Magical Zodiac Signs: ಜ್ಯೋತಿಷ್ಯದ ಪ್ರಕಾರ ಈ ಮೂರು ರಾಶಿಯವರು ತುಂಬಾ ಅದೃಷ್ಟವಂತರಂತೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇತ್ತೀಚಿಗೆ ಜ್ಯೋತಿಷ್ಯವು (Astrology) ನಮ್ಮ ಜೀವನದ ಒಂದು ಅವಿಭಾಜ್ಯ ಭಾಗವಾಗಿದೆ. ಕೆಲವು ರಾಶಿಗಳು ಮ್ಯಾಜಿಕ್‌ ರಾಶಿಗಳು ಆಗಿರುತ್ತವೆ. ನಾವಿಂದು ಅವುಗಳ ಬಗ್ಗೆ ಇಲ್ಲಿ ತಿಳಿಯೋಣ. ಕೆಲವು ರಾಶಿಗಳು (Zodiac Signs) ತಮ್ಮ ಗುಣ ವಿಶೇಷಗಳಿಂದ ಮ್ಯಾಜಿಕ್‌ ರಾಶಿಗಳೆಂದು ಹೆಸರು ಪಡೆದಿವೆ.

ಮುಂದೆ ಓದಿ ...
  • Share this:

ಇತ್ತೀಚಿಗೆ ಜ್ಯೋತಿಷ್ಯವು (Astrology) ನಮ್ಮ ಜೀವನದ ಒಂದು ಅವಿಭಾಜ್ಯ ಭಾಗವಾಗಿದೆ. ಕೆಲವು ರಾಶಿಗಳು ಮ್ಯಾಜಿಕ್‌ ರಾಶಿಗಳು ಆಗಿರುತ್ತವೆ. ನಾವಿಂದು ಅವುಗಳ ಬಗ್ಗೆ ಇಲ್ಲಿ ತಿಳಿಯೋಣ. ಕೆಲವು ರಾಶಿಗಳು (Zodiac Signs) ತಮ್ಮ ಗುಣ ವಿಶೇಷಗಳಿಂದ ಮ್ಯಾಜಿಕ್‌ ರಾಶಿಗಳೆಂದು ಹೆಸರು ಪಡೆದಿವೆ. ಸಾಮಾನ್ಯವಾಗಿ ನಾವು ನಮ್ಮ ಜಾತಕ ಹಾಗೂ ಗ್ರಹಗತಿಗಳ ಅನುಸಾರ ಭವಿಷ್ಯವನ್ನು ತಿಳಿದುಕೊಳ್ಳುತ್ತೇವೆ. ಎಲ್ಲರಿಗೂ ನಮ್ಮ ರಾಶಿಗೆ ಒಳ್ಳೆಯದಾಗಲಿ ಅಂತ ಇರುತ್ತೆ. ಅದಕ್ಕೆ ಎಲ್ಲರೂ ಜ್ಯೋತಿಷಿಗಳ ಬಳಿ ಹೋಗ್ತಾರೆ.


ಹಾಗಿದ್ರೆ ಯಾವೆಲ್ಲ ರಾಶಿಗಳು ಮ್ಯಾಜಿಕ್‌ ರಾಶಿಗಳು ಎಂದು ತಿಳಿಯೋಣವೇ. ನಿಮ್ಮ ರಾಶಿ ಚಕ್ರ ಮಾಂತ್ರಿಕ ರಾಶಿಯಾಗಿದೆಯೇ ಎಂದು ತಿಳಿಯುವ ಕುತೂಹಲ ನಿಮಗಿದ್ದರೆ, ಈ ಕೆಳಗೆ ಓದಿ. ಈ ಕೆಳಗಿನ ರಾಶಿಗಳಲ್ಲಿ ಮೂರು ರಾಶಿಗಳು ಮಾತ್ರ ಮಾಂತ್ರಿಕ ರಾಶಿಗಳೆಂದು ಫೇಮಸ್‌ ಆಗಿವೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ನೋಡೋಣ.


ಕರ್ಕಾಟಕ ರಾಶಿ (ಜೂನ್ 21 - ಜುಲೈ 22)


ಈ ಕರ್ಕಾಟಕ ರಾಶಿ ಚಂದ್ರನಿಂದ ನಿಯಂತ್ರಿಸಲ್ಪಡುತ್ತದೆ. ಈ ವಿಧದಲ್ಲಿ ನೋಡುವುದಾದ್ರೆ, ಚಂದ್ರನ ಮ್ಯಾಜಿಕ್, ಚಂದ್ರನ ಚಕ್ರದ ಹಂತಗಳಿಗೆ ಅನುಗುಣವಾಗಿ ಆಚರಣೆಗಳು ಮತ್ತು ಮ್ಯಾಜಿಕ್‌ಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಲಾಗಿದೆ. ಕರ್ಕಾಟಕ ರಾಶಿಯು ಜ್ಯೋತಿಷ್ಯದಲ್ಲಿ ನಾಲ್ಕನೇ ಮನೆಯನ್ನು ಆಳುತ್ತದೆ. ಈ ನಾಲ್ಕನೇ ಮನೆಯು ಸ್ವಾರ್ಥದ ಮನೆ ಮತ್ತು ಜನ್ಮ ಮಾಂತ್ರಿಕತೆಯನ್ನು ಪ್ರತಿನಿಧಿಸುತ್ತದೆ.


ಇದನ್ನೂ ಓದಿ: ಮುಂದಿನ ತಿಂಗಳು ಈ ರಾಶಿಯವರಿಗೆ ಜಾಕ್​ಪಾಟ್, ಶನಿಯಿಂದ ಅದೃಷ್ಟವೋ ಅದೃಷ್ಟ


ಚಂದ್ರ ಈ ರಾಶಿಯ ಅಧಿಪತಿ ಹಾಗೂ ಸ್ತ್ರೀಲಿಂಗ ಹಾಗೂ ತಾಯಿಯ ಮೂಲರೂಪವನ್ನು ಪ್ರತಿನಿಧಿಸುತ್ತದೆ. ಎಲ್ಲಾ ಕಾಲ್ಪನಿಕ ಕಥೆಗಳಲ್ಲಿ ಬರುವಂತೆ ಸಿಂಡ್ರೆಲ್ಲಾಳಿಗೆ ದುಷ್ಟ ಮಲತಾಯಿ ಇಲ್ಲವೇ ಮಾಂತ್ರಿಕ ಸ್ತ್ರೀ ವೈರಿಯಾಗಿ ಇದ್ದೇ ಇರುತ್ತಾಳೆ. ಕರ್ಕಾಟಕ ರಾಶಿಯು ಜ್ಯೋತಿಷ್ಯದಲ್ಲಿ ಅತ್ಯಂತ ಸೂಕ್ಷ್ಮ ರಾಶಿ ಎಂದು ಕರೆಯುತ್ತಾರೆ. ಆದರೆ ಈ ರಾಶಿಯವರು ಸೌಂದರ್ಯದ ಜೊತೆಗೆ ಉತ್ತಮ ಭಾವನೆಗಳನ್ನು ಬೇರೆಯವರ ಮೇಲೆ ಹೊಂದಿರುವುದರಿಂದ ಇವರಿಗೆ ಅದೃಷ್ಟವು ಕೈ ಹಿಡಿಯುತ್ತದೆ.


ಸಾಂಕೇತಿಕ ಚಿತ್ರ


ಇವರ ಈ ಗುಣವೇ ಅವರ ವ್ಯಕ್ತಿತ್ವದಲ್ಲಿ ಮ್ಯಾಜಿಕ್‌ ಆಗಿ ಕಾರ್ಯ ನಿರ್ವಹಿಸುತ್ತದೆ. ಕಟಕ ರಾಶಿಯವರು ಬೇರೆಯವರನ್ನು ಮೋಡಿಮಾಡುವ ಸ್ವಭಾವವನ್ನು ಹೊಂದಿರುತ್ತಾರೆ.


ಕನ್ಯಾರಾಶಿ (ಆಗಸ್ಟ್ 23 - ಸೆಪ್ಟೆಂಬರ್ 22)


ಟ್ಯಾರೋ ಕಾರ್ಡ್‌ಗಳಲ್ಲಿ ಕನ್ಯಾರಾಶಿಯನ್ನು ಹರ್ಮಿಟ್ ಕಾರ್ಡ್ ಪ್ರತಿನಿಧಿಸುತ್ತದೆ. ಈ ಕಾರ್ಡ್ ಮೆರ್ಲಿನ್ ಪ್ರಕಾರದ ಪಾತ್ರವನ್ನು ಹೊಂದಿರುತ್ತದೆ. ಇದರ ಅರ್ಥ ಕಷ್ಟಪಡುವ ಗುಣ ಈ ರಾಶಿಯವರಲ್ಲಿ ಇರುತ್ತದೆ. ಇದನ್ನು ಆಳುವ ಅಧಿಪತಿ ಬುಧ. ಟ್ಯಾರೋ ಕಾರ್ಡ್‌ಗಳಲ್ಲಿ ಬುಧ ಒಂದು ಮ್ಯಾಜಿಕ್‌ ರಾಶಿ ಎಂದು ಹೆಸರು ಪಡೆದಿದೆ.


ರೂಪಾಂತರಗೊಳ್ಳುವ ಭೂಮಿಯ ಚಿಹ್ನೆಯಾಗಿ, ಕನ್ಯಾರಾಶಿಯು ವಸ್ತು ಮತ್ತು ಅಭೌತಿಕ ಪ್ರಪಂಚದ ನಡುವಿನ ಮಾರ್ಗವಾಗಿದೆ. ಈ ಗುಣವೇ ಅದೃಷ್ಟವನ್ನು ಕೈ ಬೀಸಿ ಕರೆಯುತ್ತದೆ. ಜೀವನದಲ್ಲಿ ಕನ್ಯಾ ರಾಶಿಯವರನ್ನು ಸೋಲಿಸಬೇಕೆಂದ್ರೆ ಇರುವ ಒಂದೇ ಮಾರ್ಗವೆಂದ್ರೆ ಅವರ ಬಗ್ಗೆ ಅವರಿಗೆ ಸ್ವಯಂ ಅನುಮಾನ ಬರುವ ರೀತಿ ನಡೆದುಕೊಳ್ಳಬೇಕು.


ಮೀನ ರಾಶಿ (ಫೆಬ್ರವರಿ 19 - ಮಾರ್ಚ್ 20)


ಮೀನ ರಾಶಿಯು ನೆಪ್ಚೂನ್‌ನಿಂದ ಆಳಲಾಗಿದೆ. ಸಮುದ್ರದ ದೇವತೆಯ ಹೆಸರಾಗಿದೆ. ದಿ ಲಿಟಲ್ ಮೆರ್ಮೇಯ್ಡ್ ಕಥೆ ಕೂಡ ಇದೇ ಸಿದ್ಧಾಂತದ ಪ್ರತೀಕವಾಗಿದೆ ಅಂದರೆ ಜಲಕನ್ಯೆ ಹಾಗೂ ನೀರಿಗೆ ಸಂಬಂಧಿಸಿದ್ದಾಗಿದೆ. ಈ ರಾಶಿಯವರು ಪ್ರೀತಿಯನ್ನು ಪಡೆಯಲು ಎಷ್ಟೇ ಅಡೆತಡೆಗಳನ್ನು ದಾಟುವವರಾಗಿದ್ದಾರೆ. ಪ್ರತಿಯೊಂದರಲ್ಲೂ ಸುಂದರತೆಯನ್ನು ನೋಡುವವರು ಈ ರಾಶಿಯವರು. ಕಸದಿಂದ ರಸ ತೆಗೆಯುವ ನಿಪುಣತೆಯನ್ನು ಈ ರಾಶಿಯವರು ಪ್ರತಿನಿಧಿಸುತ್ತಾರೆ.




ಇದು ಬದಲಾಗುವ ನೀರಿನ ರಾಶಿಯಾಗಿದೆ. ಮೀನ ರಾಶಿಯನ್ನು ನೆಪ್ಚೂನ್, ಕನಸುಗಳ ಗ್ರಹ, ಮ್ಯಾಜಿಕ್ ಮತ್ತು ಸುಪ್ತ ಮನಸ್ಸಿನಿಂದ ಆಳಲಾಗುತ್ತದೆ. ಏಕೆಂದರೆ ಯಾರು ನೋಡಲಾಗದೇ ಇರುವ ವಿಷಯ ಅಥವಾ ಗ್ರಹಿಸಲಾಗದ ವಿಷಯವನ್ನು ಇವರು ಗ್ರಹಿಸುತ್ತಾರೆ. ಅದನ್ನು ಮೀರಿದ್ದನ್ನು ನಂಬುತ್ತಾರೆ. ಮ್ಯಾಜಿಕ್‌ ಗಳನ್ನು ಹೆಚ್ಚು ಇಷ್ಟಪಟ್ಟು, ಒಪ್ಪಿಕೊಳ್ಳುತ್ತಾರೆ. ಜ್ಯೋತಿಷ್ಯದ ಪ್ರಕಾರ ಇದು ಕೊನೆಯ ರಾಶಿಯಾಗಿದ್ದು, ಇದು ಜೀವನದ ಅಸ್ತಿತ್ವ ಮತ್ತು ಶಾಶ್ವತತೆಯ ಪ್ರತಿರೂಪವೆಂದು ಜ್ಯೋತಿಷಿಗಳು ಹೇಳುತ್ತಾರೆ.


ಮೀನ ರಾಶಿಯವರು ವಿಚಿತ್ರವಾದುದನ್ನು ಮಾಡುತ್ತಾರೆ ಮತ್ತು ಅದನ್ನು ಮಾಡುವವರನ್ನು ಇಷ್ಟಪಡುತ್ತಾರೆ. ಮೀನ ರಾಶಿಯ ಜನರು ತಮ್ಮ ಬಗ್ಗೆ ತಾವೇ ಮಾಂತ್ರಿಕ ನೋಟವನ್ನು ಹೊಂದಿರುತ್ತಾರೆ. ಇವರ ಕಣ್ಣಿನಲ್ಲಿ ಅಪಾರವಾದ ಹೊಳಪು ಇರುತ್ತದೆ.

First published: