Samudrika Shastra : ಇನ್ಮೇಲೆ ಜನರ ಉಗುರು ಗಮನಿಸಿ, ಉಗುರು ಹೀಗಿದ್ರೆ ಅವ್ರ ವ್ಯಕ್ತಿತ್ವ ಹೀಗೇ ಇರುತ್ತೆ!

Nails Shape: ಸಾಮುದ್ರಿಕ ಶಾಸ್ತ್ರದ ಪ್ರಕಾರ ನಾವು ಮುಂದಿನ ಸಮಸ್ಯೆಗಳನ್ನು ತಿಳಿದುಕೊಂಡು ಅದಕ್ಕೆ ಮುಂಚಿತವಾಗಿಯೇ ಪರಿಹಾರ ಕಂಡುಕೊಳ್ಳಬಹುದು.  ವ್ಯಕ್ತಿಯ ಉಗುರಿನ ಅನುಸಾರ ಜೀವನದ ಬಗ್ಗೆ ತಿಳಿದುಕೊಳ್ಳುವುದು ಬಹಳ ಸುಲಭ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಾಮುದ್ರಿಕ ಶಾಸ್ತ್ರ(Samudrika)  ಎಂದರೆ  ಕೈ ರೇಖೆಗಳು, ಉಗುರುಗಳ ಆಕಾರಗಳು, ಉಗುರುಗಳ ಮೇಲೆ ಇರುವ ಕಲೆಗಳು ನಿಮ್ಮ ಭವಿಷ್ಯದಲ್ಲಿ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ವಿವರವಾಗಿ ಹೇಳುವ ಒಂದು ಪದ್ಧತಿ. ನಮ್ಮ ಸಣ್ಣ ಉಗುರು ಕೂಡ ನಮ್ಮ ಭವಿಷ್ಯವನ್ನು ಹೇಳುತ್ತದೆ. ಆ ವ್ಯಕ್ತಿಯ ವ್ಯಕ್ತಿತ್ವ ಹೇಗಿದೆ ಎಂಬುದನ್ನೂ ಉಗುರಿನ ಆಕಾರವನ್ನು(Nails Shape) ನೋಡಿ ಹೇಳಬಹುದು. ನಿಮಗೆ ನೆನಪಿದೆಯಾ ಬಾಲ್ಯದಲ್ಲಿ ಉಗುರಿನಲ್ಲಿ ಬಿಳಿ ಚುಕ್ಕೆ ಮೂಡಿದರೆ ಹೊಸ ಬಟ್ಟೆ ಸಿಗುತ್ತದೆ ಎಂದು ನಂಬುತ್ತಿದ್ದರು. ಆದರೆ  ಉಗುರುಗಳ ಮೇಲೆ ಮೂಡುವ ಬಿಳಿ ಚುಕ್ಕೆಗಳ ಆಕಾರದ ಮೇಲೆ ಅವರ ಒಳಿತು ಕೆಡಕುಗಳನ್ನು ನಿರ್ಧಾರ ಮಾಡಲಾಗುತ್ತದೆ. ಉಗುರಿನ ಮೇಲಿನ ಕಲೆಗಳಿಂದ ಹೇಗೆ ಭವಿಷ್ಯವನ್ನು ನಾವು ತಿಳಿದುಕೊಳ್ಳಬಹುದೋ, ಹಾಗೆಯೇ  ಉಗುರಿನ ಆಕಾರದಿಂದ ಅವರ ಬಗ್ಗೆ ಸ್ವಾರಸ್ಯಕರ ಮಾಹಿತಿಯನ್ನು ಕೂಡ ತಿಳಿದುಕೊಳ್ಳಬಹುದು. ಕೇವಲ ಅವರ ಬಗ್ಗೆ ಮಾತ್ರವಲ್ಲದೇ ಅವರ ಕುಟುಂಬದ ಬಗ್ಗೆ , ಅವರು ಯಾವ ರೀತಿ ಆಲೋಚನೆ ಮಾಡುತ್ತಾರೆ ಎಂಬುದರ ಬಗ್ಗೆ ಹಾಗೂ ಅವರ ಆರ್ಥಿಕ ಸ್ಥಿತಿ ಹೇಗಿರುತ್ತದೆ ಎಂಬುದನ್ನ ಸಹ ನಾವು ತಿಳಿದುಕೊಳ್ಳಬಹುದು.

ಸಾಮುದ್ರಿಕ ಶಾಸ್ತ್ರದ ಪ್ರಕಾರ ನಾವು ಮುಂದಿನ ಸಮಸ್ಯೆಗಳನ್ನು ತಿಳಿದುಕೊಂಡು ಅದಕ್ಕೆ ಮುಂಚಿತವಾಗಿಯೇ ಪರಿಹಾರ ಕಂಡುಕೊಳ್ಳಬಹುದು.  ವ್ಯಕ್ತಿಯ ಉಗುರಿನ ಅನುಸಾರ ಜೀವನದ ಬಗ್ಗೆ ತಿಳಿದುಕೊಳ್ಳುವುದು ಬಹಳ ಸುಲಭ.

ಕೆಲವರ ಉಗುರು ಚಿಕ್ಕದಾಗಿರುತ್ತದೆ, ಇನ್ನು ಕೆಲವರದ್ದು ಉದ್ದು ಹೀಗೆ ಒಬ್ಬಬ್ಬರದ್ದು ಒಂದೊಂದು ವಿಧದಲ್ಲಿ ಇರುತ್ತದೆ. ಹೇಗೆ ಆಕಾರಗಳು ವಿಭಿನ್ನವಾಗಿರುತ್ತದೆಯೋ ಹಾಗೆಯೇ ಅವರ ವ್ಯಕ್ತಿತ್ವ ಕೂಡ ವಿಭಿನ್ನವಾಗಿರುತ್ತದೆ.

ಇದನ್ನೂ ಓದಿ: ಬುಧವಾರದ ಈ ದಿನ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ; ಇಲ್ಲಿದೆ 12 ರಾಶಿಗಳ ದಿನ ಭವಿಷ್ಯ

ಹಸ್ತ ಸಾಮುದ್ರಿಕ ಪ್ರಕಾರ, ಉಗುರುಗಳು ಅಗಲ, ಸಣ್ಣ ಮತ್ತು ಉದ್ದ ಮತ್ತು ನೈಸರ್ಗಿಕ ಹೊಳಪನ್ನು ಹೊಂದಿದ್ದರೆ ಆ ವ್ಯಕ್ತಿಯ ಆಲೋಚನೆ ಬಹಳ ಚನ್ನಾಗಿರುತ್ತದೆ. ಅಲ್ಲದೇ ಅವರು ಸೂಕ್ಷ್ಮ ಸ್ವಭಾವದವರಾಗಿದ್ದು, ಸಹಾಯ ಮಾಡಬೇಕು ಎಂಬ ಮನಸ್ಥಿತಿಯನ್ನು ಹೊಂದಿರುತ್ತಾರೆ.  ಯಾವಾಗಲೂ ದಾನ ಧರ್ಮದಲ್ಲಿ ಹೆಚ್ಚು ನಮ್ಮನ್ನ ತಾವೂ ತೊಡಗಿಸಿಕೊಂಡಿರುತ್ತಾರೆ.  ಹಾಗೆಯೇ ಕೆಟ್ಟ ಆಲೋಚನೆಗಳು ಇವರ ಬಳಿ ಸುಳಿಯುವುದಿಲ್ಲ. ಇಂಥಹ ವ್ಯಕ್ತಿಗಳು ಜೀವನದಲ್ಲಿ ಶ್ರೇಯಸ್ಸನ್ನು ಪಡೆಯುತ್ತಾರೆ.

ನಿಮ್ಮ ಬೆರಳುಗಳು ದುಂಡಾಗಿದ್ದು ಚಿಕ್ಕ ಉಗುರುಗಳನ್ನು ಹೊಂದಿದ್ದರೆ ಅಂತಹ ಪುರುಷರು ಮತ್ತು ಮಹಿಳೆಯರು ತುಂಬಾ ಪರಿಣಾಮಕಾರಿ ವ್ಯಕ್ತಿತ್ವವನ್ನು ಸಹ ಹೊಂದಿರುತ್ತಾರೆ. ಇಂಥಹ ವ್ಯಕ್ತಿಗಳು ಕುಟುಂಬದ ಮೇಲೆ ಹೆಚ್ಚು ಹಿಡಿತವನ್ನು ಸಾಧಿಸುತ್ತಾರೆ. , ಸಾಮಾನ್ಯವಾಗಿ ಇರುವ ಹೇಳಿದಂತೆ ಕುಟುಂಬದ ಸದಸ್ಯರು ಕೇಳುತ್ತಾರೆ. . ಉದ್ದ, ಸಣ್ಣ ಮತ್ತು ಅಗಲವಾದ ಉಗುರುಗಳನ್ನು ಹೊಂದಿರುವವರು ಯಾವಾಗಲೂ ಸರಿಯಾದ ಹಾದಿಯಲ್ಲಿ ನಡೆಯುತ್ತಾರೆ. ಹಾಗೆಯೇ ಇವರು ಪ್ರತಿಯೊಂದು ಕೆಲಸವನ್ನು ಪರಿಪೂರ್ಣವಾಗಿ ಮಾಡುತ್ತಾರೆ. ಹಾಗೆಯೆ ಬೇರೆ ವ್ಯಕ್ತಿಗಳು ಇವರ ಕೆಲಸದಲ್ಲಿ ಮೂಗು ತೂಸರಿಸುವುದು ಇವರಿಗೆ ಇಷ್ಟವಾಗುವುದಿಲ್ಲ. ಅವರ ಕೆಲಸವನ್ನು ಅವರೇ ಮಾಡಬೇಕು ಎಂಬ ಆಲೋಚನೆ ಇವರದ್ದು.

ಇನ್ನು ಕೆಲವರ ಉಗುರನ್ನು ಗಮನಿಸಿ ನೋಡಿ ಉಗುರುಗಳು ಅಗಲವಾಗಿದ್ದು ಮೇಲ್ಭಾಗದಲ್ಲಿ ಸಣ್ಣದಾಗಿರುತ್ತದೆ. ಇಂಥಹ ಉಗುರನ್ನು ಹೊಂದಿರುವ ವ್ಯಕ್ತಿಗಳು ಹೆಚ್ಚು ಸೋಮಾರಿಗಳು. ಹಾಗೆಯೇ ಇವರು ಹೆಚ್ಚು ಜನರ ಜೊತೆ ಸೇರಲು ಬಯಸುವುದಿಲ್ಲ. ಒಬ್ಬಂಟಿಯಾಗಿರಲು ಬಯಸುತ್ತಾರೆ.

ಇದನ್ನೂ ಓದಿ: ಫೆಂಗ್ ಶುಯಿ ಪ್ರಕಾರ ಮನೆಯಲ್ಲಿ ಈ ಬದಲಾವಣೆ ಮಾಡಿ , ಒತ್ತಡದಿಂದ ಮುಕ್ತಿ ಪಡೆಯಿರಿ

ಹಾಗೆಯೇ ತೆಳುವಾದ ಮತ್ತು ಉದ್ದವಾದ ಉಗುರುಗಳನ್ನು ಹೊಂದಿರುವವರು ಇತರರ ಮೇಲೆ ಹೆಚ್ಚು ಅವಲಂಬಿತರಾಗುತ್ತಾರೆ.ಅವರು ಯಾವ ಉದ್ದೇಶದಿಂದ ಜೊತೆಗಿದ್ದಾರೆ ಎಂಬುದನ್ನ ಅರಿತುಕೊಳ್ಳುವುದು ಸಾಧ್ಯವಿಲ್ಲ. ಆದರೆ ಈ ವ್ಯಕ್ತಿಗಳಿಗೆ ಬೇರೆಯವರಿಗೆ ಸಲಹೆ ನಿಡುವುದು ಬಹಳ ಇಷ್ಟ.
Published by:Sandhya M
First published: