Omicron Astrology: ಕೊರೊನಾ ಅಂತ್ಯ ಯಾವಾಗ? ಓಮೈಕ್ರಾನ್ ಬಗ್ಗೆ ಜ್ಯೋತಿಷಿಗಳು ಏನು ಹೇಳ್ತಾರೆ...!

ಓಮೈಕ್ರಾನ್ ಅದರ ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ಅಪಾಯಕಾರಿಯೇ..? ಎಂಬ ಮಾಹಿತಿ ಇನ್ನೂ ಅಧ್ಯಯನದ ವಿಷಯವಾಗಿ ಉಳಿದಿದೆ .

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊರೊನಾ ವೈರಸ್‌ನ (Corona Virus) ಹೊಸ ರೂಪಾಂತರ ಓಮೈಕ್ರಾನ್, (Omicron) ಜಗತ್ತಿನಾದ್ಯಂತ ವೇಗವಾಗಿ ಹರಡುತ್ತಿದೆ. ಒಂದು ವಾರದ ಹಿಂದೆ 10,000ಕ್ಕಿಂತ ಕಡಿಮೆ ದೈನಂದಿನ ಪ್ರಕರಣಗಳನ್ನು ಹೊಂದಿದ್ದ ಭಾರತವು(India) ಇದೀಗ ಹೊಸ ರೂಪಾಂತರದೊಂದಿಗೆ ಪ್ರತಿದಿನ 1 ಲಕ್ಷಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳ ಗಡಿಯನ್ನು ದಾಟಿದೆ. ಹರಡುವಿಕೆಯ ಪ್ರಮಾಣವು ಶೀಘ್ರವಾಗಿರುವ ಈ ಸಂದರ್ಭದಲ್ಲಿ ಓಮೈಕ್ರಾನ್ ಅಪಾಯಕಾರಿಯೇ?(Dangerous)   ಓಮೈಕ್ರಾನ್ ವೈರಸ್ ವಿರುದ್ಧ ಲಸಿಕೆಗಳು ಕೆಲಸ ಮಾಡುವ ಸಾಧ್ಯತೆಗಳೆಷ್ಟು..? ಎಂಬ ಪ್ರಶ್ನೆಗಳು ಎಲ್ಲೆಡೆ ಕೇಳಿ ಬರುತ್ತಿವೆ.

ಜ್ಯೋತಿಷಿಗಳು ಸುಳಿವು
ಕೇವಲ ವೈದ್ಯರು ಮತ್ತು ವಿಜ್ಞಾನಿಗಳಷ್ಟೇ ಓಮೈಕ್ರಾನ್ ಹರಡುವಿಕೆಯ ಹಿಂದಿನ ವಿಜ್ಞಾನ ಮತ್ತು ಅದು ಮಾರಣಾಂತಿಕವೇ ಇಲ್ಲವೇ? ಎಂಬ ಮಾಹಿತಿಯನ್ನು ನಮಗೆ ಕೊಡಬಲ್ಲರು. ಆದರೂ, ಈ ಬ್ಲಾಗ್‌ನಲ್ಲಿ ಓಮೈಕ್ರಾನ್ ಹರಡುವಿಕೆಯ ಹಿಂದಿನ ಜ್ಯೋತಿಷ್ಯ ಅಂಶಗಳನ್ನು ಅರ್ಥಮಾಡಿಕೊಳ್ಳಲು ನಾವು ಪ್ರಯತ್ನಿಸೋಣ. ಹೆಚ್ಚುವರಿಯಾಗಿ, ಜ್ಯೋತಿಷ್ಯದ ಆಧಾರದ ಮೇಲೆ ಓಮೈಕ್ರಾನ್ ಹರಡುವಿಕೆಗೆ ಕಾರಣವಾದ ಗ್ರಹಗಳನ್ನು ತಿಳಿದುಕೊಳ್ಳಲು ನಾವು ಪ್ರಯತ್ನಿಸುವುದರ ಜೊತೆಗೆ ಅದರ ಭವಿಷ್ಯತ್ತಿನ ಬಗ್ಗೆ ಜ್ಯೋತಿಷಿಗಳು ಏನು ಸುಳಿವು ನೀಡುತ್ತಾರೆ? ಅನ್ನುವುದನ್ನು ಅರಿತುಕೊಳ್ಳೋಣ.

ಇದನ್ನೂ ಓದಿ: Health Tips: ನಿಮ್ಮ ಅಡುಗೆ ಮನೆಯ ಮಸಾಲೆಗಳಲ್ಲಿದೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ರಹಸ್ಯ

ಓಮೈಕ್ರಾನ್ ಅಂದರೇನು..? ಓಮೈಕ್ರಾನ್ ಹಾನಿಕಾರಕವೇ..? 
ಓಮೈಕ್ರಾನ್ ವೈರಸ್ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಪತ್ತೆಯಾದ ಕೊರೊನಾ ವೈರಸ್‌ನ ರೂಪಾಂತರ ತಳಿಯಾಗಿದೆ. ಓಮೈಕ್ರಾನ್ ಅದರ ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ಅಪಾಯಕಾರಿಯೇ..? ಎಂಬ ಮಾಹಿತಿ ಇನ್ನೂ ಅಧ್ಯಯನದ ವಿಷಯವಾಗಿ ಉಳಿದಿದೆ . ಯುವಕರು ಮತ್ತು ವಯಸ್ಸಾದವರಲ್ಲಿ ಓಮೈಕ್ರಾನ್ ತೀವ್ರತೆ ಕಡಿಮೆಯಾಗಿದ್ದರೂ , ರೋಗ ಲಕ್ಷಣಗಳು ತುಂಬಾ ಸೌಮ್ಯವಾಗಿರುವುದಿಲ್ಲ ಎಂದು ತಜ್ಞರು ಸೂಚಿಸುತ್ತಾರೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ನೀವು ಲಸಿಕೆ ಹಾಕಿಸಿಕೊಂಡಿದ್ದೀರಿ ಎಂಬ ಕಾರಣಕ್ಕೆ ಓಮೈಕ್ರಾನ್ ಸೋಂಕಿಗೆ ನೀವು ತುತ್ತಾಗಲಾರಿರಿ ಎಂದು ಅರ್ಥವಲ್ಲ. ಹಾಗಿದ್ದರೂ, ನೀವು ಇನ್ನೂ ಲಸಿಕೆ ತೆಗೆದುಕೊಳ್ಳದವರಿಗಿಂತ ಹೆಚ್ಚು ಸುರಕ್ಷಿತವಾಗಿದ್ದೀರಿ.

ಕ್ಲಿನಿಕಲ್ ಮ್ಯಾನೇಜ್‌ಮೆಂಟ್‌ನಲ್ಲಿ WHO ಮುಖ್ಯಸ್ಥರಾದ ಜಾನೆಟ್ ಡಯಾಜ್ ಪ್ರಕಾರ ಡೆಲ್ಟಾಗೆ ಹೋಲಿಸಿದರೆ, ನವೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಹಾಂಗ್ ಕಾಂಗ್‌ನಲ್ಲಿ ಮೊದಲು ಗುರುತಿಸಲಾದ ಈ ಹೊಸ ರೂಪಾಂತರದಿಂದ ಆಸ್ಪತ್ರೆಗೆ ದಾಖಲಾಗುವ ಅಪಾಯ ಕಡಿಮೆ ಎಂದೇ ಹೇಳಬಹುದು .

ಓಮೈಕ್ರಾನ್ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ..?
ಮೊದಲನೆಯದಾಗಿ, ಓಮೈಕ್ರಾನ್ ನ ಜ್ಯೋತಿಷ್ಯವನ್ನು ಅಧ್ಯಯನ ಮಾಡುವ ಮೊದಲು ಅದರ ಮೂಲ ಸ್ಥಳವನ್ನು ನಾವು ಪರಿಗಣಿಸಬೇಕು. ಮುನ್ಸೂಚನೆಯ ದಿನಾಂಕವಾಗಿ ನವೆಂಬರ್ 24, 2021 ಗಣನೆಗೆ ತೆಗೆದುಕೊಳ್ಳಲಾಗಿದೆ. ದಕ್ಷಿಣ ಆಫ್ರಿಕಾದ ಸರ್ಕಾರದಿಂದ ಓಮೈಕ್ರಾನ್ ರೂಪಾಂತರದ ಬಗ್ಗೆ WHO ಮಾಹಿತಿ ಪಡೆದುಕೊಂಡ ದಿನ ಇದಾಗಿದೆ. ಈ ಮಾಹಿತಿಯ ಪ್ರಕಾರ, ಓಮೈಕ್ರಾನ್ ಚಾರ್ಟ್ ವೃಶ್ಚಿಕ ರಾಶಿಚಕ್ರದಲ್ಲಿ ಸೂರ್ಯ, ಬುಧ ಮತ್ತು ಕೇತು ಗ್ರಹಗಳನ್ನು ಹೊಂದಿದೆ. ಜ್ಯೋತಿಷ್ಯದ ಪ್ರಕಾರ ಅನುರಾಧಾ ನಕ್ಷತ್ರದೊಂದಿಗಿನ ಘರ್ಷಣೆಯ ದಿನಾಂಕ ಇದಾಗಿದೆ. ಜ್ಯೋತಿಷ್ಯದಲ್ಲಿ, ಶನಿ ಗ್ರಹವು ಈ ಅನುರಾಧಾ ನಕ್ಷತ್ರವನ್ನು ಆಳುತ್ತಾನೆ. ಅನೇಕ ಬಾರಿ, ಸಾಂಕ್ರಾಮಿಕ ರೋಗಗಳಂತಹ ಅಥವಾ ಇತರ ರೋಗ ರುಜಿನಗಳಂತಹ ವಿನಾಶಗಳಿಗೆ ಶನಿಯು ಜವಾಬ್ದಾರನಾಗಿರುತ್ತಾನೆ.

ಇದನ್ನೂ ಓದಿ: Omicron: ನಿಮ್ಮ ಚರ್ಮ, ತುಟಿ, ಉಗುರುಗಳ ಮೇಲೆ ಈ ರೀತಿಯಾಗಿದ್ರೆ ಅದು ಓಮೈಕ್ರಾನ್​ ಎಂದರ್ಥ

ಅಂತೆಯೇ, ನಿಮ್ಮಲ್ಲಿ ಹಲವರು ತಿಳಿದಿರುವಂತೆ, ನಮ್ಮ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸೂರ್ಯನು ಜವಾಬ್ದಾರನಾಗಿರುತ್ತಾನೆ. ನವೆಂಬರ್ 24 ರಂದು ಓಮೈಕ್ರಾನ್ ರೂಪಾಂತರ ಪತ್ತೆ ಹಚ್ಚಿದ ಬಳಿಕ ಡಿಸೆಂಬರ್ 4ರಂದು ಸೂರ್ಯಗ್ರಹಣವೂ ಆಗಿತ್ತು . ಪರಿಣಾಮವಾಗಿ, ಸೂರ್ಯನು ಸ್ವಲ್ಪ ಮಟ್ಟಿಗೆ ದುರ್ಬಲಗೊಂಡಿದ್ದಾನೆ. ಮಂಗಳ ಮತ್ತು ಕೇತು ಸೃಷ್ಟಿಸಿದ ಅಂಗಾರಕ ದೋಷ ನಮಗೆ ಮತ್ತಷ್ಟು ತೊಂದರೆ ನೀಡುತ್ತಿದೆ ಎನ್ನಲಾಗಿದೆ.
Published by:vanithasanjevani vanithasanjevani
First published: