• ಹೋಂ
 • »
 • ನ್ಯೂಸ್
 • »
 • ಭವಿಷ್ಯ
 • »
 • Zodiac Sign: ಈ ಐದು ರಾಶಿಗಳ ಜನರ ಜೀವನ ಎಂದಿಗೂ ಅದ್ಭುತ! ಇವರ ಜೊತೆ ಗೆಳೆತನ, ಸಂಬಂಧ ಬೆಳೆಸಿ

Zodiac Sign: ಈ ಐದು ರಾಶಿಗಳ ಜನರ ಜೀವನ ಎಂದಿಗೂ ಅದ್ಭುತ! ಇವರ ಜೊತೆ ಗೆಳೆತನ, ಸಂಬಂಧ ಬೆಳೆಸಿ

ರಾಶಿ ಫಲ (ಸಾಂದರ್ಭಿಕ ಚಿತ್ರ)

ರಾಶಿ ಫಲ (ಸಾಂದರ್ಭಿಕ ಚಿತ್ರ)

ಈ ರಾಶಿಯವರೊಂದಿಗೆ ಎಂದಿಗೂ ಕಾದಾಡಬೇಡಿ. ಇವರು ಶತ್ರುಗಳ ಮೇಲೆ ಅಧಿಪತ್ಯ ಸಾಧಿಸುವವರೆಗೂ ಸುಮ್ಮನಿರಲಾರರು. ಚೇಳುಗಳು ಹೇಗೆ ಕುಟುಕುತ್ತವೆಯೋ ಇವರು ಸಹ ಶತ್ರುಗಳನ್ನು ಕುಟುಕಿ ಕುಟುಕಿ ಅವರನ್ನು ಹಣ್ಣುಗಾಯಿ ನೀರುಗಾಯಿ ಮಾಡುತ್ತಾರೆ.

 • Share this:

  ಇತ್ತೀಚಿನ ಕೆಲ ಸಮಯವನ್ನು ಗಮನಿಸಿದರೆ ಜಗತ್ತು ಸಾಕಷ್ಟು ಬದಲಾವಣೆಯನ್ನು ಕಾಣುತ್ತಿದೆ. ಜನರ ಜೀವನಶೈಲಿಯಲ್ಲಿ ವಿಭಿನ್ನ ರೀತಿಯ ಬದಲಾವಣೆಗಳಾಗುತ್ತಿರುವುದನ್ನು ಅಲ್ಲಲ್ಲಿ ಕಾಣಬಹುದು. ಇಂದು ಜನರು ಹಿಂದೆಂದಿಗಿಂತಲೂ ಹಲವು ವಿಷಯಗಳನ್ನು ಅನ್ವೇಷಿಸುತ್ತಿದ್ದಾರೆ. ಅಂತಹ ಕೆಲವು ವಿಷಯಗಳಲ್ಲಿ ಜ್ಯೋತಿಷ್ಯಶಾಸ್ತ್ರವೂ ಒಂದಾಗಿದೆ.


  ಬಹುಶಃ ಇಂದಿನ ಜಾಗತಿಕವಾಗಿ ರೂಪಿಸಲ್ಪಟ್ಟ ಹಲವು ಬಂಡವಾಳಶಾಹಿ ಆಡಳಿತವಿರಬಹುದು. ಮನುಷ್ಯನ ನಿಯಂತ್ರಣವಿಲ್ಲದಂತಹ ಪ್ರಾಕೃತಿಕ ಆಘಾತಗಳಿರಬಹುದು. ಎಲ್ಲವೂ ಜನರನ್ನು ಕೆಲವು ಅಲೌಕಿಕವಾಗಿರುವಂತಹ ವಿಷಯಗಳತ್ತ ಗಮನಹರಿಸುವಂತೆ ಮಾಡುತ್ತಿದೆ. ಹಾಗಾಗಿ ಇತ್ತೀಚಿನ ಕೆಲ ಸಮಯದಿಂದ ಬಹಳಷ್ಟು ಜನರು ಜ್ಯೋತಿಷ್ಯದತ್ತ ಹೆಚ್ಚು ಹೆಚ್ಚು ವಾಲುತ್ತಿದ್ದಾರೆನ್ನಬಹುದು.


  ಜ್ಯೋತಿಷ್ಯಶಾಸ್ತ್ರ ನಂಬದಿರುವವರ ಕಡಿಮೆ
  ಇನ್ನು, ಜ್ಯೋತಿಷ್ಯ ಎಂಬುದು ಒಂದು ಪ್ರಾಚೀನ ವಿದ್ಯೆಯಾಗಿದ್ದು ಭಾರತದಲ್ಲಿ ಅನಾದಿ ಕಾಲದಿಂದಲೂ ಪಾಲಿಸಿಕೊಂಡು ಬರಲಾಗುತ್ತಿರುವ ಶಾಸ್ತ್ರವಾಗಿದೆ. ಇಂದು ವಿಜ್ಞಾನ ಸಾಕಷ್ಟು ಮುಂದುವರಿದ ಭಾಗವಾಗಿದ್ದರೂ ಭಾರತದಲ್ಲಿ ಜ್ಯೋತಿಷ್ಯಶಾಸ್ತ್ರ ನಂಬದೇ ಇರುವವರು ಸಿಗುವುದು ಬಲು ಕಡಿಮೆ ಎಂದರೂ ತಪ್ಪಾಗದು.


  ಅದರಲ್ಲೂ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಹನ್ನೆರಡು ರಾಶಿ ಚಕ್ರಗಳಿದ್ದು ಪ್ರತಿಯೊಬ್ಬ ಮನುಷ್ಯ ತಾನು ಹುಟ್ಟಿದ ದಿನಾಂಕಕ್ಕನುಗುಣವಾಗಿ ನಿರ್ದಿಷ್ಟ ರಾಶಿಯನ್ನು ಹೊಂದಿರುತ್ತಾರೆ.


  ಅದ್ಭುತ ರಾಶಿಗಳು ಹೀಗಿವೆ
  ಇನ್ನು ರಾಶಿಗಳು ಸಾಮಾನ್ಯವಾಗಿ ತಮ್ಮದೇ ಆದ ವಿಶೇಷ ಲಕ್ಷಣಗಳನ್ನು ಹೊಂದಿದ್ದು ಆಯಾ ರಾಶಿಗಳಲ್ಲಿ ಜನಿತರಾದ ಮನುಷ್ಯರು ತಮ್ಮ ರಾಶಿಗನುಗುಣವಾಗಿ ಹಲವು ಬಗೆಯ ಲಕ್ಷಣಗಳನ್ನು ತೋರುತ್ತಾರೆ ಎನ್ನಲಾಗುತ್ತದೆ. ಪ್ರಸ್ತುತ ಈ ಲೇಖನದಲ್ಲಿ ಯಾವಾಗಲೂ ಅದ್ಭುತವಾಗಿರುವ ರಾಶಿಗಳು ಎಂದು ಕರೆಯಲ್ಪಡುವ ಕೆಲ ರಾಶಿಗಳ ಕುರಿತು ತಿಳಿಯೋಣ. ಇದು ನಿರ್ದಿಷ್ಟ ಪರಿಣಿತರೊಬ್ಬರ ಸ್ವಂತ ಅಭಿಪ್ರಾಯವಾಗಿದೆ ಎಂಬುದನ್ನು ಇಲ್ಲಿ ಗಮನಿಸಬೇಕು.


  ವೃಶ್ಚಿಕ
  ವೃಶ್ಚಿಕ ರಾಶಿ ಮೊದಲಿನಿಂದಲೂ ಜ್ಯೋತಿಷ್ಯದಲ್ಲಿ ಒಂದು ರಹಸ್ಯಮಯ ರಾಶಿ ಎಂದೇ ಜನಜನಿತವಾಗಿದೆ. ನೀರಿನಂಶವನ್ನು ಈ ರಾಶಿ ಪ್ರತಿನಿಧಿಸುತ್ತದೆ ಹಾಗೂ ನೀರಿನ ಅಂಶವೆಂಬುದೇ ಒಂದು ಅದ್ಭುತ ಅಂಶವಾಗಿದೆ. ಅತ್ಯಂತ ನಿಷ್ಠೆಗೆ ಹೆಸರುವಾಸಿಯಾಗಿರುವ ಈ ರಾಶಿಯ ಜನರು ಅದಮ್ಯ ನಿಷ್ಠಾವಂತರಾಗಿರುತ್ತಾರೆ. ಈ ರಾಶಿಯ ಸಂಕೇತವು ಚೇಳು ಆಗಿದ್ದು ಇದು ಇಂದಿನ ಡಿಜಿಟಲ್ ಯುಗದಲ್ಲಿ ಯುವಸಮುದಾಯಕ್ಕೆ ಒಂದು ರೀತಿಯ ಕೂಲ್ ಇಮೇಜ್ ಆಗಿಯೂ ಕಾಣುತ್ತದೆ.


  ಅಲ್ಲದೇ, ಈ ರಾಶಿಯವರೊಂದಿಗೆ ಎಂದಿಗೂ ಕಾದಾಡಬೇಡಿ. ಇವರು ಶತ್ರುಗಳ ಮೇಲೆ ಅಧಿಪತ್ಯ ಸಾಧಿಸುವವರೆಗೂ ಸುಮ್ಮನಿರಲಾರರು. ಚೇಳುಗಳು ಹೇಗೆ ಕುಟುಕುತ್ತವೆಯೋ ಇವರು ಸಹ ಶತ್ರುಗಳನ್ನು ಕುಟುಕಿ ಕುಟುಕಿ ಅವರನ್ನು ಹಣ್ಣುಗಾಯಿ ನೀರುಗಾಯಿ ಮಾಡುತ್ತಾರೆ. ಇವರು ಒಂದು ರೀತಿಯ ಅಲೌಕಿಕ ಶಕ್ತಿಗಳ ಒಡೆಯರಾಗಿರುತ್ತಾರೆ. ಮನೋವೈಜ್ಞಾನಿಕ ಶಕ್ತಿ ಇವರಲ್ಲಿ ಸಾಕಷ್ಟಿರುತ್ತದೆ.


  ಮಿಥುನ
  ಜೀಮಿನಿ ರಾಶಿಯವರು ಯಾವಾಗಲೂ ಉತ್ತಮ ಸಂಗಾತಿಗಳಾಗಿರುತ್ತಾರೆ. ಈ ರಾಶಿಯ ಜನರು ಒಂದು ರೀತಿಯ ಸೂಪರ್ ಕಂಪ್ಯೂಟರ್ ಇದ್ದ ಹಾಗೆ. ಹಲವು ಕಾರ್ಯಗಳನ್ನು ಏಕಕಾಲದಲ್ಲೆ ನಿಭಾಯಿಸುವಂತಹ ಚಾಕಚಕ್ಯತೆ ಇವರಲ್ಲಿರುತ್ತದೆ. ಇಷ್ಟೆ ಅಲ್ಲ, ಇವರು ಎಲ್ಲ ರೀತಿಯ ಜನರೊಂದಿಗೂ ಹಾಗೂ ಎಲ್ಲ ರಾಶಿಗಳ ಜನರೊಂದಿಗೂ ಉತ್ತಮ ಸಂವಹನ ನಡೆಸಲು ಪ್ರವೀಣರಾಗಿರುತ್ತಾರೆ. ಪ್ರತಿಯೊಂದು ಹೊಸ ಹೊಸ ಆಲೋಚನೆಗಳು, ಚಿಂತನೆಗಳನ್ನು ತಿಳಿಯುವ ಆಸಕ್ತಿ ಇವರಲ್ಲಿರುತ್ತದೆ.


  ಒತ್ತಡದ ಸನ್ನಿವೇಶಗಳನ್ನೂ ಸಹ ಹಗುರ ಮಾಡುತ್ತ ವಿನೋದಮಯವನ್ನಾಗಿ ಪರಿವರ್ತಿಸುವ ಸಾಮರ್ಥ್ಯ ಇವರಲ್ಲಿರುತ್ತದೆ. ಸಾಮಾಜಿಕವಾಗಿ ಸಾಕಷ್ಟು ನಿಕಟರಾಗಿರುತ್ತಾರೆ. ಇವರು ಉತ್ತಮ ಸಂಘಜೀವಿಗಳಾಗಿಯೂ ಗಮನ ಸೆಳೆಯುತ್ತಾರೆ.


  ಸಿಂಹ
  ತೀಕ್ಷ್ಣವಾಗಿರುವ ಪ್ಯಾಶನ್ ಮತ್ತು ಕ್ರಿಯಾತ್ಮಕತೆಗೆ ಇನ್ನೊಂದು ಹೆಸರೇ ಸಿಂಹ ರಾಶಿ. ಅಗ್ನಿಯ ಸಂಕೇತವಾದ ಸೂರ್ಯನಿಂದ ನಿಭಾಯಿಸಲ್ಪಡುವ ಸಿಂಹ ರಾಶಿಗರು ಅಪ್ರತಿಮ ಕಲಾಕಾರರೂ ಹೌದು. ಅತಿ ಆಕರ್ಷಕ ವ್ಯಕ್ತಿತ್ವವುಳ್ಳ ಇವರು ಹೊಸ ಹೊಸ ಆಲೋಚನೆಗಳ, ಪರಿಕಲ್ಪನೆಗಳ ಸಂಜಾತರು.
  ಕೇವಲ ಸಿಂಹ ಎಂಬ ಹೆಸರು ಮಾತ್ರವಲ್ಲ ಇವರು ಸಿಂಹದಷ್ಟೆ ಧೈರ್ಯಶಾಲಿಗಳು ಕೂಡ ಹೌದು. ಯಾವುದಾದರೊಂದು ಕೆಲಸ ಪ್ರಾರಂಭಿಸಿದರೆ ಅದು ಮುಗಿಯುವವರೆಗೂ ವಿಶ್ರಾಂತಿ ಪಡೆಯಲಾರರು. ಅಲ್ಲದೆ ಇವರಲ್ಲಿರುವ ಇನ್ನೊಂದು ವಿಶೇಷ ಲಕ್ಷಣ ಎಂದರೆ ಇವರು ಅಂದುಕೊಂಡಿದ್ದನ್ನು ಅಕ್ಷರಶಃ ಸಾಧಿಸುವವರೆಗೂ ಸುಮ್ಮನಿರಲಾರರು.


  ಮೇಷ
  ನಿಯಂತ್ರಿಸಲಾಗದ ಸದಾ ಜಾಂಗುಳಿಯಿಂದ ಕೂಡಿರುವ ಅಂಶವನ್ನು ಸಂಕೇತಿಸುವ ಮೇಷ ರಾಶಿಗರು ಎಲ್ಲೆ ಇರಲಿ ಅಲ್ಲಿನ ವಾತಾವರಣ ಹಾಗೂ ಜನರಲ್ಲಿ ಜೀವಕಳೆ ತುಂಬಿಸುತ್ತಾರೆ. ಚಿಕ್ಕ ಚಿಕ್ಕದಾಗಿ ಆದರೆ ಅಷ್ಟೇ ಮನೋಜ್ಞವಾಗಿರುವ ಕ್ರಿಯಾತ್ಮಕ ಶಕ್ತಿಗಳನ್ನು ಸ್ಫೋಟಿಸುವಂತಹ ಶಕ್ತಿ ಸಾಮರ್ಥ್ಯ ಇವರಲ್ಲಿರುತ್ತದೆ. ನಿಮಗೇನಾದರೂ ಫೀಲ್ಡ್ ಪ್ರಾಜೆಕ್ಟ್ ಸಿಕ್ಕು ಅದನ್ನು ಹೇಗೆ ನಿಭಾಯಿಸಬೇಕು ಎಂಬ ಗೊಂದಲ ಉಂಟಾದರೆ ಮೇಷ ರಾಶಿಯ ಸ್ನೇಹಿತನನ್ನು ನಿಮ್ಮ ಪಾರ್ಟ್ನರ್ ಆಗಿ ಮಾಡಿಕೊಳ್ಳಿ ಸಾಕು.


  ಇದನ್ನೂ ಓದಿ: Astrology: ಈ ರಾಶಿಯವರನ್ನ ಮದ್ವೆಯಾದ್ರೆ ಸಂಪತ್ತು, ಅದೃಷ್ಟ ನಿಮ್ಮದಾಗುತ್ತೆ!


  ಮೇಷ ರಾಶಿಯವರು ಯಾವಾಗಲೂ ನೇರ ನುಡಿಯುಳ್ಳವರು. ತಮ್ಮ ಭಾವನೆಗಳನ್ನು, ಅಭಿಪ್ರಾಯಗಳನ್ನು ಪ್ರಾಮಾಣಿಕವಾಗಿಯೇ ಹೇಳುತ್ತಾರೆ. ಮೇಷ ರಾಶಿಯವರು ಉತ್ತಮ ಪ್ರೀತಿ ಮಾಡುವವರು. ಅವರ ಬರ್ತ್ ಸ್ಟೋನ್ ವಜ್ರ.


  ಧನು
  ನಮಗೆ ಜಗತ್ತಿನ ಎಲ್ಲ ವಿಷಯಗಳು ಅನ್ವೇಷಿಸಬೇಕು ಎಂಬ ಹಂಬಲವಿದ್ದರೆ ನಮ್ಮ ಜೊತೆ ಒಬ್ಬ ಧನು ರಾಶಿ ಸ್ನೇಹಿತನಿದ್ದರೆ ಸಾಕು. ನಿಮಗೆ ಈ ಕೆಲಸ ಆಗದು ಎಂದು ತಿಳಿದು ಆ ಕೆಲಸ ಮಾಡದಂತೆ ಧನು ರಾಶಿಯವರಿಗೆ ಎಷ್ಟು ಹೇಳಿದರೂ ಅವರು ಅದನ್ನು ಖಂಡಿತ ಕೇಳಿಸಿಕೊಳ್ಳಲಾರರು ಹಾಗೂ ಅವರು ಯಾವ ರೀತಿ ತಮ್ಮ ಕೆಲಸದ ಹಿಂದೆ ಬೀಳುವವರೆಂದರೆ ಅದನ್ನು ಮಾಡಿ ನೀವೇ ತಪ್ಪು ಎಂದು ಸಾಬೀತುಪಡಿಸಿ ತೋರಿಸುತ್ತಾರೆ.


  ಇದನ್ನೂ ಓದಿ: Vijayapura: ಒಂದೇ ಒಂದು ಮರದ ಮಂಚ, ಚೇರ್ ಸಿಗದ ಊರಲ್ಲಿ ಚಂದ್ರಮ್ಮ ದೇವಿ ಜಾತ್ರೆ ಸಂಭ್ರಮ!


  ಇವರು ಧನಾತ್ಮಕವಾಗಿರುವ ಅಪಾಯವನ್ನು ತೆಗೆದುಕೊಳ್ಳುವುದರಲ್ಲಿ ಎಂದಿಗೂ ಹಿಂದೆ ಸರಿಯುವುದಿಲ್ಲ. ಹಾಗಾಗಿ ಇವರು ಹಲವು ಕಷ್ಟಕರ ಸಂದರ್ಭಗಳಲ್ಲಿ ಉತ್ತಮ ಸಲಹೆಗಾರರಾಗಿರುತ್ತಾರೆ. ಆಧ್ಯಾತ್ಮಿಕ ವಿಷಯದಲ್ಲಿ ಸಾಕಷ್ಟು ಆಸಕ್ತಿ ಹೊಂದಿರುವ ಇವರ ಜೊತೆ ಸಂಭಾಷಣೆ ನಡೆಸಿದಾಗ ಒಮ್ಮೊಮ್ಮೆ ಸಂಭಾಷಣೆಗಳು ಬಲು ಆಳವಾಗಿ ನಡೆದರೂ ಅಚ್ಚರಿ ಪಡಬೇಕಾಗಿಲ್ಲ.

  Published by:ಗುರುಗಣೇಶ ಡಬ್ಗುಳಿ
  First published: