Astrology: ಈ 5 ರಾಶಿಯವರು ಹೆಚ್ಚು ಕೋಪ ಮಾಡಿಕೊಳ್ಳುತ್ತಾರೆ

Angry Zodiac Signs : ಹೆಚ್ಚಿನ ಜನರಿಗೆ ಕೋಪ ತಕ್ಷಣಕ್ಕೆ ಬಂದರೂ ಸಹ , ಹೆಚ್ಚು ಸಮಯವಿರುವುದಿಲ್ಲ. ಆದರೆ ಕೆಲವರ ಕೋಪ ಹಾಗಲ್ಲ, ಅದನ್ನು ಮುಂದಿವರೆಸಿಕೊಂಡು ಹೋಗುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೋಪ ಮನುಷ್ಯನ ಸಾಮಾನ್ಯ ಗುಣಗಳಲ್ಲಿ ಒಂದು. ಪ್ರತಿಯೊಬ್ಬರಿಗೂ  ಕೋಪ ಬಂದೇ ಬರುತ್ತದೆ. ಕೆಲವರಿಗೆ ಕೋಪ ಕಡಿಮೆ ಬಂದರೆ ಇನ್ನು ಕೆಲವರಿಗೆ ಹೆಚ್ಚು ಬರುತ್ತದೆ. ಹುಟ್ಟಿನಿಂದಲೇ ಬಂದಿರುವ ಒಂದು ಕೆಟ್ಟ ಗುಣ ಈ  ಕೋಪ. ಕೆಲವರು ಕೋಪ ಬಂದಾಗ ತಾಳ್ಮೆಯಿಂದ ವರ್ತಿಸುತ್ತಾರೆ, ಆದರೆ ಕೆಲವರ ಕೋಪ ನಿಜಕ್ಕೂ ಅಪಾಯ. ಸಣ್ಣ ಸಣ್ಣ ಕಾರಣಕ್ಕೆ ಕೋಪ ಮಾಡಿಕೊಳ್ಳುವ ಜನರು ನಮಗೆ ಸಿಗುತ್ತಾರೆ. ಇವರನ್ನು ಮುಂಗೋಪಿಗಳು ಎಂದು ಕರೆಯಬಹುದು. ಇವರಲ್ಲಿ ಕೂಡ ವಿಭಿನ್ನವಾದವರಿದ್ದಾರೆ, ಹೆಚ್ಚಿನ ಜನರಿಗೆ ಕೋಪ ತಕ್ಷಣಕ್ಕೆ ಬಂದರೂ ಸಹ , ಹೆಚ್ಚು ಸಮಯವಿರುವುದಿಲ್ಲ. ಆದರೆ ಕೆಲವರ ಕೋಪ ಹಾಗಲ್ಲ, ಅದನ್ನು ಮುಂದಿವರೆಸಿಕೊಂಡು ಹೋಗುತ್ತಾರೆ. ಈ ಮುಂಗೋಪಿಗಳು ಸಮಯ ಮತ್ತು ಸಂದರ್ಭವನ್ನು ಅರ್ಥ ಮಾಡಿಕೊಳ್ಳದೇ, ಹಿಂದು ಮುಂದು ನೋಡದೆ ಕೋಪ ಮಾಡಿಕೊಂಡು ಇತರರ ಮೇಲೆ ಕೂಗಾಡುತ್ತಾರೆ.  ಇನ್ನು ಕೆಲ ರಾಶಿಗಳಿಗೆ ಬೇಗನೆ ಕೋಪ ಬರುವುದಿಲ್ಲ, ಬಂದರೆ ಅದನ್ನು ನಿಯಂತ್ರಿಸುವುದು ಕಷ್ಟ.  ಹೀಗೆ ಕೋಪ ಮಾಡಿಕೊಳ್ಳುವ ಹಾಗೂ ನಿಯಂತ್ರಣ ಮಾಡುವುದಕ್ಕೆ ಕಷ್ಟವಾಗುವ  5 ರಾಶಿಗಳ ಬಗ್ಗೆ ನಾವಿಲ್ಲಿ ಹೇಳುತ್ತಿದ್ದೇವೆ. ನಿಮ್ಮ ಸುತ್ತ ಮುತ್ತ ಸಹ ಈ ರಾಶಿಯವರಿದ್ದರೆ ಎಚ್ಚರದಿಂದಿರಿ.

ಮಿಥುನ ರಾಶಿ

ಮಿಥುನ ರಾಶಿಯ ಜನರು ಸ್ವಲ್ಪ ವಿಭಿನ್ನ. ಈ ರಾಶಿಯ  ಜನರು ಬೇಗನೆ ಕೋಪಗೊಳ್ಳುವುದಿಲ್ಲ. ಅವರು ಸಮಯ ಸಂದರ್ಭವನ್ನು ಅರ್ಥ ಮಾಡಿಕೊಳ್ಳುತ್ತಾರೆ.  ಆದರೆ ಪರಿಸ್ಥಿತಿ ಕೈ ಮೀರಿ  ಕೋಪ ಬಂದಾಗ, ಇವರನ್ನು ನಿಯಂತ್ರಿಸುವುದು ಬಹಳ  ಕಷ್ಟ. ಇವರ ಕೋಪಕ್ಕೆ ಎಲ್ಲರೂ ಹೆದರುತ್ತಾರೆ. ಕೋಪ ಬಂದಾಗ ಇವರು ತಾಳ್ಮೆ ಕಳೆದುಕೊಳ್ಳುವುದು ಹೆಚ್ಚು. ತಮ್ಮ ಸುತ್ತ ಯಾರಿದ್ದಾರೆ ಎಂಬುದನ್ನ ಅವರು ಗಮನಿಸುವುದಿಲ್ಲ, ರೇಗಾಡಲು ಆರಂಭಿಸುತ್ತಾರೆ.

ಮೇಷ ರಾಶಿ

ಮೇಷ ರಾಶಿಯ ಜನರನ್ನು ಬಹಳ ಮುಂಗೋಪದ ಸ್ವಭಾವದವರೆಂದು ಹೇಳಲಾಗುತ್ತದೆ. ಅವರು ಸಣ್ಣ ಸಣ್ಣ ವಿಷಯಗಳ ಬಗ್ಗೆ ಕೋಪ ಮಾಡಿಕೊಂಡು ಜಗಳ ಮಾಡಲು ಆರಂಭ ಮಾಡುತ್ತಾರೆ. ಈ ರಾಶಿಯವರಿಗೆ  ಗೌರವ ಮತ್ತು ಪ್ರತಿಷ್ಠೆ ಬಹಳ  ಮುಖ್ಯ. ಯಾರಾದರೂ ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಮಾಡಲು ಪ್ರಯತ್ನಿಸಿದರೆ, ಅವರು ಸುಲಭವಾಗಿ  ಒಪ್ಪುವುದಿಲ್ಲ. ಅವರಿಗೆ ಗೌರವ ಸಿಗದಿದ್ದರೆ ಕೋಪ ಮಾಡಿಕೊಳ್ಳುತ್ತಾರೆ. ಅವರು ತಮ್ಮ ಕೆಲಸವನ್ನು ತಮ್ಮ ಇಚ್ಛೆಗೆ  ಅನುಗುಣವಾಗಿ ಮಾಡಲು ಸಾಧ್ಯವಾಗದಿದ್ದರೆ, ಅವರ ಕೋಪ ಹೆಚ್ಚಾಗುತ್ತದೆ. ಕೋಪದಲ್ಲಿ ಅವರು ಏನನ್ನೂ ಮಾಡಲು ಸಿದ್ಧರಾಗಿರುತ್ತಾರೆ, ಇವರ ಈ ಸ್ವಭಾವದಿಂದಾಗಿ ಅನೇಕ ಬಾರಿ ಸಮಸ್ಯೆಗೆ ಸಿಲುಕಿಕೊಳ್ಳುತ್ತಾರೆ.

ಇದನ್ನೂ ಓದಿ: ಉದ್ಯೋಗ ಬದಲಾವಣೆ ಯೋಚಿಸಿದ್ದರೆ ಈ ರಾಶಿಯವರು ಕೈ ಬಿಡುವುದು ಒಳಿತು; ಇಲ್ಲಿದೆ 12 ರಾಶಿಗಳ ದಿನಭವಿಷ್ಯ

ಮೀನ ರಾಶಿ

ಮೀನ ರಾಶಿಯವರು ಯಾರ ತಂಟೆಗೂ ಹೋಗುವುದಿಲ್ಲ. ಅವರಲ್ಲಿ ತಾಳ್ಮೆ ಇದೆ, ಆದರೆ ಕೋಪ ಬಂದಾಗ ಮಾತ್ರ ನಿಯಂತ್ರಣ ಕಳೆದುಕೊಳ್ಳುತ್ತಾರೆ. ಅವರಿಗೆ ತಮ್ಮದೇ ಆದ ಲೋಕದಲ್ಲಿ ಬದುಕಲು ಬಹಳ ಇಷ್ಟ. ಆದರೆ  ಸ್ವಲ್ಪ ಮನಸ್ಸಿಗೆ ನೋವಾದರೆ ಅದನ್ನು ತಡೆದುಕೊಳ್ಳಲು ಅವರಿಂದ ಸಾದ್ಯವಾಗುವುದಿಲ್ಲ, ಅವರ ನೋವು ಕೋಪ ರೂಪದಲ್ಲಿ ಹೊರಬರುತ್ತದೆ. ಅವರ ಕೋಪವನ್ನು ಕಂಡು ಜನರು ಹೆದರುತ್ತಾರೆ. ಕೆಲವೊಮ್ಮೆ ಯಾವ ವಿಷಯಕ್ಕೆ ಕೋಪಗೊಳ್ಳುತ್ತಾರೆ ಎನ್ನುವುದು ಅವರಿಗೇ ಅರ್ಥವಾಗುವುದಿಲ್ಲ. ಇವರು ಬೇಗನೆ ಸಣ್ಣ ಸಣ್ಣ ವಿಚಾರಗಳಿಗೆ ಕೋಪಗೊಳ್ಳುತ್ತಾರೆ. ಇವರ ಇನ್ನೊಂದು ಸ್ವಾರಸ್ಯಕರ ವಿಚಾರವೆಂದರೆ  ಆದರೆ ಕೆಲವೊಮ್ಮೆ ಅವರು ದೊಡ್ಡ ವಿಷಯಗಳ ಬಗ್ಗೆ ಶಾಂತವಾಗಿರುತ್ತಾರೆ.

ಮಕರ ರಾಶಿ

ಮಕರ ರಾಶಿಯವರು ಮುಂಗೋಪಿಗಳು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇವರು ತಮ್ಮ ಕೋಪದಿಂದಾಗಿ ಅನೇಕ ಬಾರಿ ಸಮಸ್ಯೆಗಳನ್ನು ಅನುಭವಿಸಿದ್ದಾರೆ.. ಅವರು ಏನಾದರೂ ಕೋಪ ಮಾಡಿಕೊಂಡರೆ, ಅವರನ್ನು ಶಾಂತಗೊಳಿಸುವುದು ಸುಲಭದ ಕೆಲಸವಲ್ಲ. ಜನರು ಇವರ ಕೋಪಕ್ಕೆ ಗುರಿಯಾಲು ಭಯ ಪಡುತ್ತಾರೆ. ಇವರಿಗೆ ಕೋಪ ಬಂದಾಗ ದೂರವಿರುತ್ತಾರೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರ ಕೋಪ ಹೆಚ್ಚು ಅಪಾಯಕರ. ಅವರಿಗೆ ಬೇಕಾದ ಕೆಲಸವನ್ನು ಕೋಪದ ಮೂಲಕ ಮಾಡಿಕೊಳ್ಳುತ್ತಾರೆ. ಯಾರ ಬಳಿ ಹೇಗೆ ಕೆಲಸ ಮಾಡಿಸಿಕೊಳ್ಳಬೇಕು ಎಂಬುದನ್ನ ಇವರು ಚನ್ನಾಗಿ ತಿಳಿದಿರುತ್ತಾರೆ. ಆದರೆ ಸಣ್ಣ ತಪ್ಪುಗಳು ಕಂಡುಬಂದರೆ ಅದನ್ನು ಸಹಿಸುವುದಿಲ್ಲ. ಹಾಗಂತ ಇವರಿಗೆ ಬೇಗ ಕೋಪ ಬರುವುದಿಲ್ಲ, ಕೋಪ ಬಂದರೆ ಮಾತ್ರ ಅವರನ್ನು ನಿಯಂತ್ರಿಸುವುದು ಕಷ್ಟಕರ.
Published by:Sandhya M
First published: