ಸಿಂಹ ರಾಶಿಯವರು ಈ ರಾಶಿಯವರನ್ನು ಮದುವೆಯಾದರೆ ಬಹಳ ಒಳ್ಳೆಯದಂತೆ, ಸಂಸಾರದಲ್ಲಿ ಸದಾ ಸಾಮರಸ್ಯ ಖಚಿತ!

Astrology: ದಂಪತಿಗಳಲ್ಲಿ, ಒಬ್ಬರಗಿಂತಲೂ ಇಬ್ಬರ ಪ್ರಾಧಾನ್ಯತೆ ಪ್ರಧಾನವಾದಾಗಲೇ ಆ ಸಂಬಂಧಕ್ಕೆ ಹೆಚ್ಚು ಬೆಲೆ ಇರುತ್ತದೆ. ಈ ಗುಣವನ್ನು ಈ ಇಬ್ಬರೂ ರಾಶಿಯ ವ್ಯಕ್ತಿಗಳಲ್ಲಿ ಕಾಣಬಹುದಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಿಂಹ ರಾಶಿಯ ವ್ಯಕ್ತಿಗಳು ಅಗ್ನಿ ( Fire code) ಸಂಕೇತವನ್ನು ಪ್ರತಿಪಾದಿಸಿದರೆ ತುಲಾ ರಾಶಿಯ ವ್ಯಕ್ತಿಗಳು ವಾಯು (Air signal) ಸಂಕೇತವನ್ನು ಪ್ರತಿಪಾದಿಸುತ್ತಾರೆ. ಆದರೂ, ಸಿಂಹ (Leo ) ರಾಶಿಯ ವ್ಯಕ್ತಿಗಳು ತುಲಾ (Libra) ರಾಶಿಯವರಿಂದ ಆಕರ್ಷಿತರಾಗಿರುತ್ತಾರೆ. ಈ ರಾಶಿಯ ವ್ಯಕ್ತಿಗಳು ಸತಿ-ಪತಿಗಳಾದಾಗ ಸಾಮಾನ್ಯವಾಗಿ ಅತ್ಯುತ್ತಮವಾದ(Excellent attachment ) ಬಾಂಧವ್ಯ ಹೊಂದಿರುತ್ತಾರೆ. ಇದು ಹಲವು ಜನರಿಗೆ ಅಚ್ಚರಿ ಎನ್ನುವಂತಾಗಿದೆ. ಹಾಗಾದರೆ ಈ ರಾಶಿಯ ವ್ಯಕ್ತಿಗಳ ಸಮತೋಲನವಾದ (Well-balanced) ಬಾಳಿಗೆ ಕಾರಣವಾದರೂ ಏನು? ಎಂಬ ಪ್ರಶ್ನೆ ಹಲವರಲ್ಲಿ ಮೂಡುವುದು ಸಹಜ.

ಸಿಂಹ ರಾಶಿಯ ವ್ಯಕ್ತಿ ಹುಟ್ಟುತಲೇ ನಾಯಕತ್ವದ ಗುಣ ಹೊಂದಿದ್ದು ಈ ರಾಶಿಯ ಪುರುಷ ಸದಾ ಮೃದುತ್ವ ಭಾಷಿಯಾದ ಹಾಗೂ ನಾಚಿಕೆಯ ಸ್ವಭಾವವುಳ್ಳ ತುಲಾ ರಾಶಿಯ ವ್ಯಕ್ತಿಯಲ್ಲಿ ಸಮತೋಲನ ಕಾಯ್ದುಕೊಳ್ಳುತ್ತಾರೆ. ಯಾವ ಕಾರಣಗಳಿಗಾಗಿ ಈ ಎರಡು ರಾಶಿಯ ಸತಿ-ಪತಿಗಳು ತಮ್ಮ ಮದುವೆಯ ನಂತರದ ಬಾಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ ಎಂಬುದರ ಬಗ್ಗೆ ನಾವು ವಿಶ್ಲೇಷಿಸುತ್ತಿದ್ದೇವೆ.

ಇದನ್ನೂ ಓದಿ: ಧನು ರಾಶಿ ಪ್ರವೇಶಿಸಿದ ಸೂರ್ಯ; ಧನುರ್ಮಾಸದಲ್ಲಿ ಅಪ್ಪಿತಪ್ಪಿಯೂ ಈ ಕಾರ್ಯಗಳನ್ನು ಮಾಡಬೇಡಿ

ಅವರು ಒಂದೇ ತಳಹದಿಯಲ್ಲಿರುತ್ತಾರೆ ಹಾಗೂ ಪರಿಣಾಮಕಾರಿಯಾಗಿ ಸಂಭಾಷಿಸುತ್ತಾರೆ
ಯಾವುದೇ ದಂಪತಿ ಸುಖವಾಗಿರಬೇಕೆಂದರೆ ಅವರಿಬ್ಬರಲ್ಲಿ ಉತ್ತಮವಾದ ಸಂಭಾಷಣೆ/ಸಂವಹನ ಇರುವುದು ಬಲು ಮುಖ್ಯ. ಅದನ್ನು ಈ ರಾಶಿಗಳ ವ್ಯಕ್ತಿಗಳಲ್ಲಿ ಕಾಣಬಹುದಾಗಿದೆ. ಸಿಂಹ ಹಾಗೂ ತುಲಾ ರಾಶಿಯ ವ್ಯಕ್ತಿಗಳು ಒಂದೇ ರೀತಿಯಾದ ತಳಹದಿಯಲ್ಲಿ ಇಬ್ಬರನ್ನು ಕಂಡುಕೊಳ್ಳುವುದಲ್ಲದೆ ಇಬ್ಬರ ಮನಸ್ಥಿತಿಗಳನ್ನು ಒಬ್ಬರಿಗೊಬ್ಬರು ಅರ್ಥೈಸಿಕೊಳ್ಳುತ್ತಾರೆ. ಈ ಕಾರಣದಿಂದಾಗಿ ಇಬ್ಬರೂ ಒಬ್ಬರ ಮೇಲೆ ಇನ್ನೊಬ್ಬರು ದಬ್ಬಾಳಿಕೆ ಅಥವಾ ಬಲವಂತದ ಅಭಿಪ್ರಾಯಗಳನ್ನು ಹೊರಹಾಕುವುದಿಲ್ಲ. ಇದರಿಂದ ಅನವಶ್ಯಕ ಕಿರಿಕಿರಿ ಅಥವಾ ಮನಸ್ತಾಪಗಳು ಇಬ್ಬರಲ್ಲೂ ಉಂಟಾಗುವುದು ಅತಿ ಕಡಿಮೆ.

ಇಬ್ಬರಿಗೂ ಬದ್ಧತೆ ಪ್ರಧಾನವೇ ಹೊರತು ಜಗಳವಲ್ಲ
ದಂಪತಿಗಳಲ್ಲಿ, ಒಬ್ಬರಗಿಂತಲೂ ಇಬ್ಬರ ಪ್ರಾಧಾನ್ಯತೆ ಪ್ರಧಾನವಾದಾಗಲೇ ಆ ಸಂಬಂಧಕ್ಕೆ ಹೆಚ್ಚು ಬೆಲೆ ಇರುತ್ತದೆ. ಈ ಗುಣವನ್ನು ಈ ಇಬ್ಬರೂ ರಾಶಿಯ ವ್ಯಕ್ತಿಗಳಲ್ಲಿ ಕಾಣಬಹುದಾಗಿದೆ. ಈ ರಾಶಿಯ ಸತಿ-ಪತಿಗಳು ತಮ್ಮ ತಮ್ಮ ಅಭಿಪ್ರಾಯವಾಗಲಿ ಅಥವಾ ವಿಚಾರಗಳಿಗಾಗಲಿ ಒಬ್ಬರಿಗೊಬ್ಬರು ಬದ್ಧರಾಗಿರುತ್ತಾರೆ. ಇದರಿಂದ ಯಾವುದೇ ಒಬ್ಬ ವ್ಯಕ್ತಿಯಾಗಲಿ ಅನವಶ್ಯಕವಾದ ಮೊಂಡುತನಕ್ಕೆ ಎಡೆ ಮಾಡಿಕೊಡುವುದಿಲ್ಲ.

ಈ ಕಾರಣದಿಂದಾಗಿ ಇಬ್ಬರೂ ಒಬ್ಬರಿಗೊಬ್ಬರ ಅಭಿಪ್ರಾಯಗಳಿಗೆ ಮನ್ನಣೆ ಕೊಡುವುದರಿಂದ ಯಾವುದೇ ರೀತಿಯ ಕಿರಿಕಿರಿ ಉಂಟಾಗುವುದಿಲ್ಲ ಹಾಗೂ ಇಬ್ಬರೂ ತಮ್ಮ ತಮ್ಮ ಅಭಿಪ್ರಾಯಗಳಿಗೆ ಮನ್ನಣೆ ಕೊಟ್ಟು ಮುನ್ನಡೆಯುತ್ತಾರೆ. ಅದರಲ್ಲೂ ವಿಶೇಷವಾಗಿ ತುಲಾ ರಾಶಿಯ ವ್ಯಕ್ತಿಗಳು ಯಾವುದೇ ರೀತಿಯ ಜಗಳಗಳು ಏರ್ಪಡದಂತೆ ತಮ್ಮ ಮನಸ್ಸನ್ನು ಕಾಯ್ದುಕೊಳ್ಳುತ್ತಾರೆ ಹಾಗೂ ಶಾಂತಿಯಿಂದ ಜೀವನ ಸಾಗಿಸುವಿಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ.

ಸಾಮಾಜಿಕ ಜೀವನದ ಬೆಳವಣಿಗೆಯನ್ನು ಇಬ್ಬರೂ ಹಂಚಿಕೊಳ್ಳುತ್ತಾರೆ
ದಂಪತಿಗಳಲ್ಲಿ ಹೊಂದಾಣಿಕೆ ಇರುವುದು ಎಷ್ಟು ಮುಖ್ಯವೋ ಅವರಿಬ್ಬರ ಸಾಮಾಜಿಕ ಜೀವನಶೈಲಿ ಅಷ್ಟೇ ಮುಖ್ಯವಾಗುತ್ತದೆ. ಇದನ್ನು ಈ ಎರಡೂ ರಾಶಿಯ ವ್ಯಕ್ತಿಗಳಲ್ಲಿ ಸಾಮಾನ್ಯವಾಗಿ ಕಾಣಬಹುದು. ಈ ಎರಡೂ ರಾಶಿಯ ವ್ಯಕ್ತಿಗಳ ಗುಣ ಸ್ವಭಾವ ಹೇಗಿರುತ್ತದೆ ಎಂದರೆ ತಮ್ಮ ಸಹವರ್ತಿಗಳಲ್ಲಿ ಅಥವಾ ಬಾಂಧವರಲ್ಲಿ ಇದ್ದಾಗ ಇಬ್ಬರೂ ಆ ಸಮೂಹದಲ್ಲಿ ಎದ್ದು ಕಾಣುವ ರೀತಿಯಲ್ಲಿ ಇರಲು ಬಯಸುತ್ತಾರೆ. ಇಲ್ಲಿ ಅವರು ಬಲವಂತವಾಗಿ ತಾವು ಗಮನಸೆಳೆಯುವಂತಿರಬೇಕೆಂದೇನೂ ಬಯಸುವುದಿಲ್ಲವಾದರೂ ಅವರಿಬ್ಬರ ಸ್ವಭಾವದಿಂದಾಗಿ ಇಬ್ಬರೂ ಎಲ್ಲರ ಗಮನ ಸೆಳೆಯುವಂತಿರುತ್ತಾರೆ.

ಇದರಿಂದಾಗಿ ಅವರಿಬ್ಬರ ಸಾಮಾಜಿಕ ಜೀವನ ಬಲು ಸಂತಸ ಹಾಗೂ ಆರಾಮದಾಯಕವಾಗಿರುತ್ತದೆ. ಸಿಂಹ ರಾಶಿಯವರು ಅದ್ಭುತವಾದ ಸಾಂಪ್ರಾದಿಯಿಕತ್ವ ಹೊಂದಿದ್ದರೆ ಅದಕ್ಕೆ ಪೂರಕ ಎಂಬಂತೆ ತುಲಾ ರಾಶಿಯ ವ್ಯಕ್ತಿಗಳು ಒಳ್ಳೆಯ ಕೇಳುಗರಾಗಿ ಅದ್ಭುತವಾದ ಸಾಮಾಜಿಕ ಬಂಧನಗಳನ್ನು ಗಳಿಸುತ್ತಾರೆ. ಈ 2 ರಾಶಿಯ ದಂಪತಿಗಳು ಮೂರನೇ ವ್ಯಕ್ತಿಯ ಗೆಳೆತನ ಸುಲಭವಾಗಿಗಳಿಸುವ ಸಾಮರ್ಥ್ಯ ಹೊಂದಿರುತ್ತಾರೆ.

ಇದನ್ನೂ ಓದಿ: Palmistry: ಯಾರ ಅಂಗೈಯಲ್ಲಿ ಈ ರೇಖೆಗಳು ಇರುತ್ತವೋ ಅವರಿಗೆ ಅದೃಷ್ಟ ಒಲಿಯೋದು ಪಕ್ಕಾ..!

ಈ ಪ್ರಮುಖ 3 ಕಾರಣಗಳಿಂದಾಗಿ ಸಿಂಹ ಮತ್ತು ತುಲಾ ರಾಶಿಯ ವ್ಯಕ್ತಿಗಳು ಒಬ್ಬ ಆದರ್ಶ ದಂಪತಿಗಳಾಗುವಲ್ಲಿ ಸಂದೇಹವೇ ಇಲ್ಲ ಎನ್ನುವಂತಾಗುತ್ತದೆ. ನೀವು ಸಿಂಹ ರಾಶಿಯವರಾಗಿದ್ದು ತುಲಾ ರಾಶಿಯ ವ್ಯಕ್ತಿಗೆ ಡೇಟ್ ನೀಡುತ್ತಿದ್ದರೆ ನಿಮ್ಮನ್ನು ನೀವು ಅದೃಷ್ಟವಂತರೆಂದೇ ತಿಳಿಯಬೇಕು. ಏಕೆಂದರೆ ಇವರಿಬ್ಬರಲ್ಲಿ ಅನುಬಂಧ ಸದಾ ಹೊಂದಾಣಿಕೆಯ ಸ್ವಭಾವದಿಂದ ಕೂಡಿರುತ್ತದೆ.
Published by:vanithasanjevani vanithasanjevani
First published: