• Home
  • »
  • News
  • »
  • astrology
  • »
  • Vastu Tips: ನಿಮ್ಮ ಮನೆ ಹಣವನ್ನು ಆಕರ್ಷಿಸಬೇಕು ಮತ್ತು ಸಮೃದ್ಧಿಯಿಂದ ತುಂಬಿರ್ಬೇಕು ಅಂದ್ರೆ ಈ 6 ವಿಚಾರ ಗಮನಿಸಿ ಸಾಕು

Vastu Tips: ನಿಮ್ಮ ಮನೆ ಹಣವನ್ನು ಆಕರ್ಷಿಸಬೇಕು ಮತ್ತು ಸಮೃದ್ಧಿಯಿಂದ ತುಂಬಿರ್ಬೇಕು ಅಂದ್ರೆ ಈ 6 ವಿಚಾರ ಗಮನಿಸಿ ಸಾಕು

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ವಾಸ್ತು ಶಾಸ್ತ್ರದ ತತ್ವಗಳ ಪ್ರಕಾರ ಹೊಸ ಮನೆ ಅಥವಾ ಅಪಾರ್ಟ್ಮೆಂಟ್ ಅನ್ನು ಖರೀದಿಸುವಾಗ ಅಥವಾ ಬಾಡಿಗೆಗೆ ತೆಗೆದುಕೊಳ್ಳುವಾಗ ನೀವು ಯಾವೆಲ್ಲಾ ವಾಸ್ತು ಅಂಶಗಳ ಮೇಲೆ ಗಮನಹರಿಸಬೇಕು ಎಂಬುದರ ಬಗ್ಗೆ ಮುಂಬೈನ ಆಸ್ಟ್ರೋ ಆರ್ಕಿಟೆಕ್ಟ್ ನೀತಾ ಸಿನ್ಹಾ ಕೆಲವು ಸಲಹೆಗಳನ್ನು ನೀಡಿದ್ದಾರೆ.

  • Share this:

ಪ್ರತಿಯೊಬ್ಬರು ಮನೆಯನ್ನು ನಿರ್ಮಿಸುವಾಗ ಅಥವಾ ಕೊಳ್ಳುವಾಗ ಮನೆಯ ವಾಸ್ತುವಿಗೆ (Vastu) ಹೆಚ್ಚಿನ ಆದ್ಯತೆ ನೀಡುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯು ವಾಸ್ತುಬದ್ಧವಾಗಿದ್ದರೆ ಅಲ್ಲಿ ಸಕಾರಾತ್ಮಕ ಶಕ್ತಿ ತುಂಬಿರುವುದರ ಜೊತೆಗೆ ಸಂಪತ್ತು, ಸಮೃದ್ಧಿ ಮತ್ತು ಸಂತೋಷ ನೆಲೆಸಿರುತ್ತದೆ ಎಂದು ನಂಬಲಾಗಿದೆ. ವಾಸ್ತು ಶಾಸ್ತ್ರದ ತತ್ವಗಳ ಪ್ರಕಾರ ಹೊಸ ಮನೆ (New House) ಅಥವಾ ಅಪಾರ್ಟ್ಮೆಂಟ್ ಅನ್ನು (Apartment) ಖರೀದಿಸುವಾಗ ಅಥವಾ ಬಾಡಿಗೆಗೆ ತೆಗೆದುಕೊಳ್ಳುವಾಗ ನೀವು ಯಾವೆಲ್ಲಾ ವಾಸ್ತು ಅಂಶಗಳ ಮೇಲೆ ಗಮನಹರಿಸಬೇಕು ಎಂಬುದರ ಬಗ್ಗೆ ಮುಂಬೈನ ಆಸ್ಟ್ರೋ ಆರ್ಕಿಟೆಕ್ಟ್ ನೀತಾ ಸಿನ್ಹಾ ಕೆಲವು ಸಲಹೆಗಳನ್ನು ನೀಡಿದ್ದಾರೆ.


ಮನೆ ಧನಾತ್ಮಕತೆ, ಸಮೃದ್ಧಿಯಿಂದ ತುಂಬಿರಲು 6 ವಾಸ್ತು ಶಾಸ್ತ್ರ ಸೂತ್ರಗಳು


1) ಮನೆಯ ರಚನೆ
"ಮನೆಯು ದಿಕ್ಕಿಗೆ ಸರಿಯಾಗಿರಬೇಕು-ಅಂದರೆ ಲೇಔಟ್ ಅಥವಾ ದಿಕ್ಸೂಚಿಯಲ್ಲಿ ಮನೆಯ ಉತ್ತರವು ನೇರವಾಗಿರಬೇಕು ಮತ್ತು ತುಂಬಾ ಕೋನೀಯ ಅಥವಾ ಓರೆಯಾಗಿರಬಾರದು. 10 ರಿಂದ 20 ಡಿಗ್ರಿಗಳಷ್ಟು ಸ್ವಲ್ಪ ಓರೆಯಾಗಿರಬಹುದು. ಮನೆಯ ದಿಕ್ಕು, ಶಕ್ತಿ ಅಥವಾ ಪ್ರಾಣದ ಹರಿವಿನ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ,” ಎಂದು ಸಿನ್ಹಾ ಹೇಳುತ್ತಾರೆ. "ಇದು ಸ್ಥಿರವಾಗಿದ್ದಾಗ, ಮನೆಯು ಸಮೃದ್ಧಿಯಾಗಿರುತ್ತದೆ ಓರೆಯಾಗಿದ್ದರೆ, ಶಕ್ತಿಯ ಮಟ್ಟಗಳು ಕಡಿಮೆಯಾಗುತ್ತವೆ" ಎಂದು ಹೇಳಿದ್ದಾರೆ.


2) ಮುಖ್ಯ ದ್ವಾರ
ವಾಸ್ತು ಶಾಸ್ತ್ರವು ಮುಖ್ಯ ಬಾಗಿಲನ್ನು ಮಾನವ ದೇಹದಲ್ಲಿನ ಬಾಯಿಗೆ ಹೋಲಿಸಲಾಗಿದೆ. ಇದು ಶಕ್ತಿಯುತ ಪೋಷಣೆಯ ಪ್ರಮುಖ ಮೂಲವಾಗಿದೆ. ಸಿನ್ಹಾ ಅವರು ಮನೆಯಲ್ಲಿ ಹಲವಾರು ಬಾಗಿಲುಗಳನ್ನು ನಿರ್ಮಿಸುವುದನ್ನು ತಪ್ಪಿಸಿರಿ ಎಂದು ಶಿಫಾರಸು ಮಾಡುತ್ತಾರೆ, ಏಕೆಂದರೆ ಶಕ್ತಿಯು ತುಂಬಾ ದುರ್ಬಲವಾಗಿರುತ್ತದೆ ಮತ್ತು ಹೆಚ್ಚು ಶಕ್ತಿಯುತವಾಗಿರುವುದಿಲ್ಲ ಎನ್ನುತ್ತಾರೆ. ಪೂರ್ವಕ್ಕೆ ಮನೆ ಬಾಗಿಲು ಇದ್ದರೆ ಉತ್ತಮ ಎನ್ನುತ್ತಾರೆ ತಜ್ಞರು.


ಇದನ್ನೂ ಓದಿ: Tulasi Planting Tips: ನಿಮ್ಮ ಮನೆಯ ತುಳಸಿ ಒಣಗುತ್ತಿದೆಯೇ? ಹಾಗಾದರೆ ಈ ತಪ್ಪುಗಳನ್ನು ಮಾಡಬೇಡಿ


3) ಕಿಟಕಿಗಳು
ಮನೆಯ ಒಳಗೆ ಗಾಳಿ ಮತ್ತು ಬೆಳಕು ಬರಲು ದೊಡ್ಡ, ಕಿಟಕಿಗಳನ್ನು ನಿರ್ಮಿಸಬೇಕು. ಸಿನ್ಹಾ ಪ್ರಕಾರ, ಸೂರ್ಯ ಅಥವಾ ಸೂರ್ಯನ ಬೆಳಕು ಮಂಗಳಕರ, ಜೀವ ನೀಡುವ ಶಕ್ತಿಯ ಮೂಲವಾಗಿದೆ. ಇದು ನಿಮ್ಮ ಭೌತಿಕ ಪರಿಸರದ ಮೇಲೆ ಪ್ರಭಾವ ಬೀರುವುದಲ್ಲದೆ ನಿಮ್ಮ ಮಾನಸಿಕ ಆರೋಗ್ಯವನ್ನು ನಿಯಂತ್ರಣದಲ್ಲಿಡುತ್ತದೆ. ಗಾಳಿ ಚೆನ್ನಾಗಿ ಇರುವ ಮನೆಯೊಳಗೆ ಗಾಳಿಯ ಹರಿವು ನಿಶ್ಚಲ ಶಕ್ತಿಯನ್ನು ಚದುರಿಸಲು ಸಹಾಯ ಮಾಡುತ್ತದೆ. ವೈಜ್ಞಾನಿಕವಾಗಿ, ಸೂರ್ಯನ ಬೆಳಕು ಮತ್ತು ಗಾಳಿ ಎರಡೂ ಕೆಟ್ಟ ಬ್ಯಾಕ್ಟೀರಿಯಾವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.


4) ಮಲಗುವ ಕೋಣೆ
ಮನೆಯಲ್ಲಿ ಮಲಗುವ ಕೋಣೆ ನೀವು ವಿಶ್ರಾಂತಿ ಪಡೆಯುವ ಹಾಗೂ ಒತ್ತಡದಿಂದ ವಿರಾಮವನ್ನು ತೆಗೆದುಕೊಳ್ಳುವ ಸ್ಥಳವಾಗಿದೆ. ಈ ಕೋಣೆಯು ನಿಮಗೆ ಉತ್ತಮ ನಿದ್ದೆಗೆ ಸಹಾಯ ಮಾಡುತ್ತದೆ. ಹೀಗಾಗಿ ವಾಸ್ತು ಪ್ರಕಾರ ಹಾಸಿಗೆ ನೇರವಾಗಿ ಮೆಟ್ಟಿಲು ಅಥವಾ ವಾಶ್‌ರೂಮ್ ಅಡಿಯಲ್ಲಿ ಇರಬಾರದು ಎಂದು ಸಿನ್ಹಾ ಹೇಳಿದ್ದಾರೆ. ವಾಸ್ತುಶಾಸ್ತ್ರದ ಪ್ರಕಾರ ಮಲಗುವ ಕೋಣೆ ಮನೆಯ ನೈಋತ್ಯ ದಿಕ್ಕಿನಲ್ಲಿರಬೇಕು ದಕ್ಷಿಣ ಅಥವಾ ಪಶ್ಚಿಮಕ್ಕೆ ತಲೆ ಇಟ್ಟು ಮಲಗುವುದು ಉತ್ತಮ ಎಂದಿದ್ದಾರೆ.


5) ಗೋಡೆಯ ಮೇಲಿನ ಕನ್ನಡಿ
“ಒಳಾಂಗಣ ವಿನ್ಯಾಸದಲ್ಲಿ ಅನೇಕ ಕನ್ನಡಿಗಳನ್ನು ಅಳವಡಿಸಲು ಬಯಸಿದರೆ, ಅವುಗಳು ಪರಸ್ಪರ ಮುಖಾಮುಖಿಯಾಗದಂತೆ ನೋಡಿಕೊಳ್ಳಿ" ಎಂದು ಸಿನ್ಹಾ ಸಲಹೆ ನೀಡುತ್ತಾರೆ. ಕನ್ನಡಿಗಳು ಅನಂತ ಜಾಗವನ್ನು ಸೃಷ್ಟಿಸುತ್ತವೆ ಮತ್ತು ಸರಿಯಾದ ಪ್ರದೇಶಗಳಲ್ಲಿ ಬಳಸದಿದ್ದರೆ ನಕಾರಾತ್ಮಕತೆಯನ್ನು ಉಂಟುಮಾಡಬಹುದು. ಅದೇ ರೀತಿ, ಮಲಗುವ ಕೋಣೆಯಲ್ಲಿ ಕನ್ನಡಿಗಳನ್ನು ಇಡುವುದನ್ನು ತಪ್ಪಿಸಿ, ಆದರೆ ಅದನ್ನು ತಪ್ಪಿಸಲು ಸಾಧ್ಯವಾಗದಿದ್ದರೆ, ಅವುಗಳನ್ನು ತೆಗೆದಿಡಿ ಎನ್ನುತ್ತಾರೆ ಸಿನ್ಹಾ.


ಇದನ್ನೂ ಓದಿ:  Vastu Tips: ಏನೇ ಆದ್ರೂ ಸಿಟ್ಟು ಕಡಿಮೆ ಆಗುತ್ತಿಲ್ಲ ಅಂದ್ರೆ ಒಮ್ಮೆ ಈ ವಾಸ್ತು ನಿಯಮ ಅನುಸರಿಸಿ ನೋಡಿ


6) ನಿಮ್ಮ ಅಂತಃಪ್ರಜ್ಞೆಯನ್ನು ಆಲಿಸಿ
ಅಂತಿಮವಾಗಿ, ನಿಮ್ಮ ಅಂತಃಪ್ರಜ್ಞೆಯನ್ನು ನಂಬಿರಿ ಎನ್ನುತ್ತಾರೆ ಸಿನ್ಹಾ. ನೀವು ಹೊಸ ಮನೆಗೆ ಪ್ರವೇಶಿಸಿದಾಗ ನೀವು ಪಡೆಯುವ ಮೊದಲ ಭಾವನೆಯು ಮನೆಯ ವೈಬ್ಸ್ ಬಗ್ಗೆ ಹೇಳುತ್ತದೆ, ಮನೆಯ ಬಗ್ಗೆ ಧನಾತ್ಮಕ ಮತ್ತು ನಕರಾತ್ಮಕ ಭಾವನೆಗಳು ನಿಮ್ಮ ಮನಸ್ಸಿಗೆ ನಾಟುತ್ತದೆ ಎಂದು ಸಿನ್ಹಾ ಹೇಳುತ್ತಾರೆ.

Published by:Ashwini Prabhu
First published: