• Home
  • »
  • News
  • »
  • astrology
  • »
  • Lunar Eclipses 2023: ಈ ವರ್ಷದ ಮೊದಲ ಚಂದ್ರಗ್ರಹಣ ಯಾವಾಗ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

Lunar Eclipses 2023: ಈ ವರ್ಷದ ಮೊದಲ ಚಂದ್ರಗ್ರಹಣ ಯಾವಾಗ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

2023 Lunar Eclipses: ಈ ವರ್ಷ ಚಂದ್ರಗ್ರಹಣ (Lunar Eclipse) ಯಾವಾಗ ಬಂದಿದೆ, ಯಾವ ದೇಶದಲ್ಲಿ ಗ್ರಹಣ ಕಾಣಲಿದೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

  • Share this:

ಹೊಸವರ್ಷದ (New year) ಮೊದಲ ತಿಂಗಳು ಈಗಾಗಲೇ ಅರ್ಧ ಮುಗಿದಿದೆ, ಸಂಭ್ರಮಾಚರಣೆ ಮುಗಿದು ಎಲ್ಲವೂ ಸಾಮಾನ್ಯವಾಗಿದ್ದು, ಜನರ ತಮ್ಮ ತಮ್ಮ ಕೆಲಸಕ್ಕೆ ಮರಳಿಯಾಗಿದೆ. ಇನ್ನು ಹೊಸವರ್ಷ ಬಂದಾಗ ಹಬ್ಬ (Festival) ಯಾವಾಗ ಬಂದಿದೆ, ಯಾವ ದಿನ ಒಳ್ಳೆಯದು ಎಂದಲ್ಲ ನಾವು ನೋಡುತ್ತೇವೆ. ಹೇಗೆ ಹಬ್ಬಗಳಿಗೆ ನಮ್ಮಲ್ಲಿ ಪ್ರಾಮುಖ್ಯತೆ ಇದೆಯೋ ಹಾಗೆಯೇ ಗ್ರಹಣಗಳಿಗೆ (Eclipse) ಸಹ ಮಹತ್ವ ಇದೆ.  ಗ್ರಹಣ ಸಮಯದಲ್ಲಿ ಯಾವುದೇ ಒಳ್ಳೆಯ ಕೆಲಸ ಮಾಡದೇ, ಕೆಲ ನಿಯಮಗಳನ್ನು ಫಾಲೋ ಮಾಡಲಾಗುತ್ತದೆ. ಈ ವರ್ಷ ಚಂದ್ರಗ್ರಹಣ (Lunar Eclipse) ಯಾವಾಗ ಬಂದಿದೆ, ಯಾವ ದೇಶದಲ್ಲಿ ಗ್ರಹಣ ಕಾಣಲಿದೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.


ಚಂದ್ರಗ್ರಹಣ ಎಂದರೇನು?


ಗ್ರಹಣ ಎನ್ನುವುದು ಖಗೋಳದಲ್ಲಿ ನಡೆಯುವ ಘಟನೆಯಾಗಿದ್ದು, ಚಂದ್ರ ಮತ್ತು ಸೂರ್ಯನ ನಡುವೆ ಭೂಮಿ ಬಂದಾಗ ಚಂದ್ರ ಗ್ರಹಣ ಉಂಟಾಗುತ್ತದೆ. ಸೂರ್ಯ ಹಾಗೂ ಚಂದ್ರನ ಮಧ್ಯೆ ಭೂಮಿ ಬಂದಾಗ ಚಂದ್ರ ಗೋಚರಿಸುವುದಿಲ್ಲ. ಹಾಗಾಗಿ ಚಂದ್ರಗ್ರಹಣ ಎನ್ನಲಾಗುತ್ತದೆ.


2023 ರಲ್ಲಿ, ಎರಡು ಚಂದ್ರಗ್ರಹಣಗಳಾಗಲಿದ್ದು, ಮೇ 5 ರಂದು ಪೆನಂಬ್ರಾಲ್ ಚಂದ್ರಗ್ರಹಣವಾಗಿದ್ದು, ಆಫ್ರಿಕಾ, ಏಷ್ಯಾ ಮತ್ತು ಆಸ್ಟ್ರೇಲಿಯಾದ ಭಾಗಗಳಲ್ಲಿ ಗೋಚರಿಸುತ್ತದೆ. ಎರಡನೆಯದು ಅಕ್ಟೋಬರ್ 28 ರಂದು ಭಾಗಶಃ ಚಂದ್ರಗ್ರಹಣವಾಗಿದೆ ಮತ್ತು ಅಮೆರಿಕ, ಯುರೋಪ್, ಆಫ್ರಿಕಾ, ಏಷ್ಯಾ ಮತ್ತು ಆಸ್ಟ್ರೇಲಿಯಾದ ಭಾಗಗಳಲ್ಲಿ ಗೋಚರಿಸುತ್ತದೆ.


ಇನ್ನು ಈ ಗ್ರಹಣದ ಸಮಯದಲ್ಲಿ ಸೂರ್ಯ , ಭೂಮಿ ಮತ್ತು ಚಂದ್ರ ಯಾವ ರೇಖೆಯಲ್ಲಿ ಇರುತ್ತಾರೆ ಎಂಬುದರ ಆಧಾರದ ಮೇಲೆ ಮೂರು ವಿಧದ ಚಂದ್ರಗ್ರಹಣಗಳಿವೆ .


 ಸಂಪೂರ್ಣ ಚಂದ್ರ ಗ್ರಹಣ: ಭೂಮಿಯ ನೆರಳು ಇಡೀ ಚಂದ್ರನ ಮೇಲ್ಮೈಯಲ್ಲಿ ಬಿದ್ದರೆ ಅದನ್ನು ಸಂಪೂರ್ಣ ಚಂದ್ರಗ್ರಹಣ ಎನ್ನಲಾಗುತ್ತದೆ.
ಭಾಗಶಃ ಚಂದ್ರಗ್ರಹಣ: ಭಾಗಶಃ ಚಂದ್ರಗ್ರಹಣದ ಸಮಯದಲ್ಲಿ, ಚಂದ್ರನ ಒಂದು ಭಾಗದ ಮೇಲೆ ಮಾತ್ರ ಭೂಮಿಯ ನೆರಳು ಬೀಳುತ್ತದೆ.


ಇದನ್ನೂ ಓದಿ: ಈ ರಾಶಿಯವರಿಗೆ ಇದೀಗ ಶುಕ್ರದೆಸೆ, ಇವ್ರು ಶ್ರೀಮಂತರಾಗೋದನ್ನು ತಡೆಯೋಕೆ ಯಾರಿಂದಲೂ ಆಗಲ್ಲ!


ಪೆನಂಬ್ರಲ್ ಚಂದ್ರಗ್ರಹಣ: ಭೂಮಿಯ ನೆರಳು ಅಡ್ಡವಾಗಿ ಚಂದ್ರನ  ಮೇಲೆ ಬಿದ್ದರೆ ಈ  ಪೆನಂಬ್ರಲ್ ಚಂದ್ರಗ್ರಹಣ ಉಂಟಾಗುತ್ತದೆ.  ಆದರೆ ಈ ಗ್ರಹಣವನ್ನು ನೋಡುವುದು ಬಹಳ ಸಮಸ್ಯೆಗೆ ಕಾರಣವಾಗುತ್ತದೆ.


ಮೊದಲ ಚಂದ್ರಗ್ರಹಣ ಯಾವಾಗ?


ಈ ವರ್ಷ ಮೊದಲ ಚಂದ್ರಗ್ರಹಣ ಮೇ ತಿಂಗಳಲ್ಲಿ ನಡೆಯಲಿದ್ದು, ನಿಖರವಾಗಿ ಚಂದ್ರಗ್ರಹಣವು ಯಾವಾಗ ಗೋಚರಿಸುತ್ತದೆ ಎಂಬುದು ನೀವು ಎಲ್ಲಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಮೇ 5ರಂದು ಶುಕ್ರವಾರ ಚಂದ್ರಗ್ರಹಣ ಸಂಭವಿಸಲಿದ್ದು, ಮೊದಲ ಸೂರ್ಯಗ್ರಹಣದ ಸುಮಾರು 15 ದಿನಗಳ ನಂತರ ಈ ಗ್ರಹಣ ನಡೆಯಲಿದೆ. ಭಾರತೀಯ ಸಮಯದ ಪ್ರಕಾರ ರಾತ್ರಿ 8.45ಕ್ಕೆ ಗ್ರಹಣ ಆರಂಭವಾಗಲಿದ್ದು, ಮಧ್ಯರಾತ್ರಿ 1 ಗಂಟೆಗೆ ಮುಗಿಯಲಿದೆ.


ಇನ್ನು ಈ ಚಂದ್ರಗ್ರಹಣವು ಕೆಲವು ಭಾಗಗಳಲ್ಲಿ ಮಾತ್ರ ಕಾಣಿಸಲಿದ್ದು ದಕ್ಷಿಣ/ಪೂರ್ವ ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ಪೆಸಿಫಿಕ್, ಅಟ್ಲಾಂಟಿಕ್, ಹಿಂದೂ ಮಹಾಸಾಗರ ಮತ್ತು ಅಂಟಾರ್ಟಿಕಾದಲ್ಲಿ ಗೋಚರಿಸಲಿದೆ.


2023 ರ ಎರಡನೇ ಚಂದ್ರಗ್ರಹಣವು ಅಕ್ಟೋಬರ್ 28 ರಂದು ಸಂಭವಿಸಲಿದ್ದು, ಇದು ಭಾಗಶಃ ಚಂದ್ರಗ್ರಹಣವಾಗಿರುತ್ತದೆ. ಸದ್ಯದ ಸಮಯ ಮತ್ತು ದಿನಾಂಕದ ಪ್ರಕಾರ, ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ಉತ್ತರ ಅಮೇರಿಕಾ, ಉತ್ತರ/ಪೂರ್ವ ದಕ್ಷಿಣ ಅಮೇರಿಕಾ, ಪೆಸಿಫಿಕ್, ಅಟ್ಲಾಂಟಿಕ್, ಹಿಂದೂ ಮಹಾಸಾಗರ, ಆರ್ಕ್ಟಿಕ್ ಮತ್ತು ಅಂಟಾರ್ಟಿಕಾದಲ್ಲಿ ಭಾಗಶಃ ಚಂದ್ರಗ್ರಹಣದ ಕೆಲವು ಭಾಗಗಳು ಗೋಚರಿಸಲಿದೆ ಎನ್ನಲಾಗುತ್ತಿದೆ.


ಇದನ್ನೂ ಓದಿ: ಈ ಮೂರು ರಾಶಿಯವರು ಇಂದಿನಿಂದ ಎಚ್ಚರದಿಂದಿರಿ, ಯಾಮಾರಿದ್ರೆ ಶನಿ ಕಾಟ ತಪ್ಪಿದ್ದಲ್ಲ


ಆದರೆ ಭಾರತದಲ್ಲಿ ಈ ಗ್ರಹಣವು ಅಕ್ಟೋಬರ್ 29ರ ಭಾನುವಾರ ಸಂಭವಿಸುತ್ತದೆ ಎನ್ನಲಾಗುತ್ತಿದೆ. ಭಾರತೀಯ ಸಮಯದ ಪ್ರಕಾರ ರಾತ್ರಿ 1:06ಕ್ಕೆ ಗ್ರಹಣ ಪ್ರಾರಂಭವಾಗಿ ಮತ್ತು 2:22ಕ್ಕೆ ಮುಗಿಯುತ್ತದೆ. ಇದು ವರ್ಷದ ಕೊನೆಯ ಗ್ರಹಣವಾಗಿದ್ದು, ನಂತರ ಯಾವುದೇ ಖಗೋಳ ಬೆಳವಣಿಗೆಗಳಿಲ್ಲ.

Published by:Sandhya M
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು