ನಾವೆಲ್ಲಾ ಚಿಕ್ಕವರಾಗಿದ್ದಾಗ (Child) ಮನೆಯಲ್ಲಿ ಸಂಜೆ ಹೊತ್ತು ಮತ್ತು ರಾತ್ರಿ (Night) ಹೊತ್ತು ವಿದ್ಯುತ್ ಕೈ ಕೊಟ್ಟರೆ (Power Cut) ನಮಗೆ ಮೊದಲು ನೆನಪಿಗೆ ಬರುತ್ತಿದ್ದದ್ದು ಮೇಣದ ಬತ್ತಿ (Candle Light) ಅಂತ ಹೇಳಬಹುದು. ವಿದ್ಯುತ್ ಕೈ ಕೊಟ್ಟಾಗ ನಮ್ಮ ಕೈ ನೇರವಾಗಿ ಮೇಣದ ಬತ್ತಿಯ ಕಡೆಗೆ ಹೋಗುತ್ತಿತ್ತು. ಈ ಸಂದರ್ಭದಲ್ಲಿಯೇ ನಮಗೆ ಈ ಮೇಣದ ಬತ್ತಿಯ ಪರಿಚಯವಾಗಿದ್ದು ಅಂತ ಹೇಳಿದರೆ ತಪ್ಪಾಗುವುದಿಲ್ಲ. ಅಲ್ಲದೆ ಸ್ವಲ್ಪ ದೊಡ್ಡವರಾಗಿ ಬೆಳೆದ ನಂತರ ಈ ಕ್ಯಾಂಡಲ್ ಅನ್ನು ಎಲ್ಲೆಲ್ಲಿ ಬಳಸುತ್ತಾರೆ ಅನ್ನೋದರ ಬಗ್ಗೆ ಸಂಪೂರ್ಣವಾದ ಅರಿವು ನಮಗಾಯಿತು ಅಂತ ಹೇಳಬಹುದು.
ಈ ಕ್ಯಾಂಡಲ್ ಗಳು ಈಗ ಅನೇಕ ರೀತಿಯ ಕೆಲಸಗಳಿಗೆ ಬಳಸಲಾಗುತ್ತದೆ ಅಂತ ಹೇಳಬಹುದು. ಪ್ರೇಮಿಗಳು ಮತ್ತು ವಿವಾಹಿತರು ತಮ್ಮ ಸಂಗಾತಿಯನ್ನು ರಾತ್ರಿ ಹೊತ್ತು ಹೊಟೇಲ್ ಗೆ ಊಟಕ್ಕೆ ಕರೆದುಕೊಂಡು ಹೋದರೆ, ಅಲ್ಲಿಯೂ ಸಹ ಊಟದ ಟೇಬಲ್ ಮೇಲೆ ವಿವಿಧ ರೀತಿಯ ಕ್ಯಾಂಡಲ್ ಗಳಿರುವುದನ್ನು ನಾವು ನೋಡಿರುತ್ತೇವೆ.
ಒಟ್ಟಿನಲ್ಲಿ ಕತ್ತಲೆಯಲ್ಲಿ ಈ ಕ್ಯಾಂಡಲ್ ನ ಬೆಳಕು ಮಾತ್ರ ನೋಡುಗರಿಗೆ ಒಂದು ಆತ್ಮವಿಶ್ವಾಸವನ್ನು ತುಂಬುತ್ತದೆ ಅಂತ ಹೇಳಿದರೆ ಸುಳ್ಳಲ್ಲ. ಕೃತಜ್ಞತೆಯ ಅಭಿವ್ಯಕ್ತಿಯಾಗಿರಬಹುದು, ವಿಷಾದವಾಗಿರಬಹುದು ಅಥವಾ ಪ್ರೀತಿಯ ನಿವೇದನೆ ಆಗಿರಬಹುದು, ಎಲ್ಲದ್ದಕ್ಕೂ ನಮಗೆ ಕ್ಯಾಂಡಲ್ ಬೇಕು.
ಇದನ್ನೂ ಓದಿ: Uttara Kannada: 414 ವರ್ಷಗಳ ಹಳೆಯ 'ಮಹಾಸ್ಯಂದನ ರಥ'ಕ್ಕೆ ನಿವೃತ್ತಿ!
ಏನಿದು ಕ್ಯಾಂಡಲ್ ಥೆರಪಿ?
ಆದರೆ ಈ ಕ್ಯಾಂಡಲ್ ಗಳ ಬಗ್ಗೆ ಅನೇಕರಿಗೆ ತಿಳಿದಿರದ ಒಂದು ವಿಧಾನವಿದೆ, ಅದು ಏನೆಂದರೆ ಕ್ಯಾಂಡಲ್ ಥೆರಪಿ ಅಂತ. ನೀವು ಇನ್ನೊಬ್ಬರ ಆತ್ಮವಿಶ್ವಾಸವನ್ನು ಹೆಚ್ಚಿಸಲು ಈ ಥೆರಪಿ ತುಂಬಾನೇ ಪ್ರಾಮುಖ್ಯತೆಯನ್ನು ವಹಿಸುತ್ತದೆ ಅಂತ ಹೇಳಬಹುದು.
ಕ್ಯಾಂಡಲ್ ಥೆರಪಿ ಎಂಬ ತನ್ನ ಪುಸ್ತಕದಲ್ಲಿ, ಲೇಖಕ ಕ್ಯಾಥರೀನ್ ರಿಗ್ಸ್ ಬರ್ಗೆಸೆನ್, ಕ್ಯಾಂಡಲ್ ಥೆರಪಿಯು ನಿಮ್ಮ ದೈನಂದಿನ ಜೀವನದಲ್ಲಿ ಒಳ್ಳೆಯದನ್ನು ಬಯಸುವ ಸಂಪ್ರದಾಯವನ್ನು ತರಲು ನಿಮ್ಮನ್ನು ಪ್ರೋತ್ಸಾಹಿಸುತ್ತದೆ ಎಂದು ಬರೆಯುತ್ತಾರೆ.
ಮೇಣದಬತ್ತಿಯ ಜ್ವಾಲೆಯು ಆತ್ಮದ ಒಂದು ರೂಪಕವಾಗಿದೆ, ಅದು ಮನಸ್ಸಿನಲ್ಲಿ ಶಾಂತಿಯನ್ನು ತರುತ್ತದೆ. ಮೇಣದಬತ್ತಿಯ ಜ್ವಾಲೆಯು 'ಆತ್ಮ' ವನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ.
ಯಾವ ಬಣ್ಣದ ಕ್ಯಾಂಡಲ್ ಯಾವ ಕೆಲಸವನ್ನು ಮಾಡುತ್ತವೆ?
ನಿರ್ಬಂಧಿತ ಭಾವನೆಗಳು ಮತ್ತು ಸಂಬಂಧಗಳನ್ನು ಅನ್ಲಾಕ್ ಮಾಡಲು ಹೊಸ-ಯುಗದ ವೈದ್ಯರು ಈ ಕ್ಯಾಂಡಲ್ ಥೆರಪಿ ಎಂಬ ಪ್ರಾಚೀನ ಕಲೆಯನ್ನು ಬಳಸುತ್ತಾರೆ.
ಉರಿಯುತ್ತಿರುವ ಮೇಣದ ಬತ್ತಿಗಳು ದೇಹದೊಳಗೆ ವಿಭಿನ್ನ ಆವರ್ತನಗಳನ್ನು ಕಂಪಿಸುತ್ತವೆ. ಬಿಳಿ ಮೇಣದಬತ್ತಿಗಳು ದೇಹವನ್ನು ಶುದ್ಧೀಕರಿಸುತ್ತವೆ ಮತ್ತು ಶಾಂತಿಯನ್ನು ತರುತ್ತವೆ.
ಕಪ್ಪು ಮೇಣದಬತ್ತಿ ನಕಾರಾತ್ಮಕ ಶಕ್ತಿಯನ್ನು ಸುಡುತ್ತದೆ. ಪ್ರೀತಿ ಮತ್ತು ಭಾವೋದ್ರೇಕಕ್ಕಾಗಿ ಕೆಂಪು ಮೇಣದಬತ್ತಿಗಳನ್ನು ಹಚ್ಚಲಾಗುತ್ತದೆ. ಅವು ಮೂಲ ಚಕ್ರವನ್ನು ಶುದ್ಧೀಕರಿಸುತ್ತವೆ. ಹಸಿರು ಮೇಣದಬತ್ತಿಗಳು ಗುಣಪಡಿಸುವಿಕೆಯನ್ನು ಉತ್ತೇಜಿಸುತ್ತವೆ, ಹಣ ಮತ್ತು ಅದೃಷ್ಟವನ್ನು ಸಹ ಆಕರ್ಷಿಸುತ್ತವೆ.
ಕಿತ್ತಳೆ ಬಣ್ಣದ ಮೇಣದಬತ್ತಿಗಳು ಆಕರ್ಷಣೆಯನ್ನು ಪ್ರತಿನಿಧಿಸುತ್ತವೆ ಮತ್ತು ಅವು ನಾಭಿ ಚಕ್ರವನ್ನು ಗುಣಪಡಿಸುತ್ತವೆ ಮತ್ತು ಯಾವುದೇ ಭಾವನಾತ್ಮಕ ಆಘಾತಗಳನ್ನು ಶಮನಗೊಳಿಸುತ್ತವೆ.
ಇದನ್ನೂ ಓದಿ: Wedding Dream Meaning: ಕನಸಲ್ಲಿ ಮದುವೆ ಆದ್ರೆ ಇದಂತೆ ಅರ್ಥ! ಇದ್ರ ಬಗ್ಗೆ ತಿಳಿದ್ರೆ ಶಾಕ್ ಆಗ್ತೀರಿ
ನೀಲಿ ಬಣ್ಣದ ಮೇಣದಬತ್ತಿಗಳು ಕ್ಷಮೆಗಾಗಿ ಬಳಸಲಾಗುತ್ತದೆ. ಲ್ಯಾವೆಂಡರ್ ಬಣ್ಣದ ಮೇಣದಬತ್ತಿಗಳು ಆತ್ಮವನ್ನು ಶಮನಗೊಳಿಸಿದರೆ, ನೇರಳೆ ಬಣ್ಣದ ಮೇಣದಬತ್ತಿಗಳು ಅಡೆತಡೆಗಳನ್ನು ನಿವಾರಿಸಲು ಸಹಾಯ ಮಾಡುತ್ತವೆ.
ಆತ್ಮವನ್ನು ಪುನರುಜ್ಜೀವನಗೊಳಿಸಲು ಪೀಚ್ ಬಣ್ಣದ ಮೇಣದಬತ್ತಿಗಳನ್ನು ಸುಡಲಾಗುತ್ತದೆ. ನೀವು ಆಧ್ಯಾತ್ಮಿಕ ಗುಣಪಡಿಸುವಿಕೆಯನ್ನು ಹೆಚ್ಚಿಸಲು ಬಯಸಿದರೆ, ಮೆಜೆಂಟಾ ಬಣ್ಣದ ಮೇಣದಬತ್ತಿಗಳನ್ನು ಉರಿಸಿ.
ಈ ದಿನಗಳಲ್ಲಿ ನಿಮ್ಮ ಸ್ವಂತ ಮೇಣದಬತ್ತಿಗಳನ್ನು ತಯಾರಿಸುವ ಪ್ರವೃತ್ತಿ ಸಹ ಹೆಚ್ಚುತ್ತಿದೆ. ಈ ಮೇಣದಬತ್ತಿಗಳ ಶಕ್ತಿಯು ನೀವು ಖರೀದಿಸುವ ಮೇಣದಬತ್ತಿಗಳಿಗಿಂತ ಶುದ್ಧವಾಗಿದೆ ಎಂದು ಹೇಳಲಾಗುತ್ತದೆ.
ನೀವು ಸಹ ನಿಮ್ಮ ಬಿಡುವಿನ ಸಮಯದಲ್ಲಿ ಕೆಲವು ಮೇಣದ ಬತ್ತಿ ತಯಾರಿಕೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ ಮತ್ತು ಕ್ಯಾಂಡಲ್ ಥೆರಪಿಯನ್ನು ಪಡೆಯಿರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ