ಮೂರು ವರ್ಷಗಳ (3 years) ಹಿಂದೆ ಎಂದರೆ ಫೆಬ್ರುವರಿ 2020 ರಲ್ಲಿ ಜನರಿಗೆ ಈ ‘ವರ್ಕ್ ಫ್ರಮ್ ಹೋಂ’ ಎಂದರೆ ಏನು ಅಂತ ಗೊತ್ತಿತ್ತು, ಆದರೆ ಸುಮಾರು ಜನರು ಇದನ್ನು ಟ್ರೈ ಮಾಡಿರಲಿಲ್ಲ ಅಷ್ಟೇ. ಆದರೆ ಮಾರ್ಚ್ 2020 ರಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿ ಶುರುವಾಯ್ತು ನೋಡಿ, ಒಂದೂವರೆ ತಿಂಗಳ ಕಠಿಣವಾದ ಲಾಕ್ಡೌನ್ ಎದುರಾಯಿತು. ಮನೆಯಿಂದ ಹೊರಗೆ ಕಾಲಿಟ್ಟರೆ ಸಾಕು ಎಲ್ಲಿ ಕೋವಿಡ್ ಸೋಂಕು ತಗುಲಿ ಬಿಡುತ್ತೋ ಅನ್ನೋವಷ್ಟರ ಮಟ್ಟಿಗೆ ಭಯ ಮತ್ತು ಆತಂಕ ಎಲ್ಲರನ್ನೂ ಅವರಿಸಿಬಿಟ್ಟಿತು. ಆಗ ಕಂಪನಿಗಳು (Company) ತಮ್ಮ ಕೆಲಸವನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲೆಬಾರದು ಅಂತ ‘ವರ್ಕ್ ಫ್ರಮ್ ಹೋಂ’ ಅನ್ನೋ ಆಯ್ಕೆಯನ್ನು ಎಲ್ಲಾ ಉದ್ಯೋಗಿಗಳಿಗೆ ನೀಡಿ, ಅವರಿಗೆ ಮನೆಯಿಂದ ಕೆಲಸ ಮಾಡಲು ಆಫೀಸಿನಲ್ಲಿ ಅವರು ಕುಳಿತುಕೊಳ್ಳುವ ಕುರ್ಚಿಯಿಂದ ಹಿಡಿದು ಕಂಪ್ಯೂಟರ್ (Computer), ಲ್ಯಾಪ್‌ಟಾಪ್ ವರೆಗೆ ಎಲ್ಲವನ್ನೂ ಉದ್ಯೋಗಿಗಳ ಮನೆಗೆ ತೆಗೆದುಕೊಂಡು ಹೋಗಲು ಅನುಮತಿ ನೀಡಿದರು.
ಹೀಗೆ ಒಂದು ವರ್ಷ, ಎರಡು ವರ್ಷ ಮತ್ತು ಮೂರು ವರ್ಷವಾದರೂ ಸಹ ಇನ್ನೂ ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿ ಮಾತ್ರ ಹೆಚ್ಚು ಕಡಿಮೆ ಆಗುತ್ತಲೇ ಇದೆ, ಸಂಪೂರ್ಣವಾಗಿ ಅದು ಇನ್ನೂ ಜಗತ್ತನ್ನು ಬಿಟ್ಟು ಹೋಗಿಲ್ಲ.
ಆಫೀಸಿಗೆ ಬಂದು ಕೆಲಸ ಮಾಡಿ ಅಂದ್ರೆ, ಇನ್ನೂ ಮನೆಯಿಂದಲೇ ಮಾಡ್ತೀವಿ ಅಂತಾರೆ ಉದ್ಯೋಗಿಗಳು
ಇತ್ತ ಉದ್ಯೋಗಿಗಳಿಗೆ ಕೆಲವು ಕಂಪನಿಗಳು ವಾರಕ್ಕೆ ಒಂದೆರಡು ದಿನಗಳು ಆಫೀಸಿಗೆ ಬಂದು ಕೆಲಸ ಮಾಡಲು ಹೇಳಿ ಅನೇಕ ತಿಂಗಳುಗಳೆ ಕಳೆದಿವೆ. ಇನ್ನೂ ಕೆಲವು ಕಂಪನಿಗಳು ಎಂದಿನಂತೆ ತಮ್ಮ ಉದ್ಯೋಗಿಗಳನ್ನು ಆಫೀಸಿಗೆ ಕರೆಸಿಕೊಂಡಿವೆ.
ಆದರೆ ಎಷ್ಟೋ ಜನರಿಗೆ ಈಗ ‘ವರ್ಕ್ ಫ್ರಮ್ ಹೋಂ’ ಮಾದರಿ ಕೆಲಸ ಚೆನ್ನಾಗಿಯೇ ರೂಢಿ ಆಗಿದೆ. ಹಾಗಾಗಿ ಅವರು ಟ್ರಾಫಿಕ್ ಅಲ್ಲಿ ಆಫೀಸಿಗೆ ಹೋಗೋದೇ ಬೇಡ ಅಂತ ಮನೆಯಲ್ಲಿಯೇ ಚಿಕ್ಕ ವರ್ಕ್ ಸ್ಟೇಷನ್ ರೀತಿಯಲ್ಲಿ ಮಾಡಿಕೊಂಡು ಕೆಲಸವನ್ನು ಮುಂದುವರೆಸಿದ್ದಾರೆ. ಇನ್ನೂ ಕೆಲವರಂತೂ ಖಾಯಂ ಕೆಲಸ ಬಿಟ್ಟು ರಿಮೋಟ್ ಕೆಲಸಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ಇನ್ನೂ ಕೆಲವರಿಗೆ ಮನೆಯಿಂದ ಕೆಲಸ ಮಾಡಿ ಬೋರ್ ಸಹ ಆಗಿದೆ. ಹೀಗೆ ಮನೆಯಲ್ಲಿ ಕೂತು ಚೆನ್ನಾಗಿ ಕೆಲಸ ಮಾಡಲು ಮನೆಯಲ್ಲಿ ತುಂಬಾನೇ ಶಾಂತಿ ಇರಬೇಕು.
ಕಚೇರಿಯಲ್ಲಿ ಎಲ್ಲವೂ ಸೆಟ್ ಮಾಡಿ ಕೊಟ್ಟಿರುತ್ತಾರೆ, ಆದರೆ ಮನೆಯಲ್ಲಿ ಈ ವರ್ಕ್ ಸ್ಟೇಷನ್ ಅನ್ನು ನಾವೇ ಸೆಟ್ ಮಾಡಿಕೊಳ್ಳಬೇಕು. ನಾವು ಸೆಟ್ ಮಾಡಿಕೊಳ್ಳುವ ‘ವರ್ಕ್ ಫ್ರಮ್ ಹೋಂ’ ಸೆಟ್ ಅಪ್ ನಮಗೆ ಯಶಸ್ಸು ತಂದುಕೊಡುವ ರೀತಿಯಲ್ಲಿ ಇರಲು ಇಲ್ಲಿ ಕೆಲವು ವಾಸ್ತು ಸಲಹೆಗಳನ್ನು ನೀಡಿದ್ದಾರೆ ನೋಡಿ ವಾಸ್ತು ತಜ್ಞರು.
ಇದನ್ನೂ ಓದಿ: ಕಣ್ಣಿಲ್ಲದವನಿಗೆ ದೃಷ್ಟಿ ಕೊಟ್ಟ ಭಗವಂತ- ಈ ಶನಿ ದೇವಾಲಯದಲ್ಲಿ ನಡೆಯೋ ಪವಾಡ ಒಂದೆರಡಲ್ಲ
ಕೆಲಸ ಮತ್ತು ವೈಯುಕ್ತಿಕ ಜೀವನದ ಸಮತೋಲನವನ್ನು ಕಾಪಾಡಿಕೊಳ್ಳುವ ಕೀಲಿಕೈ ಎಂದರೆ ನಮ್ಮ ವರ್ಕ್ ಸ್ಟೇಷನ್, ಅದನ್ನು ಹೇಗೆಲ್ಲಾ ಸೆಟ್ ಮಾಡಿಕೊಳ್ಳಬೇಕು ಅಂತ ಮುಂಬೈ ಮೂಲದ ಆಸ್ಟ್ರೋ ಆರ್ಕಿಟೆಕ್ಚರ್ ನ ವಾಸ್ತು ತಜ್ಞೆ ನೀತಾ ಸಿನ್ಹಾ ಕೆಲವು ಸಲಹೆಗಳನ್ನು ಹಂಚಿಕೊಂಡಿದ್ದಾರೆ.
ಕೆಲಸ ಮಾಡಲು ಒಂದು ವರ್ಕ್ ಸ್ಟೇಷನ್ ಅನ್ನು ಮಾಡಿಕೊಳ್ಳಿ
"ಪ್ರತಿದಿನ ಒಂದೇ ಸ್ಥಳದಲ್ಲಿ ಕುಳಿತುಕೊಂಡು ಕೆಲಸ ಮಾಡುವುದನ್ನು ರೂಢಿಸಿಕೊಳ್ಳಿ. ಲ್ಯಾಪ್‌ಟಾಪ್ ಅನ್ನು ತೊಡೆಗಳ ಮೇಲೆ ಇಟ್ಟುಕೊಂಡು ಬೆಡ್ ಮೇಲೆ ಕೂರುವುದು, ಸೋಫಾ ಮೇಲೆ ಕೂರುವುದು ಒಳ್ಳೆಯ ಅಭ್ಯಾಸಗಳಲ್ಲ" ಅಂತ ಹೇಳ್ತಾರೆ ಸಿನ್ಹಾ.
ಇದೆಲ್ಲದರ ಬದಲಾಗಿ, ನೀವು ಒಂದು ವರ್ಕ್ ಸ್ಟೇಷನ್ ರೀತಿಯಲ್ಲಿ ಟೇಬಲ್ ಮೇಲೆ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಇರಿಸಿಕೊಂಡು ಕುರ್ಚಿಯ ಮೇಲೆ ನೆಟ್ಟಗೆ ಕುಳಿತುಕೊಂಡು ಆಫೀಸಿನಲ್ಲಿ ಹೇಗೆ ಕೆಲಸ ಮಾಡುತ್ತೀರೊ, ಹಾಗೆ ಕೆಲಸ ಮಾಡಿ. ಇದರಿಂದ ನಿಮ್ಮ ಉತ್ಪಾದಕತೆ ಮತ್ತು ದಕ್ಷತೆ ಎರಡು ಹೆಚ್ಚುತ್ತವೆ ಅಂತ ಹೇಳ್ತಾರೆ ವಾಸ್ತು ತಜ್ಞೆ ನಿತಾ ಸಿನ್ಹಾ.
ನಿಮ್ಮ ವರ್ಕ್ ಸ್ಟೇಷನ್ ಸರಿಯಾದ ದಿಕ್ಕಿನಲ್ಲಿ ಸೆಟ್ ಮಾಡಿಕೊಳ್ಳಿ
ಸಂಪತ್ತು ಮತ್ತು ಸಮೃದ್ಧಿಯ ಹಿಂದೂ ದೇವರಾದ ಕುಬೇರನಿಗೆ ಸಮರ್ಪಿತವಾದ ಪೂರ್ವ ಅಥವಾ ಉತ್ತರ ದಿಕ್ಕನ್ನು ನಾವು ಒಳ್ಳೆಯ ದಿಕ್ಕುಗಳು ಅಂತ ಹೇಳುತ್ತೇವೆ. ಏಕೆಂದರೆ ಈ ದಿಕ್ಕುಗಳು ನಮ್ಮ ಬುದ್ಧಿಶಕ್ತಿಯನ್ನು ಇನ್ನಷ್ಟು ತೀಕ್ಷ್ಣಗೊಳಿಸುತ್ತವೆ.
ಇದನ್ನೂ ಓದಿ: ಈ ದಿನ ಉಪವಾಸ ಮಾಡಿ, ದಾನ ಕೊಟ್ರೆ 7 ಜನ್ಮದ ಪಾಪ ಪರಿಹಾರವಾಗುತ್ತೆ
"ಸುವರ್ಣ ನಿಯಮದಂತೆ, ಕೋಣೆಯ ಪ್ರವೇಶದ್ವಾರಕ್ಕೆ ನಿಮ್ಮ ಬೆನ್ನನ್ನು ಮಾಡಿ ಎಂದಿಗೂ ಕೆಲಸ ಮಾಡಬೇಡಿ" ಎಂದು ಸಿನ್ಹಾ ಹೇಳುತ್ತಾರೆ, "ಇದು ನಿಮಗೆ ಚಡಪಡಿಕೆ ಮತ್ತು ಕಠಿಣವಾದ ಕೆಲಸದ ಅನುಭವವನ್ನು ನೀಡುತ್ತದೆ" ಅಂತ ಹೇಳ್ತಾರೆ ಸಿನ್ಹಾ. ಆದ್ದರಿಂದ ಸರಿಯಾದ ದಿಕ್ಕಿನಲ್ಲಿ ವರ್ಕ್ ಸ್ಟೇಷನ್ ಅನ್ನು ಸೆಟ್ ಮಾಡಿಕೊಳ್ಳುವುದು ತುಂಬಾನೇ ಮುಖ್ಯವಾಗಿರುತ್ತದೆ.
ಉತ್ತೇಜಕ ಬಣ್ಣಗಳ ವಸ್ತುಗಳನ್ನು ನಿಮ್ಮ ಟೇಬಲ್ ಮೇಲೆ ಇರಿಸಿಕೊಳ್ಳಿ
"ನಿಮ್ಮ ಕೆಲಸವು ಅನಗತ್ಯವಾಗಿ ವಿಳಂಬವಾಗುತ್ತಿದ್ದರೆ ಮತ್ತು ನೀವು ಸಾಕಷ್ಟು ಅಡೆತಡೆಗಳನ್ನು ಎದುರಿಸುತ್ತಿದ್ದರೆ, ನಿಮ್ಮ ಕುರ್ಚಿ ಮತ್ತು ಮೇಜಿನ ಮೇಲೆ ಕೆಲವು ಪ್ರಕಾಶಮಾನವಾದ ಕಿತ್ತಳೆ ಬಣ್ಣದ ಅಲಂಕಾರಿಕ ವಸ್ತುಗಳನ್ನು ಇರಿಸಿಕೊಳ್ಳಿರಿ" ಎಂದು ಸಿನ್ಹಾ ಹೇಳುತ್ತಾರೆ.
"ನೀವು ಕೆಲಸದಲ್ಲಿ ಕೀಳು, ಜಡ, ಕಿರಿಕಿರಿ ಅಥವಾ ಆಲಸ್ಯವನ್ನು ಅನುಭವಿಸಿದರೆ, ಹಳದಿ ಬಣ್ಣವಿರುವ ವಸ್ತುಗಳನ್ನು ಮೇಜಿನ ಮೇಲೆ ಇರಿಸಿಕೊಳ್ಳಿ" ಎಂದು ಅವರು ಹೇಳುತ್ತಾರೆ.
ನಿಮ್ಮ ಪ್ರಸ್ತುತ ಕೆಲಸದ ಮೇಜಿನ ಮುಂದೆ ಕುಳಿತು ಕೆಲಸ ಮಾಡುವಾಗ ನೀವು ಉತ್ತಮ ಆದಾಯವನ್ನು ಗಮನಿಸಿದರೆ, ಸಣ್ಣ, ಕೆಂಪು ಬಣ್ಣದ ವಸ್ತುವನ್ನು ಮೇಜಿನ ಮೇಲೆ ಇರಿಸಿಕೊಳ್ಳಿ ಅಂತ ಹೇಳ್ತಾರೆ ವಾಸ್ತು ತಜ್ಞೆ.
ನಿಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಅರೋಮಾಥೆರಪಿಯನ್ನು ಬಳಸಿಕೊಳ್ಳಿ
ಆಯಿಲ್ ಡಿಫ್ಯೂಸರ್, ರಟ್ಟನ್ ಕಡ್ಡಿಗಳು ಅಥವಾ ಕೆಲವು ಪಾಟ್ಪೌರಿಗಳನ್ನು ನಿಮ್ಮ ಕೆಲಸದ ಮೇಜಿನ ಒಂದು ಮೂಲೆಯಲ್ಲಿ ಇಡುವುದು ಒಳ್ಳೆಯದು. ಕರ್ಪೂರವನ್ನು ಸಹ ಬಳಸಲು ಸಿನ್ಹಾ ಸಲಹೆ ನೀಡುತ್ತಾರೆ.
"ಬೆಳಗ್ಗೆ ನಿಮ್ಮ ಕೆಲಸವನ್ನು ಶುರು ಮಾಡುವ ಮುಂಚೆ ನೀವು ಸ್ವಲ್ಪ ಕರ್ಪೂರವನ್ನು ಒಂದು ಚಿಕ್ಕ ಬಟ್ಟಲಿನಲ್ಲಿಟ್ಟು ಸುಡಿ" ಎಂದು ಅವರು ಹೇಳುತ್ತಾರೆ, "ಇದು ನಿಮ್ಮ ಕೆಲಸದ ಮೇಜಿನ ಮೇಲೆ ಇರುವ ನಕಾರಾತ್ಮಕತೆಯನ್ನು ಹೋಗಲಾಡಿಸುತ್ತದೆ ಮತ್ತು ನಿಮ್ಮ ಪ್ರಗತಿಯನ್ನು ವೇಗಗೊಳಿಸುತ್ತದೆ" ಅಂತಾರೆ ನೀತಾ ಸಿನ್ಹಾ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ