Zodiac Sign: ಈ ರಾಶಿಯವರಿಗೆ 2022ರಲ್ಲಿ ಪ್ರೀತಿ ಒಲಿಯುತ್ತದಂತೆ, ನಿಮ್ಮ ರಾಶಿಯೂ ಇದ್ಯಾ ನೋಡಿ

ಈ ವರ್ಷದ ಪ್ರೇಮಿಗಳ ದಿನವು ನಿಮಗೆ ಪ್ರೀತಿಯ ಬಗ್ಗೆ ಹೊಸ ದೃಷ್ಟಿಕೋನ ನೀಡುತ್ತದೆ ಮತ್ತು ಮೀನ ರಾಶಿಯ ಜನರನ್ನು ಈ ಹೊಸ ದೃಷ್ಟಿಕೋನವು ಸಂತೋಷ ಪಡಿಸುತ್ತದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತಮಗಾಗಿ ಮಿಡಿಯುವ ಒಂದು ಹೃದಯ(Heart) ಇರಬೇಕು, ತನ್ನನ್ನು ಸಹ ಮಿಸ್ ಮಾಡಿಕೊಳ್ಳುವ ಒಂದು ಪ್ರೀತಿಸುವ ಜೀವ ಇರಬೇಕು ಎಂದು ಯಾರಿಗೆ ತಾನೇ ಅನ್ನಿಸುವುದಿಲ್ಲ ನೀವೇ ಹೇಳಿ..? ನಾವೆಲ್ಲರೂ ನಮ್ಮ ಜೀವನದಲ್ಲಿ ನಮ್ಮನ್ನು ಪ್ರೀತಿಸುವ(Loving Life) ಮತ್ತು ಮೆಚ್ಚುವಂತೆ ಆ ವ್ಯಕ್ತಿಗಾಗಿ ಸದಾ (Admire) ಹಂಬಲಿಸುತ್ತಿರುತ್ತೇವೆ. ನಿಮ್ಮಲ್ಲಿ ಕೆಲವರಿಗೆ ಈ ವರ್ಷ ನೀವು ತುಂಬಾ ಸಮಯದಿಂದ ಕಾತುರತೆಯಿಂದ ಬಯಸಿದ ಪ್ರೀತಿಯನ್ನು ಕಂಡುಕೊಳ್ಳಲು ಸದಾವಕಾಶವಿದೆ (Opportunity) ಎಂದು ಇಲ್ಲಿ ಹೇಳಲಾಗುತ್ತಿದೆ.

ಈ ರಾಶಿಯ ಜನರು ಈ ವರ್ಷ ತುಂಬಾನೇ ಅದೃಷ್ಟಶಾಲಿ ಜನರಾಗಿದ್ದು, 2022ರ ಪ್ರೇಮಿಗಳ ದಿನವನ್ನು ತಮ್ಮ ಪ್ರೀತಿಯ ವ್ಯಕ್ತಿಗಳೊಂದಿಗೆ ಆಚರಿಸಲಿದ್ದಾರೆ. ಆದ್ದರಿಂದ, ನೀವು 2021ರಲ್ಲಿ ಪ್ರೀತಿಯ ಮೇಲೆ ಹೆಚ್ಚು ಗಮನ ಹರಿಸದಿದ್ದರೆ, ಬಹುಶಃ ನೀವು 2022 ರಲ್ಲಿ ವಿಶೇಷವಾಗಿ ಈ ಕೆಳಗಿನ ರಾಶಿಯುಳ್ಳ ಜನರು ತಮ್ಮ ನೆಚ್ಚಿನ ಪ್ರೀತಿಯನ್ನು ಪಡೆಯುವ ಎಲ್ಲಾ ಸಾಧ್ಯತೆಗಳು ಇವೆಯಂತೆ.

1. ವೃಷಭ ರಾಶಿ
ನೀವು ವೃಷಭ ರಾಶಿಯವರಾಗಿದ್ದರೆ, 2022ರ ಪ್ರೇಮಿಗಳ ದಿನದಂದು ನೀವು ಒಂಟಿಯಾಗಿರುವ ಸಾಧ್ಯತೆಗಳು ತೀರಾ ಕಡಿಮೆ ಆಗಿವೆ. 2022ರ ರಾಶಿ ಭವಿಷ್ಯದ ಪ್ರಕಾರ, ವರ್ಷದ ಆರಂಭದಲ್ಲಿಯೇ ನೀವು ಒಬ್ಬ ವಿಶೇಷ ವ್ಯಕ್ತಿಯನ್ನು ಭೇಟಿಯಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ. ನೀವು 2021ರಲ್ಲಿ ಪ್ರೀತಿಯಲ್ಲಿ ಅಷ್ಟು ಅದೃಷ್ಟಶಾಲಿಯಲ್ಲದಿದ್ದರೂ, ನೀವು ಸ್ವಲ್ಪ ಪ್ರಯತ್ನ ಮಾಡಿದರೆ ಸಾಕು ಈ ವರ್ಷ ನಿಮಗೆ ಆ ಪ್ರೀತಿ ಒಲಿಯುವ ಸಾಧ್ಯತೆಗಳು ಹೆಚ್ಚಾಗಿವೆ.

ಸಾಮಾನ್ಯವಾಗಿ ವೃಷಭ ರಾಶಿಯ ಜನರು ಅತ್ಯಂತ ನಿಷ್ಠಾವಂತ, ಪ್ರೀತಿಯ ಮತ್ತು ಸಹಾನುಭೂತಿಯುಳ್ಳವರು ಆಗಿರುತ್ತಾರೆ. ಆದ್ದರಿಂದ ಪ್ರೀತಿಯ ವಿಷಯಕ್ಕೆ ಬಂದಾಗ, ನಿಮ್ಮ ಈ ಗುಣಗಳು ಖಂಡಿತವಾಗಿಯೂ ಈ ವರ್ಷದಲ್ಲಿ ಪ್ರೀತಿಯ ವ್ಯಕ್ತಿಯನ್ನು ಹುಡುಕಲು ನಿಮಗೆ ಸಹಾಯ ಮಾಡುತ್ತವೆ. ನೀವು ಜಾಗರೂಕರಾಗಿರಬೇಕು ಮತ್ತು ನೀವು ನಿರೀಕ್ಷಿಸದೇ ಇದ್ದಾಗ ಪ್ರೀತಿ ಸಂಭವಿಸುತ್ತದೆ. ಶುಕ್ರ ಗ್ರಹವು ನಿಮ್ಮ ಜೀವನದಲ್ಲಿ ಒಂದು ಗಂಭೀರವಾದ ಸಂಬಂಧವನ್ನು ಶುರು ಮಾಡಲು ಸಹಾಯ ಮಾಡುವ ಸಾಧ್ಯತೆಗಳಿವೆ.

ಇದನ್ನೂ ಓದಿ: Palmistry: ಅಂಗೈನಲ್ಲಿ ತುರಿಕೆಯಾದರೆ ಹಣ ಹರಿದು ಬರುತ್ತೆ, ಪಾದದಲ್ಲಿ ತುರಿಕೆಯಾದರೆ ಏನರ್ಥ?

2. ಕರ್ಕಾಟಕ ರಾಶಿ
ಒಂಟಿಯಾಗಿರುವ ಕರ್ಕಾಟಕ ರಾಶಿಯವರು ಈ ವರ್ಷದ ಜಾತಕ ಸೂಚಿಸುವಂತೆ 2022ರಲ್ಲಿ ನೀವು ಪ್ರೀತಿಯಲ್ಲಿ ಅದೃಷ್ಟ ಪಡೆಯುತ್ತೀರಿ. ನೀವು ಬಹಳಷ್ಟು ವಿಷಯಗಳಿಂದ ಪ್ರಯೋಜನ ಪಡೆಯುತ್ತೀರಿ ಮತ್ತು ಪ್ರೀತಿ ಅವುಗಳಲ್ಲಿ ಒಂದಾಗಿದೆ. 2022ರಲ್ಲಿ ಪ್ರೇಮಿಗಳ ದಿನವನ್ನು ಆಚರಿಸಲು ಉತ್ತಮ ಮಾರ್ಗ ಯಾವುದು ಎಂದು ನೀವು ಆಶ್ಚರ್ಯ ಪಡುತ್ತಿರುವಾಗಲೇ ನಿಮ್ಮ ಪ್ರೀತಿಯನ್ನು ಕಂಡುಕೊಳ್ಳುವ ಸಾಧ್ಯತೆಗಳಿವೆ. ಹಿಂದಿನ ಆಘಾತಗಳಿಂದಾಗಿ ಪ್ರೀತಿಯನ್ನು ತಡೆಯುವುದು ಒಳ್ಳೆಯದಲ್ಲ, ಹೀಗೆ ಮಾಡುವುದರಿಂದ ಜನರು ನಿಮ್ಮಿಂದ ದೂರ ಹೋಗುತ್ತಾರೆ.

ಹೊಸ ಜನರನ್ನು ಭೇಟಿಮಾಡುವುದು ಮತ್ತು ಅವರೊಂದಿಗಿನ ಬಂಧವು ನಿಮ್ಮ ಮಂತ್ರವಾಗಿರಬೇಕು, ಇದು ಅಕ್ಷರಶಃ 2022ರಲ್ಲಿ ನಿಮ್ಮ ವ್ಯಾಲೆಂಟೈನ್ ಅನ್ನು ಹುಡುಕಲು ನಿಮಗೆ ಸಹಾಯ ಮಾಡುತ್ತದೆ.ಅಲ್ಲದೆ, 2022ರ ಹೊಸ ವರ್ಷವು ನಿಮ್ಮ ಜೀವನದಲ್ಲಿ ತುಂಬಾನೇ ಪ್ರೀತಿ ತರುವ ವರ್ಷವಾಗಿದೆ. ಹೆಚ್ಚಿನ ಕರ್ಕಾಟಕ ರಾಶಿಯವರು ತಮ್ಮ ಸುತ್ತಮುತ್ತಲಿನಲ್ಲಿಯೇ ನಿಮ್ಮ ಪ್ರೀತಿಯನ್ನು ಕಂಡು ಕೊಳ್ಳಬಹುದು.

3. ಕನ್ಯಾ ರಾಶಿ
ದಯಾಪರ, ವಿಶ್ವಾಸಾರ್ಹ ಮತ್ತು ತಾಳ್ಮೆ ಎಲ್ಲವೂ ಕನ್ಯಾ ರಾಶಿಯ ಜನರನ್ನು ಹೋಲುವ ಸಮಾನಾರ್ಥಕ ಪದಗಳು ಎಂದು ಹೇಳಬಹುದು ಮತ್ತು ಅಂತಹ ವ್ಯಕ್ತಿಗೆ ಯಾರು ಪ್ರೀತಿಸುವುದಿಲ್ಲ ನೀವೇ ಹೇಳಿ? ಕಳೆದ ಪ್ರೇಮಿಗಳ ದಿನದಂದು ನನ್ನ ಪ್ರೀತಿ ನನ್ನನ್ನು ಬಿಟ್ಟು ಹೋಗಿದೆ ಎಂದು ಭಾವಿಸಿದ ಎಲ್ಲಾ ಒಂಟಿ ಕನ್ಯಾ ರಾಶಿಯವರಿಗೆ ಈ ವರ್ಷ ಖಂಡಿತವಾಗಿಯೂ ಪ್ರೀತಿಯ ವಿಷಯದಲ್ಲಿ ತುಂಬಾನೇ ಒಳ್ಳೆಯ ಸುದ್ದಿಗಳು ಕಾದಿವೆ.

ಜ್ಯೋತಿಷಿಗಳ ಪ್ರಕಾರ, ಕನ್ಯಾ ರಾಶಿಯವರಿಗಾಗಿ ಒಂದೇ ಸ್ಥಾನದಲ್ಲಿ ಬರುವ ಗುರು ಮತ್ತು ಮೀನ ರಾಶಿಯವರು ಅವರಿಗೆ ಸಂತೋಷದ ಆರಂಭವನ್ನು ಸೂಚಿಸುತ್ತಾರೆ. ಪ್ರಾಮಾಣಿಕವಾಗಿ, ನೀವು ವರ್ಷದ ಆರಂಭದಿಂದಲೇ ಪ್ರೀತಿಯನ್ನು ಹುಡುಕಲು ಕೆಲವು ಪ್ರಯತ್ನಗಳನ್ನು ಮಾಡಲು ಸಿದ್ಧರಿದ್ದರೆ, ನೀವು ಪ್ರೇಮಿಗಳ ದಿನದಂದು ತುಂಬಾನೇ ಅದೃಷ್ಟವನ್ನು ನಿಮ್ಮದಾಗಿಸಿಕೊಳ್ಳುತ್ತೀರಿ.

ನೀವು ಪ್ರೀತಿಯಲ್ಲಿ ಆರಂಭಿಕರಾಗಿದ್ದರೆ, ನಿಮಗೆ ಇಷ್ಟವಾದವರಿಗೆ ನಿಮ್ಮ ಪ್ರೀತಿ ಹೇಳಿಕೊಳ್ಳಲು ಹಿಂಜರಿಯಬಾರದು ಎಂದು ಜ್ಯೋತಿಷಿಗಳು ಸೂಚಿಸುತ್ತಾರೆ. ನೀವು ನಿಮ್ಮ ಭಾವನೆಗಳನ್ನು ದೀರ್ಘಕಾಲದವರೆಗೆ ಮರೆ ಮಾಚುತ್ತಿದ್ದರೆ, ಅವುಗಳನ್ನು ಮನ ಬಿಚ್ಚಿ ಹೇಳುವ ಸಮಯ ಇದಾಗಿದೆ. 2022ರ ಪ್ರೇಮಿಗಳ ದಿನದಂದು ಹೊಸಬರನ್ನು ಭೇಟಿಯಾದಾಗ, ನಿಮ್ಮ ಜೀವನದಲ್ಲಿ ಪ್ರೀತಿ ಅರಳಲಿದೆ ಮತ್ತು ಆ ಪ್ರೀತಿಯು ನಿಮ್ಮ ಜೀವನವನ್ನು ಇನ್ನಷ್ಟು ವಿಶೇಷಗೊಳಿಸುತ್ತದೆ.

4. ವೃಶ್ಚಿಕ ರಾಶಿ
2022ರ ವರ್ಷವು ನಿಮಗೆ ತುಂಬಾ ವಿಶೇಷವಾಗಿದ್ದು, ವಿಶೇಷ ವ್ಯಕ್ತಿಯನ್ನು ಹುಡುಕಲು ನಿಮಗೆ ಅತ್ಯುತ್ತಮ ಸಮಯವಾಗಿದೆ. ಹೊಸ ವರ್ಷದಲ್ಲಿ ತಮ್ಮ ವ್ಯಾಲೆಂಟೈನ್ ಅನ್ನು ಕಂಡು ಕೊಳ್ಳಬಹುದಾದ ರಾಶಿಗಳಲ್ಲಿ ನಿಮ್ಮದು ಸಹ ಒಂದು ಎಂದು ಹೇಳಬಹುದು. 2022ರ ಜಾತಕದ ಪ್ರಕಾರ, ಈ ವರ್ಷದ ಆರಂಭಿಕ ತಿಂಗಳುಗಳಲ್ಲಿ ವಿಶೇಷ ವ್ಯಕ್ತಿಯೊಂದಿಗೆ ಭೇಟಿಯಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ, ಆದ್ದರಿಂದ, ನಿಮ್ಮ ಪ್ರೀತಿಯ ಜೀವನದ ಚಿತ್ರವು ಸಂಪೂರ್ಣವಾಗಿ ಬದಲಾಗಲಿದೆ.

ಪ್ರೇಮಿಗಳ ದಿನದಂದು ನೀವು ಪ್ರೀತಿಸುವ ವ್ಯಕ್ತಿಯೊಂದಿಗೆ ಸಮಯ ಕಳೆಯುತ್ತೀರಿ ಮತ್ತು 2022ರಲ್ಲಿ ನೀವು ಆ ಪ್ರೀತಿಯನ್ನು ಬಾಚಿ ತಬ್ಭಿಕೊಳ್ಳಲು ಸದಾ ಸಿದ್ದರಾಗಿರಿ. 2022ರ ಜಾತಕದ ಪ್ರಕಾರ ನಿಮ್ಮ ಜೀವನದಲ್ಲಿ ಉತ್ತಮವಾಗಿ ವಿಷಯಗಳು ಬದಲಾಗುತ್ತವೆ ಮತ್ತು ನಿಮ್ಮ ವ್ಯಾಲೆಂಟೈನ್ ಅನ್ನು ಹುಡುಕುವುದಕ್ಕಿಂತ ಉತ್ತಮವಾದುದು ಯಾವುದು ನೀವೇ ಹೇಳಿ.

5. ಧನು ರಾಶಿ
ಈ ರಾಶಿಯ ಜನರು ಯಾರನ್ನಾದರೂ ತಮ್ಮೊಂದಿಗೆ ಪ್ರೀತಿಸಲು ಆಕರ್ಷಿಸಬಹುದು ಮತ್ತು ಈ ರಾಶಿಯವರು ಸುಲಭವಾಗಿ ಪ್ರೀತಿಯಲ್ಲಿ ಬೀಳದಿದ್ದರೂ, 2022ರಲ್ಲಿ ಪ್ರೀತಿಗೆ ಇವರು ಸುಲಭವಾಗಿ ಬೀಳಬಹುದು. ನೀವು ಬಹಳ ಸಮಯದಿಂದ ಅವಿವಾಹಿತರಾಗಿದ್ದರೆ ಮತ್ತು ಇನ್ನು ಮುಂದೆ ಆ ರೀತಿ ಇರಲು ಬಯಸದಿದ್ದರೆ, ನಿಮಗಾಗಿ ಕೆಲವು ಒಳ್ಳೆಯ ಸುದ್ದಿಗಳು ಬರಲಿವೆ ಎಂದು ಹೇಳಬಹುದು. ಜ್ಯೋತಿಷಿಗಳ ಪ್ರಕಾರ, ಪ್ರೀತಿಯ ವಿಷಯದಲ್ಲಿ 2022ರ ಹೊಸ ವರ್ಷವು ನಿಮಗೆ ಆಹ್ಲಾದಕರ ವರ್ಷವಾಗಿರುತ್ತದೆ.

ಧನು ರಾಶಿಯವರು ಅನಿರೀಕ್ಷಿತವಾದುದನ್ನು ಒಪ್ಪಿಕೊಳ್ಳುವ ಮನಸ್ಥಿತಿ ಬೆಳೆಸಿಕೊಂಡರೆ ಒಳ್ಳೆಯದು, ಏಕೆಂದರೆ ನಿಮಗೆ ಹತ್ತಿರವಾಗಿರುವ ಯಾರಾದರೂ 2022ರಲ್ಲಿ ನಿಮಗೆ ಇನ್ನಷ್ಟು ಹತ್ತಿರವಾಗುತ್ತಾರೆ.

ಇದನ್ನೂ ಓದಿ: Dream: ಕನಸಿನಲ್ಲಿ ನಮ್ಮ ಪೂರ್ವಜರು ಕಾಣಿಸಿಕೊಂಡ್ರೆ ಶುಭವೋ..? ಅಶುಭವೋ...?

6. ಮೀನ ರಾಶಿ
2022ರಲ್ಲಿ ಮೀನ ರಾಶಿಯ ಜನರು ಅವರ ಜೀವನದಲ್ಲಿ ಪ್ರೀತಿಯನ್ನು ಸ್ವಾಗತಿಸಲು ಸಿದ್ಧರಾಗಿರಬೇಕು. ನೀವು ಸಿದ್ಧರಾಗಿಲ್ಲ ಎಂದು ಭಾವಿಸುತ್ತೀರಾ? ಆದರೂ ಚಿಂತಿಸಬೇಡಿ, ಏಕೆಂದರೆ ಈ ಪ್ರೀತಿ ಸಾಕಷ್ಟು ತಾಳ್ಮೆಯಿಂದಿರುತ್ತದೆ, ನಿಮಗೆ ಸಿದ್ಧರಾಗಲು ಎಲ್ಲಾ ಅವಕಾಶಗಳನ್ನು ನೀಡುತ್ತದೆ.

ಈ ವರ್ಷದ ಪ್ರೇಮಿಗಳ ದಿನವು ನಿಮಗೆ ಪ್ರೀತಿಯ ಬಗ್ಗೆ ಹೊಸ ದೃಷ್ಟಿಕೋನ ನೀಡುತ್ತದೆ ಮತ್ತು ಮೀನ ರಾಶಿಯ ಜನರನ್ನು ಈ ಹೊಸ ದೃಷ್ಟಿಕೋನವು ಸಂತೋಷ ಪಡಿಸುತ್ತದೆ. ನೀವು ಹೊಸ ಜನರನ್ನು ಭೇಟಿಯಾಗಲು ಪ್ರಯತ್ನಿಸಬೇಕು ಮತ್ತು ಎಲ್ಲಾ ಹಿಂಜರಿಕೆಯನ್ನು ಕೈಬಿಡಬೇಕು ಮತ್ತು ನಿಮಗೆ ತುಂಬಾ ವಿಶೇಷವಾದ ವ್ಯಕ್ತಿಯನ್ನು ಹುಡುಕುವ ಹಾದಿಯಲ್ಲಿ ನೀವು ಮುಂದುವರಿಯಬೇಕು.
Published by:vanithasanjevani vanithasanjevani
First published: