Chanakya Niti: ಈ ರೀತಿಯ ಜನರಿಗೆ ಸಹಾಯ ಮಾಡಿದ್ರೆ ನಿಮಗೆ ಕಷ್ಟವಂತೆ
Chanakya Niti: ಈ ರೀತಿಯ ಜನರಿಗೆ ಸಹಾಯ ಮಾಡಿದ್ರೆ ನಿಮಗೆ ಕಷ್ಟವಂತೆ
ಸಾಂದರ್ಭಿಕ ಚಿತ್ರ
Chanakya Niti: ಕೆಲವು ಸಂದರ್ಭಗಳಲ್ಲಿ ನಾವು ಒಳ್ಳೆಯ ಉದ್ದೇಶದಿಂದ ಇತರರಿಗೆ ಸಹಾಯ ಮಾಡುತ್ತೇವೆ. ಕೆಲವರು ಕಷ್ಟದಲ್ಲಿದ್ದಾರೆ ಎಂದು ಸಹಾಯ ಮಾಡಿದರೆ ಅವರೇ ನಮ್ಮ ಬೆನ್ನಿಗೆ ಚೂರಿ ಹಾಕುವ ಸಾಧ್ಯತೆ ಇರುತ್ತದೆ ಎಂದು ಚಾಣಕ್ಯ ನೀತಿ ಹೇಳುತ್ತದೆ. ಹಾಗಾಗಿ ನೀವು ಯಾವ ರೀತಿಯ ಜನರಿಗೆ ಸಹಾಯ ಮಾಡಬಾರದು ಎಂಬುದು ಇಲ್ಲಿದೆ.
ಆಚಾರ್ಯ ಚಾಣಕ್ಯ ರಾಜತಾಂತ್ರಿಕ ಮತ್ತು ರಾಜಕೀಯ ತಂತ್ರಜ್ಞ. ಅವರ ನೀತಿಗಳು ಇಂದಿಗೂ ಪ್ರಸ್ತುತವಾಗಿದೆ ಎಂದರೆ ತಪ್ಪಲ್ಲ. ಚಾಣಕ್ಯ ನೀತಿಯಲ್ಲಿ ಆಚಾರ್ಯ ಚಾಣಕ್ಯನ ಅನುಭವ ಮತ್ತು ಆಲೋಚನೆಗಳು ಬದುಕಿಗೆ ಒಂದು ಪಾಠ ಎನ್ನಬಹುದು.
ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಚಾಣಕ್ಯ ನೀತಿಯು ಕೆಲವು ನೀತಿಗಳು ಮತ್ತು ನಿಯಮಗಳನ್ನು ನೀಡುತ್ತದೆ. ಅಲ್ಲದೇ, ಚಾಣಕ್ಯನ ನೀತಿಶಾಸ್ತ್ರವು ಮನುಷ್ಯ ಬದುಕಲು ಸರಿಯಾದ ಮಾರ್ಗವನ್ನು ತೋರಿಸುತ್ತದೆ.
ಚಾಣಕ್ಯನ ನೀತಿಶಾಸ್ತ್ರದ ಪ್ರಕಾರ ನಮ್ಮ ಸುತ್ತ ಶತ್ರುವಿಗಿಂತಲೂ ಅಪಾಯಕಾರಿ ವ್ಯಕ್ತಿಗಳಿದ್ದಾರೆ. ಆ ರೀತಿಯ ವ್ಯಕ್ತಿಗಳಿಂದ ನಾವು ಅಪ್ಪಿತಪ್ಪಿಯೂ ಸಹಾಯವನ್ನು ಪಡೆಯಬಾರದು ಹಾಗೂ ಅವರಿಗೆ ಸಹಾಯ ಮಾಡಬಾರದು.
ಚಾಣಕ್ಯನ ಪ್ರಕಾರ ಯಾರೂ ತಮ್ಮ ಜೀವನದಲ್ಲಿ ಕೆಟ್ಟ ಜನರನ್ನು ನಂಬಬಾರದು. ಏಕೆಂದರೆ ಅವರು ನಿಮಗೆ ಒಳ್ಳೆಯದನ್ನು ಮಾಡುವ ಬದಲು ತೊಂದರೆಗೆ ಸಿಲುಕಿಸುತ್ತಾರೆ. ಈ ರೀತಿಯ ಜನರು ನಮ್ಮ ಬೆನ್ನ ಹಿಂದೆ ನಿಂತು ಅಪಾಯವನ್ನು ಸೃಷ್ಟಿ ಮಾಡುತ್ತಾರೆ.
ಚಾಣಕ್ಯನ ನೀತಿಯ ಪ್ರಕಾರ, ಕೋಪದ ಗುಣವನ್ನು ಹೊಂದಿರುವ ಜನರಿಂದ ದೂರವಿರುವುದು ಉತ್ತಮ. ಏಕೆಂದರೆ ಕೋಪಗೊಂಡವರು ತನಗೆ ಮಾತ್ರ ಹಾನಿ ಮಾಡಿಕೊಳ್ಳುವುದು ಮಾತ್ರವಲ್ಲದೇ ಇತರರಿಗೆ ಹಾನಿ ಮಾಡುತ್ತಾರೆ.
ಚಾಣಕ್ಯ ನೀತಿ ಪ್ರಕಾರ ದುರಾಸೆ ಮತ್ತು ಅಸೂಯೆಯಿಂದ ತುಂಬಿರುವ ವ್ಯಕ್ತಿಯಿಂದ ಯಾವಾಗಲೂ ದೂರವಿರಬೇಕು. ಅಪ್ಪಿತಪ್ಪಿಯೂ ಅಂತಹವರ ಸಹಾಯ ಪಡೆಯಬಾರದು ಹಾಗೂ ಸಹಾಯ ಮಾಡಬಾರದು. ಇದರಿಂದ ನಿಮಗೆ ಮುಂದಿನ ದಿನಗಳಲ್ಲಿ ಸಮಸ್ಯೆ ಉಂಟಾಗುತ್ತದೆ.
ಅವರ ಅಸೂಯೆಯ ಕಾರಣದಿಂದ ಅವರು ನಿಮಗೆ ಹಾನಿ ಮಾಡಬಹುದು ಎಂದು ಚಾಣಕ್ಯ ಎಚ್ಚರಿಸಿದ್ದಾರೆ. ಅಸೂಯೆಪಡುವ ವ್ಯಕ್ತಿಯು ಎಂದಿಗೂ ಇತರರನ್ನು ಅರ್ಥಮಾಡಿಕೊಳ್ಳುವುದಿಲ್ಲ ಮತ್ತು ಈ ಗುಣದಿಂದ ಅವರು ಸಹ ಜೀವನದಲ್ಲಿ ಬೆಳೆಯಲು ಸಾಧ್ಯವಿಲ್ಲ.
Published by:Sandhya M
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ