• ಹೋಂ
 • »
 • ನ್ಯೂಸ್
 • »
 • ಭವಿಷ್ಯ
 • »
 • Astrology: ವಧುವಿಗೂ ವರನಿಗೂ ಜಾತಕ ಹೊಂದಾಣಿಕೆ ಆಗುತ್ತದೆಯೇ? ಹೀಗೆ ಸುಲಭವಾಗಿ ಲೆಕ್ಕಾಚಾರ ಮಾಡಿ

Astrology: ವಧುವಿಗೂ ವರನಿಗೂ ಜಾತಕ ಹೊಂದಾಣಿಕೆ ಆಗುತ್ತದೆಯೇ? ಹೀಗೆ ಸುಲಭವಾಗಿ ಲೆಕ್ಕಾಚಾರ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹಿಂದೂ ಸಂಪ್ರದಾಯದಲ್ಲಿ ಮದುವೆ ಮಾತುಕತೆಗೂ ಮುನ್ನ ಕುಂಡಲಿ ನೋಡುವುದು ಸಾಮಾನ್ಯವಾಗಿದೆ. ಅದರಲ್ಲಿ ಇಬ್ಬರ ಜಾತಕವೂ ಹೊಂದಾಣಿಕೆಯಾದರೆ ಮಾತ್ರ ಮುಂದುವರೆಯುತ್ತಾರೆ. ಹಾಗಿದ್ರೆ ಜಾತಕದ ಲೆಕ್ಕಚಾರವನ್ನು ಹೇಗೆ ಮಾಡುತ್ತಾರೆ ಅಂತ ನಿಮಗೂ ಕುತೂಹಲ ಇರಬಹುದು, ಹಾಗಿದ್ದರೆ ಇಲ್ಲಿದೆ ನೋಡಿ ಮದುವೆ ಜಾತಕದ ಲೆಕ್ಕಚಾರ.

ಮುಂದೆ ಓದಿ ...
 • Share this:

  ಹಿಂದೂ ಸಂಪ್ರದಾಯದಲ್ಲಿ ( Hindu Culture) ಮದುವೆ (Marriage) ಮಾತುಕತೆಗೂ ಮುನ್ನ ಕುಂಡಲಿ ನೋಡುವುದು ಸಾಮಾನ್ಯವಾಗಿದೆ. ಅದರಲ್ಲಿ ಇಬ್ಬರ ಜಾತಕವೂ (Astrology) ಹೊಂದಾಣಿಕೆಯಾದರೆ ಮಾತ್ರ ಮುಂದುವರೆಯುತ್ತಾರೆ. ಜಾತಕ ಹೊಂದಾಣಿಕೆಯಾದರೆ ಹುಡುಗ ಹುಡುಗಿ ಚೆನ್ನಾಗಿ ಬಾಳುತ್ತಾರೆ, ಅವರ ದಾಂಪತ್ಯ (Married Life) ಚೆನ್ನಾಗಿರುತ್ತದೆ ಎಂಬುದಾಗಿ ನಂಬಲಾಗುತ್ತದೆ (Believed). ಆದ್ದರಿಂದಲೇ ಇದು ನಮ್ಮಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ. ಕುಂಡಲಿ ಹೊಂದಾಣಿಕೆಯು ಮದುವೆಯ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಇದು ನಿಮ್ಮ ಸಂಗಾತಿಯೊಂದಿಗೆ ನಿಮ್ಮ ವೈವಾಹಿಕ ಜೀವನದ ಮುನ್ಸೂಚನೆಯನ್ನು ನೀಡುತ್ತದೆ.


  ಕುಂಡಲಿ ಹೊಂದಾಣಿಕೆಯ ಮೂಲಕ ನೀವು ವ್ಯಕ್ತಿಯ ಸ್ವಭಾವವನ್ನು ಅರ್ಥ ಮಾಡಿಕೊಳ್ಳಬಹುದು. ಆ ಮೂಲಕ ಸರಿಯಾದ ಜೀವನ ಸಂಗಾತಿಯನ್ನು ಆಯ್ಕೆ ಮಾಡಲು ಅವಕಾಶವನ್ನು ಪಡೆಯಬಹುದು.


  ಮದುವೆಯಂಥ ಸಂದರ್ಭಗಳಲ್ಲಿ ಇಬ್ಬರ ಜಾತಕ ಹೊಂದಾಣಿಕೆಯ ಬಗ್ಗೆ ವೃತ್ತಿಪರರು ಹೆಚ್ಚು ನಿಖರವಾಗಿ ಹೇಳಬಹುದು. ಅದಕ್ಕಾಗಿ ಅವರನ್ನೇ ಸಂಪರ್ಕಿಸುವುದನ್ನು ಪರಿಗಣಿಸಲಾಗುತ್ತದೆ.


  ಆದಾಗ್ಯೂ, ನೀವೇ ಸರಳವಾಗಿ ಜಾತಕ ನೋಡಬಹುದು. ಕುಂಡಲಿಯಲ್ಲಿನ ಕೆಲವು ಅಂಶಗಳಿಗೆ ನಿರ್ದಿಷ್ಟ ಅಂಕ ಅಥವಾ ಗುಣಗಳಿರುತ್ತವೆ. ಅವುಗಳನ್ನು ಕೂಡಿಸಿದಾಗ ಬರುವ ಗುಣಗಳನ್ನು ಪರಿಗಣಿಸಿ ಜಾತಕ ಹೊಂದಾಣಿಕೆ ಆಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಹೇಳಲಾಗುತ್ತದೆ.


  Are bride and groom horoscope compatible? Calculate easily like this
  ಸಾಂದರ್ಭಿಕ ಚಿತ್ರ


  ಆದಾಗ್ಯೂ ವಿವಾಹದ ವೇಳೆ ಜಾತಕದ ಹೊಂದಾಣಿಕೆ ಅಥವಾ ಮ್ಯಾಚ್‌ಮೇಕಿಂಗ್‌ನಲ್ಲಿ ಉತ್ತರ ಹಾಗೂ ದಕ್ಷಿಣ ಭಾರತದವರು ಪರಿಗಣಿಸುವ ಅಂಶಗಳನ್ನು ಸ್ವಲ್ಪ ಮಟ್ಟಿಗೆ ವ್ಯತ್ಯಾಸವಿದೆ.


  ಜಾತಕದಲ್ಲಿ ಉತ್ತರ ಭಾರತದವರು ಪರಿಗಣಿಸುವ ಅಂಶಗಳು


  1. ವರ್ಣ

  2. ವಶ್ಯ

  3. ತಾರಾ ಅಥವಾ ದಿನಾ

  4. ಯೋನಿ

  5. ಗ್ರಹ ಮೈತ್ರಿ

  6. ಗಣ

  7. ಭಕುತ್

  8. ನಾಡಿ


  Are bride and groom horoscope compatible? Calculate easily like this
  ಸಾಂದರ್ಭಿಕ ಚಿತ್ರ


  ಗುಣಗಳ ಲೆಕ್ಕಾಚಾರ


  ವರ್ಣವು 1 ಅಂಕ, ವಶ್ಯವು 2 ಅಂಕಗಳು, ತಾರಾ 3 ಅಂಕಗಳು, ಯೋನಿ 4 ಅಂಕಗಳು, ಗ್ರಹ ಮೈತ್ರಿ 5 ಅಂಕಗಳು, ಗಣವು 6 ಅಂಕಗಳು, ಭಕುತ್ 7 ಅಂಕಗಳು ಮತ್ತು ನಾಡಿಗೆ ಗರಿಷ್ಠ 8 ಅಂಕಗಳನ್ನು ಹೊಂದಿರುವಂತೆ ಪ್ರತಿಯೊಂದು ಅಂಶಕ್ಕೂ ಮೂಲ ಅಂಕಗಳನ್ನು ನಿಗದಿಪಡಿಸಲಾಗಿದೆ. ಈ ಮೊತ್ತವು ಒಟ್ಟು 36 ಆಗಿರುತ್ತದೆ. ಕುಂಡಲಿಯು ಈ ಅಂಕಗಳ ಮೇಲೆ ಹೊಂದಾಣಿಕೆಯಾಗುತ್ತದೆ.


  ಫಲಿತಾಂಶದ ಲೆಕ್ಕಾಚಾರಗಳನ್ನು ಗುಣ ಹೊಂದಾಣಿಕೆ ಎಂದು ಕರೆಯಲಾಗುತ್ತದೆ. ನೀವು ಒಟ್ಟು 36 ಗುಣಗಳ ಹೊಂದಾಣಿಕೆಯನ್ನು ಹೊಂದಿದ್ದರೆ, ಅದು ಪರಿಪೂರ್ಣ ಹೊಂದಾಣಿಕೆಯಾಗಿದೆ.


  ಒಟ್ಟು 36 ಅಂಕಗಳಲ್ಲಿ, 50% ಅಂದರೆ 18 ಗುಣಗಳನ್ನು ಸರಾಸರಿ ಎಂದು ಪರಿಗಣಿಸಲಾಗುತ್ತದೆ. ಜಾತಕವು ಕನಿಷ್ಠ 18 ಗುಣಗಳನ್ನು ಹೊಂದಿರಲೇಬೇಕು ಎನ್ನಲಾಗುತ್ತದೆ. 28 ಗುಣ ಹೊಂದಿದ್ದರೆ ಅದನ್ನು ತೃಪ್ತಿಕರವೆಂದು ಪರಿಗಣಿಸಲಾಗುತ್ತದೆ.


  ಇದನ್ನೂ ಓದಿ:Astrology: ಈ 5 ರಾಶಿಯವರು ಈಗ ಎಚ್ಚೆತ್ತುಕೊಳ್ಳದಿದ್ದರೆ, ಮುಂದೆ ಬರ್ಬಾದ್!


  ದಕ್ಷಿಣ ಭಾರತದಲ್ಲಿ ಪರಿಗಣಿಸುವ ಕುಂಡಲಿ ಅಂಶಗಳು


  ದಕ್ಷಿಣ ಭಾರತದಲ್ಲಿ ಕುಂಡಲಿ ಹೊಂದಾಣಿಕೆ ಮಾಡುವಾಗ ಕೆಳಗಿನ ಹತ್ತು ಅಂಕಗಳನ್ನು ಪರಿಗಣಿಸಲಾಗುತ್ತದೆ.


  1. ಧಿನಾ: ಇದರ ಮೂಲಕ ದಂಪತಿಗಳ ದೀರ್ಘಾಯುಷ್ಯವನ್ನು ಲೆಕ್ಕಹಾಕಲಾಗುತ್ತದೆ.

  2. ಗಣ: ಇದು ಸಂತೋಷದ ಜೀವನವನ್ನು ಪ್ರತಿನಿಧಿಸುತ್ತದೆ. ದಂಪತಿಗಳ ಸಾಮಾನ್ಯ ಯೋಗಕ್ಷೇಮವನ್ನು ಇದರಿಂದ ಅಳೆಯಲಾಗುತ್ತದೆ.

  3. ಮಹೇಂದ್ರ: ಈ ಅಂಶವು ಹೆರಿಗೆಯ ಸಾಧ್ಯತೆಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.

  4. ಸ್ತ್ರೀ ಧೀರ್ಗ: ಇದು ದಂಪತಿ ಸಂತೋಷ ಮತ್ತು ಯೋಗಕ್ಷೇಮವನ್ನು ಪ್ರತಿನಿಧಿಸುತ್ತದೆ.

  5. ಯೋನಿ: ಈ ಅಂಶದೊಂದಿಗೆ, ನಾವು ವೈವಾಹಿಕ ಜೀವನದಲ್ಲಿ ಸಮತೋಲನ ಮತ್ತು ಸಾಮರಸ್ಯವನ್ನು ಲೆಕ್ಕಾಚಾರ ಮಾಡಬಹುದು.

  6. ರಾಶಿ: ಮಕ್ಕಳ ಸಂತೋಷವನ್ನು ಈ ಅಂಶದಿಂದ ಅಳೆಯಲಾಗುತ್ತದೆ.

  7. ರಾಸ್ಯಾಧಿಪತಿ: ಸಂತತಿ ಮತ್ತು ಸಂಪತ್ತನ್ನು ಲೆಕ್ಕ ಹಾಕಬಹುದು.

  8. ವಾಸ್ಯ: ಮದುವೆಯಿಂದ ಪಡೆಯುವ ಪ್ರೀತಿಯ ಬಗ್ಗೆ.

  9. ರಜ್ಜು: ಇದು ವಧು ಮತ್ತು ವರನ ವೈವಾಹಿಕ ಜೀವನದ ದೀರ್ಘಾಯುಷ್ಯವನ್ನು ಸೂಚಿಸುತ್ತದೆ.

  10. ವೇದೈ: ವೇದೈ ಶೂನ್ಯವಾಗಿದ್ದರೆ, ವೈವಾಹಿಕ ಜೀವನವು ಎಲ್ಲಾ ದುಷ್ಟ ಶಕ್ತಿಗಳಿಂದ ಮುಕ್ತವಾಗಿದೆ ಎಂದು ನಂಬಲಾಗಿದೆ.
  ಹಿಂದೂಗಳ ಆರಾಧ್ಯ ದೈವ ಭಗವಾನ್ ರಾಮ ಮತ್ತು ಸೀತೆ 36 ಗುಣಗಳ ಪರಿಪೂರ್ಣ ಹೊಂದಾಣಿಕೆಯನ್ನು ಹೊಂದಿದ್ದರು ಎಂದು ನಂಬಲಾಗಿದೆ. ಆದರೆ ಹೊಂದಾಣಿಕೆಯನ್ನು ಲೆಕ್ಕಾಚಾರ ಮಾಡುವಾಗ ಈ ಅಂಶಗಳನ್ನಷ್ಟೇ ಪರಿಗಣಿಸಲಾಗುತ್ತದೆ. ಆದರೆ ಈ ಅಂಶಗಳ ಎಷ್ಟು ನಿಖರ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂಬುದೂ ಅಷ್ಟೇ ಸತ್ಯ.

  Published by:Gowtham K
  First published: