Signature Astrology: ನಿಮ್ಮ ಸಹಿ ಹೇಳುತ್ತೆ, ನಿಮ್ಮ ಸ್ವಭಾವ...

ನೀವು ಮಾಡುವ ಸಹಿ ನೀವು ಮಾಡಬೇಕಾದ ಕೆಲಸಗಳಿಗೆ ನಿಮ್ಮ ಒಪ್ಪಿಗೆಯನ್ನು ಮಾತ್ರ ನೀಡುವುದಿಲ್ಲ. ಅದರ ಜೊತೆಗೆ ಅವು ನಿಮ್ಮ ವ್ಯಕ್ತಿತ್ವದ (Personality) ಬಗ್ಗೆ ಅನೇಕ ವಿಶೇಷ ವಿಷಯಗಳನ್ನು ಸಹ ಹೇಳುತ್ತವೆ

ನಿಮ್ಮ ಸಹಿ ಹೇಳತ್ತೆ.. ನಿಮ್ಮ ಸ್ವಭಾವ

ನಿಮ್ಮ ಸಹಿ ಹೇಳತ್ತೆ.. ನಿಮ್ಮ ಸ್ವಭಾವ

  • Share this:
    ಯಾವುದೇ ಒಪ್ಪಂದ ಇರಲಿ, ಯಾವುದೇ ಅಭಿಯಾನ ಇರಲಿ, ಯಾವುದೇ ವ್ಯವಹಾರವಿರಲಿ...  ನಾವು ಹಾಕುವ ಸಹಿ ಬಹಳ ಪ್ರಾಮುಖ್ಯತೆ ವಹಿಸುತ್ತದೆ. ಅದರಲ್ಲೂ ಬ್ಯಾಂಕಿ ವ್ಯವಹಾರ(Bank), ವ್ಯಾಪಾರ. ವಿದ್ಯಾಭ್ಯಾಸ (Education) ಸಹಿ ಮಾಡದೆ ಎಲ್ಲಾ ಔಪಚಾರಿಕತೆಗಳು ಪೂರ್ಣಗೊಳ್ಳುವುದಿಲ್ಲ ಎಂಬ ಮಾತಿದೆ. ಇನ್ನು ಹಿಂದಿನ ಕಾಲದಲ್ಲಿ ನಮ್ಮ ನೆಚ್ಚಿನ ಸೆಲಿಬ್ರಿಟಿಗಳಿಂದ ಆಟೋಗ್ರಾಫ್‌ ಪಡೆಯುವ ಅಭ್ಯಾಸವೂ ರೂಢಿಯಲ್ಲಿತ್ತು. ಅಂತಹ ಸಹಿ ಅಥವಾ ಸಿಗ್ನೇಚರ್ (Signature) ಎಲ್ಲೆಡೆ ಬಹುಮುಖ್ಯವಾಗಿದೆ ಎಂದರೆ ತಪ್ಪಾಗಲಾರದು.

    ಸಹಿ ಮೂಲಕ ವ್ಯಕ್ತಿತ್ವ ಅರಿಯ ಬಹುದು

    ವ್ಯಕ್ತಿಯ ನಡವಳಿಕೆಯ, ಮಾಡಿದ ಕೆಲಸಗಳ ಮೂಲಕವೇ ವ್ಯಕ್ತಿತ್ವ ಅರಿಯಲು ಸಾಧ್ಯ. ಆದರೆ ಇದಕ್ಕೆ ಸಮಯಾವಕಾಶದ ಅಗತ್ಯವಿದೆ. ಆದರೆ ಓರ್ವ ವ್ಯಕ್ತಿಯ ವ್ಯಕ್ತಿತ್ವವನ್ನು ಸ್ಥೂಲವಾಗಿ ಅವಲೋಕಿಸಲು ಒಂದು ಸುಲಭ ವಿಧಾನವಿದೆ, ಅದು, ಅವರ ಸಹಿಯಿಂದ ಎನ್ನಲಾಗಿದೆ.(Your signature will tell you your nature)  ಹೌದು ಈ ವ್ಯತ್ಯಾಸ ಜನಸಾಮಾನ್ಯರಿಗೆ ಅಷ್ಟೊಂದು ಗೊತ್ತಾಗದಿದ್ದರೂ ಹಸ್ತಾಕ್ಷರ ಜ್ಯೋತಿಷ್ಯಶಾಸ್ತ್ರಜ್ಞರು (Signature Astrology)ಸೂಕ್ಷ್ಮ ವಿವರಗಳನ್ನು ಗಮನಿಸಿ ವ್ಯಕ್ತಿತ್ವವನ್ನು ತಿಳಿಸಬಲ್ಲರು.

    ಅಕ್ಷರಗಳ ಗಾತ್ರ, ಎರಡು ಅಕ್ಷರಗಳ ನಡುವಣ ಅಂತರ, ಇರಡು ಸಾಲುಗಳ ನಡುವೆ ಬಿಟ್ಟ ಸ್ಥಳ, ಅಕ್ಷರಗಳನ್ನು ವಾರೆ ಅಥವಾ ಓಲಿಸಿ ಬರೆಯುವುದು, ತಡೆತಡೆದು ಅಥವಾ ನಿರರ್ಗಳವಾಗಿ ಬರೆಯುವುದು ಇತ್ಯಾದಿಗಳು ಹಸ್ತಾಕ್ಷರ ಗಮನಿಸುವ ಅಂಶಗಳಾಗಿವೆ. ಇವನ್ನು ಆಧರಿಸಿ ಇವರು ವ್ಯಕ್ತಿಯ ವ್ಯಕ್ತಿತ್ವವನ್ನು ಅವಲೋಕಿಸ ಬಹುದು
    ನೀವು ಮಾಡುವ ಸಹಿ ನೀವು ಮಾಡಬೇಕಾದ ಕೆಲಸಗಳಿಗೆ ನಿಮ್ಮ ಒಪ್ಪಿಗೆಯನ್ನು ಮಾತ್ರ ನೀಡುವುದಿಲ್ಲ. ಅದರ ಜೊತೆಗೆ ಅವು ನಿಮ್ಮ ವ್ಯಕ್ತಿತ್ವದ (Personality) ಬಗ್ಗೆ ಅನೇಕ ವಿಶೇಷ ವಿಷಯಗಳನ್ನು ಸಹ ಹೇಳುತ್ತವೆ ಎಂದರೆ ನೀವು ನಂಬಲೇ ಬೇಕು. ಹಸ್ತಾಕ್ಷರ ಜ್ಯೋತಿಷ್ಯ ಶಾಸ್ತ್ರದಲ್ಲಿ (Signature Astrology) ಸಹಿಯ ಮೂಲಕ ವ್ಯಕ್ತಿಯೊಬ್ಬರ ಸ್ವಭಾವ ಮತ್ತು ನಡವಳಿಕೆಯ ಬಗ್ಗೆ ಸಾಕಷ್ಟು ಸಂಗತಿಗಳನ್ನು ಹೇಳಲಾಗುತ್ತದೆ.

    ಇದನ್ನು ಓದಿ -PDF ದಾಖಲೆಗಳಲ್ಲಿ ಡಿಜಿಟಲ್ ಸಹಿ ಮಾಡೋದು ಹೇಗೆ? ಇಲ್ಲಿದೆ ಸುಲಭ ವಿಧಾನ

    ಸ್ವಭಾವವನ್ನು ತಿಳಿಯಬಹುದು

    1.  ಸಹಿ ಮಾಡುವಾಗ ಒಮ್ಮೆಯೂ ಕೂಡ ಪೆನ್ನನ್ನು ಮೇಲಕ್ಕೆ ಎತ್ತದೆ ಹಸ್ತಾಕ್ಷರ ಮಾಡುವ ಜನರು ಪರಂಪರೆಯಲ್ಲಿ ಹೆಚ್ಚು ನಂಬಿಕೆಯನ್ನು ಇಟ್ಟಿದ್ದಾರೆ ಎನ್ನಲಾಗಿದೆ. ಅಲ್ಲದೆ ಇವರು ಸಾಕಷ್ಟು ಸ್ನೇಹಿತರನ್ನು ಕೂಡ ಹೊಂದಿರುತ್ತಾರೆ ಎಂದು ಜ್ಯೋತಿಷ್ಯ ಹೇಳುತ್ತದೆ.

    2.  ತಮ್ಮ ಹಸ್ತಾಕ್ಷರದ ಎಲ್ಲಾ ಅಕ್ಷರಗಳು ಸ್ಪಷ್ಟವಾಗಿ ಗೋಚರಿಸುವಂತೆ ಸಹಿ ಮಾಡುವ ಜನರು, ಸ್ವಭಾವತಃ ತುಂಬಾ ಪಾರದರ್ಶಕರಾಗಿರುತ್ತಾರೆ. ಇವರನ್ನು ನೀವು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.

    3. ಸಹಿ ಮಾಡುವಾಗ, ಅಕ್ಷರಗಳನ್ನು ಗುರುತಿಸಲು ಕೂಡ ಕಷ್ಟವಾಗುವ ರೀತಿಯಲ್ಲಿ ಹಸ್ತಾಕ್ಷರ ಮಾಡುವ ಜನರು ನಿಗೂಢ ಸ್ವಭಾವದವರಾಗಿರುತ್ತಾರೆ. ಅಂತಹ ಜನರೊಂದಿಗೆ ದೀರ್ಘಕಾಲ ಕಳೆದರೂ ಕೂಡ ಅವರ ಸ್ವಭಾವವನ್ನು ಗುರುತಿಸುವುದು ಕಷ್ಟ. ಈ ಜನರು ತುಂಬಾ ಚುರುಕು ಸ್ವಭಾವದವರು ಹಾಗೂ ಚತುರರಾಗಿರುತ್ತಾರೆ.

    4. ಸಹಿ ಮಾಡುವಾಗ ಕೆಳಗಿನಿಂದ ಮೇಲಕ್ಕೆ ಅಕ್ಷರಗಳನ್ನು ಬರೆಯುವುದು ವ್ಯಕ್ತಿಯ ಉತ್ಸಾಹದ ಸಂಕೇತವಾಗಿದೆ. ಅಂತಹ ಜನರು ದೊಡ್ಡ ಕನಸುಗಳನ್ನು ಕಾಣುತ್ತಾರೆ ಮತ್ತು ಅವುಗಳನ್ನು ಪೂರೈಸುತ್ತಾರೆ.

    5. ಸಹಿ ಮಾಡುವಾಗ ಅಕ್ಷರಗಳನ್ನು ಕೆಳಕ್ಕೆ ತರುವವರು ಜೀವನದ ಬಗ್ಗೆ ತುಂಬಾ ನಿರಾಶಾದಾಯಕ ಮನೋಭಾವವನ್ನು ಹೊಂದಿರುತ್ತಾರೆ. ಇವರು ಜೀವನದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವುದಿಲ್ಲ. ಎಲ್ಲಾ ವಿಷಯಗಳಲ್ಲೂ ಹೆಚ್ಚು ನಿರಾಸೆಯನ್ನು ಹೊಂದಿರುತ್ತಾರೆ. ಇವರ ಜೊತೆ ಸೇರಿದರೆ ನೀವೂ ನಿರಾಶೆಯ ಲೋಕದಲ್ಲಿ ವಿಹರಿಸಬೇಕಾಗುತ್ತದೆ


    ಇದನ್ನು ಓದಿ-ಡಿಜಿಟಲ್ ಸಹಿ ಮಾಡೋದು ಹೇಗೆ? ಇಲ್ಲಿದೆ ಸುಲಭ ವಿಧಾನ

    ಹಠಮಾರಿ

    ಪೆನ್ನನ್ನು ತುಂಬಾ ಕಠಿಣವಾಗಿ ಸ್ಟಿಫ್ ಮಾಡುವ ಜನರು ಸ್ವಯಂ ಹಠಮಾರಿ ಮತ್ತು ಮುಕ್ತರಾಗಿರುತ್ತಾರೆ. ಅಂದರೆ ಪೆನ್ನನ್ನು ಪೇಪರ್ ಗೆ ಜೋರಾಗಿ ಒತ್ತಿ ಬರೆಯುವವರು ಕೋಪಿಷ್ಠರು. ತಾವು ಹೇಳಿದಂತೆ ಆಗಬೇಕು ಎಂದು ಅಂದುಕೊಳ್ಳುವವರು ಆಗಿರುತ್ತಾರೆ. ಇವರ ಜೊತೆ ವ್ಯವಹಾರ ನಡೆಸುವುದು ಅಷ್ಟೊಂದು ಸುಲಭವಲ್ಲ.

    ಸಹಿಯಲ್ಲಿ ಬಿಂದಿಗಳನ್ನು ಬಳಸುವ ಜನರು ಇತರರನ್ನು ಸುಲಭವಾಗಿ ನಂಬುವುದಿಲ್ಲ, ತುಂಬಾ ಯೋಚನೆ ಮಾಡಿ ಯಾವುದೇ ಕೆಲಸಕ್ಕೆ ಕೈ ಹಾಕುತ್ತಾರೆ. ಮತ್ತು ಅವರು ತೆಗೆದುಕೊಳ್ಳುವ ಕೆಲಸವನ್ನು ಪೂರ್ಣಗೊಳಿಸುವಲ್ಲಿ ನಂಬಿಕೆ ಹೊಂದಿದ್ದಾರೆ. ಕೆಲಸ ಸಣ್ಣದೇ ಇರಲಿ ಅಥವಾ ದೊಡ್ಡದೇ ಇರಲಿ ಒಂದು ಸಲ ಕೆಲಸಕ್ಕೆ ಕೈ ಹಾಕಿದರೆ ಅದನ್ನು ಮುಗಿಸದೆ ಬಿಡೋದಿಲ್ಲ ಎಂದು ಹಸ್ತಾಕ್ಷರ ಜ್ಯೋತಿಷ್ಯಶಾಸ್ತ್ರಜ್ಞರು ಹೇಳುತ್ತಾರೆ.

    ಡಿಜಿಟಲ್‌ ಸಹಿ ಹೆಚ್ಚಳ
    ತಂತ್ರಜ್ಞಾನ ಕ್ಷೇತ್ರದಲ್ಲಿ ಶರವೇಗದ ಬೆಳವಣಿಗೆ ಕಾಣುತ್ತಿರುವ ಪರಿಣಾಮ ಡಿಜಿಟಲ್‌ ಸಹಿ ಈಗ ಸಾಮಾನ್ಯವಾಗುತ್ತಿದೆ. ಇದನ್ನು ಮೊದಲು ಒಂದು ಬಿಳಿ ಹಾಳೆಯನ್ನು ತೆಗೆದುಕೊಂಡು ನಿಮ್ಮ ಸಹಿ ಹಾಕಬೇಕು. ನಂತರ ಹಾಳೆಯ ಮೇಲಿರುವ ಸಹಿಯನ್ನು ಸ್ಕ್ಯಾನರ್ ಮುಖಾಂತರ ಸ್ಕ್ಯಾನ್ ಮಾಡಿ ನಿಮ್ಮ ಕಂಪ್ಯೂಟರ್ ನ ನಿಗದಿತ ಜಾಗದಲ್ಲಿ ಸೇವ್ ಮಾಡಿ. ನೀವು ಸೇವ್ ಮಾಡಿದ ಸಹಿಯನ್ನು ವರ್ಡ್ ಪ್ರೊಸೆಸರ್ ಅಥವಾ ಇಮೇಜ್ ಎಡಿಟರ್ ಸಹಾಯದಿಂದ ನಿಮಗೆ ಬೇಕಾದ ಜಾಗದಲ್ಲಿ ಪೇಸ್ಟ್ ಮಾಡಬಹುದು. ಇದನ್ನು ಇಮೇಲ್‌, ಪಿಡಿಎಫ್‌, ಹಾಗೂ ಆನ್ ಲೈನ್‌ ಚಟುವಟಿಕೆಗಳಿಗೆ ಬಳಸಬಹುದಾಗಿದೆ.

    ಎಲೆಕ್ಟ್ರಾನಿಕ್ ಸಹಿಯಿಂದ ಆಡಳಿತದ ಕೆಲಸಗಳು ಮತ್ತಷ್ಟು ಸುಲಭಗೊಳ್ಳುತ್ತದೆ ಮತ್ತು ಇದರಿಂದ ಪ್ರತಿಯೊಬ್ಬರಿಗೂ ಹೆಚ್ಚು ಅನುಕೂಲಕರವಾಗಿರುತ್ತದೆ. ಆನ್‌ಲೈನ್ ಸೇವೆಯು ತುಂಬಾ ಸುರಕ್ಷಿತವಾಗಿರುತ್ತದೆ, ಏಕೆಂದರೆ ಬಳಸಿದ ತಕ್ಷಣ ಕೀಗಳನ್ನು ಅಳಿಸಲಾಗುತ್ತದೆ.
    Published by:Seema R
    First published: