ಜ್ಯೋತಿಷಿ ನುಡಿದ ನಿಜವಾದ ಭವಿಷ್ಯ ಈ ಇಂಜಿನಿಯರ್‌ನನ್ನು ಮಿಲಿಯನೇರ್ ಮಾಡಿತು: Astrotalk

ಭಾರತದಲ್ಲಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಸ್ಟಾರ್ಟಪ್‌ಗಳಲ್ಲಿ Astrotalk ಕೂಡ ಒಂದು. “ನಾವು ಪ್ರತಿ ದಿನ 32 ಲಕ್ಷ ರೂ.ಗಳ ಆದಾಯ ಗಳಿಸುತ್ತಿದ್ದೇವೆ” ಎನ್ನುತ್ತಾರೆ ಪುನೀತ್ ಗುಪ್ತಾ. ಪ್ರಸ್ತುತ, ಈ ಆ್ಯಪ್ ತನ್ನ ಪ್ಯಾನೆಲ್‌ನಲ್ಲಿ 1500ಕ್ಕೂ ಹೆಚ್ಚು ಜ್ಯೋತಿಷಿಗಳನ್ನು ಹೊಂದಿದ್ದು, ಅವರು ಪ್ರತಿ ದಿನ ಕರೆ ಮತ್ತು ಚಾಟ್ ಮೂಲಕ 1,40,000 ನಿಮಿಷಗಳ ಅವಧಿಯ ಜ್ಯೋತಿಷ್ಯ ಸಮಾಲೋಚನೆ ನೀಡುತ್ತಿದ್ದಾರೆ.

ಪುನೀತ್ ಗುಪ್ತಾ

ಪುನೀತ್ ಗುಪ್ತಾ

 • Share this:
  ಭವಿಷ್ಯದ ಬಗೆಗಿನ ಏನು, ಯಾವಾಗ ಮತ್ತು ಯಾಕೆ ಎಂಬ ಪ್ರಶ್ನೆಗಳು ನಮ್ಮನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡುತ್ತವೆ. ಪ್ರಾಮಾಣಿಕವಾಗಿ ಹೇಳುವುದಾದರೆ, ನಮ್ಮ ಜೀವನ ನಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತಿದೆ ಎಂಬುದರ ಅರಿವು ಇಲ್ಲದಿದ್ದರೆ “ಈ ಕ್ಷಣವನ್ನು ಜೀವಿಸಿ” ಎಂಬ ಮಾತುಗಳು ನಿಜಕ್ಕೂ ಸಹಕಾರಿಯಾಗುವುದಿಲ್ಲ. ನಮ್ಮ ಜೀವನ ನಿಶ್ಚಿತವಾಗಿರಬೇಕು ಎಂದು ನಾವು ಎಷ್ಟು ಬಯಸುತ್ತೇವೋ, ಅದು ಅಷ್ಟೇ ಅನಿಶ್ಚಿತವಾಗುತ್ತಾ ಹೋಗುತ್ತದೆ. ಹಾಗಿದ್ದರೂ, ನಮ್ಮ ಭವಿಷ್ಯದ ಬಗೆಗಿನ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಅನಿಶ್ಚಿತತೆಯನ್ನು ಕಡಿಮೆ ಮಾಡುವ ಒಂದು ಆ್ಯಪ್‌ ಇದೆ – ಅದೇ Astrotalk.

  ನೀವು ಈ ಮೊದಲು ಆ್ಯಪ್‌ನಲ್ಲಿ ಜ್ಯೋತಿಷ್ಯವನ್ನು ಕೇಳಿದ್ದೀರಾ? ಇದೊಂದು ಆಸಕ್ತಿದಾಯಕವಾದ ಸ್ಟಾರ್ಟಪ್ ಆಗಿದ್ದು, ಈ ಆ್ಯಪ್‌ನಲ್ಲಿ ಗ್ರಾಹಕರೊಂದಿಗೆ ಮಾತನಾಡಲು 24X7 ಜ್ಯೋತಿಷಿಗಳನ್ನು ಇದು ಒದಗಿಸುತ್ತದೆ. ಆದರೆ, Astrotalk ಕುರಿತು ಅತ್ಯಂತ ಕುತೂಹಲಕರ ಸಂಗತಿ ಏನೆಂದರೆ ಅದರ ಸ್ಥಾಪಕ, ಪುನೀತ್ ಗುಪ್ತಾ ಅವರು ಸ್ವತಃ ಜ್ಯೋತಿಷ್ಯದಲ್ಲಿ ಎಂದಿಗೂ ನಂಬಿಕೆ ಇಟ್ಟವರಲ್ಲ ಹಾಗೂ ಒಂದೇ ಒಂದು ಜ್ಯೋತಿಷ್ಯದ ಭವಿಷ್ಯವು ಅವರ ಜೀವನವನ್ನು ಶಾಶ್ವತವಾಗಿ ಬದಲಾಯಿಸಿತು ಎಂಬುದು. ಅವರು ನಮ್ಮೊಂದಿಗೆ ಹಂಚಿಕೊಂಡಿದ್ದು ಇಲ್ಲಿದೆ:

  ಜ್ಯೋತಿಷ್ಯದ ಭವಿಷ್ಯವಾಣಿಯೊಂದರ ಫಲಿತಾಂಶವಾಗಿ AstroTalk ಪ್ರಾರಂಭವಾಗಿದೆ! 

  ಸೇವೆಗಳ ಕಂಪನಿಯೊಂದನ್ನು ಪ್ರಾರಂಭಿಸಲು, ಮಾಡುತ್ತಿರುವ ಉದ್ಯೋಗ ಬಿಡುವ ಬಗ್ಗೆ ಯೋಚಿಸುತ್ತಿದ್ದಾಗ ಪುನೀತ್ ಅವರು ಮುಂಬೈನ ಒಂದು ಹೂಡಿಕೆ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಸ್ಟಾರ್ಟಪ್ ಮಾಡಲಿಕ್ಕೆಂದು 2015ರಲ್ಲಿ ಕೆಲಸ ಬಿಡುವ ಮೊದಲು, ಪುನೀತ್ ಈ ಹಿಂದೆ ಕೂಡ ಇಂತಹುದೇ ಪ್ರಯತ್ನಕ್ಕೆ ಕೈಹಾಕಿ ದಿವಾಳಿಯಾಗಿದ್ದರು ಹಾಗೂ ಮತ್ತೊಂದು ಕಡೆ ಕೆಲಸಕ್ಕೆ ಸೇರಿದ್ದರು. ಅಂದರೆ, ಅವರಿಗೆ ಮತ್ತೊಮ್ಮೆ ಕೆಲಸ ಬಿಡುವುದು ಅಷ್ಟು ಸುಲಭವಾಗಿರಲಿಲ್ಲ.

  ಅದೃಷ್ಟವಶಾತ್, ಆ ದಿನ ಯಾಕೆ ಅಷ್ಟೊಂದು ಆತಂಕಕ್ಕೆ ಒಳಗಾಗಿದ್ದಿರಿ ಎಂದು ಹಿರಿಯ ಸಹೋದ್ಯೋಗಿಯೊಬ್ಬರು ಪುನೀತ್‌ರನ್ನು ಕೇಳಿದರು. ಆಗ, ಕೆಲಸಕ್ಕೆ ರಾಜೀನಾಮೆ ಕೊಡಬೇಕು ಎಂದಿದ್ದೇನೆ, ಆದರೆ ಧೈರ್ಯ ಸಾಲುತ್ತಿಲ್ಲ ಎಂದು ಪುನೀತ್ ವಿವರಿಸಿದರು. ಆ ಸಹೋದ್ಯೋಗಿಯು ಜ್ಯೋತಿಷ್ಯವನ್ನು ಅಧ್ಯಯನ ಮಾಡಿದ್ದರು ಹಾಗೂ ಅವರು ಪುನೀತ್‌ರಿಗೆ ಜ್ಯೋತಿಷ್ಯದ ಭವಿಷ್ಯವಾಣಿಯೊಂದಿಗೆ ಸಹಾಯ ಮಾಡುವುದಾಗಿ ಹೇಳಿದರು. ಪುನೀತ್ ಅವರಿಗೆ ಜ್ಯೋತಿಷ್ಯದ ಬಗ್ಗೆ ಯಾವುದೇ ನಂಬಿಕೆ ಇರಲಿಲ್ಲ ಹಾಗೂ ಹೂಡಿಕೆ ಬ್ಯಾಂಕ್‌ನಲ್ಲಿ ಕೆಲಸ ಮಾಡುವವರು ಮೂಢನಂಬಿಕೆಗಳನ್ನು ನಂಬುವುದಾದರೂ ಹೇಗೆ ಎಂದು ಅವರಿಗೆ ತಮಾಷೆ ಮಾಡಿ, ಆಕೆಯ ಸಲಹೆಯನ್ನು ತಿರಸ್ಕರಿಸಿದ್ದರು. ಆದರೂ ಆ ಸಹೋದ್ಯೋಗಿ ಸಹಾಯ ಮಾಡಲು ಅಚಲವಾಗಿದ್ದರು ಮತ್ತು ಆಕೆ ತಾನು ಸರಿ ಎಂಬುದನ್ನು ಸಾಬೀತುಪಡಿಸಲು ಬಯಸಿದ್ದರು, ಹಾಗಾಗಿ ಅವರ ಸಲಹೆಯನ್ನು ಕೊನೆಗೂ ಪುನೀತ್ ಒಪ್ಪಿದರು.

  ಪುನೀತ್ ಅವರ ಸಮಯವು 2015 ರಿಂದ 2017ರವರೆಗೆ ಅತ್ಯಂತ ಹೆಚ್ಚು ಬೆಂಬಲಿಸುವ ಸಮಯವಾಗಿದ್ದು, ಅವರು ಈಗಿನ ಕೆಲಸಕ್ಕೆ ರಾಜೀನಾಮೆ ನೀಡಬಹುದು ಆದರೆ, ಪಾಲುದಾರ ಬಿಟ್ಟುಹೋಗುವುದರಿಂದ ಅವರ ಸ್ಟಾರ್ಟಪ್ 2017ರ ಏಪ್ರಿಲ್ ನಂತರ ಮುಚ್ಚಿಹೋಗುತ್ತದೆ ಎಂದು ಆಕೆ ಭವಿಷ್ಯವಾಣಿ ನುಡಿದರು. ಅಲ್ಲದೆ, ಅದಕ್ಕಾಗಿ ಚಿಂತಿಸುವ ಅಗತ್ಯವಿಲ್ಲ, ಅವರು 2017-18ರಲ್ಲಿ ಮತ್ತೇನಾದರೂ ಪ್ರಾರಂಭಿಸಬಹುದು ಮತ್ತು ಅದು ಅತ್ಯಂತ ಯಶಸ್ವಿಯಾಗಲಿದೆ ಎಂಬುದನ್ನೂ ಸಹ ಆಕೆ ನುಡಿದಿದ್ದರು.

  ಆಕೆಯ ಭವಿಷ್ಯವಾಣಿಯಲ್ಲಿ ಪುನೀತ್ ಅವರಿಗೆ ನಂಬಿಕೆ ಇರಲಿಲ್ಲವಾದರೂ, ಆಕೆಯ ಮಾತುಗಳನ್ನು ಕೇಳಿ ಅವರು ಸಕಾರಾತ್ಮಕವಾಗಿ ಭಾವಿಸಿದರು, ಹಾಗಾಗಿ ಅವರು ಕೊನೆಗೆ ರಾಜೀನಾಮೆ ನೀಡಿದರು. ಅವರ ಸ್ಟಾರ್ಟಪ್ ಚೆನ್ನಾಗಿಯೇ ನಡೆಯಿತು, ಆದರೆ ಅವರ ಪಾಲುದಾರರು 2017ರ ಮಾರ್ಚ್‌ನಲ್ಲಿ ಬಿಟ್ಟುಹೋಗಿದ್ದರಿಂದ ಮತ್ತೆ ಅಧಃಪತನ ಶುರುವಾಯಿತು.

  ಜ್ಯೋತಿಷ್ಯವನ್ನು ಎಂದಿಗೂ ನಂಬದೇ ಇದ್ದವರು, ಮುಂದೇನಾಗುತ್ತದೆ ಎಂಬ ಭವಿಷ್ಯವಾಣಿಯನ್ನು ಎರಡು ವರ್ಷ ಮೊದಲೇ ಖಚಿತವಾಗಿ ಹೇಳಿದ್ದರಿಂದ ಅವರು ಕ್ಲೀನ್ ಬೌಲ್ಡ್ ಆಗಿದ್ದರು. ಅದೇ ಸಂದರ್ಭದಲ್ಲೇ ಅವರು ಅದೇ ಸಹೋದ್ಯೋಗಿಯನ್ನು ಕರೆಸಿ ಮಾತನಾಡಿದರು ಮತ್ತು ಆಕೆ ಹೇಳಿದ್ದೆಲ್ಲವೂ ಹೇಗೆ ನಿಜವಾಗಿದೆ ಎಂಬುದನ್ನು ಹೇಳಿದರು. ಆಕೆಯೊಂದಿಗೆ ಮಾತನಾಡುತ್ತಿರುವಾಗ, ಜ್ಯೋತಿಷ್ಯ ಕ್ಷೇತ್ರದಲ್ಲಿ ಒಂದು ಆ್ಯಪ್ ಪ್ರಾರಂಭಿಸಿದರೆ ಹೇಗೆ ಎಂಬ ಉಪಾಯ ಹೊಳೆಯಿತು ಮತ್ತು ಈ ರೀತಿಯಾಗಿ ಅವರು Astrotalkನ ಯೋಜನೆ ರೂಪಿಸಿದರು. Astrotalkನ ಯಶಸ್ಸಿನ ಬಗ್ಗೆ ಆಕೆಯೊಂದಿಗೆ ಕೇಳಿದಾಗ, ಅದು 2018ರಲ್ಲಿ ವೇಗ ಪಡೆದುಕೊಳ್ಳುತ್ತದೆ ಮತ್ತು 2026ರವರೆಗೂ ಪ್ರಬಲವಾಗಿ ಬೆಳೆಯುತ್ತದೆ ಎಂದು ಆಕೆ ಹೇಳಿದರು.

  ಏನಿದು Astrotalk?

  ಕೆಲಸದಲ್ಲಿ ಹೆಚ್ಚುತ್ತಿರುವ ಒತ್ತಡ ಮತ್ತು ವೈಯಕ್ತಿಕ ಸಂಬಂಧಗಳಲ್ಲಿನ ಸಮಸ್ಯೆಗಳಿಂದಾಗಿ ಸರಿಯಾದ ವರ್ಕ್-ಲೈಫ್ ಬ್ಯಾಲೆನ್ಸ್ ನಿರ್ವಹಿಸಲು ಜನರು ಕಷ್ಟಪಡುತ್ತಿದ್ದಾರೆ. ಜನರ ಸಮಸ್ಯೆಗಳನ್ನು ಕೇಳಿಸಿಕೊಳ್ಳುವ ಮೂಲಕ ಮತ್ತು ಭವಿಷ್ಯದ ಮುನ್ನೋಟಗಳ ಆಧಾರದ ಮೇಲೆ ಪರಿಹಾರಗಳನ್ನು ಒದಗಿಸುವ ಮೂಲಕ ಅವರಿಗೆ ಸಹಾಯ ಮಾಡುವಲ್ಲಿ Astrotalk ಪ್ರಮುಖ ಪಾತ್ರ ವಹಿಸುತ್ತಿದೆ. 

  Astrotalkನ ಪ್ರಗತಿ

  ಪ್ರಾರಂಭವಾದ 4 ವರ್ಷಗಳಲ್ಲಿ, Astrotalk ಜನರು ಇಂದು ಜ್ಯೋತಿಷಿಗಳೊಂದಿಗೆ ಸಂವಹನ ನಡೆಸುವ ವಿಧಾನವನ್ನು ಬದಲಾಯಿಸುತ್ತಿದೆ. “ಕೇವಲ 4 ವರ್ಷಗಳಲ್ಲಿ 2 ಕೋಟಿಗೂ ಹೆಚ್ಚು ಜನರ ಬದುಕಿನಲ್ಲಿ ಸಕಾರಾತ್ಮಕ ಪರಿಣಾಮ ಉಂಟು ಮಾಡುವ ಅವಕಾಶ ನಮಗೆ ದೊರೆತಿದ್ದಕ್ಕೆ ನಾನು ವಿನೀತನಾಗಿದ್ದೇನೆ ಹಾಗೂ ಅದೇ ಸಮಯದಲ್ಲಿ ಆ ಬಗ್ಗೆ ಹೆಮ್ಮೆಯ ಭಾವವೂ ಇದೆ” ಎಂದು ಪುನೀತ್ ಹಂಚಿಕೊಂಡಿದ್ದಾರೆ. 

  ಸ್ಥಾಪಕರ ಪ್ರಕಾರ, ಎರಡು ಸಂಗತಿಗಳು ಅವರ ಪರವಾಗಿ ಕಾರ್ಯನಿರ್ವಹಿಸಿವೆ:
  1. ನಿಖರವಾಗಿ ಭವಿಷ್ಯವಾಣಿ ನುಡಿಯುವ ನೈಜ ಜ್ಯೋತಿಷಿಗಳನ್ನು ಹೊಂದಿರುವುದು ಹಾಗೂ ಅವರು ಜನರ ವೈಯಕ್ತಿಕ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಪರಿಹರಿಸುವ ಸಹಾನುಭೂತಿ ಹೊಂದಿದ್ದಾರೆ.
  2. ಅದು ಅತ್ಯುತ್ತಮ ಉತ್ಪನ್ನವನ್ನು ನಿರ್ಮಿಸುವುದೇ ಇರಲಿ ಅಥವಾ ಅತ್ಯಂತ ಸಹಾಯಕವಾದ ಗ್ರಾಹಕ ಬೆಂಬಲ ತಂಡವನ್ನು ರಚಿಸುವುದೇ ಆಗಿರಲಿ, ಗ್ರಾಹಕರಿಗೆ ಸಾಧ್ಯವಾದಷ್ಟು ಅತ್ಯುತ್ತಮವಾದ ಸೇವೆ ಒದಗಿಸಬೇಕು ಎಂಬ ಧ್ಯೇಯ.

  ಈ ಹಾದಿಯಲ್ಲಿ ಎದುರಾದ ಅತಿ ದೊಡ್ಡ ಸಮಸ್ಯೆ

  ಒಂದು ವರ್ಷದಲ್ಲಿ 27ಕ್ಕಿಂತ ಹೆಚ್ಚಿನ ಪುನರಾವರ್ತನೆ ದರ ಹೊಂದಿರುವ ಉದ್ಯಮಕ್ಕೆ, ಗ್ರಾಹಕರ ಬದುಕುಗಳಲ್ಲಿ ಸಕಾರಾತ್ಮಕ ಬದಲಾವಣೆ ತರಲು ಆ ಪ್ಲಾಟ್‌ಫಾರ್ಮ್‌ನಲ್ಲಿ ಅತ್ಯುತ್ತಮ ಜ್ಯೋತಿಷಿಗಳನ್ನು ಹೊಂದುವುದು ಅತ್ಯಂತ ಕಷ್ಟಕರವಾದದ್ದು. “ಪ್ರಾರಂಭವಾದಾಗಿನಿಂದ ಈ ದಿನದವರೆಗೂ ನಮಗಿರುವ ಅತಿ ದೊಡ್ಡ ಸವಾಲು ಎಂದರೆ ನೈಜ ಜ್ಯೋತಿಷಿಗಳನ್ನು ಹುಡುಕುವುದಾಗಿದೆ. ಭಾರತದ ಎಲ್ಲೆಡೆಯಿಂದ ನಾವು ಸಾವಿರಾರು CVಗಳನ್ನು ಪಡೆದಿದ್ದೇವೆ ಆದರೆ ಅವುಗಳಲ್ಲಿ 5%ಕ್ಕಿಂತ ಕಡಿಮೆ ಮಂದಿ ಮಾತ್ರ ನಮ್ಮ ಸಂದರ್ಶನ ಪ್ರಕ್ರಿಯೆಯನ್ನು ಪೂರೈಸಲು ಅರ್ಹರಾಗಿದ್ದಾರೆ. ಮಾರುಕಟ್ಟೆಯಲ್ಲಿ ಸ್ವಯಂ-ಘೋಷಿತ ಜ್ಯೋತಿಷಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ, ಹಾಗಾಗಿ ನೈಜ ಜ್ಯೋತಿಷಿಗಳನ್ನು ಗುರುತಿಸಲು ಅದು 5-7 ಸಂದರ್ಶನಗಳನ್ನು ತೆಗೆದುಕೊಳ್ಳುತ್ತದೆ” ಎನ್ನುತ್ತಾರೆ ಪುನೀತ್.

  ಅತಿ ದೊಡ್ಡ ಕಲಿಕೆ

  Astrotalk ಪ್ರಾರಂಭವಾದಾಗ, ಅದು ಜ್ಯೋತಿಷಿಗಳೊಂದಿಗೆ ವೀಡಿಯೊ ಸಮಾಲೋಚನೆಯನ್ನು ಒದಗಿಸುತ್ತಿತ್ತು. ಅದು ಸರಿಯಾಗಿಯೇ ಇತ್ತು, ಆದರೆ ನಮ್ಮ ತಂಡವು ಗ್ರಾಹಕರೊಂದಿಗೆ ಮಾತನಾಡಿದಾಗ, ಅವರು ಆಡಿಯೋ ಕರೆ ಆಯ್ಕೆಯೂ ಇರಲಿ ಎಂದು ವಿನಂತಿಸಿದರು. ಯಾವಾಗ ಆಡಿಯೋ ಕರೆ ಆಯ್ಕೆ ತೆರೆದುಕೊಂಡಿತೋ, ಆಗ ಜನರು ಅತ್ಯಂತ ಹಿತಕರವಾಗಿ ಖಾಸಗಿಯಾಗಿ ಮಾತನಾಡಲು ಇಷ್ಟಪಟ್ಟರು, ಅದರಿಂದಾಗಿ ಉದ್ಯಮವು ಸಕಾರಾತ್ಮಕ ಬೆಳವಣಿಗೆ ಕಾಣಲಾರಂಭಿಸಿತು. ಇದನ್ನು ಅಳವಡಿಸಿಕೊಂಡು, ಈ ಸಂಸ್ಥೆಯು chat service with astrologers ಪ್ರಾರಂಭಿಸಿದ್ದು, ಅದೂ ಸಹ ಬಳಕೆದಾರರಿಂದ ಹೆಚ್ಚು ಶ್ಲಾಘನೆಗೆ ಒಳಗಾಗಿದೆ. “ಇದರಿಂದ ಅಳವಡಿಸಿಕೊಂಡಿದ್ದು ಏನೆಂದರೆ ಅತ್ಯುತ್ತಮ ಉತ್ಪನ್ನವನ್ನು ನಿರ್ಮಿಸಲು ಇರುವ ಒಂದೇ ವಿಧಾನ ಎಂದರೆ ಗ್ರಾಹಕರೊಂದಿಗೆ ಮಾತನಾಡುವುದು ಮತ್ತು ಅವರಿಗಾಗಿ ಅತ್ಯುತ್ತಮವಾಗಿರುವುದುನ್ನು ಮಾಡುವುದನ್ನು ನಿರಂತರವಾಗಿ ಇರಿಸಬೇಕು ಎಂಬುದಾಗಿದೆ” ಎಂದಿದ್ದಾರೆ ಪುನೀತ್. ಅವರ ಯಶಸ್ಸಿನ ರಹಸ್ಯವೇನು ಎಂದು ಕೇಳಿದ ಪ್ರಶ್ನೆಗೂ ಸಹ ಅವರು ಇದೇ ಉತ್ತರವನ್ನು ನೀಡಿದ್ದಾರೆ.

  ಸಕ್ಸಸ್ ಮಂತ್ರ
  “ನಿಮ್ಮ ಗ್ರಾಹಕರೊಂದಿಗೆ ಮಾತನಾಡಿ” ಎನ್ನುತ್ತಾರೆ ಪುನೀತ್. ಅವರ ಪ್ರಕಾರ, ಗ್ರಾಹಕರಿಗೆ ಸರಿಯಾಗಿ ಸೇವೆ ನೀಡುವುದು, ಅವರ ಸಮಸ್ಯೆಗಳನ್ನು ಕೇಳಿಸಿಕೊಳ್ಳುವುದು ಹಾಗೂ ಅವುಗಳನ್ನು ಪರಿಹರಿಸುವುದಕ್ಕಿಂತ ಹೆಚ್ಚಿನದು ಏನೂ ಇಲ್ಲ. “ನೀವು ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸಿದರೆ, ಅವರು ನಿಮ್ಮ ಉದ್ಯಮದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತಾರೆ” ಎಂದೂ ಸಹ ಅವರು ಹೇಳಿದ್ದಾರೆ.

  Astrotalk ಸೌಲಭ್ಯಗಳು ಹಾಗೂ ವಿಸ್ತರಣೆ ಯೋಜನೆಗಳು

  ಭಾರತದಲ್ಲಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಸ್ಟಾರ್ಟಪ್‌ಗಳಲ್ಲಿ Astrotalk ಕೂಡ ಒಂದು. “ನಾವು ಪ್ರತಿ ದಿನ 32 ಲಕ್ಷ ರೂ.ಗಳ ಆದಾಯ ಗಳಿಸುತ್ತಿದ್ದೇವೆ” ಎನ್ನುತ್ತಾರೆ ಪುನೀತ್ ಗುಪ್ತಾ. ಪ್ರಸ್ತುತ, ಈ ಆ್ಯಪ್ ತನ್ನ ಪ್ಯಾನೆಲ್‌ನಲ್ಲಿ 1500ಕ್ಕೂ ಹೆಚ್ಚು ಜ್ಯೋತಿಷಿಗಳನ್ನು ಹೊಂದಿದ್ದು, ಅವರು ಪ್ರತಿ ದಿನ ಕರೆ ಮತ್ತು ಚಾಟ್ ಮೂಲಕ 1,40,000 ನಿಮಿಷಗಳ ಅವಧಿಯ ಜ್ಯೋತಿಷ್ಯ ಸಮಾಲೋಚನೆ ನೀಡುತ್ತಿದ್ದಾರೆ. ಅದರಲ್ಲಿ ಸುಮಾರು 68,000 ನಿಮಿಷಗಳ ಸಮಾಲೋಚನೆಯು ಪ್ರೀತಿ, ಸಂಬಂಧಗಳು ಮತ್ತು ವಿವಾಹ ಸಂಬಂಧಿ ಸಮಸ್ಯೆಗಳಿಗೆ ಸಂಬಂಧಿಸಿದ್ದಾಗಿದೆ. ಅದೇ ರೀತಿ, ಪ್ರತಿ ದಿನ ಸುಮಾರು 32,000 ನಿಮಿಷಗಳ ಸಮಾಲೋಚನೆಯು ಉದ್ಯೋಗ, ಕರಿಯರ್ ಮತ್ತು ಬ್ಯುಸಿನಸ್‌ಗೆ ಸಂಬಂಧಿಸಿದ್ದಾಗಿದೆ.

  ವಿಸ್ತರಣೆಯ ಕುರಿತು ಮಾತನಾಡಿದ ಅದರ ಸ್ಥಾಪಕರು, “ಭಾರತದಲ್ಲಿ ಈಗಾಗಲೇ ನಾವು ಉತ್ತಮವಾಗಿ ಸೇವೆ ನೀಡುತ್ತಿದ್ದೇವೆ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಂದಲೂ ಗ್ರಾಹಕರನ್ನು ಹೊಂದಿದ್ದೇವೆ. ಅಲ್ಲದೆ, ನಮ್ಮ ಗಮನವನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳ ಮೇಲೆ ಇನ್ನಷ್ಟು ಕೇಂದ್ರೀಕರಿಸಲು ಹಾಗೂ USA, ಕೆನಡಾ, ಆಸ್ಟ್ರೇಲಿಯಾ, ಸಿಂಗಪುರ, ಮಲೇಷ್ಯಾ, UAE ಒಳಗೊಂಡ ರಾಷ್ಟ್ರಗಳಿಗೆ ಸೇವೆ ಒದಗಿಸಲು ಯೋಜಿಸುತ್ತಿದ್ದೇವೆ.”

  “ಇದರೊಂದಿಗೆ, 2022ರ ಅಂತ್ಯಕ್ಕೆ 10,000ಕ್ಕೂ ಹೆಚ್ಚು ಜ್ಯೋತಿಷಿಗಳನ್ನು ನೇಮಿಸಿಕೊಳ್ಳಲು ನಾವು ಉತ್ಸುಕರಾಗಿದ್ದೇವೆ. ಮತ್ತು ವೇಗವಾಗಿ ಸೇವೆಯನ್ನು ವಿಸ್ತರಿಸಲು ನಾವು ಇದೇ ಮೊದಲ ಬಾರಿ ಹೊಸ ಗ್ರಾಹಕರಿಗೆ ಉಚಿತವಾಗಿ chat service with astrologers ಎಂಬ ಸೌಲಭ್ಯ ನೀಡುತ್ತಿದ್ದು, ಅದರಿಂದ ಅವರು ನಮ್ಮ ಸೇವೆಗಳನ್ನು ಒಮ್ಮೆ ಪ್ರಯತ್ನಿಸಬಹುದು ಹಾಗೂ ನಾವು ನೀಡುವ ಸೇವೆಯನ್ನು ನೋಡಬಹುದು. ಅವರಲ್ಲಿ ಬಹುತೇಕರು ನಮ್ಮ ಸೆಷನ್ ಅನ್ನು ಇಷ್ಟಪಟ್ಟಿದ್ದಾರೆ ಹಾಗೂ ಒಂದು ವಾರದಲ್ಲಿ ಮರಳಿ ಬಂದಿದ್ದಾರೆ” ಎಂದು ಅವರು ವಿವರಿಸಿದ್ದಾರೆ.

  To know more -  https://astrotalk.onelink.me/3LHk/3c7c2708
  ಹಕ್ಕು ನಿರಾಕರಣೆ: Astrotalk ಪರವಾಗಿ Studio18 ಈ ಲೇಖನವನ್ನು ಬರೆದಿದೆ.
  Published by:Soumya KN
  First published: