ಸನಾತನ ಧರ್ಮದಲ್ಲಿ ಆಧ್ಯಾತ್ಮಿಕ ದೃಷ್ಟಿಕೋನದಿಂದ ಅತ್ಯಂತ ಪವಿತ್ರವೆಂದು ಪರಿಗಣಿಸಲಾದ ಅನೇಕ ಸಸ್ಯಗಳಿವೆ (Plant) . ಈ ಸಸ್ಯಗಳಲ್ಲಿ ಒಂದು ತುಳಸಿ (Tulsi). ಲಕ್ಷ್ಮಿ ದೇವಿಯು ತುಳಸಿ (Tulasi) ಸಸ್ಯದಲ್ಲಿ ನೆಲೆಸಿದ್ದಾಳೆ ಎನ್ನುವ ನಂಬಿಕೆ ಇದೆ. ಈ ಗಿಡವನ್ನು ನೆಟ್ಟರೆ ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗುವುದಲ್ಲದೆ, ದುಷ್ಟ ಶಕ್ತಿ ಮನೆಗೆ ಬರದಂತೆ ತಡೆಯುತ್ತದೆ ಎಂದು ಹೇಳಲಾಗುತ್ತದೆ. ತುಳಸಿ ಗಿಡ ಇರುವ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ತಾನಾಗಿಯೇ ಬರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಜ್ಯೋತಿಷ್ಯ ಶಾಸ್ತ್ರ ಸಹ ತುಳಸಿ ಸಸ್ಯಕ್ಕೆ ಸಂಬಂಧಿಸಿದ ಅನೇಕ ಪರಿಹಾರಗಳನ್ನು (Remedy) ಹೇಳುತ್ತದೆ. ಇದು ನಮ್ಮ ಹಣೆಬರಹವನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿದೆ. ತುಳಸಿಯಿಂದ ಯಾವೆಲ್ಲಾ ಪರಿಹಾರಗಳಿದೆ ಎಂಬುದು ಇಲ್ಲಿದೆ.
ಆರ್ಥಿಕ ಸಮಸ್ಯೆಗೆ ಪರಿಹಾರ ಇದು
ಜ್ಯೋತಿಷಿಗಳ ಪ್ರಕಾರ ನಿಮ್ಮ ಮನೆಯಲ್ಲಿ ಯಾವುದಾದರೂ ಸಮಸ್ಯೆ ಇದ್ದರೆ ಅದಕ್ಕೆ ಈ ತುಳಸಿ ಪರಿಹಾರ ನೀಡುತ್ತದೆ. ಅದೆಷ್ಟೇ ಕಷ್ಟಪಟ್ಟು ದುಡಿದರು ಸಹ ಹಣ ಉಳಿಸಲು ಸಾಧ್ಯವಾಗುತ್ತಿಲ್ಲ ಎಂದರೆ ಅದಕ್ಕೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಕಾರಣ ಎನ್ನಲಾಗುತ್ತದೆ.
ಅದಕ್ಕೆ ಒಂದು ಬಟ್ಟಲಿನಲ್ಲಿ ಗಂಗಾಜಲ ಹಾಗೈ ಕೆಲವು ತುಳಸಿ ಎಲೆಗಳನ್ನು ಹಾಕಿ. ಈಗ ಆ ನಂತರ ಬಟ್ಟಲನ್ನು ಮನೆಯ ಉತ್ತರ ಭಾಗದಲ್ಲಿ ಇಟ್ಟು ಆ ನೀರನ್ನು ಮನೆಯಲ್ಲಿ ಪ್ರತಿದಿನ ಚಿಮುಕಿಸಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಉಳಿಯುವುದಿಲ್ಲ ಮತ್ತು ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.
ತುಳಸಿ ಗಿಡದಲ್ಲಿ ದೇವಿ ಲಕ್ಷ್ಮಿ ವಾಸವಾಗಿರುವುದರಿಂದ ಈ ಸಸ್ಯವು ವಿಷ್ಣುವಿಗೆ ತುಂಬಾ ಪ್ರಿಯ ಎನ್ನಲಾಗುತ್ತದೆ. ಭಾನುವಾರ ಹೊರತುಪಡಿಸಿ ಎಲ್ಲಾ ದಿನಗಳು ವಿಷ್ಣುವಿನ ಪಾದಗಳಿಗೆ ಕೆಲವು ತುಳಸಿ ಎಲೆಗಳನ್ನು ಅರ್ಪಿಸಿ. ಹೀಗೆ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ.
ಮತ್ತೊಂದೆಡೆ, ಶಿವನ ಪಾದಗಳಿಗೆ ತುಳಸಿಯನ್ನು ಅರ್ಪಿಸಿದಾಗ ಇದರಿಂದ ಹೊಸ ಆದಾಯದ ಮೂಲಗಳು ಉತ್ಪತ್ತಿಯಾಗುತ್ತವೆ. ಇಷ್ಟೇ ಅಲ್ಲದೇ ಬರದೇ ಉಳಿದಿರುವ ಹಣವನ್ನು ಮರಳಿ ಸಿಗುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಭಗವಾನ್ ಶಿವನ ಪೂಜೆ ಮಾಡುವಾಗ ತುಳಸಿಯನ್ನು ಅರ್ಪಿಸಬಾರದು ಎಂಬುದನ್ನು ನೆನಪಿಡಿ.
ಇದನ್ನೂ ಓದಿ: ರಾಹು ಕಾಟದಿಂದ ಮುಕ್ತಿ ಪಡೆಯೋಕೆ ಬೆಳ್ಳುಳ್ಳಿ ಇದ್ರೆ ಸಾಕು
ತುಳಸಿಯ ಗಿಡದ ಬುಡದಲ್ಲಿ ತುಪ್ಪದ ದೀಪವನ್ನು ಇಡಿ.
ಗುರುವಾರವನ್ನು ವಿಷ್ಣುವಿನ ಆರಾಧನೆಯ ದಿನವೆಂದು ಪರಿಗಣಿಸಲಾಗಿದೆ. ಈ ದಿನ ಬೆಳಗ್ಗೆ ಎದ್ದು ಸ್ನಾನ ಮಾಡಿದ ನಂತರ ತುಳಸಿ ಬೇರಿಗೆ ಹಸಿ ಹಾಲನ್ನು ಅರ್ಪಿಸಿ. ಸಂಜೆ, ತುಳಸಿ ಗಿಡದ ಬುಡದಲ್ಲಿ ತುಪ್ಪದ ದೀಪವನ್ನು ಬೆಳಗಿಸಬೇಕು. ಈ ಸರಳ ಪರಿಹಾರದಿಂದ ಲಕ್ಷ್ಮಿ ಮತ್ತು ಭಗವಾನ್ ವಿಷ್ಣು ಇಬ್ಬರೂ ಸಂತೋಷಕೊಂಡು ಆಶೀರ್ವಾದ ಮಾಡುತ್ತಾರೆ ಎನ್ನುವ ನಂಬಿಕೆ ಇದೆ.
ವೈದಿಕ ಜ್ಯೋತಿಷ್ಯದ ಪ್ರಕಾರ, ಇದು ಚಂದ್ರ ಮತ್ತು ಶುಕ್ರನ ಋಣಾತ್ಮಕ ಪರಿಣಾಮಗಳು ಮತ್ತು ದೋಷಗಳಿಂದ ಪರಿಹಾರ ಪಡೆಯಲು ಸಹಾಯ ಮಾಡುತ್ತದೆ. ತುಳಸಿಯ ಪೂಜೆ ಮಾಡುವುದರಿಂದ ಆರನೇ ಮತ್ತು ಎಂಟನೇ ಮನೆಗೆ ಸಂಬಂಧಿಸಿದ ದೋಷಗಳನ್ನು ನಿವಾರಿಸಬಹುದು ಮತ್ತು ಏಳನೇ ಮನೆಯು ಬಲಗೊಳ್ಳುತ್ತದೆ ಎನ್ನಲಾಗುತ್ತದೆ.
ಇದನ್ನೂ ಓದಿ: ಈ 3 ರಾಶಿಯವರಿಗೆ ಶುಕ್ರದೆಸೆಯಂತೆ, ಫುಲ್ ಲಕ್ಕಿ ಜನ ಇವರು
ವೈದಿಕ ಜ್ಯೋತಿಷ್ಯದ ಪ್ರಕಾರ, ತುಳಸಿ ಸಸ್ಯವು ಮನೆಯಲ್ಲಿರುವುದರಿಂದ ಕುಟುಂಬದ ರಕ್ಷಣೆ ಮಾಡುತ್ತಾರೆ. ಇದು ದುಷ್ಟ ಕಣ್ಣುಗಳು ಮತ್ತು ಇತರ ರೀತಿಯ ಸಮಸ್ಯೆಗಳಿಂದ ಮನೆಯನ್ನು ರಕ್ಷಿಸುತ್ತದೆ. ತುಳಸಿ ಗಿಡವು ಕುಟುಂಬ ಸದಸ್ಯರ ನಡುವಿನ ಬಾಂಧವ್ಯವನ್ನು ಬಲಪಡಿಸುತ್ತದೆ. ಮನೆಯಲ್ಲಿ ತುಳಸಿ ಗಿಡವನ್ನು ನೆಡುವುದರಿಂದ ಆರ್ಥಿಕವಾಗಿ ಹಾಗೂ ವೈಯಕ್ತಿಕ ಬದುಕಿನಲ್ಲಿ ಸಹ ಬೆಳವಣಿಗೆ ಹೊಂದಲು ಸಹಾಯ ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ