ಪೂರ್ಣಿಮೆ (Poornima) ಅಥವಾ ಹುಣ್ಣಿಮೆಯನ್ನು (Purnima) ಬಹಳ ಪವಿತ್ರ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ವಿವಿಧ ರೀತಿಯ ಪೂಜೆಯನ್ನು (Pooje) ಸಹ ಮಾಡಿ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಹಾಗೆಯೇ ಮುಖ್ಯವಾಗಿ ಈ ವಾರದ ಹುಣ್ಣಿಮೆಯ ದಿನ ಶ್ರೀ ಸತ್ಯನಾರಾಯಣ ವ್ರತವನ್ನು(Sathyanarayan Vrat) ಮಾಡಲಾಗುತ್ತದೆ. ವಿಷ್ಣುವಿನ ಹಲವು ರೂಪಗಳಿವೆ, ಅವುಗಳಲ್ಲಿ ಒಂದು ಶ್ರೀ ಸತ್ಯನಾರಾಯಣ ಕೂಡ. ಶ್ರೀ ಹರಿಯ ಈ ರೂಪವನ್ನು ಸತ್ಯದ ರೂಪವೆಂದು ಪರಿಗಣಿಸಲಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಸತ್ಯನಾರಾಯಣ ಪೂಜೆ (Puje) ಮತ್ತು ಉಪವಾಸವನ್ನು ಮಾಡುವುದರಿಂದ ಆರೋಗ್ಯ, ಸಮೃದ್ಧಿ, ಸಂಪತ್ತು ಸಿಗುತ್ತದೆ. ಮುಖ್ಯವಾಗಿ ಸತ್ಯನಾರಾಯಣ ಪೂಜೆಯನ್ನು ಯಾವುದೇ ತಿಂಗಳ ಶುಕ್ಲಪಕ್ಷದ ಶುಭ ಸಮಯದಲ್ಲಿ ಮಾಡಬಹುದು. ಆದರೆ ಹುಣ್ಣಿಮೆ ದಿನ ಮನೆಯಲ್ಲಿ ಸತ್ಯನಾರಾಯಣ ಕತೆ ಮಾಡಿಸುವುದು ಬಹಳ ಮಂಗಳಕರವೆಂದು ಹೇಳಲಾಗುತ್ತದೆ. ಈ ಬಾರಿ ಯಾವ ಹುಣ್ಣಿಮೆಯಂದು ಈ ಪೂಜೆ ಮಾಡಿಸಬೇಕು, ಮುಹೂರ್ತ ಹಾಗೂ ಪೂಜಾ ವಿಧಿ-ವಿಧಾನ ಇಲ್ಲಿದೆ.
ಪೂರ್ಣಿಮೆಯ ದಿನವು ಭಗವಾನ್ ಶ್ರೀ ಹರಿ ವಿಷ್ಣುವಿಗೆ ಅತ್ಯಂತ ಪ್ರಿಯವಾದ ದಿನ ಎನ್ನಲಾಗುತ್ತದೆ. ಪಂಚಾಂಗದ ಪ್ರಕಾರ, ಈ ತಿಂಗಳ ಸತ್ಯನಾರಾಯಣ ವ್ರತವನ್ನು ಶುಕ್ಲ ಪಕ್ಷದ ಪೂರ್ಣಿಮಾ ತಿಥಿಯಂದು ಅಂದರೆ ಜನವರಿ 6 , 2023 ರಂದು ಮಾಡಲಾಗುತ್ತದೆ. ಶಾಸ್ತ್ರಗಳ ಪ್ರಕಾರ, ಹುಣ್ಣಿಮೆಯ ದಿನದಂದು ಬೆಳಗ್ಗೆ ಮತ್ತು ಸಂಜೆ ಸತ್ಯನಾರಾಯಣನನ್ನು ಪೂಜಿಸಲು ಒಳ್ಳೆಯ ಸಮಯ ಎಂದು ಹೇಳಲಾಗುತ್ತದೆ. ಆದರೆ ಸಂಜೆಯ ಸಮಯದಲ್ಲಿ ಮಾಡಿಸಿದರೆ ಇನ್ನೂ ಹೆಚ್ಚಿನ ಲಾಭ ಇದೆ ಎನ್ನುವ ನಂಬಿಕೆ ಸಹ ಇದೆ.
ಸತ್ಯನಾರಾಯಣ ವ್ರತ ಪೂಜಾ ವಿಧಿ
ಬೆಳಗ್ಗೆ ಸ್ನಾನದ ನಂತರ, ಸತ್ಯನಾರಾಯಣನ ಪ್ರತಿಮೆಯನ್ನು ಸ್ಥಾಪಿಸಿ. ಇಲ್ಲದಿದ್ದರೆ ಸತ್ಯನಾರಾಯಣ ದೇವರ ಫೋಟೋ ಸಹ ಸಿಗುತ್ತದೆ. ಇದಕ್ಕೆ ಬಲಗಡೆ ಹಾಗೂ ಎಡಗಡೆ ಬಾಳೆಕಂಬವನ್ನು ನಿಲ್ಲಿಸಬೇಕು. ನಂತರ ಕಲಶವನ್ನು ಸಿದ್ಧಮಾಡಿಕೊಳ್ಳಿ. ಆ ಕಲಶದಲ್ಲಿ ನೀರು ಪೂರ್ತಿಯಾಗಿ ತುಂಬಿರಬೇಕು ಹಾಗೂ ಮೇಲೆ ಮಾವಿನ ಎಲೆ ಮತ್ತು ತೆಂಗಿನಕಾಯಿ ಇಡಬೇಕು.
ನಂತರ ಈ ಕಲಶವನ್ನು ಇಟ್ಟು ತುಪ್ಪದ ದೀಪವನ್ನು ಹಚ್ಚಿ. ಇದರ ನಂತರ, ಶ್ರೀಗಂಧದಿಂದ ಸತ್ಯನಾರಾಯಣ ದೇವರಿಗೆ ತಿಲಕ ಹಚ್ಚಿ. ಹೂವಿನ-ಮಾಲೆ, ಹಣ್ಣುಗಳು ಇತ್ಯಾದಿಗಳನ್ನು ಅರ್ಪಿಸಬೇಕು. ಅಲ್ಲದೇ ಇದಕ್ಕೆ ಬಹಳ ಶ್ರೇಷ್ಠವಾದ ಪ್ರಸಾದವನ್ನು ತಯಾರಿಸಬೇಕು. ಹಾಗೂ ಪಂಚಾಮೃತ ಸಹ ತಯಾರಿಸಿಕೊಂಡಿರಬೇಕು. ಕಲಶ ಸ್ಥಾಪನೆ ಹಾಗೂ ಆರಂಭದ ಪೂಜಾ ವಿಧಿ-ವಿಧಾನಗಳ ನಂತರ ಸತ್ಯನಾರಾಯಣ ವ್ರತದ ಕಥೆಯನ್ನು ಕೇಳಿ ಮತ್ತು ಸತ್ಯನಾರಾಯಣನ ಆರತಿಯನ್ನು ಮಾಡಿ .ಕೊನೆಯಲ್ಲಿ ಪಂಚಾಮೃತದ ಪ್ರಸಾದವನ್ನು ತೆಗೆದುಕೊಳ್ಳಬೇಕು. ಈ ದಿನ ಪೂರ್ತಿ ಉಪವಾಸ ಮಾಡಿ ಪೂಜೆ ಮಾಡಿದರೆ ಹೆಚ್ಚಿನ ಫಲ ಸಿಗುತ್ತದೆ. ಪಂಚಾಮೃತ ಪ್ರಸಾದವನ್ನು ಸ್ವೀಕರಿಸಿ ಉಪವಾಸವನ್ನು ಕೊನೆಗೊಳಿಸಬೇಕು.
ಇದನ್ನೂ ಓದಿ: ಶಿವನಿಗೆ ಈ ವಸ್ತುಗಳಿಂದ ಅಭಿಷೇಕ ಮಾಡಿದ್ರೆ ಮೋಕ್ಷ ಸಿಗುತ್ತಂತೆ
ಇನ್ನು ಮುಖ್ಯವಾಗಿ ಈ ಪೂಜೆಯಲ್ಲಿ ತುಳಸಿಯನ್ನು ಅರ್ಪಿಸುವುದು ಮರೆಯಬಾರದು. ಸತ್ಯನಾರಾಯಣನಿಗೆ ತುಳಸಿ ಬಹಳ ಶ್ರೇಷ್ಠ ಎನ್ನಲಾಗುತ್ತದೆ. ಪ್ರತಿ ಹುಣ್ಣಿಮೆಯು ತನ್ನದೇ ಆದ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಈ ದಿನ ಚಂದ್ರನು ಭೂಮಿಗೆ ಹತ್ತಿರ ಬಂದು ತನ್ನ ದೈವಿಕ ಕಿರಣಗಳಿಂದ ಭಕ್ತರ ಇಷ್ಟಾರ್ಥ ಈಡೇರಿಸುತ್ತಾನೆ ಎನ್ನುವ ನಂಬಿಕೆ ಇದೆ ಹಾಗಾಗಿ, ಈ ದಿನ ಸತ್ಯನಾರಾಯಣ ಪೂಜೆ ಮಾಡಬೇಕು. ಶಾಸ್ತ್ರಗಳ ಪ್ರಕಾರ, ಹುಣ್ಣಿಮೆಯ ದಿನದಂದು ಸತ್ಯನಾರಾಯಣನನ್ನು ಪೂಜಿಸುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.
ಸತ್ಯನಾರಾಯಣ ಪೂಜೆ ಶುಭ ಸಮಯ ಮತ್ತು ದಿನಾಂಕ
ಶುಕ್ರವಾರ, ಜನವರಿ 6, 2023
ಪ್ರಾರಂಭ - 6 ಜನವರಿ ಸಮಯ 02:14AM
ಕೊನೆ - 7 ಜನವರಿ ಸಮಯ 04:37AM
ಭಾನುವಾರ, ಫೆಬ್ರವರಿ 5, 2023 (ಮಾಘ ಹುಣ್ಣಿಮೆ)
ಪ್ರಾರಂಭ - ಫೆಬ್ರವರಿ 4 ಸಮಯ 09:29 PM
ಕೊನೆ - ಫೆಬ್ರವರಿ 5 ಸಮಯ 11:58 PM
7 ಮಾರ್ಚ್ 2023 ಮಂಗಳವಾರ (ಫಾಲ್ಗುಣ ಹುಣ್ಣಿಮೆ)
ಪ್ರಾರಂಭ - ಮಾರ್ಚ್ 6 ನೇ ಸಮಯ 04:17 PM
ಕೊನೆ - ಮಾರ್ಚ್ 7 ನೇ ಸಮಯ 06:09 PM
ಬುಧವಾರ, ಏಪ್ರಿಲ್ 5, 2023 (ಚೈತ್ರ ಹುಣ್ಣಿಮೆ)
ಪ್ರಾರಂಭ - 5ನೇ ಏಪ್ರಿಲ್ ಸಮಯ 09:19 AM
ಕೊನೆ - 6ನೇ ಏಪ್ರಿಲ್ ಸಮಯ 10:04 AM
ಶುಕ್ರವಾರ, ಮೇ 5, 2023 (ವೈಶಾಖ ಹುಣ್ಣಿಮೆ)
ಪ್ರಾರಂಭ - ಮೇ 04 ರಂದು ರಾತ್ರಿ 11:44 ಕ್ಕೆ
ಕೊನೆ - ಮೇ 5 ರಂದು ರಾತ್ರಿ 11:03 ಕ್ಕೆ
ಶನಿವಾರ, ಜೂನ್ 3, 2023 (ಜ್ಯೇಷ್ಠ ಹುಣ್ಣಿಮೆ)
ಪ್ರಾರಂಭ- ಜೂನ್ 3 ನೇ ಸಮಯ 11:16AM
ಕೊನೆ- ಜೂನ್ 4 ನೇ ಸಮಯ 09:11AM
ಸೋಮವಾರ, ಜುಲೈ 3, 2023 (ಆಷಾಢ ಹುಣ್ಣಿಮೆ)
ಪ್ರಾರಂಭ - 2ನೇ ಜುಲೈ ಸಮಯ 08:21 PM
ಕೊನೆ - 3ನೇ ಜುಲೈ ಸಮಯ 05:08PM
ಮಂಗಳವಾರ, ಆಗಸ್ಟ್ 1, 2023 (ಶ್ರಾವಣ ಹುಣ್ಣಿಮೆ)
ಪ್ರಾರಂಭ - 1ನೇ ಆಗಸ್ಟ್ ಸಮಯ 03:51AM
ಕೊನೆ - 2ನೇ ಆಗಸ್ಟ್ ಸಮಯ 12:01AM
30 ಆಗಸ್ಟ್ 2023 ದಿನ ಬುಧವಾರ (ಶ್ರಾವಣ ಹುಣ್ಣಿಮೆ)
ಪ್ರಾರಂಭ - 30ನೇ ಆಗಸ್ಟ್ ಸಮಯ 10:58AM
ಕೊನೆ - 31ನೇ ಆಗಸ್ಟ್ ಸಮಯ 07:05AM
ಶುಕ್ರವಾರ, 29 ಸೆಪ್ಟೆಂಬರ್ 2023 (ಭಾದ್ರಪದ ಹುಣ್ಣಿಮೆ)
ಪ್ರಾರಂಭ- ಸೆಪ್ಟೆಂಬರ್ 28 ರಂದು ಸಂಜೆ 06:49 ಕ್ಕೆ
ಕೊನೆ- ಸೆಪ್ಟೆಂಬರ್ 29 ರಂದು ಮಧ್ಯಾಹ್ನ 03:26 ಕ್ಕೆ
ಶನಿವಾರ 28 ಅಕ್ಟೋಬರ್ 2023 (ಅಶ್ವಿನ್ ಹುಣ್ಣಿಮೆ)
ಪ್ರಾರಂಭ- 28 ಅಕ್ಟೋಬರ್ ಸಮಯ 04:17AM
ಕೊನೆ- 29 ಅಕ್ಟೋಬರ್ ಸಮಯ 01:53AM
ಇದನ್ನೂ ಓದಿ: ಈ ರಾಶಿಯ ಜನರ ಜೀವನದಲ್ಲಿ ಮುಂದಿನ ವಾರ ಅನಿರೀಕ್ಷಿತ ಬೆಳವಣಿಗೆ ಆಗಲಿದೆಯಂತೆ
ಸೋಮವಾರ, ನವೆಂಬರ್ 27, 2023 (ಕಾರ್ತಿಕ ಹುಣ್ಣಿಮೆ)
ಪ್ರಾರಂಭ- 26ನೇ ನವೆಂಬರ್ ಸಮಯ 03:53 PM
ಕೊನೆ- 27ನೇ ನವೆಂಬರ್ ಸಮಯ 02:45PM
ಮಂಗಳವಾರ, 26 ಡಿಸೆಂಬರ್ 2023 (ಮಾರ್ಗಶಿರ ಹುಣ್ಣಿಮೆ)
ಪ್ರಾರಂಭ- 26ನೇ ಡಿಸೆಂಬರ್ ಸಮಯ 05:46 AM
ಕೊನೆ- 27ನೇ ಡಿಸೆಂಬರ್ ಸಮಯ 06:02 AM
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ