Vast Tips: ಪಾಸಿಟಿವ್ ವೈಬ್ಸ್ ಪಡೆಯಲು ಆಫೀಸ್ ಡೆಸ್ಕ್‌ನಲ್ಲಿ ಇರಿಸಬಹುದಾದ 5 ಒಳಾಂಗಣ ಸಸ್ಯಗಳಿವು

ವರ್ಕ್ ಫ್ರಮ್ ಹೋಮ್ ನಿಂದ ಆಫೀಸಿಗೆ ಹೋಗುವ ನೀವು ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುವ ಮೂಲಕ ಕಡಿಮೆ ಒತ್ತಡವನ್ನು ಅನುಭವಿಸಬಹುದು. ಪಾಸಿಟಿವ್ ವೈಬ್ಸ್ ಎಂಬುವುದು ನೀವು ದಿನವಿಡೀ ಲವಲವಿಕೆ, ಪ್ರೇರಣೆ ಮತ್ತು ಪ್ರೊಡಕ್ಟಿವ್ ಆಗಿರಲು ನಿಮಗೆ ಸಹಾಯ ಮಾಡುತ್ತದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಎರಡು ವರ್ಷದ ಕೋವಿಡ್ ಕರಿನೆರಳು ನಿಧಾನವಾಗಿ ಸರಿಯುತ್ತಾ ಬಂದಿದೆ. ಶಾಲೆಗಳತ್ತ ಮಕ್ಕಳು ಮುಖ ಮಾಡಿದ್ದಾರೆ, ಪ್ರವಾಸೋದ್ಯಮ (Tourism) ಚೇತರಿಸಿಕೊಳ್ಳುತ್ತಿದೆ, ನಿಷೇಧಿತ ಸ್ಥಳಗಳು ತೆರೆದುಕೊಳ್ಳುತ್ತಿವೆ, ಕಚೇರಿಗಳು ವರ್ಕ್ ಫ್ರಮ್ ಹೋಮ್ ವ್ಯವಸ್ಥೆಯನ್ನು ಕೈಬಿಟ್ಟು ತಮ್ಮ ಉದ್ಯೋಗಿಗಳನ್ನು ಆಫೀಸಿಗೆ (Office) ಬರುವಂತೆ ಆದೇಶಿವೆ. ಹೀಗೆ ತುಂಬಾ ದಿನದಿಂದ ಮನೆಯಲ್ಲಿ ಕೆಲಸ ಮಾಡುತ್ತಿದ್ದವರಿಗೆ ಈಗ ತಕ್ಷಣಕ್ಕೆ ಆಫೀಸಿಗೆ ಹೊಂದಿಕೊಳ್ಳುವುದು ಕಷ್ಟವಾಗುತ್ತಿದೆ. ಹೀಗಾಗಿ ವರ್ಕ್ ಫ್ರಮ್ ಹೋಮ್ ನಿಂದ ಆಫೀಸಿಗೆ ಹೋಗುವ ನೀವು ಸಕಾರಾತ್ಮಕ ವಾತಾವರಣವನ್ನು (Positive atmosphere) ಸೃಷ್ಟಿಸುವ ಮೂಲಕ ಕಡಿಮೆ ಒತ್ತಡವನ್ನು ಅನುಭವಿಸಬಹುದು. ಪಾಸಿಟಿವ್ ವೈಬ್ಸ್ ಎಂಬುವುದು ನೀವು ದಿನವಿಡೀ ಲವಲವಿಕೆ, ಪ್ರೇರಣೆ ಮತ್ತು ಪ್ರೊಡಕ್ಟಿವ್ ಆಗಿರಲು ನಿಮಗೆ ಸಹಾಯ ಮಾಡುತ್ತದೆ.

ನೀವು ಕೆಲಸ ಮಾಡುವ ಸ್ಥಳ ಹೇಗಿರಬೇಕು?
ನಿಮ್ಮ ದಿನದ ಬಹುಪಾಲು ಸಮಯವನ್ನು ನೀವು ಕಚೇರಿಯಲ್ಲಿಯೇ ಕಳೆಯುವುದರಿಂದ ನಿಮ್ಮ ಕಚೇರಿಯ ಡೆಸ್ಕ್ ಅನ್ನು ಅಲಂಕರಿಸುವುದು ಮೊದಲ ಪ್ರಮುಖ ಹಂತವಾಗಿದೆ. ನೀವು ಮಾಡುವ ಕೆಲಸದ ಸ್ಥಳ ಸ್ವಚ್ಛ, ಸುಂದರ ಮತ್ತು ವಾಸ್ತು ಪ್ರಕಾರವಿದ್ದರೆ ಕೆಲಸ ಮಾಡಲು ಮತ್ತಷ್ಟು ಉತ್ಸಾಹ ಬರುತ್ತದೆ.

ಕಚೇರಿಯಲ್ಲಿ ಸಸ್ಯ ಇಡುವುದರ ಪ್ರಯೋಜನಗಳೇನು
ಅಲಂಕಾರ ಎಂದರೆ ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಕೆಲವು ಹಸಿರು ಸಸ್ಯಗಳನ್ನು ಇಟ್ಟುಕೊಳ್ಳಬಹುದು. ಇಲ್ಲಿ ನೀವು ಕೆಲವು ಒಳಾಂಗಣ ಸಸ್ಯವನ್ನು ಇರಿಸುವ ಮೂಲಕ ಹೆಚ್ಚು ಚೈತನ್ಯ ಮತ್ತು ಉತ್ಸಾಹವನ್ನು ಪಡೆದುಕೊಳ್ಳಬಹುದು. ಒಳಾಂಗಣ ಸಸ್ಯಗಳು ನಿಮ್ಮ ಕ್ಯಾಬಿನ್ ಅಥವಾ ಕೆಲಸ ಮಾಡುವ ಸ್ಥಳವನ್ನು ಸುಂದರವಾಗಿ ಕಾಣುವಂತೆ ಮಾಡುವ ಜೊತೆಗೆ ಒತ್ತಡವನ್ನು ನಿಭಾಯಿಸಲು ಮತ್ತು ನಕಾರಾತ್ಮಕ ಶಕ್ತಿಗಳಿಂದ ನಿಮ್ಮನ್ನು ದೂರವಿರಿಸಲು ಸಹಾಯ ಮಾಡುತ್ತವೆ.

ಇದನ್ನೂ ಓದಿ:  Vastu Tips For Rent House: ನೀವು ಬಾಡಿಗೆ ಮನೆಯಲ್ಲಿದ್ದೀರಾ? ಮನೆಯಲ್ಲಿ ಇವು ವಾಸ್ತು ಪ್ರಕಾರ ಇವೆಯೇ ಮೊದಲು ನೋಡಿಕೊಳ್ಳಿ

ನಿಮ್ಮ ಕೆಲಸದ ಮೇಜಿನ ಬಳಿ ನೀವು ಯಾವ ರೀತಿಯ ಸಸ್ಯವನ್ನು ಇಡಬೇಕು ಎಂದು ಯೋಚಿಸುತ್ತಿದ್ದೀರಾ? ಅದಕ್ಕೆ ಅಂತಾನೇ ವಾಸ್ತು ಪ್ರಕಾರದ ಕೆಲವು ಸಸ್ಯಗಳಿವೆ. ವಾಸ್ತು ಸಹ ನಿಮ್ಮ ಕಚೇರಿಯಲ್ಲಿ ಸಸ್ಯ ಇಡುವುದರ ಪ್ರಯೋಜನಗಳನ್ನು ಒತ್ತಿ ಹೇಳುತ್ತದೆ. ಕೆಲವು ವಾಸ್ತು ಪ್ರಕಾರದ ಸಸ್ಯವನ್ನು ಇಡುವುದರಿಂದ ಉತ್ಪಾದಕತೆ ಮತ್ತು ಮನಸ್ಸಿನ ನಿಯಂತ್ರಣವನ್ನು ಹೆಚ್ಚಿಸುತ್ತದೆ ಮತ್ತು ಪಾಸಿಟಿವ್ ವೈಬ್ಸ್ ಹೆಚ್ಚುತ್ತದೆ ಎನ್ನುತ್ತಾರೆ ಕೆಲ ವಾಸ್ತು ತಜ್ಞರು.

ನಿಮ್ಮ ಆಫೀಸ್ ಡೆಸ್ಕ್‌ನಲ್ಲಿ ಇರಿಸಬಹುದಾದ 5 ಒಳಾಂಗಣ ಸಸ್ಯಗಳು

1) ಸ್ನೇಕ್ ಪ್ಲಾಂಟ್
ಇದು ಧನಾತ್ಮಕ ಶಕ್ತಿಯ ಪ್ರಮುಖ ಸಸ್ಯವಾಗಿದೆ. Floweraura ಪ್ರಕಾರ, ಇದು ಕೋಣೆಯಲ್ಲಿ ಆಮ್ಲಜನಕದ ಹರಿವನ್ನು ಉತ್ತೇಜಿಸುತ್ತದೆ, ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಕೋಣೆಯಲ್ಲಿ ಆರೋಗ್ಯಕರ ವಾತಾವರಣವನ್ನು ನಿರ್ಮಿಸುತ್ತದೆ ಎನ್ನಲಾಗಿದೆ.

2) ಲಿಲಿ ಪ್ಲಾಂಟ್
ನಿಮ್ಮ ಕಚೇರಿಯ ಮೇಜಿನ ಮೇಲೆ ಲಿಲ್ಲಿ ಗಿಡವನ್ನು ಇರಿಸುವುದರಿಂದ ಸಂತೋಷ, ಶಾಂತಿ ಮತ್ತು ಸಾಮರಸ್ಯವನ್ನು ಉತ್ತೇಜಿಸುತ್ತದೆ.

3) ಬಿದಿರಿನ ಸಸ್ಯ
ಈ ಸಸ್ಯವು ಕೋಣೆಯಲ್ಲಿ ಯಾವುದೇ ನಕಾರಾತ್ಮಕ ಕಂಪನಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಈ ಸಸ್ಯವು ಸಕಾರಾತ್ಮಕತೆ ಮತ್ತು ಅದೃಷ್ಟವನ್ನು ತರುತ್ತದೆ.

4) ಮನಿ ಪ್ಲಾಂಟ್
ಈ ಸಸ್ಯವು ನಿಮ್ಮ ಕಚೇರಿಯ ಮೇಜಿನ ಸೌಂದರ್ಯದ ಆಕರ್ಷಣೆಯನ್ನು ಹೆಚ್ಚಿಸುವುದಲ್ಲದೆ, ಸಮೃದ್ಧಿ ಮತ್ತು ಅದೃಷ್ಟವನ್ನು ತರುತ್ತದೆ. ಈ ಸಸ್ಯದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಲು ಅದನ್ನು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇರಿಸುವುದು ಉತ್ತಮ.

ಇದನ್ನೂ ಓದಿ:  Sashtanga Namaskaram: ಮಹಿಳೆಯರು ಯಾಕೆ ಸಾಷ್ಟಾಂಗ ನಮಸ್ಕಾರ ಮಾಡಬಾರದು, ಶಾಸ್ತ್ರ ಏನು ಹೇಳತ್ತೆ?

5) ಬಾಳೆ ಗಿಡ
ಈ ಸಸ್ಯವನ್ನು ಭಾರತದಲ್ಲಿ ಪೂಜ್ಯನೀಯ ಮತ್ತು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಬಾಳೆ ಗಿಡವನ್ನು ಇಟ್ಟುಕೊಳ್ಳುವುದರಿಂದ ವಿಷ್ಣುವಿನ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆ ಇದೆ. ಕಚೇರಿ ಜೊತೆಗೆ ಮನೆಯಲ್ಲೂ ಸಹ ಇರಿಸಿಕೊಳ್ಳಬಹುದು. ಇದು ನಿಮ್ಮ ಕುಟುಂಬವನ್ನು ಕೆಟ್ಟ ಘಟನೆಗಳಿಂದ ರಕ್ಷಿಸುತ್ತದೆ ಮತ್ತು ಸುರಕ್ಷಿತವಾಗಿರಿಸುತ್ತದೆ ಮತ್ತು ಕುಟುಂಬ ಸದಸ್ಯರಿಗೆ ಸಂತೋಷವನ್ನು ತರುತ್ತದೆ. ಇದು ನಿಮ್ಮ ಮನೆಯ ವಾತಾವರಣವನ್ನು ಉತ್ಸಾಹಭರಿತ ಮತ್ತು ಶುದ್ಧವಾಗಿರಿಸುತ್ತದೆ.
Published by:Ashwini Prabhu
First published: