚ್ಚರಿಕೆಯಿಂದ ನಡೆದುಕೊಳ್ಳಿ. ಸಂಶಯಾಸ್ಪದ ಹಣಕಾಸು ಯೋಜನೆಯಲ್ಲಿ ಹೂಡಿಕೆ ಮಾಡಲು ಯಾರಾದರೂ ನಿಮಗೆ ಸಲಹೆ ಮಾಡಿದರೆ, ಅದರಿಂದ ಜಾಗರೂಕರಾಗಿರಿ. ಪ್ರಮುಖ ಬದಲಾವಣೆಗಳನ್ನು  ಮಾಡುವ ಮೊದಲು ಕುಟುಂಬದ ಹಿರಿಯರ ಸಲಹೆ ಪಡೆಯಿರಿ. ನಕ್ಷತ್ರಗಳು ಅನುಕೂಲಕರವಾಗಿ ಕಾಣುವುದರಿಂದ ನಿಮ್ಮ  ಪ್ರೀತಿ ಸಂಬಂಧದಲ್ಲಿ ಮುಂದಿನ ಹೆಜ್ಜೆ ಇಡಲು ಉತ್ತಮ ವಾರ. ಅನಿರೀಕ್ಷಿತ ಸಂದರ್ಭಗಳಿಂದಾಗಿ ನೀವು ನಿಮ್ಮ ಪ್ರಯಾಣದ ಯೋಜನೆಯನ್ನು ಬದಲಾಯಿಸಬೇಕಾಗಬಹುದು. ನಿಮ್ಮ ಆರೋಗ್ಯ ನಿಮ್ಮ ಕೈನಲ್ಲಿ.

ಸಿಂಹ ರಾಶಿ

ವೃತ್ತಿ ವಿಚಾರದಲ್ಲಿ ತುಂಬಾ ಒಳ್ಳೆಯ ವಾರ. ಎಲ್ಲ ಕೆಲಸಗಳಲ್ಲಿ ಯಶಸ್ಸು ಸಿಗುತ್ತದೆ. ಆರ್ಥಿಕವಾಗಿ, ನಿಮಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ  ಬೆಳವಣಿಗೆಯಾಗುತ್ತದೆ. ಕುಟುಂಬ ಸ್ನೇಹಿತರ ಒಡನಾಟವು ನಿಮ್ಮನ್ನು ಸಂತೋಷಗೊಳಿಸಿ, ಮನಸ್ಸನ್ನು ಶಾಂತವಾಗಿರಿಸುತ್ತದೆ.   ನಿಮ್ಮ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಣ್ಣಪುಟ್ಟ ಕಾಯಿಲೆಗಳನ್ನು ಸಹ ನಿರ್ಲಕ್ಷಿಸಬೇಡಿ.

ಇದನ್ನೂ ಓದಿ: ಅನಂತ ಚತುರ್ದಶಿಯ ಈ ದಿನ ಈ ರಾಶಿಗೆ ಲಾಭ ತರಲಿದ್ದಾನೆ ಶನಿ; ಇಲ್ಲಿದೆ 12 ರಾಶಿಗಳ ದಿನಭವಿಷ್ಯ

 ಕನ್ಯಾ ರಾಶಿ

ಸಶಸ್ತ್ರ ಪಡೆಗಳಲ್ಲಿರುವವರ ವೃತ್ತಿಜೀವನದ ಸುವರ್ಣ ಅವಧಿಯನ್ನು ಆರಂಭವಾಗುವ ಸಾಧ್ಯತೆಯಿದೆ. ಹಿಂದಿನ ಹೂಡಿಕೆಯ ಲಾಭವು ನಿಮ್ಮ ಹಣಕಾಸಿನ ಸ್ಥಿತಿಯನ್ನು ಗಮನಾರ್ಹವಾಗಿ  ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಶೈಕ್ಷಣಿಕ ವಿಷಯದಲ್ಲಿ, ನೀವು ಸ್ಪರ್ಧೆಯನ್ನು ಸುಲಭವಾಗಿ ನಿಭಾಯಿಸಬಹುದು. ಮನೆಯ ಸದಸ್ಯರು ಮತ್ತು ಮನೆಯ ಸುತ್ತಲಿನ ಬದಲಾವಣೆಗಳನ್ನು ಮೆಚ್ಚುತ್ತಾರೆ. ಪ್ರೀತಿ ವಿಚಾರವನ್ನು ಹೇಳಿಕೊಳ್ಳಬೇಡಿ,ನಿರಾಸೆಯಾಗುವ ಸಾಧ್ಯತೆ ಹೆಚ್ಚು.

 ತುಲಾ ರಾಶಿ
ವೃತ್ತಿಪರ ಕ್ಷೇತ್ರದಲ್ಲಿ ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಅವಕಾಶ ಈ ವಾರ ನಿಮಗೆ ಸಿಗಬಹುದು. ನೀವು ಆರ್ಥಿಕ ತೊಂದರೆಗೆ ಸಿಲುಕುವ ಮೊದಲು ಹೆಚ್ಚುತ್ತಿರುವ ವೈಯಕ್ತಿಕ ವೆಚ್ಚಗಳನ್ನು ನಿಯಂತ್ರಿಸಬೇಕು. ಕುಟುಂಬದ ಪರಿಸ್ಥಿತಿಯನ್ನು ತಿಳುವಳಿಕೆ ಮತ್ತು ಚಾತುರ್ಯದಿಂದ ನಿಭಾಯಿಸಬೇಕಾಗುತ್ತದೆ. ನೀವು ಇಷ್ಟಪಡುವ ವ್ಯಕ್ತಿಯ ನಂಬಿಕೆಯನ್ನು ಗೆಲ್ಲುವಲ್ಲಿ ನೀವು ಯಶಸ್ವಿಯಾಗುತ್ತೀರಿ, ಆಸ್ತಿ ವಿವಾದದಲ್ಲಿ ಹೊರಗಿನ ಸಹಾಯವನ್ನು ಹುಡುಕುವುದು ಸೌಹಾರ್ದಯುತ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗಬಹುದು.  ಸಮಾರಂಭವನ್ನು ಆಯೋಜಿಸಲು ಇದು ಶುಭ ಸಮಯ.

ವೃಶ್ಚಿಕ ರಾಶಿ

ಉದ್ಯೋಗದಲ್ಲಿ ಬೆಳವಣಿಗೆಯಾಗುತ್ತದೆ, ಇದು ಉತ್ಸಾಹ ಮತ್ತು ನೆಮ್ಮದಿಯನ್ನು ತರುತ್ತದೆ. ಹಣಕಾಸಿನ ವಿಷಯದಲ್ಲಿ ಉತ್ತಮ ಹೂಡಿಕೆ ಆಯ್ಕೆಗಳನ್ನು ಆಯ್ಕೆ ಮಾಡಲು ತಾಳ್ಮೆ ಅಗತ್ಯ. ಆರೋಗ್ಯವನ್ನು ಕಾಪಾಡಿಕೊಳ್ಳುವುದರತ್ತ ಗಮನ ನೀಡಿ. ಈ ವಾರ ಜನಪ್ರಿಯರಾಗುವ ಸಾಧ್ಯತೆ ಇದೆ.

ಧನಸ್ಸು ರಾಶಿ

ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಸೀನಿಯರ್​ಗಳು  ನಿಮ್ಮನ್ನು ಹತ್ತಿರದಿಂದ  ಗಮನಿಸುತ್ತಿರುತ್ತಾರೆ. ಆದ್ದರಿಂದ ನಿಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಿ. ನಿಮ್ಮ ಆರ್ಥಿಕ ಸ್ಥಿತಿಗೆ ಉತ್ತೇಜನ ನೀಡುತ್ತದೆ. ನಿಮ್ಮಲ್ಲಿ ಕೆಲವರು ಶೈಕ್ಷಣಿಕ ವಿಷಯದಲ್ಲಿ ಅಭಿವೃದ್ಧಿ ಕಾಣಬಹುದು. ಅತಿಥಿಗಳು ಮತ್ತು ಸ್ನೇಹಿತರು ಭೇಟಿ ನೀಡುವುದರಿಂದ ನಿಮ್ಮ ಮನೆ ತುಂಬಿರುತ್ತದೆ ಮತ್ತು ಇದು ಆಹ್ಲಾದಕರ ಮತ್ತು ಅದ್ಭುತ ವಾರವಾಗುತ್ತದೆ.

 ಮಕರ ರಾಶಿ

ನೀವು ಸರಿಯಾದ ಸಮಯದಲ್ಲಿ ಸರಿಯಾದ  ಹೆಜ್ಜೆ ಇಟ್ಟು ಪ್ರಗತಿ ಹೊಂದುತ್ತೀರ. ಹಣಕಾಸಿನ ವಿಷಯದಲ್ಲಿ ಒಪ್ಪಂದವು  ತೊಂದರೆ ಮಾಡುವ ಸಾಧ್ಯತೆ ಇದೆ. ಶೈಕ್ಷಣಿಕ ವಿಷಯದಲ್ಲಿ ಗೊಂದಲಗಳು ಉಂಟಾಗುತ್ತದೆ. ನೀವು ಇತ್ತೀಚೆಗೆ ಕುಟುಂಬ ಸಮಾರಂಭದಲ್ಲಿ ಭೇಟಿಯಾದ ವ್ಯಕ್ತಿಯ  ಮೇಲೆ ಪ್ರೀತಿ ಉಂಟಾಗುವ ಸಾಧ್ಯತೆ ಇದೆ. ಹೆಚ್ಚು ಸ್ನೇಹಿತರೊಂದಿಗೆ ಸಮಯ ಕಳೆಯಲು ಸಾಧ್ಯ.

 ಕುಂಭ ರಾಶಿ

ಈ ವಾರ ಉದ್ಯೋಗದಲ್ಲಿ ಸ್ಥಳದಲ್ಲಿ ಕೆಲ ತೊಂದರೆಗಳು ಉಂಟಾಗಬಹುದು. ಹಣಕಾಸಿನ ವಿಚಾರದಲ್ಲಿ ಸಹ ಎಚ್ಚರಿಕೆಯಿಂದಿರಬೇಕು. ನೀವು ಶೈಕ್ಷಣಿಕ ವಿಷಯದಲ್ಲಿ ಅಭಿವೃದ್ಧಿಯಾಗುತ್ತದೆ. ನೀವು ದೀರ್ಘಕಾಲ ಭೇಟಿಯಾಗದ ಅನಿರೀಕ್ಷಿತ ಅತಿಥಿಗಳ ಆಗಮನವು ಇಡೀ ಕುಟುಂಬಕ್ಕೆ ಸಂತೋಷವನ್ನು ತರುತ್ತದೆ. ಪ್ರೀತಿಯನ್ನು ಹುಡುಕುತ್ತಿರುವವರಿಗೆ ಸಂಗಾತಿ ಸಿಗುವ ಸಮಯ. ಈ ವಾರ ಆಸ್ತಿ ಖರೀದಿ ವಿಚಾರದಲ್ಲಿ ಅಭಿವೃದ್ಧಿಯಾಗುತ್ತದೆ.

ಇದನ್ನೂ ಓದಿ: ನಿಮ್ಮ ಜನ್ಮ ದಿನಾಂಕದ ಅನುಸಾರ ಈ ಬಣ್ಣದ ಹ್ಯಾಂಡ್ ಬ್ಯಾಗ್ ಬಳಸಿ..

ಮೀನಾ ರಾಶಿ

ಅಸೂಯೆ ಹೊಂದಿರುವ ಸಹೋದ್ಯೋಗಿಗಳು ನಿಮ್ಮ ಯೋಜನೆಗಳಿಗೆ ಅಡ್ಡಗಾಲು ಹಾಕಲು ಯತ್ನಿಸುತ್ತಾರೆ. ಹಾಗಾಗಿ ಉದ್ಯೋಗದ ವಿಚಾರದಲ್ಲಿ ಹೆಚ್ಚು ಎಚ್ಚರಿಕೆ ಅಗತ್ಯ. ಹೆಚ್ಚುತ್ತಿರುವ ವೆಚ್ಚಗಳು ಕೆಲವು  ತೊಂದರೆ ಉಂಟುಮಾಡುವ ಸಾಧ್ಯತೆಯಿದೆ, ಆದರೆ ನೀವು ಅದನ್ನು ಚೆನ್ನಾಗಿ ನಿರ್ವಹಿಸುತ್ತೀರಿ. ಪ್ರವಾಸಗಳನ್ನು ಮಾಡದೇ ಇರುವುದು ಸೂಕ್ತ. ಆರೋಗ್ಯದ ಕಡೆ ಗಮನವಿರಲಿ.
Published by:Sandhya M
First published: