Home Vastu: ನಿಮ್ಮ ಮನೆಯ ವಾಸ್ತು ಹೀಗಿದ್ರೆ ಅದೃಷ್ಟ ಒಲಿದು ಬರುವುದು ಗ್ಯಾರಂಟಿ

ಮನೆ ವಾಸ್ತು

ಮನೆ ವಾಸ್ತು

ವಾಸ್ತು ಸಲಹೆಗಳನ್ನು ಅನುಸರಿಸುವ ಮೂಲಕ, ನೀವು ಸಕಾರಾತ್ಮಕತೆ ಮತ್ತು ಸಾಮರಸ್ಯವನ್ನು ಉತ್ತೇಜಿಸುವ ಲಿವಿಂಗ್ ಸ್ಪೇಸ್ ಅನ್ನು ರಚಿಸಬಹುದು, ಇದು ಸಂತೋಷದ ಮತ್ತು ಆರೋಗ್ಯಕರ ಕುಟುಂಬಕ್ಕೆ ಕಾರಣವಾಗಬಹುದು.

  • Share this:

ವಾಸ್ತುಶಾಸ್ತ್ರದ (Vastu) ಸಲಹೆಗಳನ್ನು ನಾವು ಅನುಸರಿಸುವುದರಿಂದ ನಾವು ವಾಸಿಸುತ್ತಿರುವ ಮನೆಯಲ್ಲಿ ನೆಮ್ಮದಿ, ಆರೋಗ್ಯ ಮತ್ತು ಅದೃಷ್ಟ ಮನೆ (Home) ಮಾಡಿರುತ್ತದೆ ಅಂತ ಅನೇಕರು ನಂಬಿದ್ದಾರೆ. ವಾಸ್ತು ತಜ್ಞರ ಪ್ರಕಾರ, ಕುಟುಂಬದ ಸಂತೋಷ (Happy), ಆರೋಗ್ಯ ಮತ್ತು ಯೋಗಕ್ಷೇಮವು ಹೆಚ್ಚಾಗಿ ಈ ಒಂದು ಸ್ಥಳದ ವಾಸ್ತುದಿಂದ ಪ್ರಭಾವಿತವಾಗಿರುತ್ತದೆ. ವಾಸ್ತು ತಜ್ಞ ಪಂಕಜ್ ಗೋಯೆಲ್ "ವಾಸ್ತು ಶಾಸ್ತ್ರವು ಸಾಂಪ್ರದಾಯಿಕ ಭಾರತೀಯ ವಾಸ್ತುಶಿಲ್ಪ ಮತ್ತು ವಿನ್ಯಾಸ ವ್ಯವಸ್ಥೆಯಾಗಿದ್ದು, ಇದು ವಾಸಿಸುವ ಸ್ಥಳಗಳಿಗೆ ಸಮತೋಲನ ಮತ್ತು ಸಾಮರಸ್ಯವನ್ನು ತರುವ ಗುರಿಯನ್ನು (Goal) ಹೊಂದಿದೆ" ಎನ್ನುತ್ತಾರೆ.


ವಾಸ್ತುಶಾಸ್ತ್ರದ ಪ್ರಕಾರ, ಮನೆಯ  ವಿನ್ಯಾಸವು ಅದರಲ್ಲಿ ವಾಸಿಸುವ ಕುಟುಂಬ ಸದಸ್ಯರ ಸಂತೋಷ, ಆರೋಗ್ಯ ಮತ್ತು ಒಟ್ಟಾರೆ ಯೋಗಕ್ಷೇಮದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ.


ವಾಸ್ತು ಸಲಹೆಗಳನ್ನು ಅನುಸರಿಸುವ ಮೂಲಕ, ನೀವು ಸಕಾರಾತ್ಮಕತೆ ಮತ್ತು ಸಾಮರಸ್ಯವನ್ನು ಉತ್ತೇಜಿಸುವ ಲಿವಿಂಗ್ ಸ್ಪೇಸ್ ಅನ್ನು ರಚಿಸಬಹುದು, ಇದು ಅಂತಿಮವಾಗಿ ಸಂತೋಷದ ಮತ್ತು ಆರೋಗ್ಯಕರ ಕುಟುಂಬಕ್ಕೆ ಕಾರಣವಾಗಬಹುದು.


ನಿಮ್ಮ ಮನೆ ಈ ವಾಸ್ತು ಸಲಹೆಗಳನ್ನು ಅನುಸರಿಸಿ ನಿರ್ಮಿಸಿದ್ದರೆ ಅದೃಷ್ಟ ಗ್ಯಾರೆಂಟಿ


ಪಂಕಜ್ ಗೋಯೆಲ್ ಪಟ್ಟಿ ಮಾಡಿದಂತೆ ಉತ್ತಮ ಅದೃಷ್ಟ ಮತ್ತು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸಲು ನಿಮ್ಮ ಮನೆಯನ್ನು ಹೇಗೆ ಅಲಂಕರಿಸುವುದು ಎಂಬುದರ ಕುರಿತು ಕೆಲವು ವಾಸ್ತು ಸಲಹೆಗಳು ಇಲ್ಲಿವೆ ನೋಡಿ.


ಮನೆಯ ಮುಂಬಾಗಿಲು: ಮನೆಯ ಮುಂಬಾಗಿಲು ನಿಮ್ಮ ಮನೆಗೆ ಮುಖ್ಯ ಪ್ರವೇಶದ್ವಾರವಾಗಿರುತ್ತದೆ ಮತ್ತು ಅಲ್ಲಿ ಶಕ್ತಿಯು ನಿಮ್ಮ ಮನೆಯನ್ನು ಪ್ರವೇಶಿಸುತ್ತದೆ.


ಇದನ್ನೂ ಓದಿ: Monthly Horoscope: ಮಾರ್ಚ್ ತಿಂಗಳಲ್ಲಿ ಕಾದಿದೆ ಈ ರಾಶಿಯವರಿಗೆ ಹಬ್ಬ, ಜೀವನವೇ ಸಾಕಪ್ಪ ಅನಿಸುತ್ತೆ


ಮುಂಬಾಗಿಲ ಮೂಲಕ ಚೆನ್ನಾಗಿ ಬೆಳಕು ಬರಬೇಕು ಮತ್ತು ಅಲ್ಲಿ ಬೂಟುಗಳು ಅಥವಾ ಅವ್ಯವಸ್ಥೆ ಎಂದೆನಿಸುವ ಯಾವುದೇ ಅಡೆತಡೆಗಳನ್ನು ಅಲ್ಲಿ ಇಡಬೇಡಿ. ಅಲ್ಲದೆ, ಬಾಗಿಲು ಒಳಕ್ಕೆ ತೆರೆಯುವಂತಿರಬೇಕು.


ಮನೆಯ ಬಣ್ಣ ಹೀಗಿರಬೇಕು: ನೀಲಿ ಬಣ್ಣದ ಛಾಯೆಗಳು ಅಥವಾ ಮಣ್ಣಿನ ಟೋನ್ ಗಳಂತಹ ಹಿತವಾದ ಮತ್ತು ಶಾಂತಗೊಳಿಸುವ ಬಣ್ಣಗಳನ್ನು ಆರಿಸಿಕೊಳ್ಳಿ.


ಪ್ರಕಾಶಮಾನವಾದ ಮತ್ತು ತುಂಬಾನೇ ಡಾರ್ಕ್ ಆಗಿರುವ ಬಣ್ಣಗಳನ್ನು ಬಳಸಬೇಡಿ, ಏಕೆಂದರೆ ಅವು ತುಂಬಾ ಉತ್ತೇಜಕವಾಗಬಹುದು ಮತ್ತು ಚಡಪಡಿಕೆಗೂ ಸಹ ಕಾರಣವಾಗಬಹುದು.


ಮನೆಯಲ್ಲಿ ಬೆಳಕು ಹೀಗಿರಲಿ: ಸರಿಯಾದ ಬೆಳಕು ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕಠಿಣ, ಪ್ರಕಾಶಮಾನವಾದ ದೀಪಗಳ ಬದಲು ಬೆಚ್ಚಗಿನ, ಮೃದುವಾದ ದೀಪಗಳನ್ನು ಬಳಸಿ. ನೈಸರ್ಗಿಕ ಬೆಳಕು ಯಾವಾಗಲೂ ಉತ್ತಮವಾಗಿರುತ್ತವೆ. ಆದ್ದರಿಂದ ಸೂರ್ಯನ ಬೆಳಕನ್ನು ಒಳಗೆ ಬಿಡಲು ನಿಮ್ಮ ಕಿಟಕಿಗಳನ್ನು ಬೆಳಿಗ್ಗೆ ತೆರೆದಿಡಿ.


ಮನೆಯಲ್ಲಿ ಈ ಗಿಡಗಳಿರಲಿ: ಗಿಡಗಳು ನಿಮ್ಮ ಮನೆಗೆ ಜೀವ ಮತ್ತು ಸಕಾರಾತ್ಮಕ ಶಕ್ತಿಯನ್ನು ತರುತ್ತವೆ. ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಲು ಲಿವಿಂಗ್ ರೂಮ್ ಮತ್ತು ನಿಮ್ಮ ಮನೆಯ ಇತರ ಪ್ರದೇಶಗಳಲ್ಲಿ ಚಿಕ್ಕ ಪುಟ್ಟ ಸಸ್ಯಗಳನ್ನು ಇರಿಸಿ.  ಮಲಗುವ ಕೋಣೆಯಲ್ಲಿ ಮಾತ್ರ ಯಾವುದೇ ರೀತಿಯ ಸಸ್ಯಗಳನ್ನು ಇಡಬೇಡಿ, ಏಕೆಂದರೆ ಅವು ನಿದ್ರೆಗೆ ಭಂಗ ತರಬಹುದು.


ಪೀಠೋಪಕರಣಗಳನ್ನು ಹೀಗೆ ಇರಿಸಿ: ನಿಮ್ಮ ಮನೆಯಲ್ಲಿ ಪೀಠೋಪಕರಣಗಳ ಸ್ಥಾನವು ಶಕ್ತಿಯ ಹರಿವಿನ ಮೇಲೆ ಪರಿಣಾಮ ಬೀರುತ್ತದೆ. ಪೀಠೋಪಕರಣಗಳ ನಡುವೆ ಸಾಕಷ್ಟು ಸ್ಥಳಾವಕಾಶವಿದೆಯೇ? ಮತ್ತು ಅದನ್ನು ಸಕಾರಾತ್ಮಕ ಶಕ್ತಿಯ ಹರಿವನ್ನು ಉತ್ತೇಜಿಸುವ ರೀತಿಯಲ್ಲಿ ಜೋಡಿಸಲಾಗಿದೆಯೇ?  ಎಂದು ಖಚಿತಪಡಿಸಿಕೊಳ್ಳಿ. ತೀಕ್ಷ್ಣವಾದ ಅಂಚುಗಳು ಅಥವಾ ಕೋನಗಳನ್ನು ಹೊಂದಿರುವ ಪೀಠೋಪಕರಣಗಳನ್ನು ಮನೆಯಲ್ಲಿ ಇಡಬೇಡಿ.



ಕನ್ನಡಿಗಳು ಇರಲಿ: ಕನ್ನಡಿಗಳು ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಪ್ರತಿಬಿಂಬಿಸುತ್ತವೆ. ನೈಸರ್ಗಿಕ ಬೆಳಕು ಅಥವಾ ಸುಂದರ ದೃಶ್ಯಗಳನ್ನು ಪ್ರತಿಬಿಂಬಿಸುವ ಪ್ರದೇಶಗಳಲ್ಲಿ ಕನ್ನಡಿಗಳನ್ನು ಇರಿಸಿ. ಕನ್ನಡಿಗಳನ್ನು ಮಲಗುವ ಕೋಣೆಯಲ್ಲಿ ಇಡಬಾರದು, ಏಕೆಂದರೆ ಅವು ಅತ್ಯಂತ ನಕಾರಾತ್ಮಕವಾಗಬಹುದು ಮತ್ತು ಚಡಪಡಿಕೆಯ ಭಾವನೆಯನ್ನು ಸೃಷ್ಟಿಸಬಹುದು.


ಗೊಂದಲ ಮುಕ್ತ ಸ್ಥಳ: ಗೊಂದಲಮಯ ಸ್ಥಳವು ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಹರಿವನ್ನು ತಡೆಯಬಹುದು. ನಿಮ್ಮ ಮನೆ ಅವ್ಯವಸ್ಥೆ ಮತ್ತು ಅನಗತ್ಯ ವಸ್ತುಗಳಿಂದ ಮುಕ್ತವಾಗಿದೆ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ಮನೆಯಿಂದ ಅಂತಹ ಅನಗತ್ಯ ವಸ್ತುಗಳನ್ನು ತೆಗೆದು ಹಾಕುವುದರೊಂದಿಗೆ ಶಾಂತ ಮತ್ತು ಸಕಾರಾತ್ಮಕತೆಯ ಭಾವನೆಯನ್ನು ತರಬಹುದು.

First published: