Astrology: ನೀವು ಪದೇ ಪದೇ ಮನೆಯಲ್ಲಿ ಈ ವಸ್ತುಗಳನ್ನು ಚೆಲ್ಲುತ್ತಿದ್ರೆ ಶನಿಯ ಕಾಟ ಹೆಚ್ಚಾಗಿದೆ ಎಂದರ್ಥ

Shani Dosha: ವಾಸ್ತು ಶಾಸ್ತ್ರದ ಪ್ರಕಾರ ಉಪ್ಪು ಚಂದ್ರ ಹಾಗೂ ಶುಕ್ರ ನೊಂದಿಗೆ ಸಂಬಂಧ ಹೊಂದಿದೆ. ಹೀಗಾಗಿ ಅಡುಗೆ ಮನೆಯಲ್ಲಿ ನಾವು ಪ್ರತಿನಿತ್ಯ ಅಡುಗೆ ಮಾಡಲು ಉಪ್ಪು ಬಳಸುವಾಗ ಸಾಕಷ್ಟು ಎಚ್ಚರಿಕೆಯಿಂದ ಇರುವುದು ಅಗತ್ಯ. ಆತುರಾತುರವಾಗಿ ಅಡುಗೆ ಮಾಡುವಾಗ ಉಪ್ಪು ಕೈಯಿಂದ ಜಾರಿ ಬಿದ್ದರೆ  ಚಂದ್ರ ಮತ್ತು ಶುಕ್ರ ನಿಂದ ಆಗುವ ಅಶುಭ ಪರಿಣಾಮಗಳನ್ನು ಸೂಚಿಸುತ್ತದೆ.

ಶನಿ

ಶನಿ

  • Share this:
    ಕಷ್ಟಗಳು (Problems) ಮನುಷ್ಯನ (Human) ಬದುಕಿನಲ್ಲಿ (Life) ಸಹಜ. ಒಂದು ಸಂಕಷ್ಟ ಮುಗಿಯುತ್ತಿದ್ದಂತೆ ಮತ್ತೊಂದು ಸಂಕಷ್ಟ ಪದೇ ಪದೆ ಎದುರಾಗುತ್ತಿದ್ದರೆ ಜ್ಯೋತಿಷ್ಯ (Astrology) ನಂಬುವವರು ಎಲ್ಲೋ ಶನಿ (Shani) ಕಾಟ ಇರಬೇಕು ಎಂದು ಹೇಳುವುದುಂಟು. ಶನಿ ದೇವರು ಪ್ರೀತಿಯಿಂದ ನೀಡಿದರೆ ನಮಗೆ ಎಲ್ಲ ಸಂಕಷ್ಟಗಳು ನಿವಾರಣೆ ಆಗುತ್ತದೆ ಆದ್ರೆ ಶನಿ ದೇವರ ಕೋಪಕ್ಕೆ ತುತ್ತಾದಲ್ಲಿ ಮಾತ್ರ ಖಂಡಿತ ಆತನ ಕೋಪವನ್ನು ನೀವು ಎದುರಿಸಲು ಸಾಧ್ಯವೇ ಆಗುವುದಿಲ್ಲ. ಹೀಗಾಗಿ ಮನೆಯಲ್ಲಿ ಕೆಲವೊಂದು ವಸ್ತುಗಳನ್ನು(Things) ಬಳಕೆ ಮಾಡುವಾಗ ಸಾಕಷ್ಟು ಜಾಗೃತೆಯಿಂದ ಇರಬೇಕು.. ಒಂದು ವೇಳೆ ಆ ವಸ್ತುಗಳು ನಿಮ್ಮ ಮನೆಯಲ್ಲಿ ಚೆಲ್ಲಿದರೆ ನಿಮಗೆ ಶನಿ ಸಂಕಷ್ಟ ಎದುರಾಗುವುದು ಪಕ್ಕ..

    ಮನೆಯಲ್ಲಿ ವಸ್ತುಗಳನ್ನು ಚೆಲ್ಲುವ ಮುನ್ನ ಎಚ್ಚರ..

    ಮನುಷ್ಯನ ಬದುಕು, ಕ್ರಿಯೆ ಕರ್ಮಗಳನ್ನು ಹೊಂದಿರುತ್ತದೆ. ಕರ್ಮವನ್ನು ನೆನೆಸುವವನೇ ಶನಿ. ಈ ಜನ್ಮದ ಫಲ, ಕರ್ಮವು ಮುಂದಿನ ಜನ್ಮದ ಸೃಷ್ಟಿಗೆ ಕಾರಣವಾಗುತ್ತದೆ ಎಂಬ ನಂಬಿಕೆ ಜ್ಯೋತಿಷ್ಯದಲ್ಲಿದೆ. ಈ ಕರ್ಮವನ್ನು ಆಳುವಾತನೇ ಶನಿ. ಮನುಷ್ಯನಿಗೆ ಎಷ್ಟೇ ಎಚ್ಚರಿಸಿದರೂ ಪಾಠ ಕಲಿಯದಾಗ ಶನಿಯ ಪ್ರವೇಶವಾಗುತ್ತದೆ. ಅವನೇ ಬುದ್ಧಿ ಕಲಿಸುತ್ತಾನೆ. ಹೀಗಾಗಿ ನಾವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಜಾಗೃತೆಯಿಂದ ಇರುವುದು ಮುಖ್ಯ. ಹೀಗಾಗಿ ನೀವು ಈ ವಸ್ತುಗಳನ್ನು ಮನೆಯಲ್ಲಿ ಅಪ್ಪಿತಪ್ಪಿಯೂ ಕೆಳಕ್ಕೆ ಚೆಲ್ಲಬೇಡಿ.

    1) ಉಪ್ಪು: ವಾಸ್ತು ಶಾಸ್ತ್ರದ ಪ್ರಕಾರ ಉಪ್ಪು ಚಂದ್ರ ಹಾಗೂ ಶುಕ್ರ ನೊಂದಿಗೆ ಸಂಬಂಧ ಹೊಂದಿದೆ. ಹೀಗಾಗಿ ಅಡುಗೆ ಮನೆಯಲ್ಲಿ ನಾವು ಪ್ರತಿನಿತ್ಯ ಅಡುಗೆ ಮಾಡಲು ಉಪ್ಪು ಬಳಸುವಾಗ ಸಾಕಷ್ಟು ಎಚ್ಚರಿಕೆಯಿಂದ ಇರುವುದು ಅಗತ್ಯ. ಆತುರಾತುರವಾಗಿ ಅಡುಗೆ ಮಾಡುವಾಗ ಉಪ್ಪು ಕೈಯಿಂದ ಜಾರಿ ಬಿದ್ದರೆ  ಚಂದ್ರ ಮತ್ತು ಶುಕ್ರ ನಿಂದ ಆಗುವ ಅಶುಭ ಪರಿಣಾಮಗಳನ್ನು ಸೂಚಿಸುತ್ತದೆ. ಇದರಿಂದ ಆರ್ಥಿಕ ಸಂಕಷ್ಟ ಮಾನಸಿಕ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ.. ಹೀಗಾಗಿ ಉಪ್ಪಿನಿಂದ ಶನಿದೋಷ ಉಂಟಾಗಬಹುದು. ಇದರಿಂದ ನೀವು ಅಡುಗೆ ಮಾಡುವಾಗ ಉಪ್ಪನ್ನ ಜಾಗೃತೆಯಿಂದ ಬಳಸುವುದು ಮುಖ್ಯ.

    ಇದನ್ನೂ ಓದಿ: ಹೊಸ ವರ್ಷದಲ್ಲಿ ಸ್ಥಾನ ಬದಲಾಯಿಸಲಿರುವ ಶನಿ; ಯಾವ ರಾಶಿಗೆ ಒಳಿತು-ಕೆಡುಕು?

    2) ಒಲೆಯ ಮೇಲೆ ಹಾಲು ಚೆಲ್ಲುವುದು: ಕೆಲವರು ಒಲೆಯಮೇಲೆ ಹಾಲು ಚೆಲ್ಲುವುದು ಶುಭಶಕುನ ಎಂದು ಹೇಳುತ್ತಾರೆ. ಆದರೆ ಜ್ಯೋತಿಷ್ಯ ಹಾಗೂ ವಾಸ್ತು ಶಾಸ್ತ್ರದ ಪ್ರಕಾರ ಹಾಲು ಚೆಲ್ಲುವುದು ಕೆಟ್ಟ ಶಕುನವನ್ನು ಸೂಚಿಸುತ್ತದೆ. ಚಂದ್ರನನ್ನು ಹಾಲಿಗೆ ಹೋಲಿಕೆ ಮಾಡುವುದರಿಂದ ಪದೇಪದೇ ಒಲೆಯಮೇಲೆ ಮೇಲೆ ಹಾಲು ಚೆಲ್ಲುತ್ತಿದ್ರೆ, ಚಂದ್ರನ ದೋಷ ಉಂಟಾಗುವ ಸಾಧ್ಯತೆ ಇರುತ್ತದೆ. ಅದೇ  ಒಲೆಯ ಮೇಲೆ ಹಾಲು ಚಲ್ಲುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಉಂಟಾಗಿ ಶನಿಯ ಅವಕೃಪೆಗೆ ಪಾತ್ರರಾಗುವ ಸಾಧ್ಯತೆ ಇರುತ್ತದೆ.

    3) ಕರಿಮೆಣಸು: ಕರಿಮೆಣಸು ಆಗಾಗ್ಗೆ ಚೆಲ್ಲುವುದು ಕೆಟ್ಟ ಶಕುನವನ್ನು ಸೂಚಿಸುತ್ತದೆ. ವಾಸ್ತು ಪ್ರಕಾರ ಕರಿಮೆಣಸು ಕೈಯಿಂದ ಪದೇ ಪದೇ ಬಿದ್ದರೆ, ಅದು ದಾಂಪತ್ಯ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅಲ್ಲದೆ, ಪತಿ-ಪತ್ನಿಯರ ನಡುವೆ ಸದಾ ಕ್ಲೇಷ ಉಂಟಾಗುತ್ತದೆ.

    4) ಎಣ್ಣೆ: ಪ್ರತಿಯೊಂದು ಅಡುಗೆ ಮಾಡಬೇಕಾದರೂ ಎಣ್ಣೆ ಅತ್ಯಗತ್ಯ.. ಕೆಲವರು ಆತುರಾತುರವಾಗಿ ಎಣ್ಣೆ ಚೆಲ್ಲಿದರೆ ಇನ್ನೂ ಕೆಲವರು ತಮಗೆ ಅರಿವಿಲ್ಲದಂತೆ ಪ್ರತಿನಿತ್ಯ ಮನೆಯಲ್ಲಿ ಎಣ್ಣೆ ಚೆಲ್ಲುತ್ತಲೇ ಇರುತ್ತಾರೆ.. ಇತಿ ನೀವು ಪ್ರತಿನಿತ್ಯ ಎಣ್ಣೆ ಚೆಲ್ಲುವುದರಿಂದ ಶನಿಯ ಅವಕೃಪೆಗೆ ಪಾತ್ರರಾಗಬಹುದು. ಪದೇ ಪದೇ ಎಣ್ಣೆ ಚೆಲ್ಲುವುದು ಶನಿದೇವ ಕೋಪಗೊಂಡಿರುವುದನ್ನು ಸೂಚಿಸುತ್ತದೆ. ಶನಿ ದೇವರ ಕೋಪ ಎಂದರೆ ಜೀವನದಲ್ಲಿ ಸಂಕಷ್ಟಗಳ ಸರಮಾಲೆ ಎದುರಾದಂತೆ.

    ಇದನ್ನೂ ಓದಿ: ಶನಿ ದೋಷ ನಿವಾರಣೆಗೆ ಶನಿವಾರ ತಪ್ಪದೇ ಅರಳಿಮರ ಪೂಜಿಸಿ

    5) ಧಾನ್ಯ: ಅನ್ನಪೂರ್ಣ ದೇವಿಯೊಂದಿಗೆ ಆಹಾರ ಅಥವಾ ಧಾನ್ಯಗಳ ಸಂಬಂಧವಿದೆ. ಧಾನ್ಯವನ್ನು ಚೆಲ್ಲುವುದು ಎಂದರೆ ಅನ್ನಪೂರ್ಣ ದೇವಿಯ ಕೋಪಕ್ಕೆ ಪಾತ್ರರಾಗುವುದು. ಹೀಗಿರುವಾಗ ಅನ್ನ ನಿಮ್ಮ ಕೈಯಿಂದ ಪದೇ ಪದೇ ಬೀಳುತ್ತಿದ್ದರೆ ತಕ್ಷಣ ಕ್ಷಮೆಯಾಚಿಸಬೇಕು
    Published by:ranjumbkgowda1 ranjumbkgowda1
    First published: