• Home
  • »
  • News
  • »
  • astrology
  • »
  • Adhika Masa: 19 ವರ್ಷಗಳ ನಂತರ ಮತ್ತೆ 2023ರಲ್ಲಿ ಅಧಿಕ ಮಾಸ, ಈ ಸಮಯದಲ್ಲಿ ಅಪ್ಪಿ-ತಪ್ಪಿ ಕೆಲ ಕೆಲಸಗಳನ್ನು ಮಾಡ್ಬೇಡಿ

Adhika Masa: 19 ವರ್ಷಗಳ ನಂತರ ಮತ್ತೆ 2023ರಲ್ಲಿ ಅಧಿಕ ಮಾಸ, ಈ ಸಮಯದಲ್ಲಿ ಅಪ್ಪಿ-ತಪ್ಪಿ ಕೆಲ ಕೆಲಸಗಳನ್ನು ಮಾಡ್ಬೇಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Hindu Calendar: ಹಿಂದೂ ಧರ್ಮದಲ್ಲಿ ಶಿವ ಭಕ್ತರು ಸಾಮಾನ್ಯವಾಗಿ ಒಂದು ತಿಂಗಳು ಆಚರಿಸುವ ಸಾವನ್‌ ಅಥವಾ ಶ್ರಾವಣ ಮಾಸವನ್ನು 2023 ರಲ್ಲಿ ಎರಡು ತಿಂಗಳು ಗಳ ಕಾಲ ಆಚರಿಸಲಾಗುತ್ತದೆ. ಹೌದು, 2023 ರಲ್ಲಿ ಸಂಭವಿಸುವ ಕುತೂಹಲಕಾರಿ ಸಂಗತಿಯ ಬಗ್ಗೆ ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾರೆ.

ಮುಂದೆ ಓದಿ ...
  • Trending Desk
  • 3-MIN READ
  • Last Updated :
  • Share this:

2023ಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿವೆ. ಹಿಂದೂಗಳ (hindu) ಪ್ರಕಾರ ಯುಗಾದಿ (Yugadi) ಹೊಸ ವರ್ಷವಾದರೂ ಹಿಂದೂ ಕ್ಯಾಲೆಂಡರ್‌ ನಲ್ಲಿ (Hindu Calendar) 2023 ಹೊಸ ಕೌತುಕವೊಂದಕ್ಕೆ ಸಾಕ್ಷಿಯಾಗುತ್ತಿದೆ. ಅದೇ ಅಧಿಕ ಮಾಸ. ಹೌದು, ಹಿಂದೂ ಪಂಚಾಂಗದ ಪ್ರಕಾರ 2023 ರಲ್ಲಿ 12 ರ ಬದಲಿಗೆ 13 ತಿಂಗಳುಗಳು ಇರಲಿವೆ. ಅದು ಒಂದೆರಡಲ್ಲ ಬರೋಬ್ಬರಿ 19 ವರ್ಷಗಳ ನಂತರ ಇಂಥದ್ದೊಂದು ಕೌತುಕ ನಡೆಯಲಿದೆ. ಹಿಂದೂ ಧರ್ಮದಲ್ಲಿ ಶಿವ ಭಕ್ತರು ಸಾಮಾನ್ಯವಾಗಿ ಒಂದು ತಿಂಗಳು ಆಚರಿಸುವ ಸಾವನ್‌ ಅಥವಾ ಶ್ರಾವಣ ಮಾಸವನ್ನು 2023 ರಲ್ಲಿ ಎರಡು ತಿಂಗಳು ಗಳ ಕಾಲ ಆಚರಿಸಲಾಗುತ್ತದೆ. ಹೌದು, 2023 ರಲ್ಲಿ ಸಂಭವಿಸುವ ಕುತೂಹಲಕಾರಿ ಸಂಗತಿಯ ಬಗ್ಗೆ ಜ್ಯೋತಿಷಿಗಳು (Astrology) ಭವಿಷ್ಯ ನುಡಿದಿದ್ದಾರೆ.


ಮುಂಬರುವ ವರ್ಷವು ಹಿಂದೂ ಕ್ಯಾಲೆಂಡರ್ ಪ್ರಕಾರ 12ರ ಬದಲಾಗಿ 13 ತಿಂಗಳುಗಳನ್ನು ಹೊಂದಿರುತ್ತದೆ. ವಾಸ್ತವವಾಗಿ, 2023 ರಲ್ಲಿ, ಶಿವನ ಭಕ್ತರು ಆರಾಧಿಸುವ ಸಾವನ್ ತಿಂಗಳನ್ನು ಒಂದಕ್ಕಿಂತ ಎರಡು ತಿಂಗಳ ಕಾಲ ಆಚರಿಸಲಾಗುತ್ತದೆ ಎಂದಿದ್ದಾರೆ. ಜ್ಯೋತಿಷಿಗಳ ಪ್ರಕಾರ, ಅಧಿಕಮಾಸದಿಂದಾಗಿ 19 ವರ್ಷಗಳ ನಂತರ ಶ್ರಾವಣವು ಎರಡು ತಿಂಗಳುಗಳನ್ನು ಹೊಂದಿರುತ್ತದೆ.


ಅಧಿಕಮಾಸ ಯಾವಾಗ ಆರಂಭವಾಗಿ ಯಾವಾಗ ಮುಗಿಯುತ್ತದೆ?


ಅಧಿಕಮಾಸವು ಜುಲೈ 18, 2023 ರಂದು ಪ್ರಾರಂಭವಾಗುತ್ತದೆ ಮತ್ತು ಆಗಸ್ಟ್ 16, 2023 ರವರೆಗೆ ಇರುತ್ತದೆ ಎನ್ನಲಾಗಿದೆ. ಈ ಅವಧಿಯನ್ನು ಭಗವಾನ್ ವಿಷ್ಣುವಿನ ಭಕ್ತಿಯ ತಿಂಗಳು ಎಂದು ಪರಿಗಣಿಸಲಾಗುತ್ತದೆ. ಈ ಮಾಸದಲ್ಲಿ ಶಿವರಾತ್ರಿ ಹಬ್ಬ ಬರುವುದರಿಂದ ಶಿವನನ್ನು ಪೂಜಿಸುವವರಿಗೆ ಹೆಚ್ಚು ಸಮಯ ಸಿಗುತ್ತದೆ.


ಅಧಿಕಮಾಸ ಅಥವಾ ಮಾಲ್ಮಾಸ್ ಎಂದರೇನು?


ಅಧಿಕಮಾಸ, ಮಲಮಾಸ್ ಅಥವಾ ಪುರುಷೋತ್ತಮ್ ಎಂಬುದು ಪ್ರತಿ ಮೂರು ವರ್ಷಗಳಿಗೊಮ್ಮೆ ಬರುತ್ತದೆ. ಇದು ಹಿಂದೂ ಕ್ಯಾಲೆಂಡರ್‌ಗೆ ಹೊಸ ತಿಂಗಳನ್ನು ಸೇರಿಸುವುದನ್ನು ಸೂಚಿಸುತ್ತದೆ.


ಸೌರ ವರ್ಷದಲ್ಲಿ 365 ದಿನಗಳು ಮತ್ತು 6 ಗಂಟೆಗಳಿವೆ. ಅದೇ ಚಂದ್ರವರ್ಷದಲ್ಲಿ 354 ದಿನಗಳಿರುತ್ತವೆ. ಎರಡು ವರ್ಷಗಳ ನಡುವೆ, ಸುಮಾರು 11 ಹೆಚ್ಚುವರಿ ದಿನಗಳಿವೆ.


ಇದನ್ನೂ ಓದಿ: ಬೇಸರವಾದಾಗ ಈ ರಾಶಿಯ ಜನರು ಹೀಗೆಲ್ಲಾ ಮಾಡ್ತಾರಂತೆ


ಆದ್ದರಿಂದ ಪ್ರತಿ ಮೂರು ವರ್ಷಗಳಿಗೊಮ್ಮೆ ಒಂದು ಮಾಸ ಬರುತ್ತದೆ. ಹಾಗಾಗಿ ಪ್ರತಿ ಮೂರು ವರ್ಷದಲ್ಲಿ ಒಮ್ಮೆ ಚಂದ್ರಮಾಸ ಬರುತ್ತದೆ. ಅದು ಹೆಚ್ಚುವರಿಯಾಗಿರುವುದಿಂದ ಅದನ್ನು ಅಧಿಕ ಮಾಸ ಎನ್ನಲಾಗುತ್ತದೆ.


ಅಧಿಕ ಮಾಸದಲ್ಲಿ ಈ ಕೆಲಸಗಳನ್ನು ಮಾಡಬೇಡಿ!


ಮದುವೆಗೆ ಅವಕಾಶವಿಲ್ಲ: ಅಧಿಕ ಮಾಸದಲ್ಲಿ ಕೆಲವೊಂದು ಶಾಸ್ತ್ರೋಕ್ತ ಕೆಲಸಗಳನ್ನು ಮಾಡಬಾರದು ಎಂದು ಹೇಳಲಾಗುತ್ತದೆ. ಅದರಲ್ಲೂ ಮುಖ್ಯವಾಗಿ ಅಧಿಕ ಮಾಸದಲ್ಲಿ ಮದುವೆಗೆ ಅವಕಾಶವಿಲ್ಲ.


ಈ ಸಮಯದಲ್ಲಿ ನೀವು ಮದುವೆಯಾದರೆ ನೀವು ದೈಹಿಕ ಅಥವಾ ಭಾವನಾತ್ಮಕ ಸಂತೋಷವನ್ನು ಅನುಭವಿಸುವುದಿಲ್ಲ. ಪತಿ-ಪತ್ನಿಯರ ನಡುವೆ ಘರ್ಷಣೆ ಇರುತ್ತದೆ. ಮನೆಯಲ್ಲಿ ಶಾಂತಿ ಅಥವಾ ಸಂತೋಷ ಇರುವುದಿಲ್ಲ ಎಂಬುದಾಗಿ ನಂಬಲಾಗುತ್ತದೆ.


ವ್ಯವಹಾರಕ್ಕೂ ಒಳ್ಳೆಯದಲ್ಲ: ವ್ಯಾಪಾರ ವ್ಯವಹಾರಕ್ಕೂ ಅಧಿಕ ಮಾಸ ಒಳ್ಳೆಯದಲ್ಲ ಎನ್ನಲಾಗುತ್ತದೆ. ಹಾಗಾಗಿ ಆಗಸ್ಟ್ ತಿಂಗಳಲ್ಲಿ ಹೊಸ ಅಂಗಡಿ ಅಥವಾ ಕೆಲಸದ ಸ್ಥಳವನ್ನು ತೆರೆಯಬೇಡಿ.


ಮಾಲ್ಮಾಸದಲ್ಲಿ ಹೊಸ ವ್ಯವಹಾರವನ್ನು ಪ್ರಾರಂಭಿಸುವಾಗ ಹಣಕಾಸಿನ ಸಮಸ್ಯೆಗಳು ಉದ್ಭವಿಸುತ್ತವೆ. ಹೊಸ ಯೋಜನೆಗಳು, ಹೊಸ ಉದ್ಯೋಗಾವಕಾಶಗಳು ಅಥವಾ ಪ್ರಮುಖ ಹೂಡಿಕೆಗಳನ್ನು ಕೈಗೊಳ್ಳುವುದನ್ನು ತಪ್ಪಿಸಿ.


ಆಸ್ತಿ ಖರೀದಿ ಬೇಡ: ಈ ಸಮಯದಲ್ಲಿ ಹೊಸ ಮನೆಗಳ ನಿರ್ಮಾಣ ಮತ್ತು ಆಸ್ತಿ ಖರೀದಿಗಳು ಮಂಗಳಕರವೆಂದು ನಂಬಲಾಗುವುದಿಲ್ಲ. ಈ ಅವಧಿಯಲ್ಲಿ ನಿರ್ಮಿಸಲಾದ ಮನೆಗಳು ಎಂದಿಗೂ ಸಂತೋಷ ಅಥವಾ ಶಾಂತಿಯನ್ನು ಅನುಭವಿಸುವುದಿಲ್ಲ. ಅಧಿಕಮಾಸದ ಆಗಮನದ ಮೊದಲು ಅಥವಾ ನಂತರ ಮನೆ ಸೇರಿದಂತೆ ಯಾವುದೇ ಆಸ್ತಿಯನ್ನು ಖರೀದಿಸಿ.


ಇದನ್ನೂ ಓದಿ: ನಿಮ್ಮ ಜನ್ಮದಿನಾಂಕದಲ್ಲಿ ಈ ಡೇಟ್‌ಗಳಿದ್ರೆ ನಿಮ್ಮ ಲೆಕ್ಕ ಪಕ್ಕಾ! ನೀವು ಬ್ಯುಸಿನೆಸ್‌ಮೆನ್ ಆಗೇ ಆಗ್ತೀರಿ!


ಶುಭ ಕಾರ್ಯಗಳನ್ನು ಮಾಡಬೇಡಿ: ಈ ಸಮಯದಲ್ಲಿ ಮಾಡುವ ಕೆಲಸವು ಸಂಬಂಧಗಳನ್ನು ಹಾಳುಮಾಡುವ ಹೆಚ್ಚಿನ ಸಂಭವನೀಯತೆಯನ್ನು ಗಮನಿಸಿದರೆ, ಮುಂಡನ ಮತ್ತು ಕರ್ಣವೇದದಂತಹ ಯಾವುದೇ ಶುಭ ಕಾರ್ಯಗಳನ್ನು ಸಹ ನಿಷೇಧಿಸಲಾಗಿದೆ.

Published by:Sandhya M
First published: